ಈ ತಿಂಗಳಲ್ಲಿ ಲಾಂಚ್ ಆದ ಮತ್ತು ಬಿಡುಗಡೆಗೆ ಸಿದ್ಧವಿರುವ ಫೋನ್‌ಗಳು!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಅತ್ಯಗತ್ಯವಾದ ಸಾಧನವಾಗಿ ಪರಿಣಮಿಸಿದೆ. ಬಜೆಟ್‌ ಬೆಲೆಯಿಂದ ಹಿಡಿದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸ್ಮಾರ್ಟ್‌ಫೋನ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅದಾಗಿಯೂ ಮೊಬೈಲ್‌ ಕಂಪೆನಿಗಳು ಮತ್ತೇ ಒಂದಲ್ಲಾ ಒಂದು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದು ಸಾಮಾನ್ಯವಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳು ಎಂದಿನಂತೆ ಸೆಪ್ಟೆಂಬರ್‌ ತಿಂಗಳಲ್ಲಿಯೂ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿವೆ. ಅಲ್ಲದೆ ಇನ್ನೂ ಕೆಲವು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ಸಿದ್ಧತೆ ನಡೆಸಿವೆ. ಹಾಗಾದ್ರೆ ಸೆಪ್ಟೆಂಬರ್‌ ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಸ್ಮಾರ್ಟ್‌ಫೋನ್‌ಗಳು ಯಾವುವು? ಬಿಡುಗಡೆಗೆ ಸಿದ್ದವಾಗಿರುವ ಫೋನ್‌ಗಳು ಯಾವುವು? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿ ಕೊಡ್ತೀವಿ ಮುಂದೆ ಓದಿರಿ.

ಪೊಕೊ M5 4G

ಪೊಕೊ M5 4G

ಪೊಕೊ M5 ಸ್ಮಾರ್ಟ್‌ಫೋನ್‌ 6.58 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 90Hz ರಿಪ್ರೆಸ್‌ ದರ ಹೊಂದಿದ್ದು, ಮೀಡಿಯಾಟೆಕ್‌ ಹಿಲಿಯೋ G99 ಚಿಪ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಸೆಪ್ಟೆಂಬರ್ 6 ರಂದು ಲಾಂಚ್‌ ಆಗಿದೆ.

ರೆಡ್ಮಿ 11 ಪ್ರೈಮ್‌ 5G/ 4G

ರೆಡ್ಮಿ 11 ಪ್ರೈಮ್‌ 5G/ 4G

ರೆಡ್ಮಿ 11 ಪ್ರೈಮ್‌ 5G/ 4G 90Hz ರಿಪ್ರೆಸ್‌ ದರದ ಜೊತೆಗೆ 1080x2400 ಪಿಕ್ಸೆಲ್‌ ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿದೆ. ಮೀಟಿಯಾಟೆಕ್‌ ಡೈಮೆನ್ಸಿಟಿ 700 ಪ್ರಸೆಸರ್‌ ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಇದೆ. 4GB RAM ಹಾಗೂ 64GB ಇಂಟರ್‌ ಸ್ಟೋರೇಜ್‌ನಲ್ಲಿ ಇದು ಲಭ್ಯ. 5000 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ವೇಗದ ಚಾರ್ಜಿಂಗ್‌ ಆಯ್ಕೆ ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್‌ ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಿದೆ.

iPhone 14 ಸರಣಿ

iPhone 14 ಸರಣಿ

ಆಪಲ್‌ ಕಂಪೆನಿ ನಾಲ್ಕು ವಿಭಿನ್ನ iPhone 14 ಮಾದರಿಗಳನ್ನು ಲಾಂಚ್‌ ಮಾಡಿದೆ. ಇದರಲ್ಲಿ iPhone 14, iPhone 14 Plus, iPhone 14 Pro ಮತ್ತು iPhone 14 Pro Max ಸೇರಿವೆ. ಸೆಪ್ಟೆಂಬರ್‌ 7 ರಂದು ಈ ಸ್ಮಾರ್ಟ್‌ಫೋನ್‌ಗಳು ಜಾಗತಿಕವಾಗಿ ಬಿಡುಗಡೆ ಆಗಿವೆ.

ಐಕ್ಯೂ Z6 Lite

ಐಕ್ಯೂ Z6 Lite

ಐಕ್ಯೂ Z6 Lite Z6 ಸರಣಿಯಲ್ಲಿ ಮೂರು ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳು ಕೈಗೆಟುಕುವ ಬೆಲೆಯೊಂದಿಗೆ ಲಭ್ಯ ಆಗುತ್ತಿವೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೊಂಡಿವೆ.

ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ

ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ

ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ 6.73 ಇಂಚಿನ ಡಿಸ್‌ಪ್ಲೇ ಹೊಂದಿದೆ. 144Hz ರಿಪ್ರೆಸ್‌ ದರದ ಹೊಂದಿದ್ದು, ಸ್ನಾಪ್‌ಡ್ರಾಗನ್ 8+ Gen 1 ಚಿಪ್ ನಡಿ ಕಾರ್ಯನಿರ್ವಹಿಸುತ್ತದೆ. 200MP ರಿಯರ್‌ಕ್ಯಾಮೆರಾ ಇದರ ವಿಶೇಷತೆ. 125W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4500mAh ಬ್ಯಾಟರಿ ಇದರಲ್ಲಿದೆ. ಈ ಸ್ಮಾರ್ಟ್‌ಫೋನ್‌ ಸೆಪ್ಟೆಂಬರ್ 8 ರಂದು ಬಿಡುಗಡೆಯಾಗಿದೆ.

ಶಿಯೋಮಿ 12T ಪ್ರೊ

ಶಿಯೋಮಿ 12T ಪ್ರೊ

ಶಿಯೋಮಿ 12T ಪ್ರೊ ಫೋನ್ 6.67 ಇಂಚಿನ ಡಿಸ್‌ಪ್ಲೇ ಹೊಂದಿದೆ. 144Hz ರಿಪ್ರೆಸ್‌ ದರ ಹೊಂದಿದ್ದು, ಸ್ನಾಪ್‌ಡ್ರಾಗನ್ 8+ Gen 1 ಚಿಪ್‌ನಲ್ಲಿ ಕಾರ್ನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ 108MP ಪ್ರಮುಖ ಕ್ಯಾಮೆರಾ, 20MP ಸೆಲ್ಪಿ ಕ್ಯಾಮೆರಾ ಪಡೆದಿದೆ. 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಈ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗಬಹುದು.

ವಿವೋ X80 ಪ್ರೊ+

ವಿವೋ X80 ಪ್ರೊ+

ವಿವೋ X80 ಪ್ರೊ+ 6.8 ಇಂಚಿನ ಡಿಸ್‌ಪ್ಲೇ ಹಾಗೂ 120Hz ರಿಪ್ರೆಸ್‌ ದರ ಹೊಂದಿದೆ. ಸ್ನಾಪ್‌ಡ್ರಾಗನ್ 8+ Gen 1 ಚಿಪ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದೆ. 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4700mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಅಕ್ಟೋಬರ್‌ ಎರಡನೇ ವಾರದಲ್ಲಿ ಬಿಡುಗಡೆಗೆ ಸಿದ್ದಗೊಂಡಿದೆ.

ರಿಯಲ್‌ಮಿ GT ನಿಯೋ 3T

ರಿಯಲ್‌ಮಿ GT ನಿಯೋ 3T

ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್‌ 6.62 ಇಂಚುಗಳು ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ದರ ಪಡೆದಿದೆ. ಸ್ನಾಪ್‌ಡ್ರಾಗನ್ 870 ಚಿಪ್ ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ 64MP + 8MP + 2MP ಟ್ರಿಪಲ್‌ ಕ್ಯಾಮೆರಾ ರಚನೆ ಜೊತೆಗೆ 16MP ಸೆಲ್ಪಿ ಕ್ಯಾಮೆರಾ ಪಡೆದಿದೆ. ಇದು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ.

Best Mobiles in India

English summary
Smartphones ranging from budget to lakhs of rupees are now available in market. We have detailed the smartphones launched in the month of September.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X