ಚೀನಾ ಫೋನ್ ಮಾದರಿಯಲ್ಲಿಯೇ ಬ್ಲಾಸ್ಟ್ ಆಯ್ತು ಐಪೋನ್ 8...! ಎಚ್ಚರ..!

ಮೊನ್ನೆ ತಾನೇ ಲಾಂಚ್ ಆಗಿದ್ದ ಐಫೋನ್ 8 ಜಪಾನ್ ನಲ್ಲಿ ಚಾರ್ಜಿಂಗ್ ಹಾಕಿದ್ದ ವೇಳೆಯಲ್ಲಿ ಬ್ಲಾಸ್ಟ್ ಆಗಿದ್ದು, ಪ್ಯಾನಲ್ ನಿಂದ ಸ್ಕ್ರಿನ್ ಕಿತ್ತು ಬಂದಿದೆ ಎನ್ನಲಾಗಿದೆ.

|

ಸದ್ಯ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ಹೆಸರಾಗಿದ್ದ ಆಪಲ್ ಐಫೋನ್ ಸಹ ಬ್ಲಾಸ್ಟ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕವನ್ನು ಸೃಷ್ಠಿಸಿದೆ. ಅದರಲ್ಲೂ ಮೊನ್ನೆ ತಾನೇ ಲಾಂಚ್ ಆಗಿದ್ದ ಐಫೋನ್ 8 ಜಪಾನ್ ನಲ್ಲಿ ಚಾರ್ಜಿಂಗ್ ಹಾಕಿದ್ದ ವೇಳೆಯಲ್ಲಿ ಬ್ಲಾಸ್ಟ್ ಆಗಿದ್ದು, ಪ್ಯಾನಲ್ ನಿಂದ ಸ್ಕ್ರಿನ್ ಕಿತ್ತು ಬಂದಿದೆ ಎನ್ನಲಾಗಿದೆ.

ಚೀನಾ ಫೋನ್ ಮಾದರಿಯಲ್ಲಿಯೇ ಬ್ಲಾಸ್ಟ್ ಆಯ್ತು ಐಪೋನ್ 8...! ಎಚ್ಚರ..!

ಓದಿರಿ: ಸೊಳ್ಳೆ ಓಡಿಸುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ LG

ಈಗಾಗಲೇ ಐಫೋನ್ 8 ಬ್ಲಾಸ್ಟ್ ಆಗಿರುವ ಸುದ್ದಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಡುತ್ತಿದ್ದು, ಟ್ವೀಟರ್ ನಲ್ಲಿ ಐಫೋನ್ ಖರೀದಿಸಿದ್ದ ಗ್ರಾಹಕ ಫೋನ್ ಬ್ಲಾಸ್ಟ್ ಆಗಿರುವ ಫೋಟೋವನ್ನು ಸಹ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಇದು ಜಾಗತಿಕವಾಗಿ ಆಪಲ್ ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಓರ್ಜಿನಲ್ ಚಾರ್ಜರ್ ಬಳಕೆ:

ಓರ್ಜಿನಲ್ ಚಾರ್ಜರ್ ಬಳಕೆ:

ಐಫೋನ್ 8 ಕೆಲವು ದಿನಗಳ ಬಳಕೆಯ ನಂತರ ಬ್ಲಾಸ್ಟ್ ಆಗಿದ್ದು, ಓರ್ಜಿನಲ್ ಚಾರ್ಜರ್ ಬಳಕೆ ಮಾಡಿಕೊಂಡೆ ಮೊಬೈಲ್ ಚಾರ್ಜ್ ಗೆ ಹಾಕಿರುವುದಾಗಿ ಬಳಕೆದಾರರು ತಿಳಿಸಿದ್ದಾರೆ ಎನ್ನಲಾಗಿದೆ. ಓರ್ಜಿನಲ್ ಚಾರ್ಜರ್ ಬಳಕೆ ಮಾಡಿದರೂ ಸಹ ಐಫೋನ್ ಬ್ಲಾಸ್ಟ್ ಆಗಿರುವುದು ಸುದ್ದಿಯಾಗಿದೆ.

ಮತ್ತೊಂದು ಓಪನ್ ಫೋನ್:

ಮತ್ತೊಂದು ಓಪನ್ ಫೋನ್:

ಇದಲ್ಲದೇ ಮತ್ತೊಬ್ಬ ಐಫೋನ್ ಗ್ರಾಹಕರು ತಮಗೆ ಸ್ಕ್ರಿನ್ ಓಪನ್ ಆಗಿರುವ ಐಫೋನ್ 8+ ಡೆಲಿವರಿ ಮಾಡಿರುವುದಾಗಿ ಟ್ವೀಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ. ತಮ್ಮ ಮನೆಗೆ ಬಂದ ಪಾರ್ಸಲ್ ನಲ್ಲಿದ್ದ ಫೋನಿನ ಸ್ಕ್ರಿನ್ ಮತ್ತು ಬಾಡಿ ಬೇರೆ ಬೇರೆಯಾಗಿತ್ತು ಎನ್ನಲಾಗಿದೆ. ಅವರು ಸಹ ಟ್ವೀಟರ್ ನಲ್ಲಿ ಫೋಟೋ ಹಾಕಿದ್ದಾರೆ.

ಈ ಹಿಂದೆ ಸ್ಯಾಮ್‌ಸಂಗ್ ಫೋನ್ ಸ್ಫೋಟ:

ಈ ಹಿಂದೆ ಸ್ಯಾಮ್‌ಸಂಗ್ ಫೋನ್ ಸ್ಫೋಟ:

ಈ ಹಿಂದೆ ಸ್ಯಾಮ್‌ ಸಂಗ್‌ ಟಾಪ್ ಎಂಡ್ ಫೋನ್ ವೊಂದು ಇದೇ ಮಾದರಿಯಲ್ಲಿ ಸರಣಿ ಬ್ಲಾಸ್ಟ್ ಆಗುವ ಮೂಲಕ ಚರ್ಚೆಗೆ ಗ್ರಾಸವಾಗಿತ್ತು. ಇದೇ ಮಾದರಿಯಲ್ಲಿ ರೆಡ್‌ಮಿ ಫೋನ್‌ಗಳು ಸಹ ಕೇಲವೊಂದು ಬ್ಲಾಸ್ಟ್ ಆಗಿದ್ದವು ಎನ್ನಲಾಗಿದೆ.

Best Mobiles in India

English summary
The phone was in use for just five days and charged using the original cable and power adapter. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X