ಲೆನೊವೊ A6000 ಪ್ಲಸ್ ಫ್ಲಿಪ್‌ಕಾರ್ಟ್‌ನಿಂದ ಮುಕ್ತ ಮಾರಾಟ
ಭಾರತದ ಆನ್‌ಲೈನ್ ರೀಟೈಲ್ ಪಾಲುದಾರನೆಂದೆನಿಸಿಕೊಂಡಿರುವ ಫ್ಲಿಪ್‌ಕಾರ್ಟ್ ಲೆನೊವೊ A6000 ಪ್ಲಸ್ ಅನ್ನು ನೋಂದಾವಣೆ ಇಲ್ಲದೆ ಮಾರಾಟ ಮಾಡುತ್ತಿದೆ. ಈ ಮಾರಾಟದಲ್ಲಿ, ಡಿವೈಸ್ ಅನ್ನು ಬಳಕೆದಾರರು ಆರ್ಡರ್ ಮಾಡಬಹುದಾಗಿದ್ದು, ತನ್ನ A6000 ಗಾಗಿ ಕಂಪೆನಿ ಮುಕ್ತ ಮಾರಾಟವನ್ನು ನಿರ್ವಹಿಸುತ್ತಿದೆ.
ಓದಿರಿ: ರೂ 8000 ಕ್ಕೆ ಲಾಲಿಪಪ್ ಫೋನ್‌ಗಳ ರಸದೌತಣ

ಅಲ್ಲದೆ, ಕಂಪೆನಿ ತನ್ನ ಯೂನಿಟ್‌ಗಳ ಸಂಖ್ಯೆಯನ್ನು ಇನ್ನೂ ಪ್ರಸ್ತುತಪಡಿಸಿಲ್ಲ. ಇನ್ನು ಕಂಪೆನಿಯ ಪ್ರಕಾರ A6000 ಪ್ಲಸ್ ಮುಂದಿನ ವಾರದಿಂದ ಫ್ಲ್ಯಾಶ್ ಸೇಲ್ ವಿಧಾನವನ್ನು ಅನುಸರಿಸುತ್ತಿದೆ.
ಫೋನ್ ಪ್ರಮುಖ ವೈಶಿಷ್ಟ್ಯತೆಗಳು
ಫೋನ್ 4ಜಿ ಕನೆಕ್ಟಿವಿಟಿಯೊಂದಿಗೆ ಬಂದಿದ್ದು, 5 ಇಂಚಿನ ಎಚ್‌ಡಿ 720 ಪಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಫೋನ್ ಬಂದಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಕ್ವಾಡ್ - ಕೋರ್ 64 ಬಿಟ್ ಪ್ರೊಸೆಸರ್, 2ಜಿಬಿ RAM, 16 ಜಿಬಿ ಸಂಗ್ರಹಣಾ ಸಾಮರ್ಥ್ಯ ಮತ್ತು ಎಸ್‌ಡಿ ಕಾರ್ಡ್ ಸ್ಲಾಟ್ ಡಿವೈಸ್‌ನಲ್ಲಿದೆ.

ಡ್ಯುಯಲ್ ಡಾಲ್ಬಿ ಡಿಜಿಟಲ್ ಪವರ್ ಸ್ಪೀಕರ್‌ಗಳ ಜೊತೆಗೆ 8 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಫೋನ್ ಹೊಂದಿದ್ದು ಇದು ತೆಳು ಮತ್ತ ಹಗುರ ದೇಹವಿನ್ಯಾಸವನ್ನು ಹೊಂದಿದೆ.
ಓದಿರಿ: ಖರೀದಿಸಿ ರೂ 15,000 ಕ್ಕೆ ಬೆಸ್ಟ್ ಕ್ಯಾಮೆರಾ ಫೋನ್ಸ್
ಫೋನ್‌ನಲ್ಲಿ 2,300mAh ಬ್ಯಾಟರಿ ಇದ್ದು ಇದು 4 ಜಿ ಕನೆಕ್ಟಿವಿಟಿಗೆ ಬೆಂಬಲವನ್ನೊದಗಿಸುತ್ತದೆ. ಫೋನ್ ಬೆಲೆ ರೂ 7,499 ಆಗಿದೆ. ಇ - ರೀಟೈಲ್ ಸ್ಟೋರ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.


Click it and Unblock the Notifications








