Just In
Don't Miss
- Sports
ಕಾಮನ್ವೆಲ್ತ್ ಗೇಮ್ಸ್ 2022: ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನಿಖತ್ ಜರೀನ್
- News
ಹೀಗೂ ಉಂಟೆ..! ಐದು ಕೋಟಿ ಗೆದ್ದು ಬರ್ಬಾದ್ ಆದ ವ್ಯಕ್ತಿಯ ಕಥೆ
- Movies
ಬ್ರೇಕ್ ಬಳಿಕ ಸಿನಿಮಾಗೆ ಮರಳಿದ ಶ್ವೇತಾ ಚೆಂಗಪ್ಪಾ!
- Automobiles
ಬಹುನೀರಿಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ 350 ಮೋಟಾರ್ಸೈಕಲ್ ಬಿಡುಗಡೆ
- Finance
ಕೇರಳ ಲಾಟರಿ: 'ಫಿಫ್ಟಿ ಫಿಫ್ಟಿ ಲಾಟರಿ FF-11' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Lifestyle
ಆಗಸ್ಟ 7ರಿಂದ ಆಗಸ್ಟ 13ರ ವಾರ ಭವಿಷ್ಯ: ವೃಶ್ಚಿಕ, ಮಕರ, ಮೀನ ರಾಶಿಯವರು ಅನಗತ್ಯ ವೆಚ್ಚಗಳನ್ನು ತಪ್ಪಿಸಿ
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ದಕ್ಷಿಣ ಭಾರತದಲ್ಲಿ ಚಾರಣಕ್ಕೆ ಸೂಕ್ತವಾದ 8 ಪ್ರಸಿದ್ದ ತಾಣಗಳು
ಪ್ಯಾನ್ ಇಂಡಿಯಾ ಮಾತಿಗೆ ಸಾಥ್ ನೀಡುತ್ತಿದೆ 'ಕೂ' ಆಪ್‌ನ ಈ ಫೀಚರ್!
ಸದ್ಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಆ ಸಾಲಿನಲ್ಲಿ ಕಾಣಿಸಿಕೊಂಡಿರುವ ಕೂ (KOO) ಮೈಕ್ರೋಬ್ಲಾಗಿಂಗ್ ಅಪ್ಲಿಕೇಶನ್ ತನ್ನದೇ ಶೈಲಿಯಿಂದ ಬಳಕೆದಾರರನ್ನು ಆಕರ್ಷಿಸಿದೆ. ಕೂ ಮೈಕ್ರೋಬ್ಲಾಗಿಂಗ್ ತನ್ನ ಬಳಕೆದಾರರ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಕೆಲವು ನೂತನ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಇದೀಗ ಕೂ ನೂತನವಾಗಿ MLK ಫೀಚರ್ ಅನ್ನು ಪರಿಚಯಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ತರಹ, ಪ್ಯಾನ್ ಇಂಡಿಯಾ ಮಾತಿಗೆ ಸಾಥ್ ನೀಡುತ್ತಿದೆ.

ನಿಮ್ಮ ಭಾಷೆ ಜನರಿಗೆ ಅರ್ಥವಾಗದ ಸ್ಥಳಕ್ಕೆ ನೀವು ಹೋದರೆ ಮತ್ತು ನೀವು ಜನರ ಬಗ್ಗೆ ತಿಳಿದುಕೊಳ್ಳಬೇಕು. ಅಂತಹ ಪರಿಸ್ಥಿತಿ ಯಲ್ಲಿ, ನಿಮ್ಮ ಮಾತುಗಳನ್ನು ಇತರರಿಗೆ ತಿಳಿಸುವಲ್ಲಿ ಮತ್ತು ಇತರ ವ್ಯಕ್ತಿಯ ಭಾಷೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸಾಮಾನ್ಯವಾಗಿ ಸಮಸ್ಯೆ ಎನಿಸುತ್ತದೆ. ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಆಪ್ ಇದಕ್ಕಾಗಿ ವಿಶೇಷ ಪರಿಹಾರವನ್ನು ಪರಿಚಯಿಸಿದೆ. ಅದುವೇ ಹೊಸ ಫೀಚರ್ MLK ಆಗಿದೆ. ಈ ಫೀಚರ್ ಸಹಾಯದಿಂದ, ಬೇರೆ ಭಾಷೆ ಮಾತನಾಡುವ ಯಾರೊಂದಿಗಾದರೂ ನಿಮ್ಮ ವಿಷಯವನ್ನು ಸುಲಭವಾಗಿ ಹಂಚಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.

ಈ ಆಯ್ಕೆಯನ್ನು ಬಳಸುವುದು ಹೇಗೆ
* ನಿಮ್ಮ ಫೋನಿನಲ್ಲಿ ಕೂ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
* ಕೂ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿದ ನಂತರ, ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಸ್ವೀಕರಿಸಿದ ತಕ್ಷಣ ನಿಮ್ಮ ಖಾತೆಯು ಪ್ರಾರಂಭವಾಗುತ್ತದೆ.
* ಈಗ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ, ಪ್ರಸ್ತುತ ಕೂ ನಲ್ಲಿ ಹಿಂದಿ, ಇಂಗ್ಲಿಷ್ ಸೇರಿದಂತೆ 10 ಭಾಷೆಗಳಿವೆ.
* ಹೊಸ ಕೂ ಮಾಡಲು ಅಥವಾ ಧ್ವನಿಯನ್ನು ಟೆಕ್ಸ್ಟ್‌ನಂತೆ ಟೈಪ್ ಮಾಡಲು, ಕೆಳಗಿನ ಬಲಭಾಗದಲ್ಲಿರುವ +koo ಅನ್ನು ಕ್ಲಿಕ್ ಮಾಡಿ.
* ಈಗ ಕೆಳಗಿನ ಎಡಭಾಗದಿಂದ ಐದನೇ ಐಕಾನ್ (ಮಾತನಾಡುವ ಎಮೋಜಿ) ಒತ್ತಿರಿ ಮತ್ತು ಟಾಕ್ ಟು ಟೈಪ್ ವೈಶಿಷ್ಟ್ಯವು ಪ್ರಾರಂಭವಾಗುತ್ತದೆ

* ಇದರ ನಂತರ, ನೀವು ಏನು ಬರೆಯಲು ಬಯಸುತ್ತೀರಿ, ಅದನ್ನು ಹೇಳಿ ಮತ್ತು ಎಲ್ಲವನ್ನೂ ನಿಮ್ಮ ಭಾಷೆಯಲ್ಲಿ ಟೈಪ್ ಮಾಡಲಾಗುತ್ತದೆ.
* ನಂತರ ಟೆಕ್ಸ್ಟ್ ಮೇಲಿರುವ ಪ್ಲಸ್ (+) ಐಕಾನ್ ಅನ್ನು ಆಯ್ಕೆ ಮಾಡಿ ಮತ್ತು ನೀವು ಅನುವಾದಿಸಲು ಬಯಸುವ ಭಾಷೆಯನ್ನು ಆಯ್ಕೆ ಮಾಡಿ.
* ಭಾಷೆಗಳನ್ನು ಆಯ್ಕೆ ಮಾಡಿದ ನಂತರ, ಪ್ರತಿ ಭಾಷೆಯ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಸಂದೇಶವನ್ನು ಸ್ವಯಂ ಅನುವಾದಿಸಲಾಗುತ್ತದೆ.

ಭಾರತದಲ್ಲಿ 467 ಮಿಲಿಯನ್ ಜನರು ವಿವಿಧ ಸಾಮಾಜಿಕ ಮಾಧ್ಯಮ ಬಳಸುತ್ತಿದ್ದು, ದಿನಕ್ಕೆ 2.36 ಗಂಟೆಗಳ ಕಾಲ ವೇದಿಕೆಗಳಲ್ಲಿ ಕಳೆಯುತ್ತಿದ್ದಾರೆ. ಆನ್‌ಲೈನ್ ಸಂಭಾಷಣೆಗಳು ಹೆಚ್ಚಾಗಿ ಇಂಗ್ಲಿಷ್ ನಲ್ಲಿಯೇ ಇರುತ್ತದೆ ಆದರೆ, ಶೇ. 90ರಷ್ಟು ಭಾರತೀಯರು ಸ್ಥಳೀಯ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಹೆಚ್ಚಾಗುತ್ತಿರುವ ಬಹು-ಭಾಷಾ ಸಾಮಾಜಿಕ ಮಾಧ್ಯಮಗಳು ಲಕ್ಷಾಂತರ ಮೊದಲ-ಬಾರಿ ಬಳಕೆದಾರರನ್ನು ಆಕರ್ಷಿಸಿದೆ. ಇದು ಸ್ಥಳೀಯ ಭಾಷೆ ಮಾತನಾಡುವವರನ್ನೂ ಒಳಗೊಂಡಿದೆ. ಇವರು ಈ ಮೊದಲು ಇಂಗ್ಲಿಷ್ ಪ್ರಧಾನವಾಗಿದ್ದ ವೇದಿಕೆಗಳಲ್ಲಿ ಕಳೆದುಹೋಗಿದ್ದೆವು ಎಂಬ ಭಾವವನ್ನು ಹೊಂದಿದ್ದವರು.

ಈ ಬಳಕೆದಾರರು ಸಾಮಾಜಿಕ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸಲು, ಪ್ರಖ್ಯಾತ ವ್ಯಕ್ತಿಗಳೊಂದಿಗೆ ಸಂವಹನ ಮಾಡಲು ಮತ್ತು ತಮ್ಮದೇ ಭಾಷೆಯಲ್ಲಿ ಅಭಿವ್ಯಕ್ತಿಸುವ ಈಗ ಹೆಚ್ಚು ಆಸಕ್ತಿಯನ್ನು ತೋರುತ್ತಿದ್ದಾರೆ. ಜೊತೆಗೆ ಒಂದೇ ರೀತಿ ಆಸಕ್ತಿ ಇರುವ ಬೇರೆ ಬೇರೆ ಭಾಷೆಗಳ ಜನರೊಂದಿಗೆ ತಮ್ಮದೇ ಭಾಷೆಯಲ್ಲಿ ಸಂವಹನ ನಡೆಸಲು ಸಹ ಎದುರು ನೋಡುತ್ತಿದ್ದಾರೆ.

ಇದಕ್ಕೆ ಪ್ರಮುಖ ಕಾರಣ ಎಂದರೆ ಅದು MLK ಯಾಗಿದೆ. ನೀವು ತುಂಬ ಖುಷಿಯಲ್ಲಿ ಮಾತನಾಡುವ ಭಾಷೆಯಲ್ಲಿಯೇ ದೇಶದಾದ್ಯಂತ ಇರುವ ಜನರೊಂದಿಗೆ ಸಂವಹನ ನಡೆಸಬಹುದಾಗಿದೆ. ನೀವು ಪೋಸ್ಟ್ ಮಾಡಬೇಕೆನ್ನುವ ವಿಷಯವನ್ನು ಕೇವಲ ಒಂದು ಕ್ಲಿಕ್ ಮೂಲಕ ಕೂ ವೇದಿಕೆಯಲ್ಲಿನ ಒಟ್ಟು ಒಂಬತ್ತು ಭಾಷೆಗಳಿಗೆ ಅನುವಾದ ಮಾಡಬಹುದಾಗಿದೆ. ದೃಢವಾದ ಭಾಷಾ ತಂತ್ರಜ್ಞಾನಗಳಿಂದ ಬೆಂಬಲಿತವಾಗಿರುವುದರಿಂದ, ಅನುವಾದವು ಮೂಲ ವಿಷಯಕ್ಕೆ ಹೆಚ್ಚು ಹತ್ತಿರವಿರಲಿದೆ ಹಾಗು ಅದರ ಭಾವಾರ್ಥವನ್ನು ಉಳಿಸಿಕೊಂಡಿರಲಿದೆ.

ಬೆಂಗಾಲಿ ಮಾತನಾಡುವವರು ತಮಿಳು, ತೆಲುಗು ಮತ್ತು ಕನ್ನಡದವರೊಂದಿಗೆ ಸಂವಹನ ನಡೆಸಲು MLK ಬಳಸಿಕೊಂಡು ತಮ್ಮ ವಿಷಯವನ್ನು ಅವರ ಭಾಷೆಗೆ ಭಾಷಾಂತರಿಸಬಹುದಾಗಿದೆ. ಇದರಂತೆ ಇತರೆ ಸ್ಥಳೀಯ ಭಾಷೆಯ ಜನರು ತಾವು ಇಚ್ಚಿಸಿದ ಇತರೆ ಭಾಷೆಗಳ ಜನರೊಂದಿಗೆ ಯಾವುದೇ ಅಡೆತಡೆಗಳಿಲ್ಲದೆ ಮಾತನಾಡಬಹುದು.

MLK ಮೂಲಕ ಶೇ. 30 ರಷ್ಟು ಸಂಭಾಷಣೆಗಳು
ಕೂನಲ್ಲಿನ ಸುಮಾರು ಶೇ. 30 ರಷ್ಟು ಸಂಭಾಷಣೆಗಳು MLK ಮೂಲಕ ನಡೆಯುತ್ತಿದೆ. , ಹಲವಾರು ಗಣ್ಯ ವ್ಯಕ್ತಿಗಳು (ಸೆಹ್ರಾವತ್‌ನಂತಹ) ತಮ್ಮ ಮಾತೃಭಾಷೆಯಲ್ಲಿ ಜನಸಾಮಾನ್ಯರೊಂದಿಗೆ ಸಂವಹನ ನಡೆಸಲು ಮತ್ತು ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳಲು ಈ ಫೀಚರ್ ಅನ್ನು ಬಳಸುತ್ತಿದ್ದಾರೆ. ಈ ಮೂಲಕ ಸೆಹ್ರಾವತ್ ಅವರು 109.2K ಫಾಲ್ಲೋರ್ಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಹುಭಾಷಾ ಜಗತ್ತಿಗೆ MLK
ಭಾರತದಂತೆಯೇ, ಪ್ರಪಂಚದ ಶೇ. 80 ರಷ್ಟು ಮಂದಿ ಸ್ಥಳೀಯ ಭಾಷೆಯನ್ನೇ ಮಾತನಾಡುತ್ತಾರೆ. ಯುರೋಪಿಯನ್, ಆಫ್ರಿಕನ್ ಅಥವಾ ಪ್ಯಾನ್-ಏಷ್ಯನ್ ಭಾಷೆಗಳನ್ನು ಮಾತನಾಡುವವರ ನಡುವೆ ಯಾವುದೇ ಅಡಚಣೆ ಇಲ್ಲದೆ ಸಂವಹನ ಸಾಧಿಸಲು, ಬಹು ಭಾಷಾ ಜಗತ್ತಿನ ಡಿಜಿಟಲ್ ಒಳಗೊಳ್ಳುವಿಕೆಯನ್ನು ಸಾಧಿಸಲು ಈ ಫೀಚರ್ ನೆರವಾಗಲಿದೆ. ವೈವಿಧ್ಯಮಯ ಸಂಸ್ಕೃತಿ ಮತ್ತು ಭೌಗೋಳಿಕತೆಯ ಜನರು ಒಟ್ಟಿಗೆ ಸೇರುವ, ಅವರ ಮನದಾಳವನ್ನು ಹಂಚಿಕೊಳ್ಳುವ ಮತ್ತು ಅವರ ಪರಂಪರೆಯನ್ನು ಸಂಭ್ರಮಿಸುವ ಸಾಮಾಜಿಕ ಮಾಧ್ಯಮವನ್ನು ಒಂದು ವಾಹಕವನಾಗಿ ಈ ಫೀಚರ್ ಬದಲಿಸಬಹುದಾಗಿದೆ.

ಕೂ (Koo) ಆಪ್ ಡೌನ್‌ಲೋಡ್ ಮಾಡಲು ಈ ಹೀಗೆ ಮಾಡಿರಿ
ಆಂಡ್ರಾಯ್ಡ್ ಮತ್ತು ಐಓಎಸ್ ಈ ಇಬ್ಬರೂ ಬಳಕೆದಾರರು ಕೂ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಬಳಕೆದಾರರು ಕೂ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಬೇಕು. ಹಾಗೆಯೇ ಐಓಎಸ್ ಬಳಕೆದಾರರು ಆಪಲ್ ಆಪ್ ಸ್ಟೋರ್‌ನಿಂದ ಕೂ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086