ಟ್ವಿಟರ್ ನಲ್ಲಿ ಪಟಾಯಿಸಿ ದಾಖಲೆ ಮಾಡಿದ ಲೇಡಿ ಗಾಗಾ

Posted By: Varun
ಟ್ವಿಟರ್ ನಲ್ಲಿ ಪಟಾಯಿಸಿ ದಾಖಲೆ ಮಾಡಿದ ಲೇಡಿ ಗಾಗಾ

ಸಾಮಾಜಿಕ ಜಾಲತಾಣಗಳಲ್ಲೇ ಅತ್ಯಂತ ಖ್ಯಾತ ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ಆದ ಟ್ವಿಟರ್ ನಲ್ಲಿ ದಿನವೊಂದಕ್ಕೆ ಲಕ್ಷಾಂತರ ಟ್ವೀಟ್ ಆಗುತ್ತೆ, ಸಾವಿರಾರು ವಿಷಯಗಳ ಬಗ್ಗೆ ಚರ್ಚೆಯಾಗುತ್ತೆ ಹಾಗು ಇಂಟರ್ನೆಟ್ ನಲ್ಲಿ ಮೊದಲು ಸುದ್ದಿಯಾಗುತ್ತೆ.

ಆದ್ದರಿಂದಲೇ ಟ್ವಿಟರ್ ನಲ್ಲಿ ಎಲ್ಲ ಫಿಲಂ ತಾರೆಗಳು, ಕ್ರೀಡಾಪಟುಗಳು, ದೇಶಗಳ ಮುಖಂಡರು, ಟ್ವಿಟರ್ ನಲ್ಲಿ ತಮ್ಮ ಖಾತೆ ತೆರೆದಿರುತ್ತಾರೆ ಹಾಗು ಸಾಕಷ್ಟು ಅಭಿಮಾನಿಗಳು ಆ ಖಾತೆಯ ಹಿಂಬಾಲಕರಾಗುತ್ತಾರೆ.

ಈಗ ಟ್ವಿಟರ್ ನಲ್ಲಿ ಸುದ್ದಿ ಮಾಡುತ್ತಿರುವುದು, ವಿಶ್ವ ವಿಖ್ಯಾತ ಪಾಪ್ ತಾರೆ, ಲೇಡಿ ಗಾಗಾ.ಈಕೆ ಈಗ 25 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಮೊದಲ ವ್ಯಕ್ತಿಯೆಂಬ ಕೀರ್ತಿಗೆ ಪಾತ್ರವಾಗಿದ್ದಾಳೆ.

ಈ ಖುಷಿಗೆ ಆಕೆ ಈ ರೀತಿ ಟ್ವೀಟ್ ಮಾಡಿದ್ದಾಳೆ ""25 million tweety monsters wow!I'm officially feeling like the luckiest girl in the world today"

ಆಕೆಯ ಪ್ರಮುಖ ಹಿಂಬಾಲಕರಲ್ಲಿ ಪ್ರಮುಖವಾದ ತಾರೆಗಳಲ್ಲಿ ಜಸ್ಟಿನ್ ಬೀಬರ್, ಕೇಟ್ ಪೆರಿ, ರಿಹಾನಾ, ಬ್ರಿಟ್ನಿ ಸ್ಪಿಯರ್ಸ್, ಶಕಿರಾ ಹಾಗು ಟೇಲರ್ ಸ್ವಿಫ್ಟ್ ಪ್ರಮುಖವಾದ ಪಾಪ್ ತಾರೆಗಳು ಇದ್ದಾರೆ.

ಟ್ವಿಟರ್ ನಲ್ಲಿ ಲೇಡಿ ಗಾಗಾ ನಂತರ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವುದು, ಅಮೆರಿಕಾದ ಅಧ್ಯಕ್ಷ, ಬರಾಕ್ ಒಬಾಮಾ, ಹಾಗು ಟಿವಿ ರಿಯಾಲಿಟಿ ತಾರೆ ಕಿಂ ಕರ್ದಾಶಿಯಾನ್.

ಲೇಡಿ ಗಾಗಾ 25 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಮೊದಲಿಗರಷ್ಟೇ ಅಲ್ಲದೆ, ಟ್ವಿಟರ್ ನಲ್ಲಿ ಮೊದಲ ಬಾರಿಗೆ 10,15 ಹಾಗು 20 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಮೊದಲ ವ್ಯಕ್ತಿ ಎಂಬುದು ಮತ್ತೊಂದು ವಿಶೇಷ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot