ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಕೇಳಿದ ಹಾಡುಗಳ ಲಿಸ್ಟ್‌ ಇಲ್ಲಿದೆ!

|

ಭಾರತದ ಪ್ರಮುಖ ಸಂಗೀತ ಮತ್ತು ಆಡಿಯೋ ಸ್ಟ್ರೀಮಿಂಗ್ ಸೇವೆಯಾದ ಜಿಯೋಸಾವನ್‌ನಿಂದ ಪ್ರೇಕ್ಷಕರ ಅತ್ಯಂತ ನೆಚ್ಚಿನ ಹಾಡುಗಳ ಪಟ್ಟಿಗಳು, ಕಲಾವಿದರು ಮತ್ತು ಪಾಡ್‌ಕಾಸ್ಟ್‌ಗಳನ್ನು ಹುಡುಕಲು ದೇಶದಿಂದ ಆಡಿಯೋ ಸ್ಟ್ರೀಮಿಂಗ್‌ನಲ್ಲಿ ಇತ್ತೀಚಿನ ಟ್ರೆಂಡ್‌ಗಳನ್ನು ಕಂಡುಕೊಂಡಿದೆ. 2021ರ ಡಿಸೆಂಬರ್ ಮತ್ತು 2022ರ ನವೆಂಬರ್ ಮಧ್ಯೆ ಪ್ಲಾಟ್‌ಫಾರ್ಮ್‌ನಲ್ಲಿನ ಡೇಟಾವನ್ನು ವಿಶ್ಲೇಷಿಸುವ ಮೂಲಕ ಇದನ್ನು ಕಂಡುಕೊಳ್ಳಲಾಗಿದೆ. ಈ ಫಲಿತಾಂಶವು ಭಾರತದಾದ್ಯಂತದ ಪ್ರೇಕ್ಷಕರ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದೆ.

ವ್ಯಾಪ್ತಿಯು

ಜಿಯೋಸಾವನ್‌ ವ್ಯಾಪಕ ವ್ಯಾಪ್ತಿಯು ಮತ್ತು ವ್ಯಾಪಕವಾದ ಕ್ಯಾಟಲಾಗ್‌ನೊಂದಿಗೆ ಭಾರತದಾದ್ಯಂತ ಕೇಳುಗರು ತಮ್ಮ ನೆಚ್ಚಿನ ವಿಷಯವನ್ನು ಹೆಚ್ಚಾಗಿ 10 ನಿಮಿಷದಿಂದ 2 ಗಂಟೆಯವರೆಗೆ ಟ್ಯೂನ್ ಮಾಡಿದ್ದಾರೆ (ಒಟ್ಟು ಸ್ಟ್ರೀಮ್‌ಗಳಲ್ಲಿ ಶೇ 45ರಷ್ಟಿದೆ). ಶನಿವಾರದಂದು ಗರಿಷ್ಠ ಸ್ಟ್ರೀಮ್‌ ಗಮನಿಸಿದರೆ, ಹೆಚ್ಚು ಜನಪ್ರಿಯ ಪ್ರಕಾರಗಳೆಂದರೆ - ಬಾಲಿವುಡ್, ಡ್ಯುಯೆಟ್, ದೇಸಿ-ಇಂಡಿ, ತೆಲುಗು ಚಲನಚಿತ್ರ ಮತ್ತು ಭಕ್ತಿಗೀತೆಗಳು ಎಂದು ತಿಳಿದುಬಂದಿದೆ. ಪ್ರೇಕ್ಷಕರು ದೇಸಿ ಹಿಪ್ ಹಾಪ್ ಮತ್ತು ಕಾಲಿವುಡ್ ಪ್ರಕಾರಗಳನ್ನು ಹೆಚ್ಚು ಹುಡುಕಿದ್ದಾರೆ.

ಜಿಯೋಸಾವನ್‌ನಲ್ಲಿ

ಹಿಂದಿ ಮತ್ತು ಇಂಗ್ಲಿಷ್ ಜತೆಗೆ - ತೆಲುಗು (2 ಬಿಲಿಯನ್+ ಸ್ಟ್ರೀಮ್‌ಗಳು), ಪಂಜಾಬಿ (1 ಬಿಲಿಯನ್+ ಸ್ಟ್ರೀಮ್‌ಗಳು), ಭೋಜ್‌ಪುರಿ (850 ಮಿಲಿಯನ್+ ಸ್ಟ್ರೀಮ್‌ಗಳು), ತಮಿಳು (900 ಮಿಲಿಯನ್+ ಸ್ಟ್ರೀಮ್‌ಗಳು) ಮತ್ತು ಕನ್ನಡ (900 ಮಿಲಿಯನ್+ ಸ್ಟ್ರೀಮ್‌ಗಳು) ಜಿಯೋಸಾವನ್‌ನಲ್ಲಿ ಕೆಲವು ಜನಪ್ರಿಯ ಭಾಷೆಗಳಾಗಿವೆ. ಅಂದ ಹಾಗೆ ಕೇಳುಗರ ಸಂಖ್ಯೆ 100 ಮಿಲಿಯನ್+ ಇದೆ. ದೇಶದಾದ್ಯಂತದ ಬಳಕೆದಾರರು ಹರ್ಯಾನ್ವಿ (300 ಮಿಲಿಯನ್+ ಸ್ಟ್ರೀಮ್‌ಗಳು), ಬೆಂಗಾಲಿ (270 ಮಿಲಿಯನ್+ ಸ್ಟ್ರೀಮ್‌ಗಳು) ಮತ್ತು ಮರಾಠಿ (250 ಮಿಲಿಯನ್+ ಸ್ಟ್ರೀಮ್‌ಗಳು) ಸಂಗೀತವನ್ನು ಸಹ ಸ್ಟ್ರೀಮ್ ಮಾಡಿದ್ದಾರೆ.

ಪ್ಲಾಟ್‌ಫಾರ್ಮ್‌ನಲ್ಲಿ

ಈ ಭಾಷೆಗಳಾದ್ಯಂತ ಮೆಚ್ಚಿನ ಹಿಟ್‌ಗಳು ಪ್ಲಾಟ್‌ಫಾರ್ಮ್‌ನಲ್ಲಿ ಗರಿಷ್ಠ ಸ್ಟ್ರೀಮ್‌ಗಳನ್ನು ಗಳಿಸಿವೆ. ಸರ್ಕಾರವಾರಿ ಪಾಟದ 'ಕಲಾವತಿ', 'ಡಿಜೆ ತಿಲ್ಲು' ಚಿತ್ರದ 'ತಿಲ್ಲು ಅಣ್ಣಾ ಡಿಜೆ ಪೇಡಿತೆ' ಮತ್ತು ಕೆಜಿಎಫ್‌ ಚಾಪ್ಟರ್ 2 'ಮೆಹಬೂಬ' ತೆಲುಗು ಸಂಗೀತದಲ್ಲಿ ಮೊದಲ ಮೂರು ಸ್ಥಾನಗಳಲ್ಲಿದ್ದರೆ, ದಿ ವಾರಿಯರ್‌ನ 'ಬುಲೆಟ್ ಸಾಂಗ್', 'ಕೊಮುರಂ ಭೀಮುಡೋ' ಹಾಡುಗಳು ಆರ್‌ಆರ್‌ಆರ್‌ನಿಂದ ಮತ್ತು ಬೀಸ್ಟ್‌ನ 'ಹಲಮಿತಿ ಹಬಿಬೋ' ಕೂಡ ಅಗ್ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಚಾರ್ಟ್‌ನಲ್ಲಿ

ಅರಿಜಿತ್ ಸಿಂಗ್ ಅವರ ‘ಧೋಖಾ' ಹಿಂದಿ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಹ್ಯಾರಿ ಸ್ಟೈಲ್ಸ್‌ನ ‘ಆಸ್ ಇಟ್ ವಾಸ್' ಇಂಗ್ಲಿಷ್ ಚಾರ್ಟ್‌ಬಸ್ಟರ್ ಹಾಡುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 'ಕೇಸರಿಯಾ', 'ಮೈಯ್ಯ ಮೈನು', 'ಕುಚ್ ಬಾತೇನ್' ಮತ್ತು 'ತುಮ್ಸೆ ಪ್ಯಾರ್ ಕರ್ಕೆ' ಇತರ ಜನಪ್ರಿಯ ಹಿಂದಿ ಹಾಡುಗಳಲ್ಲಿ ಸೇರಿವೆ. ಭಾರತೀಯ ಕಲಾವಿದರಾದ ಬಾದ್‌ಶಾ ಮತ್ತು ಅರ್ಮಾನ್ ಮಲಿಕ್ ಅವರು 'ವೂಡೂ' ಮತ್ತು 'ಯು'ನಂತಹ ಹಿಟ್‌ಗಳೊಂದಿಗೆ ಇಂಗ್ಲಿಷ್ ಚಾರ್ಟ್‌ಬಸ್ಟರ್‌ಗಳ ಹಾಡುಗಳ ಪಟ್ಟಿಯ ಟಾಪ್ 5 ರಲ್ಲಿ ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿರುವ ಇತರ ಹಾಡುಗಳಲ್ಲಿ ರೆಮಾ ಮತ್ತು ಸೆಲೆನಾ ಗೊಮೆಜ್ ಅವರ 'ಕಾಮ್ ಡೌನ್' ಮತ್ತು ಚಾರ್ಲಿ ಪುತ್ ಅವರ 'ಲೈಟ್ ಸ್ವಿಚ್' ಸೇರಿವೆ.

ಪ್ರಾಬಲ್ಯ

ಪಂಜಾಬಿ ಸಂಗೀತದ ಪಟ್ಟಿಯಲ್ಲಿ ಸಿಧು ಮೂಸ್ ವಾಲಾ ಪ್ರಾಬಲ್ಯ ಹೊಂದಿದ್ದು, 'ಲೆವೆಲ್ಸ್' ಮತ್ತು 'ದಿ ಲಾಸ್ಟ್ ರೈಡ್'ನಂತಹ ಹಾಡುಗಳಿವೆ. ಪಟ್ಟಿಯಲ್ಲಿರುವ ಇತರ ಕಲಾವಿದರೆಂದರೆ - ಎ.ಪಿ. ಧಿಲ್ಲೋನ್, ಗುರ್ನಮ್ ಭುಲ್ಲರ್, ಶುಭ್ ಮತ್ತು ಬಿ.ಪ್ರಾಕ್ ಮತ್ತು ಪ್ರಮುಖ ಹಾಡುಗಳು -ನೆವರ್ ಫೋಲ್ಡ್, ಪಸೂರಿ ಮತ್ತು ಬೆಲಿಯಾ. ಪಂಜಾಬಿ ಸಂಗೀತ ಹಾಡುಗಳ ಪಟ್ಟಿಗಳಾದ ‘ಲೆಟ್ಸ್ ಪ್ಲೇ - ಸಿಧು ಮೂಸ್ ವಾಲಾ' ಮತ್ತು ‘ಪಂಜಾಬಿ ಚಾರ್ಟ್‌ಬಸ್ಟರ್ಸ್' ಸಹ ಪ್ರೇಕ್ಷಕರಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿವೆ.

ಜಲಬುಲಂಜಂಗು

ಅನಿರುದ್ಧ್ ರವಿಚಂದರ್ ಅವರು ‘ಅರೇಬಿಕ್ ಕುತ್ತು', ‘ಮೇಘಂ ಕರುಕಥಾ', ‘ವಿಕ್ರಮ್ (ಶೀರ್ಷಿಕೆ ಟ್ರ್ಯಾಕ್'), ‘ಜಲಬುಲಂಜಂಗು' ಮತ್ತು ‘ಪಾತಾಳ ಪಾತಾಳ' ಮುಂತಾದ ಹಿಟ್‌ಗಳೊಂದಿಗೆ ತಮಿಳು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿವೆ. ಜತೆಯಲ್ಲಿ ಜೋನಿತಾ ಗಾಂಧಿ, ಧನುಷ್, ಲೋಕೇಶ್ ಮತ್ತು ಕಮಲ್ ಹಾಸನ್ ಇದ್ದಾರೆ. ಇದೇ ವೇಳೆ ಕನ್ನಡ ಹಾಡುಗಳ ಪಟ್ಟಿಯಲ್ಲಿನ ಟಾಪ್ ಹಾಡುಗಳಲ್ಲಿ ‘ಸಿಂಗಾರ ಸಿರಿಯೇ', ‘ಜಗವೇ ನೀನು ಗೆಳತಿಯೇ', ‘ವರಾಹ ರೂಪಂ ದೈವ ವರಿಷ್ಟಂ', ‘ರಾ ರಾ ರಕ್ಕಮ್ಮ' ಮತ್ತು ‘ಬೆಳಕಿನ ಕವಿತೆ' ಹಾಡುಗಳು ಸೇರಿವೆ.

ಭೋಜ್‌ಪುರಿ

ಜಿ.ಡಿ.ಕೌರ್ ಮತ್ತು ಮಾಸೂಮ್ ಶರ್ಮಾ ಅವರಂತಹ ಹರ್ಯಾನ್ವಿ ಕಲಾವಿದರು 'ಚಾಂದ್' ಮತ್ತು 'ಜಿಪ್ಸಿ'ಯಂಥ ಹಾಡುಗಳಿಗೆ ದೇಶದಾದ್ಯಂತ ಹೆಸರಾಗಿದೆ. ಖೇಸರಿ ಲಾಲ್ ಯಾದವ್ ಅವರ 'ಲೇ ಲೇ ಆಯಿ ಕೋಕಾ ಕೋಲಾ' ಮತ್ತು 'ನಾಥುನಿಯಾ'ದಂತಹ ಹಾಡುಗಳೊಂದಿಗೆ ಭೋಜ್‌ಪುರಿ ಸಂಗೀತವು ಭಾರತದಾದ್ಯಂತ ಅಲೆಗಳನ್ನು ಎಬ್ಬಿಸಿದೆ.

ರೊಮ್ಯಾಂಟಿಕ್

ಕಥೆ ಹೇಳುವ ಪಾಡ್‌ಕಾಸ್ಟ್‌ಗಳು 2022ರಲ್ಲಿ ಕೇಳುಗರಲ್ಲಿ ಹೆಚ್ಚು ಜನಪ್ರಿಯವಾಗಿವೆ. ಆ ನಂತರ ಧರ್ಮ ಮತ್ತು ಆಧ್ಯಾತ್ಮಿಕತೆ, ಸಂಸ್ಕೃತಿ ಮತ್ತು ಕಲೆಗಳು ಮತ್ತು ಸಂಗೀತದಂತಹ ಪ್ರಕಾರಗಳು ಸ್ಥಾನ ಪಡೆದಿದೆ. 'ದಿಲ್ ಮೇ ಹೋ ತುಮ್ - ಮೋನಿಕಾ ಪಾಟಿದಾರ್ ಅವರ ರೊಮ್ಯಾಂಟಿಕ್ ಆಡಿಯೋ ಬುಕ್' ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಸ್ಟ್ರೀಮ್ ಮಾಡಿದ ಪಾಡ್‌ಕಾಸ್ಟ್ ಆಗಿದ್ದು, ಆ ನಂತರ ದಿ ಸ್ಟೋರೀಸ್ ಆಫ್ ಮಹಾಭಾರತ, ಜೈ ಭಜರಂಗಿ, ಕಬೀರ್ ಕೆ ದೋಹೆ ಮತ್ತು ಶ್ರೀ ಕೃಷ್ಣ ಅಮೃತವಾಣಿ ಇದೆ. ಇನ್ನು 'ಕೇಸರಿಯಾ', 'ಧೋಖಾ', 'ಕಾಮ್ ಡೌನ್' ಮತ್ತು 'ಯು'ನಂತಹ ಹಿಟ್ ಸಿಂಗಲ್‌ಗಳು ಈ ವರ್ಷದ ಅತ್ಯಂತ ಜನಪ್ರಿಯ ಜಿಯೋಟ್ಯೂನ್‌ಗಳಾಗಿವೆ.

Best Mobiles in India

English summary
JioSaavn captures India’s listening habits with Best of 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X