ಫೇಸ್‌ಬುಕ್‌ನಲ್ಲಿ ಇರುವ ಈ ಉಪಯುಕ್ತ ಗ್ರೂಪ್‌ಗಳನ್ನು ನೀವು ಸೇರಿದ್ದೀರಾ?

|

ಪ್ರಸ್ತುತ ಸಾಮಾಜಿಕ ಜಾಲತಾಣಗಳು ಪ್ರಮುಖ ಸಂಪರ್ಕ ಕೊಂಡಿಗಳಾಗಿ ಕಾರ್ಯನಿರ್ವಹಿಸುತ್ತಲಿವೆ ಎಂದರೇ ತಪ್ಪಾಗಲಾರದು. ಏಕೆಂದರೇ ಬಳಕೆದಾರರು ಅವರಿಗೆ ಬೇಕಾದ ವಿಷಯವನ್ನು ಸೋಶಿಯಲ್‌ ತಾಣಗಳಲ್ಲಿ ಜಸ್ಟ್‌ ಸರ್ಚ್ ಮಾಡಿದರೇ ಸಾಕು, ಸಾಲು ಸಾಲು ಫಲಿತಾಂಶ ಸಿಕ್ಕಿಬಿಡುತ್ತದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಏನೇ ಮಾಹಿತಿ ಬೇಕಿದ್ದರೂ ಅದಕ್ಕೊಂದು ಫೇಸ್‌ಬುಕ್ ಪೇಜ್‌ ಅಥವಾ ಯೂಟ್ಯೂಬ್ ಚಾನೆಲ್‌ ಇದ್ದೆ ಇರುತ್ತದೆ. ಹೀಗಾಗಿ ಫೇಸ್‌ಬುಕ್ ಗ್ರೂಪ್‌ಗಳು ಅನುಕೂಲಕರವಾಗಿದೆ.

ಸಾಮಾಜಿಕ

ಫೇಸ್‌ಬುಕ್‌ ಪ್ರಬಲ ಸಾಮಾಜಿಕ ಜಾಲತಾಣ ಆಗಿ ಗುರುತಿಸಿಕೊಂಡಿದೆ. ವ್ಯಾಪಾರ, ನೆಚ್ಚಿನ ಕಾರು, ಬೈಕು, ಇಷ್ಟದ ಆಹಾರ, ರಿಯಲ್‌ ಎಸ್ಟೇಟ್, ಕೃಷಿ, ಸಾಹಿತ್ಯ, ಸಿನಿಮಾ ಹೀಗೆ ನಿಮಗೆ ಬೇಕಾದ ಆಸಕ್ತಿದಾಯಕ ಫೇಸ್‌ಬುಕ್‌ ಗ್ರೂಪ್‌ಗಳನ್ನು ನೀವು ಸೇರಿಕೊಳ್ಳಬಹುದಾಗಿದೆ. ಕೆಲವು ಫೇಸ್‌ಬುಕ್‌ ಗ್ರೂಪ್‌ಗಳು ಕಮರ್ಷಿಯಲ್‌(ಹಣ ಸಂಪಾದಿಸುವ) ಆಗಿರುತ್ತವೆ ಮತ್ತೆ ಕೆಲವು ಪುಟಗಳು ಯಾವುದೇ ಲಾಭಾಂಶದ ನಿರೀಕ್ಷೆ ಇಲ್ಲದೆ ನಡೆಯುತ್ತವೆ. ಇಂತಹ ಗ್ರೂಪ್‌ಗಳ ಸೇರುವಿಕೆ ಸಂಪರ್ಕ/ಮಾಹಿತಿ ತಿಳುವಳಿಕೆಗೆ ನೆರವಾಗಲಿದೆ ಎನ್ನಬಹುದು. ಈ ರೀತಿ ಕೆಲವು ಫೇಸ್‌ಬುಕ್‌ ಗ್ರೂಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಸಾಹಿತ್ಯ/ಬರವಣಿಗೆಯ ಗ್ರೂಪ್‌ಗಳು

ಸಾಹಿತ್ಯ/ಬರವಣಿಗೆಯ ಗ್ರೂಪ್‌ಗಳು

ಫೇಸ್‌ಬುಕ್‌ನಲ್ಲಿ ಎಲ್ಲ ವಿಷಯಗಳಿಗೆ ಪುಟ ಇರುವಂತೆ ಸಾಹಿತ್ಯ ಆಸಕ್ತರಿಗಾಗಿ ಹಾಗೂ ಅಕ್ಷರ ಪ್ರಿಯರಿಗಾಗಿ ಸಹ ಪುಟಗಳಿವೆ. ಈ ಪುಟಗಳಲ್ಲಿ ಸಾಹಿತ್ಯ/ಬರವಣಿಗೆಗೆ ಸಂಬಂಧಿಸಿದಂತೆ ಪೋಸ್ಟ್‌ ಹಾಕಲಾಗುತ್ತದೆ. ಕವಿಗಳ, ಸಾಹಿತಿಗಳ ಹಾಗೂ ಬರಹಗಾರರ ಕಥೆ, ಕಾದಂಬರಿ, ಕವನಗಳ ಚರ್ಚೆ ಮಾಡಲಾಗುತ್ತದೆ. ಈ ರೀತಿಯ ಸಾಕಷ್ಟು ಪುಟಗಳು ಸಕ್ರಿಯವಾಗಿ ಕೆಲಸಮಾಡುತ್ತಿವೆ.

ಖರೀದಿ ಮತ್ತು ಮಾರಾಟದ ಗ್ರೂಪ್‌ಗಳು

ಖರೀದಿ ಮತ್ತು ಮಾರಾಟದ ಗ್ರೂಪ್‌ಗಳು

ಬೈಕ, ಕಾರು, ಮನೆ, ನಿವೇಶನ ಸೇರಿದಂತೆ ಖರೀದಿ ಹಾಗೂ ಮಾರಾಟ ಕುರಿತಾಗಿ ಮಾಹಿತಿ ಶೇರ್ ಮಾಡುವ ಪುಟಗಳು ಸಹ ಫೇಸ್‌ಬುಕ್‌ನಲ್ಲಿ ನಕ್ರಿಯವಾಗಿ ತೊಡಗಿಸಿಕೊಂಡಿವೆ. ಈ ರೀತಿಯ ಪುಟಗಳಲ್ಲಿ ಮಾರಾಟಕ್ಕೆ ಇರುವ ಮನೆ, ವಾಹನ, ಇತರೆ ಏನೇ ಇದ್ದರೂ ಆ ಬಗ್ಗೆ ಪೋಸ್ಟ್‌ ಮಾಡಲಾಗಿರುತ್ತದೆ. ಖರೀದಿಸಲು ಇಚ್ಚಿಸುವ ಬಳಕೆದಾರರು ನೇರವಾಗಿ ಅವರನ್ನು ಸಂಪರ್ಕ ಮಾಡಬಹುದಾಗಿದೆ.

ಕನ್ನಡದ ಗ್ರೂಪ್‌

ಕನ್ನಡದ ಗ್ರೂಪ್‌

ಫೇಸ್‌ಬುಕ್‌ನಲ್ಲಿ ಕನ್ನಡ ಭಾಷೆ ನಾಡು ನುಡಿ ಅಭಿಮಾನದ ಪುಟಗಳು ಇವೆ. ಇಂತಹ ಪುಟಗಳು ಮಾತೃ ಭಾಷೆಯ ಪ್ರೀತಿ, ನಮ್ಮ ನಾಡಿನ ಹೆಮ್ಮೆ, ಇಲ್ಲಿಯ ಕಲೆ-ಸಂಸ್ಕೃತಿಗೆ ಗೌರವ ವ್ಯಕ್ತಪಡಿಸುವ ಹಾಗೂ ಉಳಿಸುವ ಕೆಲಸ ಮಾಡುತ್ತಿವೆ. ಕನ್ನಡ ಪುಟಗಳು ಕನ್ನಡವನ್ನು ಉಳಿಸುವ ಕಾಯಕ ಮಾಡುತ್ತಿದ್ದು, ಅಧಿಕ ಫಾಲೋವರ್ಸ್‌ಗಳನ್ನು ಪಡೆದುಕೊಂಡಿವೆ.

ಸ್ಪೂರ್ತಿದಾಯಕ ಗ್ರೂಪ್‌ಗಳು

ಸ್ಪೂರ್ತಿದಾಯಕ ಗ್ರೂಪ್‌ಗಳು

ಫೇಸ್‌ಬುಕ್‌ನಲ್ಲಿ ಸ್ಪೂರ್ತಿದಾಯಕ ಗ್ರೂಪ್‌ಗಳು ಸಹ ಇದ್ದು, ಬೇಸರದಲ್ಲಿರುವವರಿಗೆ ಸ್ಪೂರ್ತಿ ನೀಡುವ ಪೋಸ್ಟ್‌ಗಳನ್ನು ಕಾಣಬಹುದಾಗಿದೆ. ಲೆಜೆಂಡ್‌ಗಳ ಹಿತನುಡಿಗಳು, ಬದುಕಲು ಸ್ಪೂರ್ತಿ ನೀಡುವ ಮಾತುಗಳನ್ನು ಈ ಗ್ರೂಪ್‌ಗಳು ಪೋಸ್ಟ್ ಮಾಡುತ್ತವೆ.

ಉದ್ಯೋಗ ಮಾಹಿತಿ ನೀಡುವ ಗ್ರೂಪ್‌ಗಳು

ಉದ್ಯೋಗ ಮಾಹಿತಿ ನೀಡುವ ಗ್ರೂಪ್‌ಗಳು

ಫೇಸ್‌ಬುಕ್‌ನಲ್ಲಿ ಉದ್ಯೋಗ ಮಾಹಿತಿ ನೀಡುವ ಗ್ರೂಪ್‌ಗಳು ಸಹ ಸಕ್ರಿಯವಾಗಿವೆ. ಯಾವ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಕರೆದಿದ್ದಾರೆ. ಪ್ರಮುಖ ಖಾಸಗಿ ಕಂಪನಿಗಳಲ್ಲಿನ ಉದ್ಯೋಗದ ಮಾಹಿತಿಗಳನ್ನು ಈ ಗ್ರೂಪ್‌ಗಳಲ್ಲಿ ಕಾಣಬಹುದಾಗಿದೆ. ಹಾಗೆಯೇ ಅರ್ಜಿ ಸಲ್ಲಿಸುವ ಕುರಿತಾಗಿಯು ಪೂರ್ಣ ಮಾಹಿತಿಯನ್ನು ಈ ರೀತಿಯ ಗ್ರೂಪ್‌ಗಳು ನೀಡುತ್ತವೆ.

ಸಿನಿಮಾ ಸಂಬಂಧಿತ ಗ್ರೂಪ್‌ಗಳು

ಸಿನಿಮಾ ಸಂಬಂಧಿತ ಗ್ರೂಪ್‌ಗಳು

ಸಿನಿಮಾದ ಬಗೆಯ ಸುದ್ದಿಗಳು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತವೆ. ಈ ನಿಟ್ಟಿನಲ್ಲಿ ಸಿನಿಮಾ, ಹಾಡು, ಸಿರೀಯಲ್ ಹಾಗೂ ಚಿತ್ರನಟ-ನಟಿಯರ ಬಗ್ಗೆಯು ಫೇಸ್‌ಬುಕ್‌ನಲ್ಲಿ ಗ್ರೂಪ್‌ಗಳು ಇವೆ. ಹೊಸ ಸಿನಿಮಾಗಳ ಕುರಿತಾದ ಪೋಸ್ಟ್‌, ಸೂಪರ್ ಹಿಟ್ ಆಗಿರುವ ಚಿತ್ರಗಳ ಕುರಿತಾದ ಪೋಸ್ಟ್‌, ನಟ-ನಟಿಯರಿಗೆ ಶುಭಾಶಯಗಳ ಪೋಸ್ಟ್‌ಗಳನ್ನು ಈ ಗ್ರೂಪ್‌ಗಳಲ್ಲಿ ಕಾಣಬಹುದಾಗಿದೆ.

Most Read Articles
Best Mobiles in India

English summary
Kannada Groups Should You Follow On Facebook And Why.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X