ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಅಚ್ಚರಿಯ ಸ್ಮಾರ್ಟ್‌ಗ್ಲಾಸ್‌!..ಫೀಚರ್ಸ್‌ ಹೇಗಿದೆ ಗೊತ್ತಾ?

|

ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್‌ಗ್ಲಾಸ್‌ಗಳ ವಿನ್ಯಾಸವೇ ಬದಲಾಗಿದೆ. ಸ್ಮಾರ್ಟ್‌ಗ್ಲಾಸ್‌ಗಳು ಕೇವಲ ಕನ್ನಡಕವಾಗಿ ಉಳಿದಿಲ್ಲ, ಬದಲಿಗೆ ಒಪನ್‌ ಇಯರ್‌ ಸ್ಪೀಕರ್‌ಗಳನ್ನು ಕೂಡ ಒಳಗೊಂಡಿವೆ. ಈ ಮೂಲಕ ಸ್ಮಾರ್ಟ್‌ಗ್ಲಾಸ್‌ ಪ್ರಿಯರಿಗೆ ಹೊಸ ಮಾದರಿಯ ತಂತ್ರಜ್ಞಾನವನ್ನು ಪರಿಚಯಿಸಲಾಗ್ತಿದೆ. ಸದ್ಯ ಇದೀಗ ಜಸ್ಟ್‌ ಕೊರ್ಸೆಕಾ ಕಂಪೆನಿ ಆಡಿಯೋ ಸನ್‌ಗ್ಲಾಸ್‌ಗಳ ಸ್ಕೈರಾಪ್‌ಟಾಪ್‌ ಸರಣಿಯನ್ನು ಪರಿಚಯಿಸಿದೆ. ಸ್ಮಾರ್ಟ್‌ಗ್ಲಾಸ್‌ನಲ್ಲಿಯೇ ಮ್ಯೂಸಿಕ್‌ ಅನ್ನು ಸ್ಟ್ರೀಮ್‌ ಮಾಡುವ ಅವಕಾಶ ನೀಡಿರುವುದು ಪ್ರಮುಖ ಹೈಲೈಟ್‌ ಆಗಿದೆ.

ಕೊರ್ಸೆಕಾ

ಹೌದು, ಜಸ್ಟ್‌ ಕೊರ್ಸೆಕಾ ಕಂಪೆನಿ ಹೊಸ ಆಡಿಯೋ ಸನ್‌ಗ್ಲಾಸ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಸನ್ ಗ್ಲಾಸ್‌ಗಳು ಇನ್‌ಬಿಲ್ಟ್‌ ಒಪನ್‌ ಇಯರ್‌ ಸ್ಪೀಕರ್‌ಗಳನ್ನು ಹೊಂದಿದ್ದು, ನಿಮ್ಮ ಕಿವಿಗಳಿಗೆ ಮ್ಯೂಸಿಕ್‌ ಅನ್ನು ತಲುಪಿಸಲು ಸ್ಮಾರ್ಟ್‌ಫೋನ್‌ಗಳಿಗೆ ವಾಯರ್‌ಲೆಸ್‌ನಲ್ಲಿ ಸಿಂಕ್ ಮಾಡಲಿದೆ. ಜೊತೆಗೆ ನಿಮ್ಮ ಕಣ್ಣುಗಳನ್ನು ಸೂರ್ಯನ ಕಠಿಣ ಕಿರಣಗಳಿಂದ ರಕ್ಷಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಗ್ಲಾಸ್‌ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕಂಪೆನಿ

ಜಸ್ಟ್‌ ಕೊರ್ಸೆಕಾ ಕಂಪೆನಿ ಹೊಸದಾಗಿ ಸ್ಕೈರಾಪ್ಟರ್‌ ಸರಣಿಯ ಸ್ಮಾರ್ಟ್‌ಗ್ಲಾಸ್‌ಗಳನ್ನು ಪರಿಚಯಿಸಿದೆ. ಈ ಸರಣಿಯಲ್ಲಿ ಸ್ಕೈರಾಪ್ಟರ್‌ ಮತ್ತು ಸ್ಕೈರಾಪ್ಟರ್‌ ಪ್ರೊ ಗ್ಲಾಸ್‌ಗಳನ್ನು ಪರಿಚಯಿಸಿದೆ. ಇನ್ನು ಈ ಎರಡೂ ಸನ್‌ಗ್ಲಾಸ್‌ಗಳು ಪ್ಲಾಸ್ಟಿಕ್ ಎಬಿಎಸ್ ಫ್ರೇಮ್‌ನೊಂದಿಗೆ ಹೊಂದಿಕೊಳ್ಳುವ ಕೀಲುಗಳೊಂದಿಗೆ ವಿವಿಧ ಫೇಸ್‌ಗಳಿಗೆ ಹೊಂದಿಕೊಳ್ಳಲಿವೆ. ಇದಲ್ಲದೆ ಈ ಸ್ಮಾರ್ಟ್‌ಗ್ಲಾಸ್‌ಗಳ ಫ್ರೇಮ್ ಮಳೆ ಮತ್ತು ಬೆವರು ಪ್ರೂಫ್ ಆಗಿವೆ. ಜೊತೆಗೆ ಸ್ಮಾರ್ಟ್‌ಗ್ಲಾಸ್‌ಗಳು ದೀರ್ಘ ಗಂಟೆಗಳ ಕಾಲ ಧರಿಸಲು ಆರಾಮದಾಯಕವಾಗಿವೆ ಎಂದು ಹೇಳಲಾಗಿದೆ.

ಸ

ಇನ್ನು ಈ ಸನ್‌ಗ್ಲಾಸ್‌ನಲ್ಲಿರುವ ಪ್ರಮುಖ ಫೀಚರ್ಸ್‌ ಎಂದರೆ ಒಪನ್‌ ಇಯರ್‌ ಸ್ಪೀಕರ್‌ ಸಿಸ್ಟಂ ಆಗಿದೆ. ಇದರಿಂದ ನಿಮ್ಮ ಕಿವಿಗಳಿಗೆ ಮ್ಯೂಸಿಕ್‌ ಅನ್ನು ತಲುಪಿಸಲಿದೆ. ಇದಕ್ಕಾಗಿ ಸ್ಮಾರ್ಟ್‌ಫೋನ್‌ ಜೊತೆಗೆ ವಾಯರ್‌ಲೆಸ್‌ ಸಿಂಕ್‌ ಕೂಡ ಆಗಲಿದೆ. ಇದಲ್ಲದೆ ಏಕಕಾಲದಲ್ಲಿ ಮ್ಯೂಸಿಕ್‌ ಆಲಿಸುವಾಗಲೂ ನಿಮ್ಮ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಕೂಡ ನಿಮ್ಮ ಗಮನ ಹರಿಸುವುದಕ್ಕೆ ಕೂಡ ಅವಕಾಶ ನೀಡಲಿದೆ. ಇದರ ಫ್ರೇಮ್‌ನಲ್ಲಿ ಅಳವಡಿಸಲಾಗಿರುವ ಓಮ್ನಿಡೈರೆಕ್ಷನಲ್ ಮೈಕ್‌ಗಳ ಮೂಲಕ ಕಾಲ್‌ಗಳನ್ನು ಸ್ವಿಕರಿಸುವುದಕ್ಕೆ ಅವಕಾಶ ಕೂಡ ಇದೆ.

ಸ್ಮಾರ್ಟ್‌ಗ್ಲಾಸ್‌

ಇದಲ್ಲದೆ ಸ್ಮಾರ್ಟ್‌ಗ್ಲಾಸ್‌ನಲ್ಲಿ ನೀಡಲಾಗಿರುವ ಸ್ಪೀಕರ್‌ಗಳು ನಿಮ್ಮ ಕಣ್ಣಿಗೆ ಕಾಣದ ರೀತಿಯಲ್ಲಿ ಅಳವಡಿಸಲಾಗಿದೆ. ಈ ವಾಯರ್‌ಲೆಸ್‌ ಸ್ಪೀಕರ್‌ಗಳು ಬ್ಲೂಟೂತ್ 5.0 ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಕನೆಕ್ಟ್‌ ಮಾಡಲಿವೆ. ಇದು ಸುಗಮ ಸಂಗಿತವನ್ನು ಆಲಿಸುವುದಕ್ಕಾಗಿ 6ms ಲೇಟೆನ್ಸಿಯೊಂದಿಗೆ ಲೋ-ಲೆಟೆನ್ಸಿಯ ಆಡಿಯೊವನ್ನು ಸಹ ಬೆಂಬಲಿಸುತ್ತದೆ. ಇನ್ನು ಈ ಸರಣಿಯ ಸ್ಕೈರಾಪ್ಟರ್‌ ಪ್ರೊ ಸನ್‌ಗ್ಲಾಸ್‌ UV400 ಲೆನ್ಸ್‌ಗಳನ್ನು ಹೊಂದಿದೆ. ಇದು ಹೊರಾಂಗಣದಲ್ಲಿ 99% UVA/UVB ಪ್ರೊಟೆಕ್ಷನ್‌ ಅನ್ನು ಒದಗಿಲಿದೆ. ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬ್ಲೂ ಲೈಟ್‌ ಹೊರಸೂಸುವಿಕೆಯನ್ನು 35% ರಷ್ಟು ಕಡಿಮೆ ಮಾಡುತ್ತದೆ. .

ಎರಡು ಸ್ಮಾರ್ಟ್‌ಗ್ಲಾಸ್‌ಗಳ ನಡುವಿನ ವ್ಯತ್ಯಾಸವೇನು?

ಎರಡು ಸ್ಮಾರ್ಟ್‌ಗ್ಲಾಸ್‌ಗಳ ನಡುವಿನ ವ್ಯತ್ಯಾಸವೇನು?

ಈ ಎರಡು ಸ್ಮಾರ್ಟ್‌ಗ್ಲಾಸ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮೈಕ್ರೊಫೋನ್‌ಗಳ ಸಂಖ್ಯೆ, ಬ್ಯಾಟರಿ ಬಾಳಿಕೆ ಮತ್ತು ಲೆನ್ಸ್‌ಗಳಾಗಿವೆ. ಇದರಲ್ಲಿ ಸ್ಕೈರಾಪ್ಟರ್ ಸ್ಮಾಟ್‌ಗ್ಲಾಸ್‌ ಸಿಂಗಲ್‌ ಮೈಕ್ರೊಫೋನ್ ಅನ್ನು ಹೊಂದಿದೆ. ಆದರೆ ಇದರ ಪ್ರೊ ರೂಪಾಂತರ ಡ್ಯುಯಲ್ ಮೈಕ್‌ಗಳನ್ನು ಹೊಂದಿದೆ. ಇನ್ನು ಸ್ಕೈರಾಪ್ಟರ್‌ ರೂಪಾಂತರವು 5 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಆದರೆ ಇದರ ಪ್ರೊ ರೂಪಾಂತರವು 7 ಗಂಟೆಗಳ ಬ್ಯಾಟರಿ ಬಾಳಿಕೆ ನೀಡಲಿದೆ ಎನ್ನಲಾಗಿದೆ. ಜೊತೆಗೆ ಸ್ಕೈರಾಪ್ಟರ್ ನಿಯಮಿತ ಲೆನ್ಸ್‌ಗಳನ್ನು ಹೊಂದಿದ್ದು, ಪ್ರೊ ರೂಪಾಂತರವು UV400 ಲೆನ್ಸ್‌ಗಳನ್ನು ಪಡೆಯುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಕೈರಾಪ್ಟರ್‌ ಸ್ಮಾಟ್‌ಗ್ಲಾಸ್‌ ಭಾರತದಲ್ಲಿ 1,999ರೂ. ಬೆಲೆಯನ್ನು ಹೊಂದಿದೆ. ಇನ್ನು ಸ್ಕೈರಾಪ್ಟರ್‌ ಪ್ರೊ ಸ್ಮಾರ್ಟ್‌ಗ್ಲಾಸ್‌ 3,999ರೂ. ಬೆಲೆಯನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ ಗ್ಲಾಸ್‌ 12 ತಿಂಗಳ ವಾರಂಟಿಯೊಂದಿಗೆ ಬರುತ್ತದೆ. ಇವುಗಳನ್ನು ಜಸ್ಟ್‌ ಕೊರ್ಸೆಕಾ ಕಂಪೆನಿಯ ಅಧಿಕೃತ ವೆಬ್‌ಸೈಟ್, justcorseca.in, ಹಾಗೆಯೇ Amazon, Flipkart ಮತ್ತು ಇತರ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Just Corseca Skyraptor Smart Sunglasses Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X