ನಿಮ್ಮ ಫೋನಿನಲ್ಲಿ 20ಕ್ಕಿಂತ ಹೆಚ್ಚು ಆಪ್‌ಗಳಿದ್ದರೆ ಈ ಶಾಕಿಂಗ್ ವರದಿ ನೋಡಿ!

|

ನಿಮ್ಮ ಫೋನಿನಲ್ಲಿ ನೀವು ಬೇಕಾಬಿಟ್ಟಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದರೆ ಇಂದಿನ ಸುದ್ದಿ ನಿಮಗೆ ಆತಂಕವನ್ನು ಮೂಡಿಸುವುದು ಸುಳ್ಳಲ್ಲ. ಏಕೆಂದರೆ, ತಂತ್ರಜ್ಞಾನ ವಿಶ್ಲೇಷಕ ಸಂಸ್ಥೆಯಾಗಿರುವ 'ಟೆಕ್ ಎಆರ್‌ಸಿ' ಸಿದ್ದಪಡಿಸಿರುವ ವರದಿಯೊಂದರಲ್ಲಿ, ಬೇಕಾಬಿಟ್ಟಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ಆಗಬಹುದಾದ ಸಮಸ್ಯೆಗಳ ಪರಿಚಯ ಮಾಡಿಕೊಟ್ಟಿದೆ.

ಹೌದು, 'ಟೆಕ್ ಎಆರ್‌ಸಿ' ನಡೆಸಿರುವ ಅಧ್ಯಯನದ ಪ್ರಕಾರ, ಸ್ಮಾರ್ಟ್‌ಫೋನ್‌ ಬಳಕೆದಾರರು ಮನಸೋ ಇಚ್ಛೆ ಆಪ್‌ಗಳನ್ನು ಡೌನ್‌ಲೋಡ್ ಮಾಡುತ್ತಿದ್ದಾರೆ. ಇದರಿಂದಾಗಿ ಅವರು ಸಮಸ್ಯೆಗೆ ಸಿಲುಕುತ್ತಿದ್ದಾರೆ ಎಂದು ತಿಳಿಸಿದೆ. ಹೆಚ್ಚು ಹೆಚ್ಚು ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವವರು ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಈ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ನಿಮ್ಮ ಫೋನಿನಲ್ಲಿ 20ಕ್ಕಿಂತ ಹೆಚ್ಚು ಆಪ್‌ಗಳಿದ್ದರೆ ಈ ಶಾಕಿಂಗ್ ವರದಿ ನೋಡಿ!

ಹೆಚ್ಚು ಆಪ್‌ಗಳಿಂದಾಗಿ ಫೋನ್‌ ಬಳಕೆದಾರರು ಸಾಕಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆ ಇಳಿಕೆಯಾಗುವ, ಸ್ಮಾರ್ಟ್‌ಪೋನ್ ಸುರಕ್ಷತೆಗೆ ತೊಡಕು ಉಂಟಾಗುವ ವಿಷಯಗಳನ್ನು ಈ ವರದಿಯಲ್ಲಿ ಪಟ್ಟಿ ಮಾಡಲಾಗಿದೆ. ಹಾಗಾದರೆ, ಹೆಚ್ಚು ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ಆಗುವ ಸಮಸ್ಯೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಅಧ್ಯಯನ ವರದಿ?

ಏನಿದು ಅಧ್ಯಯನ ವರದಿ?

ಜಾಗತಿಕವಾಗಿ ಸ್ಮಾರ್ಟ್‌ಪೋನ್ ಬಳಕೆದಾರರು ಮೊಬೈಲ್ ಆಪ್‌ಗಳನ್ನು ಹೇಗೆ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಸ್ಮಾರ್ಟ್‌ಪೋನ್ ಬಳಕೆದಾರರ ಸರಾಸರಿ ಆಪ್‌ಗಳ ಸಂಖ್ಯೆ ಎಷ್ಟು?, ಅತಿ ಕಡಿಮೆ ಆಪ್‌ಗಳನ್ನು ಬಳಸುವ ದೇಶ ಯಾವುದು?, ಸರಾಸರಿ ಯಾವ ಆಪ್‌ಗಳನ್ನು ಅತಿ ಹೆಚ್ಚು ಬಳಕೆ ಮಾಡುತ್ತಿದ್ದಾರೆ? ಎಂಬ ವಿಷಯಗಳನ್ನು ಅಧ್ಯಯನ ಮಾಡಿರುವ ವರದಿ ಇದಾಗಿದೆ.

51 ಸರಾಸರಿ ಆಪ್ ಬಳಕೆ

51 ಸರಾಸರಿ ಆಪ್ ಬಳಕೆ

ವಿಶ್ವ ಸ್ಮಾರ್ಟ್‌ಪೋನ್ ಬಳಕೆದಾರರ ಸರಾಸರಿ ಸ್ಮಾರ್ಟ್‌ಫೋನಿನಲ್ಲಿ 51 ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲಾಗುತ್ತಿದೆ ಎಂಬ ವಿಷಯವನ್ನು ಈ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಕೆಲವು ಬಾರಿ ಈ ಸಂಖ್ಯೆ 207ನ್ನೂ ದಾಟಿರುವ ನಿದರ್ಶನಗಳಿವೆ ಎನ್ನಲಾಗಿದೆ. ಇದು ನಿಜಕ್ಕೂ ಅಪಾಯಕಾರಿಯಾಗಿದ್ದು, ಫೋನ್ ಬಳಕೆದಾರರಿಗೆ ಸಮಸ್ಯೆಯಾಗಿದೆ ಎಂದು ವರದಿ ತಿಳಿಸಿದೆ.

ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆ ಇಳಿಕೆ!

ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆ ಇಳಿಕೆ!

ಸ್ಮಾರ್ಟ್‌ಪೋನ್ ಬಳಕೆದಾರರು ಯೋಚನೆ ಮಾಡದೇ ಮನಸೋ ಇಚ್ಛೆ ಮೊಬೈಲ್ ಆಪ್‌ಗಳನ್ನು ಡೌನ್ ಲೋಡ್ ಮಾಡಿಕೊಂಡರೆ, ಅವರ ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆ ಇಳಿಕೆಯಾಗುತ್ತದೆ. ಸ್ಮಾರ್ಟ್‌ಫೋನ್ ಮೇಲೆ ಹೆಚ್ಚು ಕಾರ್ಯಒತ್ತಡ ಬೀಳುವುದರಿಂದ ಸ್ಮಾರ್ಟ್‌ಫೋನ್ ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಕಾರ್ಯಕ್ಷಮತೆ ಇಳಿಕೆಯಾಗುತ್ತಾ ಹೋಗಲಿದೆ.

ಸ್ಮಾರ್ಟ್‌ಫೋನ್ ಸುರಕ್ಷತಾ ವೈಪಲ್ಯ!

ಸ್ಮಾರ್ಟ್‌ಫೋನ್ ಸುರಕ್ಷತಾ ವೈಪಲ್ಯ!

ಮನಸೋ ಇಚ್ಛೆ ಮೊಬೈಲ್ ಆಪ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದರಿಂದ ಸ್ಮಾರ್ಟ್‌ಫೋನ್ ಬಳಕೆದಾರರು ಸುರಕ್ಷತಾ ವೈಪಲ್ಯವನ್ನು ಅನುಭವಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆಪ್‌ಗಳ ಹಿನ್ನಲೆಯನ್ನು ತಿಳಿಯದೇ ಇರುವ ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರ ಖಾಸಾಗಿ ಮಾಹಿತಿಗಳು ಕ್ರಿಮಿನಲ್‌ಗಳ ಪಾಲಾಗುತ್ತಿದೆ ಎಂದು ಹೇಳಲಾಗಿದೆ.

ಭಾರತೀಯರೇ ಪರವಾಗಿಲ್ಲ.!

ಭಾರತೀಯರೇ ಪರವಾಗಿಲ್ಲ.!

ಭಾರತೀಯರ ಸ್ಮಾರ್ಟ್‌ಫೋನ್ ಗಳಲ್ಲಿ 24 ಆಪ್ ಗಳಿದ್ದು ಅಗತ್ಯವಿದ್ದಷ್ಟೇ ಆಪ್‌ಗಳನ್ನು ಡೌನ್ ಲೋಡ್ ಮಾಡಿ ಬಳಕೆ ಮಾಡುತ್ತಿದ್ದು, ಇದರಲ್ಲಿ ಬೇರೆ ದೇಶದವರಿಗಿಂತ ಭಾರತೀಯರೇ ಉತ್ತಮ ಎನ್ನುತ್ತಿದೆ ವರದಿ. ಭಾರತದ ಸ್ಮಾರ್ಟ್‌ಫೋನ್ ಬಳಕೆದಾರರ ಪೈಕಿ ಶೇ.38 ರಷ್ಟು ಮಂದಿ 6-10 ಆಪ್ ಗಳನ್ನು ದಿನ ನಿತ್ಯ ಬಳಕೆ ಮಾಡುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶದಲ್ಲಿ ಆಪ್ ಬಳಕೆ ಹೀಗಿದೆ!

ದೇಶದಲ್ಲಿ ಆಪ್ ಬಳಕೆ ಹೀಗಿದೆ!

ಭಾರತಿಯರಲ್ಲಿ ಅತಿ ಹೆಚ್ಚು ಬಳಕೆ ಮಾಡುವುದು ಸೋಶಿಯಲ್ ಮೀಡಿಯಾ ಆಪ್‌ಗಳನ್ನೇ ಎಂದು ವರದಿ ಹೇಳಿದೆ. ಶೇ.47 ರಷ್ಟು ಮಂದಿ ಆರ್ಥಿಕ ವಿಚಾರಕ್ಕೆ ಸಂಬಂಧಪಟ್ಟ ಆಪ್‌ಗಳನ್ನು ( ಬ್ಯಾಂಕಿಂಗ್, ವಾಲೆಟ್) ಬಳಕೆ ಮಾಡುತ್ತಿದ್ದಾರೆ. ಜಾಗತಿಕವಾಗಿ ಗೇಮಿಂಗ್ ಹಾಗೂ ಮನರಂಜನಾ ಆಪ್ ಗಳು ಹೆಚ್ಚು ಡೌನ್ ಲೋಡ್ ಆಗುತ್ತಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

Best Mobiles in India

English summary
The research found that most of the Indians use 24 apps on their smartphones, which is a sign of the majority of the users judiciously using applications. to know more visit to kannada. gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X