Subscribe to Gizbot

ಜಿಯೋ ಫೋನಿಗೆ ಪ್ರಬಲ ಸ್ಪರ್ಧೇ ನೀಡಲಿದೆ ಜೊಲಾ 4G ಫೀಚರ್ ಫೋನ್..!

Posted By: Precilla Dias

ಫಿನಿಷ್ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಜೊಲಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎರಡನೇ ಫೀಚರ್ ಫೋನ್ ಅನ್ನು ಲಾಂಚ್ ಮಾಡಿದೆ. ಹೊಸದಾಗಿ ಬಿಡುಗಡೆಯಾಗಿರುವ ಸೆಲ್ಫಿಶ್ OS ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದ್ದು, 4G ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. ಇತ್ತಿಚೇಗೆ ಬಾರ್ಸಿಲೋನದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾಮೇಶದಲ್ಲಿ ಈ ಫೀಚರ್ ಫೋನ್ ಅನ್ನು ಪರಿಚಯಿಸಲಾಗಿತ್ತು.

ಜಿಯೋ ಫೋನಿಗೆ ಪ್ರಬಲ ಸ್ಪರ್ಧೇ ನೀಡಲಿದೆ ಜೊಲಾ 4G ಫೀಚರ್ ಫೋನ್..!

ಇದಲ್ಲದೆ ಜೊಲಾ ತನ್ನ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಸೆಲ್ಫಿಶ್ X ಆವೃತ್ತಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಅನುಮತಿ ನೀಡಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಪೋನ್ ಆರಂಭದ ನಂತರದಲ್ಲಿ 4G ಫೀಚರ್ ಫೋನ್ ಗಲ ಬೇಡಿಕೆಯೂ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಜೊಲಾ ಫೀಚರ್ ಫೋನ್ ಲಾಂಚ್ ಆಗಲಿದೆ. ಜಿಯೋ ಫೋನಿಗೆ ಸ್ಪರ್ಧೆಯನ್ನು ನೀಡಲಿದೆ.

ಮೂಲಗಳ ಪ್ರಕಾರ ಮಾರುಕಟ್ಟೆಯಲ್ಲಿ ಜಿಯೋ ಫೋನ್ 40 ಮಿಲಿಯನ್ ಗೂ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿದೆ ಎನ್ನಲಾಗಿದ್ದು, ಇದಕ್ಕಾಗಿಯೆ ಜಿಯೋ ರೂ.49ರ ಪ್ಲಾನ್ ಘೋಷಣೆ ಮಾಡಿತ್ತು. ಇದರಿಂದಾಗಿ ಜಿಯೋ ಫೋನ್ ಬೇಡಿಕೆಯೂ ಮತ್ತಷ್ಟು ಏರಿಕೆಯಾಗಿದ್ದು, ಬಳಕೆದಾರಿಗೆ ಹೆಚ್ಚು ಮೆಚ್ಚುಗೆಯಾಗಿದೆ.

ಇಲ್ಲದೇ ಜಿಯೋ ಫೋನ್ ತನ್ನ ಬಳಕೆದಾರರಿಗೆ ಫೇಸ್ ಬುಕ್ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲದೇ ಶೀಘ್ರವೇ ವಾಟ್ಸ್ಆಪ್ ಬಳಕೆಗೂ ಅವಕಾಶವನ್ನು ನೀಡಲಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಬೇಡಿಕೆಯೂ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳು ಕಾಣಿಸುತ್ತಿದೆ.

ಮತ್ತೆ ಮಾರುಕಟ್ಟೆಗೆ ನೋಕಿಯಾ 2010 ಸ್ಮಾರ್ಟ್ ಫೋನ್ ಲಾಂಚ್..!

ಇದೇ ಮಾದರಿಯಲ್ಲಿ ಮಾರುಕಟ್ಟೆಗೆ ನೋಕಿಯಾ ಸಹ ತನ್ನ ಹೇಳೆ ಫೀಚರ್ ಫೋನ್ ಗಳಿಗೆ ಹೊಸ ರೂಪ ನೀಡುವುದರೊಂದಿಗೆ, 4G ಸೇವೆಯನ್ನು ಸೇರಿಸಿ ಮಾರುಕಟ್ಟೆಗೆ ಲಾಂಚ್ ಮಾಡಿತು. ನೋಕಿಯಾ ಫೀಚರ್ ಫೋನ್ ಸಹ ಸಹ ಹೆಚ್ಚಿನ ಬೇಡಿಕೆಯನ್ನು ಗಳಿಸಿಕೊಂಡಿದೆ. ಅಲ್ಲದೇ ಮೈಕ್ರೋ ಮಾಕ್ಸ್ ಸಹ 4G ಸಪೋರ್ಟ್ ಫೀಚರ್ ಫೋನ್ ಅನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.

English summary
Jolla is reportedly in plans to launch a 4G feature phone running Sailfish OS in India. If this happens, then the handset will compete with the Reliance JioPhone, which is dominating the Indian market and Nokia 8110 4G phone, which is set to be launched tomorrow at an event in New Delhi along with the smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot