2 ಜಿಬಿ RAM ಉಳ್ಳ ಲೆನೊವೊ ಎ6000 ಪ್ಲಸ್ ಫೋನ್ ಲಾಂಚ್

Written By:

ಲೆನೊವೊ ಎ6000 ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ಲೆನೊವೊ ಲಾಂಚ್ ಮಾಡಿದ್ದು ಇದರ ಬೆಲೆ ರೂ 7,499 ಎಂಬುದು ತಿಳಿದು ಬಂದಿದೆ. ಏಪ್ರಿಲ್ 28 ರಂದು 2 ಗಂಟೆಯ ನಂತರ ಸ್ಮಾರ್ಟ್‌ಫೋನ್‌ನ ಪ್ರಥಮ ಫ್ಲ್ಯಾಶ್ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ನಡೆಯಲಿದೆ.

[ಓದಿರಿ: ಐಫೋನ್ ಖರೀದಿಸಲು ತನ್ನ ಕಿಡ್ನಿಯನ್ನೇ ಮಾರಿದ ಭೂಪ]

2 ಜಿಬಿ RAM ಉಳ್ಳ ಲೆನೊವೊ ಎ6000 ಪ್ಲಸ್ ಫೋನ್ ಲಾಂಚ್

ಡ್ಯುಯಲ್ ಸಿಮ್ ಬೆಂಬಲವಿರುವ ಲೆನೊವೊ ಎ6000 ಪ್ಲಸ್ 2 ಜಿಬಿ RAM ಜೊತೆಗೆ ಬಂದಿದ್ದು ಇದು 16 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಫೋನ್‌ನ ವೈಶಿಷ್ಟ್ಯಗಳತ್ತ ಕಣ್ಣು ಹಾಯಿಸಿದಾಗ ಇದು 5 ಇಂಚಿನ (720x1280 ಪಿಕ್ಸೆಲ್‌ಗಳ) ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು 64- ಬಿಟ್ 1.2GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಸಾಕ್ ಜೊತೆಗೆ ಅಡ್ರೆನೊ 306 400MHz ಜಿಪಿಯು ಇದರಲ್ಲಿದೆ. ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಆಧಾರಿತ ಫೋನ್ ಇದಾಗಿದ್ದು ಲೆನೊವೊದ ವೈಬ್ UI 2.0 ಸ್ಕಿನ್ ಅನ್ನು ಮೇಲ್ಭಾಗದಲ್ಲಿ ಪಡೆದುಕೊಂಡಿದೆ. ಇದು ಡೋಲ್ಬಿ ಡಿಜಿಟಲ್ ಪ್ಲಸ್ ಸ್ಪೀಕರ್‌ಗಳನ್ನು ಹೊಂದಿದೆ. [ಓದಿರಿ: ಐಫೋನ್‌ನಲ್ಲಿ ಸೆರೆಹಿಡಿದಿರುವ ಅದ್ಭುತ ಚಿತ್ರಗಳು]

2 ಜಿಬಿ RAM ಉಳ್ಳ ಲೆನೊವೊ ಎ6000 ಪ್ಲಸ್ ಫೋನ್ ಲಾಂಚ್

ಇನ್ನು ಫೋನ್‌ನ ರಿಯರ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದ್ದು, ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ. 2300mAh ಬ್ಯಾಟರಿಯನ್ನು ಡಿವೈಸ್ ಹೊಂದಿದೆ.

English summary
Lenovo on Friday launched a slightly more powerful variant of the popular Lenovo A6000 smartphone, the Lenovo A6000 Plus, priced at Rs. 7,499. Registrations for the smartphone's first flash sale via Flipkart on April 28 will begin on Friday, 2pm IST.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot