Just In
Don't Miss
- Automobiles
ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್
- Movies
ಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆ
- News
ಹಿರೇಕೆರೂರು ಉಪ ಚುನಾವಣೆ: ಗೆಲುವಿನ ಕೇಕೆಯತ್ತ ಕೌರವ..!
- Education
ಬೆಂಗಳೂರು ನಗರ ಜಿಲ್ಲೆ 179 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
- Finance
ಜಿಎಸ್ಟಿ ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ: 250ಕ್ಕೂ ಹೆಚ್ಚು ವಸ್ತುಗಳ ದರ ಏರಿಕೆ?
- Lifestyle
ಪಾರ್ಟಿ ಲುಕ್ಗೆ ಕಣ್ಣಿನ ಅಂದ ಹೆಚ್ಚಿಸುವ ಬ್ಯೂಟಿ ಟಿಪ್ಸ್
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಸ್ಮಾರ್ಟ್‌ಫೋನಿನಲ್ಲಿ ಬ್ಯಾಟರಿ ಖಾಲಿಯಾಗಲು ವಾಟ್ಸಪೇ ಕಾರಣವಂತೆ!
ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಸದ್ಯ ಅತೀ ಅಗತ್ಯ ಮೆಸೆಜಿಂಗ್ ಅಪ್ಲಿಕೇಶನ್ ಎನಿಸಿರುವುದಂತು ಸುಳ್ಳಲ್ಲ. ವಾಟ್ಸಪ್ ಸಹ ತನ್ನ ಬಳಕೆದಾರರ ಖಾಸಗಿ ಮಾಹಿತಿಗಳಿಗೆ ಸೂಕ್ತ ಪ್ರೈವೆಸಿ ಫೀಚರ್ಸ್‌ಗಳನ್ನು ಈಗಾಗಲೇ ಪರಿಚಯಿಸಿದೆ. ಇತ್ತೀಚಿಗೆ ತನ್ನ ಹೊಸ ಅಪ್‌ಡೇಟ್ ಆವೃತ್ತಿಯಲ್ಲಿ ಬಹುನಿರೀಕ್ಷಿತ ಫಿಂಗರ್‌ಪ್ರಿಂಟ್ ಲಾಕ್ ಫೀಚರ್ ಸಹ ನೀಡಿದೆ. ಆದರೆ ವಾಟ್ಸಪ್ ಹೆಚ್ಚಾಗಿ ಸ್ಮಾರ್ಟ್‌ಫೋನ್ ಬ್ಯಾಟರಿ ಕಬಳಿಸುತ್ತಿದೆಯಂತೆ!

ಹೌದು, ಫೇಸ್‌ಬುಕ್ ಒಡೆತನದ ವಾಟ್ಸಪ್‌ನ ಇತ್ತೀಚಿನ ಹೊಸ ಅಪ್‌ಡೇಟ್ ಆವೃತ್ತಿಯು (2.19.112) ಸ್ಮಾರ್ಟ್‌ಫೋನ್‌ಗಳಲ್ಲಿ ಅಧಿಕ ಬ್ಯಾಟರಿ ಕಬಳಿಸುತ್ತಿದೆ ಎಂದು ಕೆಲವು ಸ್ಮಾರ್ಟ್‌ಫೋನ್ ಬಳಕೆದಾರರು ಟ್ವಿಟ್ ಮಾಡಿದ್ದಾರೆ. ಆಂಡ್ರಾಯ್ಡ್ ಓಎಸ್ ಅಷ್ಟೇ ಅಲ್ಲದೇ ಕೆಲವು ಐಫೋನ್ ಬಳಕೆದಾರರು ಸಹ ನೂತನ ವಾಟ್ಸಪ್ ಆವೃತ್ತಿಯು ಫೋನ್ ಬ್ಯಾಟರಿ ಹೆಚ್ಚಾಗಿ ಹಿರಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ವಾಟ್ಸಪ್ 2.19.112 ಅಪ್‌ಡೇಟ್ ಆವೃತ್ತಿಯ ಬಳಕೆಯಿಂದ ಸ್ಮಾರ್ಟ್‌ಫೋನ್ ಬ್ಯಾಟರಿ ಬ್ಯಾಕ್‌ಅಪ್ ಕಡಿಮೆಯಾಗುತ್ತಿದೆ. ಸ್ಮಾರ್ಟ್‌ಫೋನಿನ ಬ್ಯಾಟರಿ ಬಳಕೆಯ ರಿಪೋರ್ಟ್ ನೋಡಿದಾಗ ವಾಟ್ಸಪ್ ಆಪ್‌ಪೇ ಬ್ಯಾಕ್‌ಗ್ರೌಂಡ್‌ನಲ್ಲಿ ಅಧಿಕವಾಗಿ ಬ್ಯಾಟರಿ ಕಬಳಿಸಿರುವುದು ತಿಳಿದಿದೆ ಎಂದಿದ್ದಾರೆ. ಇದೇ ರೀತಿ ನಿಮಗೂ ಆಗಿದೆಯಾ? ಎಂದು WAbetainfo ಟ್ವಿಟ್‌ನಲ್ಲಿ ಕೇಳಿದೆ. EU ROM ಹೊಂದಿರುವ ಶಿಯೋಮಿ ರೆಡ್ಮಿ ನೋಟ್ 7 ಪ್ರೊ ಸ್ಮಾರ್ಟ್‌ಫೋನ್ ಬಳಕೆದಾರರು, ಗ್ಯಾಲ್ಯಾಕ್ಸಿ ಎಸ್9, ಹಾನರ್ 6X, ಮತ್ತು ಕೆಲವು ಒನ್‌ಪ್ಲಸ್ ಮಾದರಿಯ ಫೋನ್‌ಗಳಿಲ್ಲಿಯೂ ಸಮಸ್ಯೆ ಕಂಡುಬಂದಿದೆ ಎಂದು Reddit forum ತಿಳಿಸಿದೆ. ಹಾಗಾದರೇ ವಾಟ್ಸಪ್ ಇತ್ತೀಚಿನ ಆವೃತ್ತಿ ಸೇರಿರುವ ಪ್ರಮುಖ ಫೀಚರ್ಸ್‌ಗಳಯ ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಫಿಂಗರ್‌ಪ್ರಿಂಟ್ ಲಾಕ್
ಸ್ಕ್ರೀನ್‌ಲಾಕ್ ಫೀಚರ್ ಬಳಕೆದಾರರ ಖಾತೆಗೆ ಪ್ರೈವೆಸಿ ಒದಗಿಸಲಿದ್ದು, ಬಳಕೆದಾರರು ಸ್ಕ್ರೀನ್‌ಲಾಕ್ ಫೀಚರ್ ಅನ್ನು ಸಕ್ರಿಯ ಮಾಡಿಕೊಳ್ಳಬೇಕು. ಅದಕ್ಕಾಗಿ ಬಳಕೆದಾರರು ಈ ಕ್ರಮಗಳನ್ನು ಅನುಸರಿಸಿ. ವಾಟ್ಸಪ್ > ಸೆಟ್ಟಿಂಗ್ > ಅಕೌಂಟ್ > ಪ್ರೈವೆಸಿ > ಸ್ಕ್ರಾಲ್ ಡೌನ್ ಮಾಡಿ > ಫಿಂಗರ್‌ಪ್ರಿಂಟ್ ಲಾಕ್ ಆಯ್ಕೆ ಕಾಣಿಸುತ್ತದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳಬಹುದು. ಇದರಲ್ಲಿ ಸ್ಕ್ರೀನ್‌ಲಾಕ್ ಆಗಲು ಮೂರು ಆಯ್ಕೆಗಳು ಕಾಣಿಸುತ್ತವೆ.(ತಕ್ಷಣ, ಒಂದು ನಿಮಿಷ, ನಿಮಿಷ).

ಸ್ಟೇಟಸ್ ಶೇರ್
ವಾಟ್ಸಪ್ ಪರಿಚಯಿಸಿದ್ದ 24 ಗಂಟೆಯ ಅವಧಿಯ ಸ್ಟೇಟಸ್ ಇಡುವ ಆಯ್ಕೆಯು ಸಖತ ಜನಪ್ರಿಯವಾಗಿದ್ದು, ಹಾಗೆಯೇ ಸ್ಟೇಟಸ್ ಅನ್ನು ಶೇರ್ ಮಾಡುವ ಹೊಸ ಆಯ್ಕೆಯನ್ನು ಸೇರಿಕೊಂಡಿದೆ. ಹೀಗಾಗಿ ಈಗ ಬಳಕೆದಾರರು ವಾಟ್ಸಪ್‌ಗೆ ಇಡುವ ಸ್ಟೇಟಸ್ ಅನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಫೇಸ್‌ಬುಕ್ ಸಂಸ್ಥೆಯ ಇತರೆ ಯಾವುದೇ ಆಪ್ಸ್‌ಗಳಿಗೆ ನೇರವಾಗಿ ಶೇರ್ ಮಾಡುವ ಅವಕಾಶವನ್ನು ಈ ಫೀಚರ್ ಮಾಡಿಕೊಡಲಿದೆ.

ಗ್ರೂಪ್ ಸೇರುವಿಕೆ ಕಂಟ್ರೋಲ್
ಬಳಕೆದಾರರು ವಾಟ್ಸಪ್ ಗ್ರೂಪ್ ಸೇರುವಿಕೆ ನಿಯಂತ್ರಿಸಬಹುದಾದ ಆಯ್ಕೆಗಳಿವೆ. ಈ ಫೀಚರ್‌ನಲ್ಲಿ Everyone, My Contacts, My Contacts Except..ಮತ್ತು Nobody ಆಯ್ಕೆಗಳಿದ್ದು, ಬಳಕೆದಾರರು ಅಗತ್ಯ ಎನಿಸುವುದನ್ನು ಸೆಟ್ ಮಾಡಬಹುದಾಗಿದೆ. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿರಿ. ವಾಟ್ಸಪ್ > ಸೆಟ್ಟಿಂಗ್ > ಅಕೌಂಟ್ > ಪ್ರೈವೆಸಿ > ಗ್ರೂಪ್ಸ್.

ಹೈಡ್ ಮ್ಯೂಟೆಡ್ ಸ್ಟೇಟಸ್
ವಾಟ್ಸಪ್‌ನಲ್ಲಿ ಹೊಸ 'ಹೈಡ್ ಮ್ಯೂಟೆಡ್ ಸ್ಟೇಟಸ್' ಆಯ್ಕೆಯು ಆಂಡ್ರಾಯ್ಡ್ ಬೇಟಾ ವರ್ಷನ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೀಚರ್ ಆಯ್ದ ಕಾಂಟ್ಯಾಕ್ಟ್ ನಂಬರ್‌ಗೆ ವಾಟ್ಸಪ್ ಸ್ಟೇಟಸ್ ಕಾಣದಂತೆ ಮಾಡಲು ನೆರವಾಗಲಿದೆ. ಹೊಸದಾಗಿ ಹೈಡ್ ಬಟನ ಸೇರಲಿದ್ದು, ಅದನ್ನು ಒತ್ತಿದಾಗ ಮ್ಯೂಟ್ ಮಾಡಿದ ಸ್ಟೇಟಸ್‌ಗಳೆಲ್ಲವು ಅಳಸಿ ಹೋಗುತ್ತವೆ. ಹಾಗೆಯೇ ಶೋ ಬಟನ್ ಆಯ್ಕೆಯು ಮತ್ತೆ ಎಲ್ಲವು ಕಾಣಿಸಿಕೊಳ್ಳಲಿವೆ.

ಫ್ರೀಕ್ವೆಟ್ಲಿ ಫಾರ್ವಾರ್ಡ ಮೆಸೆಜ್
ವದಂತಿ ಸುದ್ದಿಗಳನ್ನು ತಡೆಯಲು ವಾಟ್ಸಪ್ ಈ ಫೀಚರ್ ಅನ್ನು ಪರಿಚಯಿಸಿದ್ದು, ಹೆಚ್ಚು ಬಾರಿ ಫಾರ್ವರ್ಡ್ ಆಗುವ ಮೆಸೆಜ್ ಫ್ರೀಕ್ವೆಟ್ಲಿ ಫಾರ್ವಾರ್ಡ ಮೆಸೆಜ್ ಲೆಬಲ್ ಬೀಳುತ್ತದೆ. ಈ ರೀತಿ ಲೆಬಲ್ ಇದ್ದರೇ ಅದು ಅಧಿಕ ಬಾರಿ ಫಾರ್ವರ್ಡ್ ಆಗಿರುವ ಮೆಸೆಜ್ ಎಂದು ಬಳಕೆದಾರರು ತಿಳಿಯಬೇಕು. ಒಂದು ಮೆಸೆಜ್ ಅನ್ನು ಒಂದೇ ಬಾರಿ ಕೇವಲ ಐದು ಚಾಟ್ಸ್‌ಗಳಿಗೆ ಮಾತ್ರ ಫಾರ್ವರ್ಡ್ ಮಾಡಬಹುದಾಗಿದೆ.

ಗ್ರೂಪ್ ಕಾಲಿಂಗ್
ವಾಟ್ಸಪ್ ವಿಡಿಯೊ ಮತ್ತು ವಾಯಿಸ್ ಕಾಲಿಂಗ್ ಸೌಲಭ್ಯವನ್ನು ಬಳಕೆದಾರರಿಗೆ ಪರಿಚಯಿಸಿದೆ. ಹಾಗೆಯೇ ವಾಟ್ಸಪ್ ಗ್ರೂಪ್ ಚಾಟ್‌ನಲ್ಲಿ ಗ್ರೂಪ್ ಕಾಲಿಂಗ್ ಫೀಚರ್ ಅನ್ನು ನೀಡಿದ್ದು, ಗ್ರೂಪ್ ಸದಸ್ಯರೊಂದಿಗೆ ಕರೆ ಕನೆಕ್ಟ್ ಮಾಡಬಹುದಾಗಿದೆ. ವಾಟ್ಸಪ್ ಗ್ರೂಪ್‌ನಲ್ಲಿ ಕರೆಯ ಬಟನ್ ಒತ್ತಿ, ನಂತರ ಸದಸ್ಯರನ್ನು ಆಡ್ ಮಾಡುವ ಮೂಲಕ ಗ್ರೂಪ್ ಕಾಲಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ.
Some users (included me) are experiencing battery drain using WhatsApp for iOS 2.19.112. In particular, Battery Usage reports a high usage of the app in background.
— WABetaInfo (@WABetaInfo) November 8, 2019
Do you experience the same issue?
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090