ರಾಜ್ಯದಲ್ಲಿ ಬ್ಯಾನ್‌ ಆಗಲಿದೆಯಾ ಓಲಾ, ಉಬರ್‌, ರಾಪಿಡೋ ಆಟೋ ಸೇವೆ?

|

ಜನಪ್ರಿಯ ಆ್ಯಪ್‌ ಆಧಾರಿತ ಆಟೋ ಸೇವೆಗಳನ್ನು ಬಳಸುವವರು ಈ ಸುದ್ದಿಯನ್ನು ಓದಲೇಬೇಕು. ಯಾಕಂದ್ರೆ ಕರ್ನಾಟಕ ರಾಜ್ಯ ಸರ್ಕಾರ ಸೋಮವಾರದಿಂದ ಆ್ಯಪ್‌ ಆಧಾರಿತ ಆಟೋ ಸೇವೆಗಳನ್ನು ರಾಜ್ಯದಲ್ಲಿ ಬ್ಯಾನ್‌ ಮಾಡುವುದಾಗಿ ಹೇಳಿದೆ. ಸರ್ಕಾರ ನಿಗದಿಪಡಿಸಿದ ದರಗಳನ್ನು ಅನುಸರಿಸುವುದಕ್ಕೆ ಒಪ್ಪಿದರೆ ಮಾತ್ರ ಈ ಸೇವೆಗಳಿಗೆ ರಾಜ್ಯದಲ್ಲಿ ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಓಲಾ, ಉಬರ್‌, ರಾಪಿಡೋ ಅಪ್ಲಿಕೇಶನ್‌ಗಳಿಗೆ ಖಡಕ್‌ ಸೂಚನೆ ನೀಡಿದೆ.

ನಿಗದಿತ

ಹೌದು, ಬೆಂಗಳೂರಿನಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಿರುವ ಓಲಾ, ಉಬರ್‌, ರಾಪಿಡೋ ಆಟೋ ಸೇವೆಗಳ ಮೇಲೆ ಸರ್ಕಾರ ಬ್ಯಾನ್‌ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಸರ್ಕಾರ ನಿಗಧಿ ಪಡಿಸಿರುವ ದರವನ್ನು ಮೀರಿ ಹೆಚ್ಚಿನ ಶುಲ್ಕವನ್ನು ಓಲಾ ಉಬರ್‌ಗಳು ವಿಧಿಸುತ್ತಿರುವುದರಿಂದ ಈ ರೀತಿಯ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಸೋಮವಾರದ ತನಕ ಸರ್ಕಾರ ನಿಗಧಿ ಪಡಿಸಿದ ದರಗಳನ್ನು ಅನುಸರಿಸುವಂತೆ ಮತ್ತು ಅವರ ಉತ್ತರವನ್ನು ಸಲ್ಲಿಸಲು ಸಮಯನೀಡಲಾಗಿದೆ.

ಓಲಾ

ಒಂದು ವೇಳೆ ಓಲಾ, ಉಬರ್‌, ರಾಪಿಡೋ ಆಟೋ ಸೇವೆಗಳು ಸರ್ಕಾರದ ದರ ನಿಯಮವನ್ನು ಪಾಲಿಸದಿದ್ದರೆ ಬೆಂಗಳೂರಿನಲ್ಲಿ ಸೋಮವಾರ ಆಪ್‌ ಆಧಾರಿತ ಆಟೋ ಸೇವೆ ಬಂದ್‌ ಆಗಲಿದೆ. ಇದರಿಂದ ಓಲಾ, ಉಬರ್‌, ರಾಪಿಡೋ ಅಂತಾ ಬುಕ್‌ ಮಾಡಿ ಆಟೋಗಾಗಿ ಕಾಯುವವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಸದ್ಯ ರಾಜ್ಯ ಸರ್ಕಾರ ಓಲಾ, ಉಬರ್‌ ಮತ್ತು ರಾಪಿಡೋ ಸೇರಿದಂತೆ ಅಪ್ಲಿಕೇಶನ್‌ಗಳ ಸ್ವಯಂ ಸೇವೆಗಳನ್ನು "ಅಕ್ರಮ" ಎಂದು ಘೋಷಿಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಸರ್ಕಾರ

ರಾಜ್ಯ ಸರ್ಕಾರ ಸೂಚಿಸಿರುವಂತೆ ಪ್ರಯಾಣಿಕರಿಗೆ ಅನುಕೂಲವಾಗುವ ಶುಲ್ಕವನ್ನು ಅನುಸರಿಸಬೇಕು. ಆದರೆ ಆಪ್‌ ಆಧಾರಿತ ಸೇವೆಯಲ್ಲಿ ಶುಲ್ಕವನ್ನು ಹೆಚ್ಚಿನ ಪ್ರಮಾಣದಲ್ಲಿ ವಸೂಲಿ ಮಾಡಲಾಗುತ್ತಿದೆ. ಇದರಿಂದ ಸರ್ಕಾರ ನಿಗದಿಪಡಿಸಿದ ದರಗಳನ್ನು ಅನುಸರಿಸಲು ಮತ್ತು ಅವರ ಉತ್ತರವನ್ನು ನೀಡುವುದಕ್ಕೆ ಕಂಪೆನಿಗಳಿಗೆ ಸದ್ಯ ಮೂರು ದಿನದ ಕಾಲಾವಕಾಶವನ್ನು ನೀಡಲಾಗಿದೆ. ಇದರಂತೆ ಕಂಪನಿಗಳು ಮೊದಲ 2 ಕಿಮೀಗೆ 30 ರೂ ಮತ್ತು ನಂತರ 15 ರೂಗಳ ನಿಗದಿತ ದರವನ್ನು ಮಾತ್ರ ವಿಧಿಸಬಹುದಾಗಿದೆ. ಆದರೆ ಬೆಂಗಳೂರಿನಲ್ಲಿ ಈ ಕಂಪನಿಗಳು 2 ಕಿಮೀಗಿಂತ ಕಡಿಮೆ ದೂರಕ್ಕೆ ಕನಿಷ್ಠ 100 ರೂ.ಶುಲ್ಕ ವಿಧಿಸುತ್ತಿರುವುದು ಕಂಡು ಬಂದಿದೆ.

ಆಟೋ

ಇದೇ ಕಾರಣಕ್ಕೆ ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಅಪ್ಲಿಕೇಶನ್ ಆಧಾರಿತ ಆಟೋ ಸೇವೆಗಳನ್ನು ಬ್ಯಾನ್‌ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇನ್ನು ರಾಜ್ಯ ಪೊಲೀಸ್ ಅಧಿಕಾರಿಗಳ ಪ್ರಕಾರ, Ola, Uber ಮತ್ತು Rapido ಅಪ್ಲಿಕೇಶನ್‌ಗಳು ನೀಡುವ ಸೇವೆ ಆಟೋ-ಸೇವೆಗೆ ಸೂಕ್ತವಾಗಿಲ್ಲ. ಇದು ಕೇವಲ ಟ್ಯಾಕ್ಸಿಗಳನ್ನು ಮಾತ್ರ ಚಲಾಯಿಸಲು ಅರ್ಹವಾಗಿದೆ ಎಂದು ಹೇಳಿದ್ದಾರೆ. ಇದಲ್ಲದೆ ಆರ್‌ಟಿಒ ಅಧಿಕಾರಿಗಳು ಕೂಡ ಓಲಾ, ಉಬರ್‌, ರಾಪಿಡೋ ಅಪ್ಲಿಕೇಶನ್‌ಗಳು ನಿಗಧಿತ ದರ ನಿಯಮವನ್ನು ಅನುಸರಿಸದೆ ಅಕ್ರಮ ಎಸಗುತ್ತಿವೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ

ಸದ್ಯ ಬೆಂಗಳೂರಿನಲ್ಲಿ ಆಪ್‌ ಆಧಾರಿತ ಸೇವೆ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿರುವ ಓಲಾ, ಉಬರ್‌, ರಾಪಿಡೋ ಅಪ್ಲಿಕೇಶನ್‌ಗಳು ಸೋಮವಾರ ಏನು ಮಾಡಲಿವೆ ಅನ್ನೊದು ಪ್ರಶ್ನೆಯಾಗಿ ಉಳಿದೆ. ಇದರ ನಡುವೆ ರಾಪಿಡೋ ಅಪ್ಲಿಕೇಶನ್‌ ಬೆಂಗಳೂರಿನಲ್ಲಿ ನಾವು ಸೇವೆ ನೀಡುವುದನ್ನು ಮುಂದುವರೆಸಲಿದ್ದೆವೆ. ಬೆಂಗಳೂರಿನಲ್ಲಿ ನಮ್ಮ ಆಟೋ ಟ್ಯಾಕ್ಸಿ ಸೇವೆಗಳಲ್ಲಿ ಹೆಚ್ಚಿನ ದರವನ್ನು ನಾವು ವಿಧಿಸುತ್ತಿಲ್ಲ. ಆದರಿಂದ ನಮ್ಮ ಸೇವೆ ನಿರಂತರವಾಗಿರಲಿದೆ ಎಂದು ಹೇಳಿದೆ. ಅಲ್ಲದೆ ನಿಗದಿತ ಸಮಯದೊಳಗೆ ಸರ್ಕಾರಕ್ಕೆ ಸ್ಪಂದಿಸುವುದಾಗಿ ಕೂಡ ಹೇಳಿದೆ.

Best Mobiles in India

Read more about:
English summary
Karnataka govt to ban Ola, Uber, Rapido auto services in the state within the next three days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X