Subscribe to Gizbot

ರೂ 4,099ಕ್ಕೆ ಕಾರ್ಬನ್‌ನ ಎ41 ಪವರ್ ಡಿವೈಸ್ ಲಾಂಚ್

By: Shwetha PS

ಕಾರ್ಬನ್ ಎ41 ಪವರ್ ಎಂಬ ಡಿವೈಸ್ ಒಂದನ್ನು ಲಾಂಚ್ ಮಾಡುತ್ತಿದ್ದು ಇದರ ಬೆಲೆ ರೂ 4,099 ಆಗಿದೆ ಮತ್ತು ಇದು 4ಜಿ ವೋಲ್ಟ್ ಕನೆಕ್ಟಿವಿಟಿಯನ್ನು ಬೆಂಬಲಿಸುತ್ತದೆ. ಕಾರ್ಬನ್ 41 ಪವರ್ ಪ್ರಥಮ 4ಜಿ ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದು ಮುಖ್ಯ ವಿಶೇಷತೆಗಳನ್ನು ಒಳಗೊಂಡು ಭಾರತೀಯ ಮಾರುಕಟ್ಟೆಗೆ ಅಡಿ ಇಟ್ಟಿದೆ.

ರೂ 4,099ಕ್ಕೆ ಕಾರ್ಬನ್‌ನ ಎ41 ಪವರ್ ಡಿವೈಸ್ ಲಾಂಚ್

ಹೆಚ್ಚಾಗಿ ಕಾರ್ಬನ್ ಕಂಪೆನಿಯು ಬಜೆಟ್ ಶ್ರೇಣಿಯ ಡಿವೈಸ್‌ಗಳತ್ತ ಗಮನ ಹರಿಸುವುದರಿಂದ ಈ ಪಟ್ಟಿಗೆ ಔರಾ ನೋಟ್ ಪ್ಲೇ ಕೂಡ ಸೇರಿದೆ. ಇದು ರೂ 7,500 ಕ್ಕೆ ದೊರೆಯುತ್ತಿದ್ದು ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಸಾಮರ್ಥ್ಯವಿರು ಬ್ಯಾಟರಿ ಇದರಲ್ಲಿದೆ.

ಕಾರ್ಬನ್ ಎ41 ಪವರ್ ಸಾಮಾನ್ಯ ವಿನ್ಯಾಸವನ್ನು ಪಡೆದುಕೊಂಡಿದ್ದು ಈ ಬೆಲೆಯಲ್ಲಿ ದೊರೆಯುವ ಇತರ ಫೋನ್‌ಗಳಲ್ಲಿ ಕೂಡ ಇದೇ ವಿಶೇಷತೆಯನ್ನು ಕಾಣಬಹುದಾಗಿದೆ. 4 ಇಂಚಿನ WVGA ಡಿಸ್‌ಪ್ಲೇ ಇದರಲ್ಲಿದ್ದು 800x480 ಪಿಕ್ಸೆಲ್ ಅನ್ನು ಫೋನ್ ಹೊಂದಿದೆ. ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು 1.3GHZ ಡಿವೈಸ್‌ನಲ್ಲಿದೆ.

ಡಿಲೀಟ್ ಮಾಡಲಾಗದ ಆಪ್ ಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ.?

1 ಜಿಬಿ RAM ಅನ್ನು ಫೋನ್ ಒಳಗೊಂಡಿದೆ ಮತ್ತು 8 ಜಿಬಿ ಸಂಗ್ರಹಣೆ ಡಿವೈಸ್‌ನಲ್ಲಿದೆ ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 32 ಜಿಬಿಗೆ ವಿಸ್ತರಿಸಬಹುದಾಗಿದೆ.

ಕಾರ್ಬನ್ ಎ41 ವಿಶೇಷತೆ ಏನೆಂದರೆ ಇದು 2 ಎಮ್‌ಪಿ ಕ್ಯಾಮೆರಾವನ್ನು ರಿಯರ್ ಆಗಿ ಏಕ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಪಡೆದುಕೊಂಡಿದೆ. ವಿಜಿಎ ಸೆಲ್ಫಿ ಕ್ಯಾಮೆರಾ ಇದರಲ್ಲಿದೆ.

ಈ ಬೆಲೆಯಲ್ಲಿ ಬರುವ ಡಿವೈಸ್‌ನಲ್ಲಿ ನಾವು ಇಷ್ಟೇ ನಿರೀಕ್ಷಿಸಬಹುದಾಗಿದೆ. ಆಂಡ್ರಾಯ್ಡ್ 7.0 ನಾಗಟ್ ಇದರಲ್ಲಿದ್ದು 2300mAh ಬ್ಯಾಟರಿ ಫೋನ್‌ನಲ್ಲಿದೆ. ಇದು 8 ಗಂಟೆಗಳ ಕಾಲ ಚಾರ್ಜಿಂಗ್ ಅನ್ನು ನೀಡುತ್ತದೆ. 4 ಜಿ ವೋಲ್ಟ್, ಡ್ಯುಯಲ್ ಸಿಮ್ ಬೆಂಬಲ ಮತ್ತು ಬ್ಲೂಟೂತ್ ಇದರಲ್ಲಿದೆ.

Read more about:
English summary
Karbon has announced the launch of the A41 Power, an entry-level smartphone with 4G VoLTE and Android Nougat.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot