ನಿಮ್ಮ ಫೋನಿನಲ್ಲಿ ಈ ಅಪಾಯಕಾರಿ ಆಪ್ಸ್ ಇದ್ರೆ, ಮೊದಲು ಡಿಲೀಟ್ ಮಾಡಿ!

|

ಜೋಕರ್‌ ಹೆಸರಿನ ಅಪಾಯಕಾರಿ ಮಾಲ್‌ವೇರ್‌ ಮತ್ತೊಮ್ಮೆ ಗೂಗಲ್‌ನಲ್ಲಿ ಕಂಡುಬಂದಿವೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಗಳನ್ನು ನಿರಂತರವಾಗಿ ಗುರಿಯಾಗಿಸುವ ಮಾಲ್‌ವೇರ್‌ಗಳಲ್ಲಿ ಜೋಕರ್ ಕೂಡಾ ಒಂದಾಗಿದೆ. ಕ್ವಿಕ್ ಹೀಲ್ ಸೆಕ್ಯುರಿಟಿ ಲ್ಯಾಬ್‌ಗಳ ಸಂಶೋಧಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೊಸ ಬ್ಯಾಚ್ 8 ಜೋಕರ್ ಮಾಲ್‌ವೇರ್ ಅಪ್ಲಿಕೇಶನ್‌ಗಳನ್ನು ಪತ್ತೆ ಮಾಡಿದ್ದಾರೆ.

ಮಾಲ್‌ವೇರ್

ಕೆಲವು ತಿಂಗಳಿಗೊಮ್ಮೆ ಡೇಟಾ ಕದಿಯುವ ಮಾಲ್‌ವೇರ್ ಅದರ ಕೋಡ್, ಎಕ್ಸಿಕ್ಯೂಶನ್ ವಿಧಾನಗಳು ಅಥವಾ ಪೇಲೋಡ್-ಹಿಂಪಡೆಯುವ ತಂತ್ರಗಳನ್ನು ಬದಲಾಯಿಸುವ ಮೂಲಕ ಗೂಗಲ್‌ನ ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗೆ ಹೋಗುತ್ತದೆ. ಕ್ವಿಕ್ ಹೀಲ್ ಪ್ರಕಾರ, ಎಸ್‌ಎಂಎಸ್, ಕಾಂಟ್ಯಾಕ್ಟ್‌ ಪಟ್ಟಿ, ಡಿವೈಸ್ ಮಾಹಿತಿ, ಓಟಿಪಿಗಳ ಮತ್ತು ಇತರೆ ಆಯ್ಕೆಗಳನ್ನು ಒಳಗೊಂಡಂತೆ ಆಂಡ್ರಾಯ್ಡ್ ಬಳಕೆದಾರರ ಹಿನ್ನೆಲೆಯಲ್ಲಿ ಡೇಟಾವನ್ನು ಕದಿಯುತ್ತವೆ.

ಅಪ್ಲಿಕೇಶನ್‌ಗಳು

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿಯೂ ಗೂಗಲ್‌ ದುರುದ್ದೇಶದ 17 ಅಪ್ಲಿಕೇಶನ್‌ಗಳಿಗೆ ಗೇಟ್‌ಪಾಸ್‌ ನೀಡಿತ್ತು. ಅವು ಎಸ್‌ಎಂಎಸ್ ಮೆಸೆಜ್, ಕಂಟ್ಯಾಕ್ಟ್‌ ಲಿಸ್ಟ್‌ ಕದಿಯಲು ವಿನ್ಯಾಸಗೊಳಿಸಲಾದ ಸ್ಪೆವೇರ್ ಆಗಿದ್ದವು. ಇನ್ನು ಗೇಟ್‌ಪಾಸ್‌ ಪಡೆದ 17 ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿ 120,000 ಡೌನ್‌ಲೋಡ್‌ ಅನ್ನು ಕಂಡಿದ್ದವು.

ಅಪಾಯಕಾರಿ

ಇಂತಹ ಅಪಾಯಕಾರಿ ಮಾಲ್‌ವೇರ್ ಆಪ್‌ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಆದರೆ ಕೆಲವು ಬಳಕೆದಾರರು ಅಂತಹ ಆಪ್‌ಗಳನ್ನು ತಮ್ಮ ಆಂಡ್ರಾಯ್ಡ್ ಫೋನ್‌ಗಳಿಂದ ಅನ್‌ ಇನ್‌ಸ್ಟಾಲ್ ಮಾಡಿರುವುದಿಲ್ಲ. ಹೀಗಾಗಿ ಈ ಅಪಾಯಕಾರಿಯಾದ 8 ಅಪ್ಲಿಕೇಶನ್‌ಗಳು ನಿಮ್ಮ ಫೋನಿನಲ್ಲಿ ಇದ್ದರೇ ಈ ಕೂಡಲೇ ತೆಗೆದುಹಾಕಿರಿ. ಹಾಗಾದರೇ ಆ ಆಪ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್‌ ಪ್ಲೇ ಸ್ಟೋರ್‌ನಿಂದ ಕಿಕ್ಔಟ್‌ ಆಗಿರುವ ಅಪ್ಲಿಕೇಶನ್‌ಗಳ ಲಿಸ್ಟ್‌:

ಗೂಗಲ್‌ ಪ್ಲೇ ಸ್ಟೋರ್‌ನಿಂದ ಕಿಕ್ಔಟ್‌ ಆಗಿರುವ ಅಪ್ಲಿಕೇಶನ್‌ಗಳ ಲಿಸ್ಟ್‌:

* Auxiliary Message
* Fast Magic SMS
* Free CamScanner
* Super Message
* Element Scanner
* Go Messages
* Travel Wallpapers
* Super SMS

ಕಳೆದ ಸೆಪ್ಟೆಂಬರ್‌ನಲ್ಲಿ ಗೂಗಲ್‌ನಿಂದ ಗೇಟ್‌ಪಾಸ್ ಪಡೆದ ಆಪ್ಸ್‌ ಲಿಸ್ಟ್‌:

ಕಳೆದ ಸೆಪ್ಟೆಂಬರ್‌ನಲ್ಲಿ ಗೂಗಲ್‌ನಿಂದ ಗೇಟ್‌ಪಾಸ್ ಪಡೆದ ಆಪ್ಸ್‌ ಲಿಸ್ಟ್‌:

All Good PDF Scanner Mint Leaf Message-Your Private Message Unique Keyboard - Fancy Fonts & Free Emoticons Tangram App Lock Direct Messenger Private SMS One Sentence Translator - Multifunctional Translator Style Photo Collage Meticulous Scanner Desire Translate Talent Photo Editor - Blur focus Care Message Part Message Paper Doc Scanner Blue Scanner Hummingbird PDF Converter - Photo to PDF Safety AppLock

Best Mobiles in India

English summary
The researchers at Quick Heal Security Labs have detected a new batch of 8 Joker malware-laced apps on Google Play Store.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X