ಲೆನೊವೊದದಿಂದ ನಿಬ್ಬೆರಗಾಗಿಸುವ ಲ್ಯಾಪ್‌ಟಾಪ್‌ ಲಾಂಚ್‌; ಇದು ಸಾಮಾನ್ಯ ಡಿವೈಸ್‌ ಅಲ್ಲ!

|

ಲ್ಯಾಪ್‌ಟಾಪ್‌ ವಿಭಾಗದಲ್ಲಿ ಈಗಾಗಲೇ ಫೋಲ್ಡಬಲ್‌ ಹಾಗೂ ಇನ್ನಿತರೆ ಸೌಲಭ್ಯ ಹೊಂದಿರುವ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದಾಗ್ಯೂ ಪ್ರಮುಖ ಬ್ರ್ಯಾಂಡ್‌ನ ಕಂಪೆನಿಗಳು ಇತರೆ ಫೀಚರ್ಸ್‌ ಇರುವ ಲ್ಯಾಪ್‌ಟಾಪ್‌ ಅನ್ನು ನಿರಂತರವಾಗಿ ಪರಿಚಯಿಸಿಕೊಂಡು ಬರುತ್ತಿವೆ. ಇದರೊಂದಿಗೆ ಲೆನೊವೊ ಹೊಸ ಲ್ಯಾಪ್‌ಟಾಪ್‌ವೊಂದನ್ನು ಅನಾವರಣ ಮಾಡಿದ್ದು, ವಿಶೇಷ ಆಕರ್ಷಣೆ ಜೊತೆಗೆ ಹೊಸ ಫೀಚರ್ಸ್‌ವೊಂದನ್ನು ಪಡೆದುಕೊಂಡಿದೆ.

ಲೆನೊವೊ

ಹೌದು, ಲೆನೊವೊ ಲ್ಯಾಪ್‌ಟಾಪ್‌ಗಳು ಈಗಾಗಲೇ ಭಿನ್ನ ವಿಭಿನ್ನ ಶ್ರೇಣಿಯಲ್ಲಿ ಕಾಣಿಸಿಕೊಂಡಿವೆ. ಇದರೊಂದಿಗೆ ಹೊಸ ಥಿಂಕ್‌ಬುಕ್‌ ಪ್ಲಸ್ ಅನ್ನು ಇ ಇಂಕ್‌ ಡಿಸ್‌ಪ್ಲೇಗಳೊಂದಿಗೆ ಅನಾವರಣ ಮಾಡಲಾಗಿದೆ. ಹಾಗಿದ್ರೆ, ಈ ಲ್ಯಾಪ್‌ಟಾಪ್‌ನ ವಿಶೇಷ ಫೀಚರ್ಸ್‌ ಏನೆಲ್ಲಾ ಸೌಲಭ್ಯ ಹೊಂದಿದೆ. ಹಾಗೆಯೇ ಇದರ ಬೆಲೆ ಎಷ್ಟಿರಬಹುದು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಲ್ಯಾಪ್‌ಟಾಪ್‌ ಕನ್ವರ್ಟಿಬಲ್ ಲ್ಯಾಪ್‌ಟಾಪ್ ಆಗಿದ್ದು, 13.3 ಇಂಚಿನ OLED ಡಿಸ್‌ಪ್ಲೇ ಹಾಗೂ 12 ಇಂಚಿನ ಇ ಇಂಕ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್‌ ಅನ್ನು ಉದ್ಯೋಗ ಸಂಬಂಧ ಬಳಕೆ ಮಾಡಲು ಮುಂದಾದರೆ 60Hz ರಿಫ್ರೆಶ್ ದರದೊಂದಿಗೆ 13.3 ಇಂಚಿನ 2.8K OLED ಉಪಯೋಗಕ್ಕೆ ಬರುತ್ತದೆ. ಹಾಗೆಯೇ ಇ-ಪುಸ್ತಕಗಳನ್ನು ಓದಲು ಅಥವಾ ಬರೆಯಲು ಸಹ ಬಯಸಿದರೆ, ಡಿಸ್‌ಪ್ಲೇಯನ್ನು ತಿರುಗಿಸಿ 12Hz ರಿಫ್ರೆಶ್ ರೇಟ್‌ನೊಂದಿಗೆ 12 ಇಂಚಿನ ಇ ಇಂಕ್ ಬಣ್ಣದ ಡಿಸ್‌ಪ್ಲೇ ಲಭ್ಯವಾಗಲಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಮೂಲಕ ಇ ಇಂಕ್ ಡಿಸ್‌ಪ್ಲೇ ಬಳಕೆದಾರರಿಗೆ ಎರಡು ವಿಧಾನಗಳ ಆಯ್ಕೆ ನೀಡಲಿದ್ದು, ಟೈಪ್ ರೈಟರ್ ಲ್ಯಾಪ್‌ಟಾಪ್ ಮೋಡ್ ಮತ್ತು ಇ ಪೇಪರ್ ಮೋಡ್ ಇದ್ದು, ಇದು ಸ್ಟೈಲಸ್ ಪೆನ್‌ಗೆ ಬೆಂಬಲ ನೀಡಲಿದೆ. ನೀವು ಎರಡೂ ಬದಿಗಳಲ್ಲಿ ವಿಂಡೋಸ್ 11 ಅನ್ನು ಬಳಸಬಹುದಾಗಿದ್ದು, ಎರಡೂ ಬದಿಗಳಲ್ಲಿ ವೆಬ್‌ಕ್ಯಾಮ್‌ಗಳ ಆಯ್ಕೆ ನೀಡಲಾಗಿದ್ದು, ಸುಲಭವಾಗಿ ಮೀಟಿಂಗ್‌ಗಳಲ್ಲಿ ಹಾಗೂ ಇತರೆ ಕರೆಗಳಲ್ಲಿ ಭಾಗಿಯಾಗಬಹುದು.

ತಿರುಗುವ ಹಿಂಜ್ ಆಯ್ಕೆ

ತಿರುಗುವ ಹಿಂಜ್ ಆಯ್ಕೆ

ಮೊದಲೇ ತಿಳಿಸಿದಂತೆ ಇದರ ವಿಶೇಷವೇ ತಿರುಗುವ ಹಿಂಜ್. ಆದರೆ, ಇದು ಸಾಮಾನ್ಯ ಹಿಂಜ್‌ಗಿಂತ ಭಿನ್ನವಾಗಿ ಥಿಂಕ್‌ಬುಕ್ ಪ್ಲಸ್ ಟ್ವಿಸ್ಟ್ ಹಿಂಜ್ ಅನ್ನು ಹೊಂದಿದ್ದು, ಈ ಮೂಲಕ ಎರಡು ರೀತಿಯ ಡಿಸ್‌ಪ್ಲೇ ಬಳಕೆ ಮಾಡಲು ಸಹಕಾರಿಯಾಗಿದೆ. ಡಿಸ್‌ಪ್ಲೇಯನ್ನು ಸರಳವಾಗಿ ತಿರುಗಿಸುವ ಮೂಲಕ ಮತ್ತು ಲಿಟ್ ಅನ್ನು ಮುಚ್ಚುವ ಮೂಲಕ ನೀವು ಟ್ಯಾಬ್ಲೆಟ್ ರೂಪದಲ್ಲಿ ಇದನ್ನು ಬಳಕೆ ಮಾಡಬಹುದು.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಥಿಂಕ್‌ಬುಕ್ ಪ್ಲಸ್ ಟ್ವಿಸ್ಟ್ ಇಂಟೆಲ್ 13ನೇ ಜನ್ ಕೋರ್ i7 ರಾಪ್ಟರ್ ಲೇಕ್-ಯು ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದ್ದು, 16GB RAM ಹಾಗೂ 1TB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಯಲ್ಲಿ ಪೋರ್ಟ್‌ಗಳ ಕೊರತೆ ಉಂಟಾಗಿದ್ದು, ಕೇವಲ ಎರಡು ಥಂಡರ್‌ಬೋಲ್ಟ್ 4 ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಹಾಗೂ 3.5mm ಆಡಿಯೋ ಜ್ಯಾಕ್ ಆಯ್ಕೆ ಹೊಂದಿದೆ. ಇದಲ್ಲದೆ, ಲ್ಯಾಪ್‌ಟಾಪ್ ವೈ-ಫೈ 6E ಸಂಪರ್ಕದೊಂದಿಗೆ ಪ್ಯಾಕ್‌ ಆಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಲೆನೊವೊ ಥಿಂಕ್‌ಬುಕ್ ಪ್ಲಸ್ ಟ್ವಿಸ್ಟ್ ಯುಎಸ್ ಮತ್ತು ಯುರೋಪ್‌ನಲ್ಲಿ ಆರಂಭಿಕವಾಗಿ $1,649 (ಭಾರತದಲ್ಲಿ 1,35,669 ರೂ. ಗಳ ಬೆಲೆ) ಹೊಂದಿದೆ. ಇನ್ನುಳಿದಂತೆ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಮಾಹಿತಿ ನೀಡಿಲ್ಲ. ಲೆನೆವೊ ಇ ಇಂಕ್ ಡಿಸ್‌ಪ್ಲೇಗಳನ್ನು ಪ್ರಯೋಗಿಸುತ್ತಿರುವುದು ಇದೇ ಮೊದಲಲ್ಲ. ಇದು ಯೋಗ ಸೀರಿಸ್‌ನಲ್ಲಿ ಇ ಇಂಕ್‌ನೊಂದಿಗೆ ಕೀಬೋರ್ಡ್ ಅನ್ನು ಬದಲಾಯಿಸಿತ್ತು ಹಾಗೆಯೇ ಥಿಂಕ್‌ಬುಕ್‌ನ ಸೀರಿಸ್‌ಗೆ ಇ-ರೀಡರ್ ಅನ್ನು ಸಹ ಪರಿಚಯಿಸಿತ್ತು.

Best Mobiles in India

English summary
Lenevo unveils ThinkBook Plus Twist with OLED and E Ink displays in CES 2023.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X