Subscribe to Gizbot

ಕನ್ನಡ ಕೀ ಬೋರ್ಡ್‌ ಜನಕ ಕೆ.ಪಿ.ರಾವ್‌ಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಗರಿ

Posted By:

ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ದರಾದ ಕಿನ್ನಿಕಂಬಳ ಪದ್ಮನಾಭ ರಾವ್ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ಪ್ರಶಸ್ತಿಗಳಿಂದ ದೂರವಿರುವ ಇವರು ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದಾರೆ. ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ ಕೆ.ಪಿ.ರಾಯರಿಗೆ ಸಲ್ಲುತ್ತದೆ. ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ ಇವರದೇ ಸಾಧನೆ. ಮುಂದೆ ಇದೇ ತರ್ಕ ಬಳಸಿ ಅವರು ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಸಿದ್ದಾರೆ.

ಕನ್ನಡ ಕೀ ಬೋರ್ಡ್‌ ಜನಕ ಕೆ.ಪಿ.ರಾವ್‌ಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಗರಿ

ಇವರು ಹಲವಾರು ಸಂಘ ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿದ್ದಾರೆ.ಆಳ್ವಾಸ್ ನುಡಿಸಿರಿ 2009ರಲ್ಲಿಸನ್ಮಾನ,ವಿಶ್ವಕರ್ಮ ಪ್ರಶಸ್ತಿ,ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅವರ ಜೀವನ-ಸಾಧನೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುವ'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್'ಪುಸ್ತಕ ಹೊರಬಂದಿದ್ದು ಟಿ.ಜಿ ಶ್ರೀನಿಧಿ ಬರೆದ ಈ ಪುಸ್ತಕವನ್ನು ಬೆಂಗಳೂರಿನ ಉದಯಭಾನು ಕಲಾಸಂಘ ಪ್ರಕಟಿಸಿದೆ.

ಫೋಟೋ ಕೃಪೆ: ವಿಕಿಪೀಡಿಯಾ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot