Subscribe to Gizbot

ಐಫೋನ್ ಖರೀದಿಸಲು ತನ್ನ ಕಿಡ್ನಿಯನ್ನೇ ಮಾರಿದ ಭೂಪ

Written By:

ಐಫೋನ್ ಅನ್ನು ಖರೀದಿಸಲು ಯಾರಿಗೆ ಮನಸ್ಸಿಲ್ಲ ಹೇಳಿ. ಹೌದು ಅಷ್ಟೊಂದು ಮೋಡಿಯನ್ನು ಆಪಲ್ ಮಾಂತ್ರಿಕ ಮಾಡಿದೆ ಎಂದೇ ಹೇಳಬಹುದು. ಇನ್ನು ಆಪಲ್ ಅಭಿಮಾನಿಗಳು ಐಫೋನ್ ಅನ್ನು ತಮ್ಮದಾಗಿಸಿಕೊಳ್ಳಲು ಏನೆಲ್ಲಾ ಕಸರತ್ತುಗಳನ್ನು ಮಾಡಿದ್ದಾರೆ ಎಂಬುದನ್ನೇ ಇಂದಿನ ಲೇಖನದಲ್ಲಿ ಇನ್ನಷ್ಟು ಅನೂಜ್ಞವಾಗಿ ನಾವು ನಿಮಗೆ ತಿಳಿಸುತ್ತಿದ್ದೇವೆ.

[ಓದಿರಿ: ಹೆಚ್ಚು ನಿರೀಕ್ಷಿತ ಐಓಎಸ್ 9 ನಲ್ಲಿ ಏನೆಲ್ಲಾ ಇದೆ ಗೊತ್ತೇ?]

ಬನ್ನಿ ಇಂದಿನ ಲೇಖನದಲ್ಲಿ ಐಫೋನ್ ಪ್ರೇಮಿಗಳು ಮಾಡಿರುವ ಕರಾಮತ್ತನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ವಿವರಿಸಲಿದ್ದು ಇದು ನಿಮ್ಮಲ್ಲೂ ಕ್ರೇಜ್ ಉಂಟುಮಾಡುವುದು ನಿಜ. [ಓದಿರಿ: ಆಪಲ್ ಫೋನ್‌ನಲ್ಲೂ ಸ್ಯಾಮ್‌ಸಂಗ್ ಫೋನ್‌ನಲ್ಲೂ ಇರುವ 10 ವ್ಯತ್ಯಾಸ]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನವಜಾತ ಶಿಶು ಮಾರಾಟ

ಐಫೋನ್ ಹುಚ್ಚು

ಐಫೋನ್ ಅನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಇಚ್ಛೆಯಿಂದ ಚೀನಾದ ದಂಪತಿಗಳು ತಮ್ಮ ಮೂರು ನವಜಾತ ಶಿಶುಗಳನ್ನು ಮಾರಿದ್ದಾರೆ.

ಕಿಡ್ನಿ ಮಾರಾಟ

ಕಿಡ್ನಿ ಮಾರಾಟ

ಹೊಸ ಐಫೋನ್ ಮತ್ತು ಐಪ್ಯಾಡ್ ಅನ್ನು ತನ್ನದಾಗಿಸಿಕೊಳ್ಳಬೇಕೆಂಬ ಉತ್ಕಟ ಬಯಕೆಯಿಂದ ತನ್ನ ಕಿಡ್ನಿಯನ್ನೇ ಮಾರಿದ್ದಾನೆ.

ಗೆಳತಿಯ ಜಾಹೀರಾತು

ಗೆಳತಿಯ ಜಾಹೀರಾತು

ಐಫೋನ್ ಖರೀದಿಸಬೇಕೆಂಬ ಹುಚ್ಚಿನಿಂದಾಗಿ ಚೀನಾದ ನಾಗರೀಕನೊಬ್ಬ ತನ್ನ ಗೆಳತಿಯನ್ನೇ ಜಾಹೀರಾತಿಗೆ ಬಳಸಿ ದುಡ್ಡು ಮಾಡಲು ಹೊರಟಿದ್ದ. ಇದಕ್ಕೆ ಆಕೆಯ ಬೆಂಬಲ ಕೂಡ ಇತ್ತು ಎಂಬುದು ಸೋಜಿಗದ ವಿಷಯವಾಗಿದೆ.

ಸಾಲಿನಲ್ಲಿ ಮುಂದೆ ಹೋಗಲು

ಸಾಲಿನಲ್ಲಿ ಮುಂದೆ ಹೋಗಲು

ಆಪಲ್ ಸ್ಟೋರ್‌ನಲ್ಲಿ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯ ವಿಷಯ. ಅದರಲ್ಲೂ ಒಬ್ಬಾಕೆ ಮಹಿಳೆ ಸಾಲಿನಲ್ಲಿ ಐದರಿಂದ ಮೂರನೇ ಸ್ಥಾನಕ್ಕೆ ಬರುವುದಕ್ಕಾಗಿ ತನ್ನ $2000 ಬೆಲೆಯ ಹ್ಯಾಂಡ್ ಬ್ಯಾಗ್ ಅನ್ನೇ ಮಾರಾಟ ಮಾಡಿದಳು.

ಕಳೆದು ಹೋದ ಐಫೋನ್‌ಗಾಗಿ

ಕಳೆದು ಹೋದ ಐಫೋನ್‌ಗಾಗಿ

ಕ್ಯಾಲಿಫೋರ್ನಿಯಾದ ಪೋಲೀಸ್ ಅಧಿಕಾರಿ ತನ್ನ ಮಗನ ಕಳೆದು ಹೋದ ಐಫೋನ್‌ಗಾಗಿ 10 ಮಂದಿ ಸಿಬ್ಬಂದಿಗಳೊಂದಿಗೆ ಹುಡುಕಾಟ ಆರಂಭಿಸಿದನು.

 ಐಫೋನ್ ಬಿಡುಗಡೆ

ಐಫೋನ್ ಬಿಡುಗಡೆ

ಐಫೋನ್ ಬಿಡುಗಡೆಯಾಗುವ ಸಂದರ್ಭದಲ್ಲಿ ಹೆಚ್ಚಿನ ಆಪಲ್ ಅಭಿಮಾನಿಗಳು ಆಪಲ್ ಸ್ಟೋರ್‌ನ ಹೊರಭಾಗದಲ್ಲಿ 22 ದಿನ ಕಾದು ಕುಳಿತಿರುತ್ತಾರಂತೆ.

ಐಫೋನ್ ಪ್ರೀತಿ

ಐಫೋನ್ ಪ್ರೀತಿ

ಹದಿಹರೆಯದ ಹುಡುಗಿಯೊಬ್ಬಳು ಡ್ರೈನ್‌ನೊಳಗೆ ಬಿದ್ದ ತನ್ನ ಐಫೋನ್ ಅನ್ನು ಪಡೆದುಕೊಳ್ಳಲು ತನ್ನ ಜೀವವನ್ನೇ ಪಣವಾಗಿಟ್ಟಳು. ನಂತರ ಅವಳನ್ನು ಕಾಪಾಡಲು ಅಗ್ನಿಶಾಮಕ ದಳದವರನ್ನು ಕರೆಸಲಾಯಿತಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Much as the Android camp is going to hate us for this, after getting an eyeful of the lengths the Apple fanboys will go to in their obsession with the iPhone, we’re afraid that the winners of this year’s fandom awards have been decided.Crazy Fanboys Have Done To Afford An iPhone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot