ಹೆಚ್ಚು ಬ್ಯಾಟರಿ ಬಾಳಿಕೆಯೊಂದಿಗೆ ಲಾವಾ ಐರಿಸ್ ಫ್ಯುಯಿಲ್ 20

Written By:

ಲಾವಾ ಐರಿಸ್ ಫ್ಯುಯಿಲ್ 20 ಸ್ಮಾರ್ಟ್‌ಫೋನ್ ಅನ್ನು ರೂ 5,399 ಕ್ಕೆ ಲಾಂಚ್ ಮಾಡಿದೆ. ಮೆಟಾಲಿಕ್ ಗ್ರೇ ಹಾಗೂ ಬಿಳಿ ಬಣ್ಣದಲ್ಲಿ ಬರುತ್ತಿರುವ ಈ ಫೋನ್‌ಗಳು ರೀಟೈಲ್ ಮತ್ತು ಇಕಾಮರ್ಸ್ ಸೈಟ್‌ಗಳಲ್ಲಿ ಮುಂದಿನ ವಾರದಿಂದ ದೊರೆಯುತ್ತಿದೆ.

ಹೆಚ್ಚು ಬ್ಯಾಟರಿ ಬಾಳಿಕೆಯೊಂದಿಗೆ ಲಾವಾ ಐರಿಸ್ ಫ್ಯುಯಿಲ್ 20

ಇದು ಅತ್ಯಂತ ದೊಡ್ಡ ಬ್ಯಾಟರಿ 4400mAh ನೊಂದಿಗೆ ಬರುತ್ತಿದ್ದು, 6,000 ರೂಪಾಯಿಗಳಿಗೆ ಲಭ್ಯವಾಗುತ್ತಿರುವ ಅತಿ ದೊಡ್ಡ ಬ್ಯಾಟರಿ ಇರುವ ಡಿವೈಸ್ ಇದಾಗಿದೆ. ಇನ್ನು ಫೋನ್ 2ಜಿ ಸಂಪರ್ಕಕ್ಕೆ ಬೆಂಬಲವನ್ನು ಒಸಗಿಸುತ್ತಿದ್ದು, ಇದು ಡಿವೈಸ್‌ಗೆ ಋಣಾತ್ಮಕ ಅಂಶವಾಗಿ ಪರಿಗಣಿತವಾಗಿದೆ. ಇದೇ ಪ್ರೈಸ್ ಟ್ಯಾಗ್‌ನಲ್ಲಿ ಇದೀಗ ಮಾರುಕಟ್ಟೆಲ್ಲಿ 4ಜಿ ಫೋನ್‌ಗಳು ದೊರೆಯುತ್ತಿದ್ದು ಬರಿಯ 2ಜಿ ಬೆಂಬಲ ಫೋನ್‌ನ ಮಾರಾಟವನ್ನು ಇಳಿಸುವ ಸಾಧ್ಯತೆ ಕೂಡ ಇದೆ.

ಹೆಚ್ಚು ಬ್ಯಾಟರಿ ಬಾಳಿಕೆಯೊಂದಿಗೆ ಲಾವಾ ಐರಿಸ್ ಫ್ಯುಯಿಲ್ 20

ಡ್ಯುಯಲ್ ಸಿಮ್ ಆಧಾರಿತ ಫ್ಯುಯೆಲ್ 20 ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಚಾಲನೆ ಮಾಡುತ್ತಿದ್ದು 5 ಇಂಚಿನ FWVGA ಡಿಸ್‌ಪ್ಲೇ ಇದರಲ್ಲಿದೆ. ಇದು 1.3GHz ಡ್ಯುಯಲ್ ಕೋರ್ ಪ್ರೊಸೆಸರ್‌ನೊಂದಿಗೆ ಬಂದಿದ್ದು 512 ಎಮ್‌ಬಿ RAM ಇದರಲ್ಲಿದೆ. ಇದು 4 ಜಿಬಿ ಆಂತರಿಕ ಸಂಗ್ರಹವನ್ನು ಪಡೆದುಕೊಂಡು ಬಂದಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದಾಗಿದೆ. ರಿಯರ್ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದ್ದು, ಮುಂಭಾಗ ಕ್ಯಾಮೆರಾ 0.3 ಮೆಗಾಪಿಕ್ಸೆಲ್ ಆಗಿದೆ.

English summary
This article tells about Lava Iris Fuel 20 With 4400mAh Battery Launched at Rs. 5,399.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot