Subscribe to Gizbot

ಚೀನಾ ಬಜೆಟ್ ಫೋನ್ ಬಿಡಿ: ರೂ.5000ಕ್ಕೆ 4000mAh ಬ್ಯಾಟರಿಯ ನೋಕಿಯಾ 2 ಬರುತ್ತಿದೆ ನೋಡಿ..!

Written By:

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಕಾಲಿಟ್ಟಿರುವ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಮನಗೆದ್ದಿದೆ. ಈಗಾಗಲೇ ನೋಕಿಯಾದ ಮೂರು ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದೇ ಮಾದರಿಯಲ್ಲಿ ಮತ್ತೊಂದು ಬಜೆಟ್ ಫೋನ್ ವೊಂದನ್ನು ಲಾಂಚ್ ಮಾಡಲು ನೋಕಿಯಾ ಸದಿಲ್ಲದೇ ತಯಾರಿಯನ್ನು ನಡೆಸಿದೆ.

ಚೀನಾ ಬಜೆಟ್ ಫೋನ್ ಬಿಡಿ: ರೂ.5000ಕ್ಕೆ 4000mAh ಬ್ಯಾಟರಿಯ ನೋಕಿಯಾ 2 ಬರುತ್ತಿದೆ

ಓದಿರಿ: ಸೃಷ್ಠಿಸಿದ ಮಾನವನಿಗಿಂತ ಸ್ಮಾರ್ಟ್ ಆಗಲಿದೆ ಯಂತ್ರ ಮಾನವ..!

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟೆಯಲ್ಲಿ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಇಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳ ಹಾವಳಿಯೂ ಅಧಿಕವಾಗಿದೆ. ಇದನಕ್ನು ತಗ್ಗಿಸಿ, ಗ್ರಾಹಕರನ್ನು ಸೆಳೆಯಲು ನೋಕಿಯಾ ಮುಂದಾಗಿದೆ. ಇದಕ್ಕಾಗಿಯೇ ನೋಕಿಯಾ 2 ಲಾಂಚ್ ಮಾಡುತ್ತುದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 2 ನಲ್ಲಿ 4000mAh ಬ್ಯಾಟರಿ:

ನೋಕಿಯಾ 2 ನಲ್ಲಿ 4000mAh ಬ್ಯಾಟರಿ:

ಮಾರುಕಟ್ಟೆಯಲ್ಲಿ ಲಭ್ಯವಿರುವ ಚೀನಾ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಹೆಚ್ಚಿನ ಬ್ಯಾಟರಿ ಸಾಮಾರ್ಥ್ಯ ಹೊಂದಿರುವ ಬ್ಯಾಟರಿಯನ್ನು ಅಳವಡಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿರುವ ನೋಕಿಯಾ, ತನ್ನ ನೋಕಿಯಾ 2 ನಲ್ಲಿ 4000mAh ಬ್ಯಾಟರಿಯನ್ನು ಅಳವಡಿಸಿದೆ.

5 ಇಂಚಿನ HD ಡಿಸ್‌ಪ್ಲೇ:

5 ಇಂಚಿನ HD ಡಿಸ್‌ಪ್ಲೇ:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಇದು ಉತ್ತಮ ವಿಡಿಯೋಗಳನ್ನು ನೋಡಲು ಸಹಾಯಕಾರಿಯಾಗಿರಲಿದೆ. ಬೆಲೆ ಕಡಿಮೆಯಾದರು HD ಡಿಸ್‌ಪ್ಲೇಯನ್ನು ಕಾಣಬಹುದು.

ಸ್ನಾಪ್‌ಡ್ರಾಗನ್ ಪ್ರೋಸೆಸರ್:

ಸ್ನಾಪ್‌ಡ್ರಾಗನ್ ಪ್ರೋಸೆಸರ್:

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 212 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ ಜೊತೆaಗೆ 2GB RAM ಅನ್ನು ಸಹ ನೀಡಲಾಗಿದೆ, ಇದು ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ.

4G ಸಫೋರ್ಟ್:

4G ಸಫೋರ್ಟ್:

ಭಾರತೀಯ ಮಾರುಕಟ್ಟೆಯಲ್ಲಿ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿದ್ದು, ಇದೇ ಮಾದರಿಯಲ್ಲಿ ನೋಕಿಯಾ ಸಹ 4G ಸಪೋರ್ಟ್ ಮಾಡುವ ನೋಕಿಯಾ 2 ಲಾಂಚ್ ಮಾಡುತ್ತಿದೆ,

ಬೆಲೆ ರೂ. 5000:

ಬೆಲೆ ರೂ. 5000:

ಮೂಲಗಳ ಪ್ರಕಾರ ಈಗಾಗಲೆ ನೋಕಿಯಾ 3 ರೂ.9,500ಕ್ಕೆ ದೊರೆಯುತ್ತಿದ್ದು, ಈ ಹಿನ್ನಲೆಯಲ್ಲಿ ನೋಕಿಯಾ 2 ಬೆಲೆ ರೂ. 5000-5500 ಸಮೀಪದಲ್ಲಿ ಇರಲಿದೆ. ಯಾಕೆಂದರೇ ನೋಕಿಯಾ ಬೇರೆ ಸ್ಮಾರ್ಟ್‌ಫೋನ್ ಕಡೆ ವಾಲುವವರನ್ನು ಸೆಳೆಯಲು ಈ ತಂತ್ರಕ್ಕೆ ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
the entry-level Nokia 2 have started emerging online. Nokia 2 to arrive with a juicy 4000mAh battery, to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot