ಲೈಕಾ ಲೀಟ್ಜ್ ಫೋನ್ 2 ಅನಾವರಣ: 240Hz ರಿಫ್ರೆಶ್ ರೇಟ್ ವಿಶೇಷ!

|

ಲೈಕಾ (Leica) ಕಂಪೆನಿಯು ಕ್ಯಾಮೆರಾಗಳು, ಆಪ್ಟಿಕಲ್ ಲೆನ್ಸ್‌ಗಳು, ಫೋಟೋಗ್ರಾಫಿಕ್ ಲೆನ್ಸ್‌ಗಳು, ಬೈನಾಕ್ಯುಲರ್‌ಗಳು, ರೈಫಲ್ ಸ್ಕೋಪ್‌ಗಳು ಮತ್ತು ಸೂಕ್ಷ್ಮದರ್ಶಕಗಳನ್ನು ತಯಾರಿ ಜನಪ್ರಿಯತೆ ಗಳಿಸಿಕೊಂಡಿದ್ದು, ಇದೀಗ ಸ್ಮಾರ್ಟ್‌ಫೋನ್‌ ವಲಯದಲ್ಲೂ ಗ್ರಾಹಕರಿಗೆ ಸೇವೆ ನೀಡಲು ಮುಂದಾಗಿದೆ. ಅದರಂತೆ ಕಳೆದ ವರ್ಷ ಲೈಕಾ ತನ್ನ ಮೊದಲ ಸ್ವಯಂ ಬ್ರಾಂಡ್ ಸ್ಮಾರ್ಟ್‌ಫೋನ್ ಲೀಟ್ಜ್ ಫೋನ್ 1 ಅನ್ನು ಬಿಡುಗಡೆ ಮಾಡಿತ್ತು. ಇದೀಗ ಲೀಟ್ಜ್ ಫೋನ್ 2 ಅನ್ನು ಅನಾವರಣ ಮಾಡಿದೆ.

ಕ್ಯಾಮೆರಾ

ಹೌದು, ಜರ್ಮನ್ ಕ್ಯಾಮೆರಾ ತಯಾರಕ ಕಂಪೆನಿಯು ತನ್ನ ಎರಡನೇ ತಲೆಮಾರಿನ ಸ್ಮಾರ್ಟ್‌ಫೋನ್ ಆದ ಲೈಕಾ ಲೀಟ್ಜ್ ಫೋನ್ 2 (Leica Leitz Phone 2)ಅನ್ನು ಅನಾವರಣ ಮಾಡಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 1 SoC ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 12 ನಲ್ಲಿ ರನ್‌ ಆಗಲಿದೆ. ಹಾಗೆಯೇ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂದರೆ ಬರೋಬ್ಬರಿ ಒಂದುಲಕ್ಷಕ್ಕೂ ಹೆಚ್ಚಿನ ಹಣ ಪಾವತಿ ಮಾಡಬೇಕಿದೆ. ಹಾಗಿದ್ರೆ ಈ ಫೋನ್‌ನ ಇನ್ನಿತರ ಪ್ರಮುಖ ಫೀಚರ್ಸ್‌ ಅನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಸ್ಮಾರ್ಟ್‌ಫೋನ್‌ 6.6 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, 2730×1260 ಪಿಕ್ಸೆಲ್‌ಗಳ ರೆಸಲ್ಯೂಶನ್ ನೀಡಲಿದೆ. ಇದರ ಜೊತೆಗೆ 240 Hz ವರೆಗಿನ ಹೊಂದಾಣಿಕೆಯ ರಿಫ್ರೆಶ್ ರೇಟ್‌, 2000nits ಬ್ರೈಟ್‌ನೆಸ್‌, 10 ಬಿಟ್ ಬಣ್ಣಗಳಿಗೆ ಬೆಂಬಲ, ಡಾಲ್ಬಿ ವಿಷನ್ ಹಾಗೂ ಇನ್‌ಬಿಲ್ಟ್‌ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್‌ ಪಡೆದುಕೊಂಡಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್‌ 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಿದ್ದು, ಆಂಡ್ರಾಯ್ಡ್‌ 12 ನಲ್ಲಿ ರನ್‌ ಆಗಲಿದೆ. ಹಾಗೆಯೇ 12GB RAM ಹಾಗೂ 512GB ಇಂಟರ್‌ನಲ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಲಭ್ಯವಾಗಲಿದ್ದು, 1TB ವರೆಗೆ ಮೈಕ್ರೊ SD ಕಾರ್ಡ್ ಮೂಲಕ ಸ್ಟೋರೇಜ್‌ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಲೈಕಾ ಲೀಟ್ಜ್ ಫೋನ್ 2 ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿದ್ದು, 47.2 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ f/1.9 ಲೆನ್ಸ್ ಅನ್ನು ಹೊಂದಿದ್ದು, 1.9 ಮೆಗಾಪಿಕ್ಸೆಲ್‌ ನ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದಿದೆ. ಹಾಗೆಯೇ ಸೆಲ್ಫಿಗಾಗಿ 12.6 ಮೆಗಾಪಿಕ್ಸೆಲ್‌ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, USB PD (PPS) ಚಾರ್ಜಿಂಗ್ ಹಾಗೂ ವಾಯರ್‌ಲೆಸ್‌ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಹಾಗೆಯೇ ವಾಟರ್‌ ಹಾಗೂ ಡಸ್ಟ್‌ ರೆಸಿಸ್ಟೆಂಟ್‌ಗಾಗಿ IP68 ರೇಟಿಂಗ್ ಪಡೆದಿದೆ.

ಕನೆಕ್ಟಿವಿಟಿ ಆಯ್ಕೆ

ಕನೆಕ್ಟಿವಿಟಿ ಆಯ್ಕೆ

ಈ ಫೋನ್ 3.5mm ಹೆಡ್‌ಫೋನ್ ಜ್ಯಾಕ್, 5G, ವೈ-ಫೈ 6, ಬ್ಲೂಟೂತ್ ಆವೃತ್ತಿ 5.2, GNSS, NFC, ಯುಎಸ್‌ಬಿ ಟೈಪ್-ಸಿ ಪೋರ್ಟ್‌ ಆಯ್ಕೆ ಹೊಂದಿದೆ. ಅದರಂತೆ ಈ ಸ್ಮಾರ್ಟ್‌ಫೋನ್‌ನ ಬಾಡಿಯಲ್ಲಿ ಎಲ್ಲಿಯೂ ಸಹ 'ಲೈಕಾ' ಎಂಬ ಹೆಸರಿಲ್ಲ. ಬದಲಾಗಿ 'ಲೀಟ್ಜ್' ಎಂಬ ಹೆಸರನ್ನು ನಮೂದಿಸಿರುವುದು ವಿಶೇಷ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಲೈಕಾ ಲೀಟ್ಜ್ ಫೋನ್ 2 ಸ್ಮಾರ್ಟ್‌ಫೋನ್‌ಗೆ ಜಪಾನ್‌ನಲ್ಲಿ ¥225,360 ನಿಗದಿ ಮಾಡಲಾಗಿದೆ. (ಭಾರತದಲ್ಲಿ ಈ ಫೋನ್‌ನ ಅಂದಾಜು ಬೆಲೆ 1,25,770 ರೂ. ಗಳಾಗಿರಲಿದೆ.) ಈ ಫೋನ್ ನವೆಂಬರ್ 18 ರಿಂದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದರೊಂದಿಗೆ 'ಲೈಕಾ ವೈಟ್' ಎಂಬ ಬಿಳಿ ಬಣ್ಣದ ಆಯ್ಕೆಯಲ್ಲಿ ಮಾತ್ರ ಈ ಫೋನ್ ಲಭ್ಯವಾಗುತ್ತಿದ್ದು, ಇದಕ್ಕೂ ಮೊದಲು ಅನಾವರಣಗೊಂಡಿದ್ದ ಲೀಟ್ಜ್ ಫೋನ್ 1 ಕಪ್ಪು ಬಣ್ಣದಿಂದ ಕೂಡಿತ್ತು.

Best Mobiles in India

English summary
The Leica company is popular for manufacturing cameras, optical lenses, photographic lenses, binoculars. Meanwhile, Leica has unveiled a smartphone named Leitz Phone 2.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X