Subscribe to Gizbot

ಕಾರ್ಬನ್ ಔರಾ ನೋಟ್ ಪ್ಲೇ ರೂ 7,590 ಕ್ಕೆ ಬಿಡುಗಡೆ

By: Shwetha PS

ಸ್ಥಳೀಯ ಫೋನ್ ತಯಾರಕ ಕಂಪೆನಿಯಾದ ಕಾರ್ಬನ್ ಇತ್ತೀಚೆಗೆ ತಾನೇ ಹೊಸದಾದ ಡಿವೈಸ್ ಒಂದನ್ನು ಬಿಡುಗಡೆ ಮಾಡಿದ್ದು ಇದರ ಬೆಲೆ ರೂ 7,590 ಆಗಿದೆ. ಕಾರ್ಬನ್ ಔರಾ ನೋಟ್ ಪ್ಲೇ ಎಂಬ ಹೆಸರನ್ನು ಈ ಡಿವೈಸ್ ಹೊಂದಿದ್ದು ಎರಡೂ ಡಿವೈಸ್‌ಗಳು ಕಪ್ಪು ಮತ್ತು ಷಾಂಪೈನ್ ಬಣ್ಣಗಳಲ್ಲಿ ಬಂದಿವೆ.

ಕಾರ್ಬನ್ ಔರಾ ನೋಟ್ ಪ್ಲೇ ರೂ 7,590 ಕ್ಕೆ ಬಿಡುಗಡೆ

ಈ ಫೋನ್ ವಿಶೇಷತೆಯನ್ನು ಕುರಿತು ಹೇಳುವುದಾದರೆ ಇದು ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದೆ. 6 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಫೋನ್ ಒಳಗೊಂಡಿದ್ದು ರೆಸಲ್ಯೂಶನ್ 1280x720 ಪಿಕ್ಸೆಲ್‌ಗಳನ್ನು ಒಳಗೊಂಡಿದೆ. ಇದು ನಿರ್ದಿಷ್ಟಪಡಿಸದೇ ಇರುವ ಕ್ವಾಡ್ ಕೋರ್ ಪ್ರೊಸೆಸರ್ 1.3 GHZ ಅನ್ನು ಒಳಗೊಂಡಿದೆ. ಚಿಪ್‌ಸೆಟ್ 2 ಜಿಬಿ RAM ಅನ್ನು ಹೊಂದಿದ್ದು 16 ಜಿಬಿ ಡೀಫಾಲ್ಟ್ ಸಂಗ್ರಹಣೆಯನ್ನು ಪಡೆದಿದೆ.

ಈ ಸಂಗ್ರಹಣೆಯನ್ನು 32 ಜಿಬಿವರೆಗೆ ವಿಸ್ತರಿಸಬಹುದಾಗಿದ್ದು ಎಸ್‌ಡಿ ಕಾರ್ಡ್ ಇದರಲ್ಲಿದೆ. ಇದರಲ್ಲಿ ಪ್ರಿ ಇನ್‌ಸ್ಟಾಲ್‌ಡ್ 7.0 ನಾಗಟ್ ಓಎಸ್ ಅನ್ನು ಒಳಗೊಂಡಿದೆ.

ಇನ್ನು ಡಿವೈಸ್ ಕ್ಯಾಮೆರಾವು 8 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಆಟೋ ಫೋಕಸ್ ಇದರಲ್ಲಿದೆ. ಎಲ್‌ಇಡಿ ಫ್ಲ್ಯಾಶ್‌ಲೈಟ್ ಡಿವೈಸ್‌ನಲ್ಲಿದ್ದು ಕ್ಯಾಮೆರಾದೊಂದಿಗೆ ಇದು ಸೇರಿಕೊಂಡಿದೆ. ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಳನ್ನು ಮಾಡಲು ಅನುಗುಣವಾಗಿದೆ.

'ಆಧಾರ್ ಆಪ್‌' ಸೃಷ್ಟಿಸಿ ಜೈಲಿಗೆ ಬಿದ್ದ ಭೂಪ!!..42 ಲಕ್ಷ ವೇತನವಿದ್ದರೂ ಅತ ಮಾಡಿದ್ದು?

ಫೋನ್ ಬ್ಯಾಟರಿ 3,300mAh Li-ion ಆಗಿದ್ದು ಲೈಟ್ ಆನ್ ಮಾಡಿಕೊಂಡೇ ಚಾರ್ಜ್ ಮಾಡಲಿದೆ. ಕಾರ್ಬನ್ ಔರಾ ನೋಟ್ ಪ್ಲೇ ನಲ್ಲಿ ಡ್ಯುಯಲ್ ಸಿಮ್, 4ಜಿ, ಬ್ಲ್ಯೂಟೂತ್, ವೈ-ಫೈ, ವೈ-ಫೈ ಹಾಟ್‌ಸ್ಪಾಟ್, ಜಿಪಿಎಸ್, ಮೈಕ್ರೋ ಯುಎಸ್‌ಬಿ ಪೋರ್ಟ್ ಅಕ್ಲೆರೊಮೀಟರ್, ಜಿ ಸೆನ್ಸಾರ್, ಪ್ರಾಕ್ಸಿಮಿಟಿ ಮತ್ತು ಲೈಟ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ.

ಇದು ಚೌಕಾಕಾರದ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆದುಕೊಂಡಿದ್ದು ಈ ಹಿಂದೆಯಷ್ಟೇ ಕಾರ್ಬನ್ ಕೆ9 ಕಾರ್ವಾ 4ಜಿ ಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಯುಎಸ್‌ಪಿ ಭೀಮ್ ಅಪ್ಲಿಕೇಶನ್ ಇದರಲ್ಲಿದೆ ಇದು ಫಿಂಗರ್‌ಪ್ರಿಂಟ್ ದೃಢೀಕರಣಗಳನ್ನು ಕೂಡ ಒಳಗೊಂಡಿದೆ. ಕಾರ್ಬಾನ್ ಕೆ9 ಸ್ಮಾರ್ಟ್‌ಫೋನ್ ಬೆಲೆ ರೂ 5,290 ಆಗಿದೆ.

Read more about:
English summary
Karbonn Aura Note Play features an 8MP rear-facing main camera that is equipped auto-focus.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot