ಟ್ರಿಪಲ್ ಕ್ಯಾಮೆರಾ ರಚನೆಯಲ್ಲಿ ಲಾವಾ ಯುವ ಪ್ರೊ ಫೋನ್‌ ಲಾಂಚ್‌ : ಬೆಲೆ 7,799ರೂ.!

|

ಸ್ವದೇಶಿ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಗಳಲ್ಲಿ ಒಂದಾಗಿರುವ ಲಾವಾ ಈಗಾಗಲೇ ಬಜೆಟ್‌ ಬೆಲೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಈ ನಡುವೆ ಈಗ ಮತ್ತೊಂದು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ ಈ ಬಜೆಟ್‌ ಬೆಲೆ ಫೋನ್‌ಗಳ ತೆಕ್ಕೆಗೆ ಸೇರಲಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೊ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಸ್ಮಾರ್ಟ್‌ಫೋನ್‌

ಹೌದು, ಲಾವಾ ಯುವ ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದ್ದು, ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆಯೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಹಾಗೆಯೇ ಒಮ್ಮೆ ಚಾರ್ಜ್‌ ಮಾಡಿದರೆ ಬರೋಬ್ಬರಿ 320 ಗಂಟೆಗಳವರೆಗೆ ಸ್ಟ್ಯಾಂಡ್‌ಬೈ ಸಮಯ ನೀಡಲಿದೆ. ಹಾಗಾದ್ರೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯಬೇಕೆಂದರೆ ಈ ಲೇಖನ ಓದಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಲಾವಾ ಯುವ ಪ್ರೊ ಸ್ಮಾರ್ಟ್‌ಫೋನ್‌ 6.51 ಇಂಚಿನ HD+ IPS ಡಿಸ್‌ಪ್ಲೇ ಹೊಂದಿದ್ದು, 720x1,600 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಇನ್ನುಳಿದಂತೆ 20:9 ಆಕಾರ ಅನುಪಾತದ ಜೊತೆಗೆ 269ppi ಪಿಕ್ಸೆಲ್ ಸಾಂದ್ರತೆಯ ಡಿಸ್‌ಪ್ಲೇ ಹೊಂದಿರುವುದು ಇದರ ವಿಶೇಷ ಫೀಚರ್ಸ್‌ನಲ್ಲಿ ಒಂದು. ಪ್ರಮುಖವಾಗಿ ಈ ಸ್ಮಾರ್ಟ್‌ಫೋನ್‌‌ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಆಯ್ಕೆ ಪಡೆದಿದ್ದು, ವಾಟರ್‌ಡ್ರಾಪ್ ಶೈಲಿಯ ನಾಚ್ ಅನ್ನು ಹೊಂದಿದೆ.

ಪ್ರೊಸೆಸರ್ ಬಲ ಯಾವುದು?

ಪ್ರೊಸೆಸರ್ ಬಲ ಯಾವುದು?

ಲಾವಾ ಯುವ ಪ್ರೊ ಫೋನ್ ಮೀಡಿಯಾ ಟೆಕ್ ಹಿಲಿಯೊ SoC ನಿಂದ ರನ್‌ ಆಗಲಿದ್ದು, ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 3GB RAM ಹಾಗೂ 32GBಯ ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ಸ್ಟೋರೇಜ್‌ ಹೆಚ್ಚಿಗೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಈ ಸ್ಮಾರ್ಟ್‌ಫೋನ್‌ ರಿಯರ್‌ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದೆ. ಇದರಲ್ಲಿ ಪ್ರಮುಖ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು, ಇನ್ನುಳಿದಂತೆ ಎಲ್ಇಡಿ ಫ್ಲ್ಯಾಶ್‌, ಹೆಚ್‌ಡಿಆರ್‌, ಪೋರ್ಟ್ರೇಟ್, ಬ್ಯೂಟಿ, ನೈಟ್,ಜಿಐಎಫ್‌ ಮತ್ತು ಟೈಮ್ ಲ್ಯಾಪ್ಸ್ ದೃಶ್ಯಗಳನ್ನು ಸೆರೆಹಿಡಿಯುವ ಆಯ್ಕೆಯನ್ನು ಈ ಕ್ಯಾಮೆರಾ ಸೆನ್ಸಾರ್‌ ಪಡೆದಿವೆ. ಇದರೊಂದಿಗೆ 8 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ ಇದ್ದು, ಇದೂ ಸಹ ಎಲ್‌ಇಡಿ ಫ್ಲ್ಯಾಶ್‌ ಬೆಂಬಲ ಪಡೆದಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 10W ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಒಂದು ಪೂರ್ಣ ಚಾರ್ಜ್‌ನಲ್ಲಿ ಬರೋಬ್ಬರಿ 37 ಗಂಟೆಗಳ ಟಾಕ್ ಟೈಮ್ ಹಾಗೂ 320 ಗಂಟೆಗಳವರೆಗೆ ಸ್ಟ್ಯಾಂಡ್‌ಬೈ ನೀಡಲಿದೆ ಎಂದು ಕಂಪೆನಿ ಘೋಷಿಸಿಕೊಂಡಿದೆ.

ಕನೆಕ್ಟಿವಿಟಿ ಆಯ್ಕೆ

ಕನೆಕ್ಟಿವಿಟಿ ಆಯ್ಕೆ

ಈ ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಬ್ಲೂಟೂತ್ v5, ಎಫ್‌ಎಂ ರೇಡಿಯೋ, ವೈ-ಫೈ, 3.5mm ಆಡಿಯೋ ಜಾಕ್, GPRS, OTG, ಮತ್ತು USB ಟೈಪ್-C ಪೋರ್ಟ್ ಸೇರಿದಂತೆ ಇನ್ನಿತರೆ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಈ ಫೋನ್‌ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಫೀಚರ್‌ ಪಡೆದಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಲಾವಾ ಸ್ಮಾರ್ಟ್‌ಫೋನ್‌ನ 3GB RAM + 32GB ಸಾಮರ್ಥ್ಯದ ವೇರಿಯಂಟ್‌ಗೆ 7,799ರೂ. ಗಳನ್ನು ನಿಗದಿ ಮಾಡಲಾಗಿದೆ. ಲಾವಾ ಯುವ ಪ್ರೊ ಫೋನ್ ಮೆಟಾಲಿಕ್ ಬ್ಲ್ಯಾಕ್, ಮೆಟಾಲಿಕ್ ಬ್ಲೂ ಮತ್ತು ಮೆಟಾಲಿಕ್ ಗ್ರೇ ಬಣ್ಣಗಳಲ್ಲಿ ಲಭ್ಯವಾಗಲಿದ್ದು, ಈ ಫೋನ್‌ ಅನ್ನು ಲಾವಾ ಇ-ಸ್ಟೋರ್ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
Lava is one of the top domestic smartphone manufacturers. Now again Lava has introduced a budget smartphone called Lava Yuva Pro.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X