ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಈ 24 ಆಪ್‌ಗಳಲ್ಲಿ ಒಂದಿದ್ದರೂ ಸಹ ಡಿಲೀಟ್ ಮಾಡಿ!

|

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ ಈ 24 ಆಪ್‌ಗಳಲ್ಲಿ ಒಂದಿದ್ದರೂ ಸಹ ಡಿಲೀಟ್ ಮಾಡಿಬಿಡಿ. ಏಕೆಂದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಮತ್ತೊಮ್ಮೆ ಮಾಲ್‌ವೇರ್‌ ಬೆದರಿಕೆಯನ್ನು ಎದುರಿಸುತ್ತಿರುವುದು ಕಂಡುಬಂದಿದೆ. ಜಾಹೀರಾತುಗಳನ್ನು ಅವಲಂಬಿಸಿ ಆಂಡ್ರಾಯ್ಡ್ ಬಳಕೆದಾರರ ಹಿನ್ನೆಲೆಯಲ್ಲಿ ಡೇಟಾವನ್ನು ಕದಿಯುತ್ತಿದ್ದ ''ಜೋಕರ್'' ಹೆಸರಿನ ಅಪಾಯಕಾರಿ ಮಾಲ್‌ವೇರ್‌ ಒಂದನ್ನು ಕಂಡುಹಿಡಿಯಲಾಗಿದ್ದು, ಅಪಾಯಕ್ಕೆ ಗುರಿಯಾಗಿದ್ದ ಒಟ್ಟು 24 ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಲಾಗಿದೆ.

ಜೋಕರ್ ಮಾಲ್‌ವೇರ್

ಹೌದು, ಬಹಳಷ್ಟು ಆಂಡ್ರಾಯ್ಡ್ ಫೋನ್‌ಗಳಲ್ಲಿ ವ್ಯಾಪಕವಾಗಿ ಡೌನ್‌ಲೋಡ್ ಮಾಡಲಾಗಿರುವ 24 ಅಪ್ಲಿಕೇಶನ್‌ಗಳಲ್ಲಿ ಜೋಕರ್ ಮಾಲ್‌ವೇರ್ ಇರುವ ಬಗ್ಗೆ ಗೂಗಲ್ ಕಂಡುಹಿಡಿದಿದೆ ಮತ್ತು ಅವುಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಜೋಕರ್ ದಾಳಿಗೆ ಗುರಿಯಾಗಿರುವ ಅಪ್ಲಿಕೇಶನ್‌ಗಳನ್ನು ಸುಮಾರು ಅರ್ಧ ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದ್ದು, ಇದರರ್ಥ ಗೂಗಲ್ ಈ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದ್ದರೂ ಸಹ, ನೈಜ ಜಗತ್ತಿನಲ್ಲಿ ಬೆದರಿಕೆ ಇನ್ನೂ ಹೆಚ್ಚಿದೆ ಎಂದು ಟೆಕ್ ವರದಿಗಳು ಎಚ್ಚರಿಕೆ ನೀಡಿವೆ.

ರಹಸ್ಯವಾಗಿ ಸೈನ್ ಅಪ್

ಆಂಡ್ರಾಯ್ಡ್ ಬಳಕೆದಾರರ ಡೇಟಾ ಗೌಪ್ಯತೆಗೆ ಈ ಜೋಕರ್ ಮಾಲ್ವೇರ್ ತುಂಬಾ ಅಪಾಯಕಾರಿ ಮತ್ತು ಇದು ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ ಎಂದು ವರದಿಗಳು ತಿಳಿಸಿವೆ. ಜನರು ಪ್ರೀಮಿಯಂ ಚಂದಾದಾರಿಕೆ ಸೇವೆಗಳಿಗೆ ಜನರನ್ನು ರಹಸ್ಯವಾಗಿ ಸೈನ್ ಅಪ್ ಮಾಡಲು, SMS ಸಂದೇಶಗಳು, ಸಂಪರ್ಕಗಳನ್ನು ಕದಿಯಲು ಮತ್ತು ಸರಣಿ ಮತ್ತು IMEI ಸಂಖ್ಯೆಗಳಂತಹ ಸಾಧನದ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಇದರಿಂದಾಗಿ ಈ ಜೋಕರ್ ಮಾಲ್ವೇರ್ ಆಂಡ್ರಾಯ್ಡ್ ಬಳಕೆದಾರರಿಗೆ ಸಾಕಷ್ಟು ಅಪಾಯಕಾರಿಯಾಗಿ ಕಂಡುಬಂದಿದೆ ಎಂದು ಹೇಳಲಾಗಿದೆ.

ವ್ಯಾಪಕವಾಗಿ ಡೌನ್‌ಲೋಡ್

ನೀವು ಕೂಡ ಆಂಡ್ರಾಯ್ಡ್ ಫೋನ್ ಅನ್ನು ಬಳಸಿದರೆ ಮತ್ತು ಪರಿಣಾಮ ಬೀರುವ ಅಪ್ಲಿಕೇಶನ್‌ಗಳ ಬಗ್ಗೆ ಕಾಳಜಿವಹಿಸಿದರೆ, ಈ ಕೆಳಗೆ ನೀಡಿರುವ ಸೋಂಕಿತ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನೋಡಿ. ವ್ಯಾಪಕವಾಗಿ ಡೌನ್‌ಲೋಡ್ ಮಾಡಲಾಗಿರುವ ಈ ಕೆಳಗೆ ನೀಡಲಾಗಿರುವ ಯಾವುದೇ ಒಂದು ಅಪ್ಲಿಕೇಶನ್‌ ಅನ್ನು ನೀವು ಬಳಸುತ್ತಿದ್ದರೆ, ಅದನ್ನು ತಕ್ಷಣ ನಿಮ್ಮ ಆಂಡ್ರಾಯ್ಡ್ ಫೋನಿನಿಂದ ಅನ್‌ ಇನ್‌ಸ್ಟಾಲ್ ಮಾಡಿ. ಅದನ್ನು ಇನ್‌ಸ್ಟಾಲ್ ಮಾಡಿದ ನಂತರ ನಿಮ್ಮ ಸ್ಮಾರ್ಟ್‌ಫೋನಿನ ಫ್ಯಾಕ್ಟರಿ ರೀಸ್ಟಾರ್ಟ್ ಮಾಡುವುದನ್ನು ಮಾತ್ರ ಮರೆಯದಿರಿ.

Face--Altar

--Advocate Wallpaper--Age Face--Altar Message--Antivirus Security - Security Scan--Beach Camera--Board picture editing--Certain Wallpaper--Climate SMS--Collate Face Scanner--Cute Camera--Dazzle Wallpaper--Declare Message--Display Camera--Great VPN--Humour Camera--Ignite Clean--Leaf Face Scanner--Mini Camera--Print Plant scan--Rapid Face Scanner--Reward Clean--Ruddy SMS--Soby Camera--Spark Wallpaper

'ಐಫೋನ್ 11' ಹೇಗಿದೆ?..ಫೀಚರ್ಸ್ ಯಾವುವು?..ಬೆಲೆ ಎಷ್ಟು?..ಇಲ್ಲಿದೆ ಫುಲ್ ಡೀಟೇಲ್ಸ್!

Best Mobiles in India

English summary
Joker Virus: Google Deletes 24 Affected Apps From Play Store And You Should Follow Them. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X