Subscribe to Gizbot

ಅಮೇರಿಕಾ ಬ್ಯಾನ್ ಮಾಡಿದ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಬಳಕೆ ಮಾಡುವ ಮುನ್ನ ಎಚ್ಚರ: ಯಾಕಾಗಿ..?

Written By:

ಆಂಟಿವೈರಸ್ ವಿಭಾಗದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸುತ್ತಿರುವ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಅಮೇರಿಕಾ ಸರಕಾರವೂ ಬ್ಯಾನ್ ಮಾಡಿದೆ. ಈ ಸಾಫ್ಟ್‌ವೇರ್ ಅನ್ನು ಅಮೇರಿಕಾ ಸರಕಾರದ ಕಚೇರಿಗಳಲ್ಲಿ ಬಳಕೆ ಮಾಡಿಕೊಳ್ಳದಂತೆ ಸೂಚನೆಯನ್ನು ನೀಡುತ್ತಿದೆ.

ಅಮೇರಿಕಾ ಬ್ಯಾನ್ ಮಾಡಿದ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಬಳಕೆ ಮಾಡುವ ಮುನ್ನ ಎಚ್ಚರ:

ಓದಿರಿ: ಚೀನಾ ಬಜೆಟ್ ಫೋನ್ ಬಿಡಿ: ರೂ.5000ಕ್ಕೆ 4000mAh ಬ್ಯಾಟರಿಯ ನೋಕಿಯಾ 2 ಬರುತ್ತಿದೆ ನೋಡಿ..!

ಕ್ಯಾಸ್ಪರ್ಸ್ಕಿ ಆಂಟಿವೈರಸ್ ರಷ್ಯಾ ಮೂಲದ ಕಂಪನಿಯಾಗಿದ್ದು, ನಿಮ್ಮ ಕಂಪ್ಯೂಟರ್ ನಲ್ಲಿ ಇದನ್ನು ಬಳಕೆ ಮಾಡಿಕೊಂಡರೆ ನಿಮ್ಮಲ್ಲಿರುವ ಎಲ್ಲಾ ಮಾಹಿತಿಯನ್ನು ನಿಮಗೆ ತಿಳಿದಂತೆ ಕಾಪಿ ಮಾಡಿಕೊಂಡು ತನ್ನ ಸರ್ವರ್‌ಗೆ ರವಾನಿಸುತ್ತದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೀಘ್ರವೇ ಬಳಕೆ ನಿಲ್ಲಿಸುವಂತೆ ಸೂಚನೆ:

ಶೀಘ್ರವೇ ಬಳಕೆ ನಿಲ್ಲಿಸುವಂತೆ ಸೂಚನೆ:

ಅಮೇರಿಕ ಸರಕಾರವೂ ಈಗಾಗಲೇ ತನ್ನ ಕಚೇರಿಯಲ್ಲಿ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಬಳಕೆ ಮಾಡಿಕೊಳ್ಳುತ್ತಿದ್ದರೇ ಅದನ್ನು ಶೀಘ್ರವೇ ನಿಲ್ಲಿಸುವಂತೆ ಸೂಚನೆಯನ್ನು ಹೊರಿಡಿಸಿದೆ. ಅಲ್ಲದೇ 90 ದಿನಗಳ ಅಂತರದಲ್ಲಿ ಬೇರೆ ಸಾಫ್ಟ್‌ವೇರ್‌ ಅನ್ನು ಬಳಕೆ ಮಾಡಲಿಕೊಳ್ಳಲು ತಿಳಿಸಿದೆ.

ಹೆಚ್ಚಿನ ಖ್ಯಾತಿ ಪಡೆದ ಕ್ಯಾಸ್ಪರ್ಸ್ಕಿ ಆಂಟಿವೈರಸ್:

ಹೆಚ್ಚಿನ ಖ್ಯಾತಿ ಪಡೆದ ಕ್ಯಾಸ್ಪರ್ಸ್ಕಿ ಆಂಟಿವೈರಸ್:

ಈಗಾಗಲೇ ಭಾರತವೂ ಸೇರಿಂದತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕ್ಯಾಸ್ಪರ್ಸ್ಕಿ ಆಂಟಿವೈರಸ್‌ಗೆ ಹೆಚ್ಚಿನ ಅಭಿಮಾನಿಗಳಿದ್ದು, ಪಾವತಿಸುವ ಸೇವೆಯನ್ನು ನೀಡುತ್ತಿದ್ದರೂ ಸುರಕ್ಷೆತೆಯ ದೃಷ್ಟಿಯಿಂದ ಉತ್ತಮ ಸಾಫ್ಟ್‌ವೇರ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ರಷ್ಯಾ ಕಣ್ಣಿಟ್ಟಿ:

ರಷ್ಯಾ ಕಣ್ಣಿಟ್ಟಿ:

ಕ್ಯಾಸ್ಪರ್ಸ್ಕಿ ಆಂಟಿವೈರಸ್ ಸಾಫ್ಟ್‌ವೇರ್ ಮೂಲಕ ವಿಶ್ವದ ಎಲ್ಲಾ ಕಂಪ್ಯೂಟರ್ ಗಳ ಮೇಲೆ ರಷ್ಯಾ ಕಣ್ಣಿಟ್ಟಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದ್ದು, ಕ್ಯಾಸ್ಪರ್ಸ್ಕಿ ಮುಖ್ಯಸ್ಥರು ಮತ್ತು ರಷ್ಯಾ ಗೂಡಾಚಾರವೂ ಒಂದಾಗಿದೆ ಎಂದು ಅಮೆರಿಕಾವೂ ಆರೋಪಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The US government banned the use of Kasperskysecurity software in federal offices Wednesday, saying the Russian company has risky ties to Russian intelligence that threaten US national security. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot