ಭಾರತದಲ್ಲಿ ಲೆನೊವೊದಿಂದ ಹೊಸ ಲ್ಯಾಪ್‌ಟಾಪ್‌ಗಳ ಪರಿಚಯ!

|

ಭಾರತದ ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಲೆನೊವೊ ಕಂಪೆನಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ತನ್ನ ವಿಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಹೆಚ್ಚು ಕಾರ್ಯನಿರ್ವಹಿಸಲು ಬಯಸುವ ಗ್ರಾಹಕರು ಲೆನೊವೊ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಬಯಸುತ್ತಾರೆ. ಅದರಂತೆ ಲೆನೊವೊ ಕಂಪನಿ ಮನೆಯಿಂದಲೇ ಕಾರ್ಯನಿರ್ವಹಿಸುವ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಎನಿಸುವ ಅನೇಕ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಸದ್ಯ ಇದೀಗ ಲೆನೊವೊ ಕಂಪೆನಿ ಭಾರತದ ಮಾರುಕಟ್ಟೆಯಲ್ಲಿ ಹೊಸ ಶ್ರೇಣಿಯ ಯೋಗ, ಲೀಜನ್‌ ಮತ್ತು ಐಡಿಯಾಪ್ಯಾಡ್‌ ಲ್ಯಾಪ್‌ಟಾಪ್‌ಗಳನ್ನು ಲಾಂಚ್‌ ಮಾಡಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ಭಾರತದಲ್ಲಿ ತನ್ನ ಹೊಸ ಯೋಗ, ಲೀಜನ್‌ ಮತ್ತು ಐಡಿಯಾಪ್ಯಾಡ್‌ ಸರಣಿಯಲ್ಲಿ ಹಲವು ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಲೀಜನ್‌ 5i, ಲೀಜನ್‌ 5i ಪ್ರೊ, ಲೀಜನ್‌ ಸ್ಲಿಮ್‌ 7i ಮತ್ತು ಐಡಿಯಾಪ್ಯಾಡ್‌ ಗೇಮಿಂಗ್‌ 3i, ಯೋಗ 9i, ಯೋಗ ಸ್ಲಿಮ್‌ 7i ಪ್ರೊ ಮತ್ತು ಯೋಗ 7i ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಲಾಗಿದೆ. ಇನ್ನು ಈ ಎಲ್ಲಾ ಲ್ಯಾಪ್‌ಟಾಪ್‌ಗಳು 12 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿವೆ.

ಲೆನೊವೊ

ಲೆನೊವೊ ಲಾಂಚ್‌ ಮಾಡಿರುವ ಹೊಸ ಸರಣಿಯ ಎಲ್ಲಾ ಲ್ಯಾಪ್‌ಟಾಪ್‌ಗಳು ವಿಭಿನ್ನ ಮಾದರಿಯ ಡಿಸ್‌ಪ್ಲೇ ಗಾತ್ರವನ್ನು ಹೊಂದಿವೆ. ಈ ಲ್ಯಾಪ್‌ಟಾಪ್‌ಗಳು ಇಂದಿನಿಂದಲೇ (ಜುಲೈ 13 ರಿಂದ) ಲೆನೊವೊ ಆನ್‌ಲೈನ್ ಸ್ಟೋರ್‌ ಮತ್ತು ವಿಶೇಷ ರಿಟೇಲ್‌ ಸ್ಟೋರ್‌ಗಳಲ್ಲಿ ಪ್ರಿ ಬುಕ್ಕಿಂಗ್‌ಗೆ ಲಭ್ಯವಾಗಲಿವೆ. ಅಲ್ಲದೆ ಜುಲೈ 23 ರಿಂದ ಅಮೆಜಾನ್‌ ಸೇರಿದಂತೆ ಇತರ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದ್ರೆ ಲೆನೊವೊ ಕಂಪೆನಿ ಪರಿಚಯಿಸಿರುವ ಹೊಸ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಲೀಜನ್ 5i

ಲೆನೊವೊ ಲೀಜನ್ 5i

ಲೆನೊವೊ ಲೀಜನ್ 5i ಲ್ಯಾಪ್‌ಟಾಪ್‌ 15.6 ಇಂಚಿನ WQHD ಐಪಿಎಸ್‌ ಡಿಸ್‌ಪ್ಲೇ ಹೊಂದಿದೆ. ಈ ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್‌ ಕೋರ್‌ i7-12700H ಪ್ರೊಸೆಸರ್‌ ಅನ್ನು ಹೊಂದಿದೆ. ಇದು 4.6GHz ವರೆಗೆ ಟರ್ಬೊ ಮಾಡಬಹುದಾದ ಅವಕಾಶವನ್ನು ಹೊಂದಿದೆ. ಲೆನೊವೊ ಲೀಜನ್ 5i ಎನ್‌ವಿಡಿಯಾ ಜಿಪೋರ್ಸ್‌ RTXTM 3060 ಗ್ರಾಫಿಕ್ಸ್‌ ಕಾರ್ಡ್‌ ಹೊಂದಿದೆ. ಜೊತೆಗೆ 6GB GDDR6 VRAM ಅನ್ನು ಹೊಂದಿರುತ್ತದೆ. ಇದು 32GB RAM ಮತ್ತು 512GB M.2 SSD ಸ್ಟೋರೇಜ್‌ ಹೊಂದಿದೆ. ಈ ಲ್ಯಾಪ್‌ಟಾಪ್‌ನ ಬೆಲೆ 1,44,990 ರೂ.ನಿಂದ ಆರಂಭವಾಗಲಿದೆ.

ಲೆನೊವೊ ಲೀಜನ್‌ 5i ಪ್ರೊ

ಲೆನೊವೊ ಲೀಜನ್‌ 5i ಪ್ರೊ

ಲೆನೊವೊ ಪ್ರದೇಶ 5i ಪ್ರೊ ಲ್ಯಾಪ್‌ಟಾಪ್‌ 16-ಇಂಚಿನ WQXGA IPS ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 2560×1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 12 ನೇ ತಲೆಮಾರಿನ ಇಂಟೆಲ್ ಕೋರ್ i7-12700H ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಅದು 4.6GHz ವರೆಗೆ ಟರ್ಬೊ ಮಾಡಬಹುದು. ಇನ್ನು ಈ ಲ್ಯಾಪ್‌ಟಾಪ್‌ 6GB GDDR6 VRAM ಜೊತೆಗೆ ಎನ್‌ವಿಡಿಯಾ ಜಿಪೋರ್ಸ್‌ RTXTM 3060 ಗ್ರಾಫಿಕ್ಸ್ ಕಾರ್ಡ್‌ ಅನ್ನು ಒಳಗೊಂಡಿದೆ. ಇದು 32GB ವರೆಗಿನ ಡ್ಯುಯಲ್-ಚಾನೆಲ್ DDR5 ಮೆಮೊರಿ ಮತ್ತು 1TB ವರೆಗೆ M.2 SSD ಸ್ಟೋರೇಜ್‌ ಹೊಂದಿದೆ.ಈ ಲ್ಯಾಪ್‌ಟಾಪ್‌ನ ಆರಂಭಿಕ ಬೆಲೆ 1,64,990ರೂ.ಆಗಿದೆ.

ಲೆನೊವೊ ಲೀಜನ್‌ ಸ್ಲಿಮ್‌ 7i

ಲೆನೊವೊ ಲೀಜನ್‌ ಸ್ಲಿಮ್‌ 7i

ಲೆನೊವೊ ಲೀಜನ್‌ ಸ್ಲಿಮ್‌ 7i ಲ್ಯಾಪ್‌ಟಾಪ್‌ 16-ಇಂಚಿನ WCXGA ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, 165Hz ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದೆ. ಇದು 12ನೇ ತಲೆಮಾರಿನ ಇಂಟೆಲ್‌ ಕೋರ್‌ i7-12700H ಪ್ರೊಸೆಸರ್‌ ಅನ್ನು ಹೊಂದಿದ್ದು, ಅದು 4.6GHz ವರೆಗೆ ಟರ್ಬೊ ಮಾಡಬಹುದು. ಈ ಲ್ಯಾಪ್‌ಟಾಪ್‌ 24GB DDR5 RAM ಮತ್ತು1TB ಸ್ಟೋರೇಜ್‌ ಹೊಂದಿದೆ. ಈ ಲ್ಯಾಪ್‌ಟಾಪ್‌ನ ಬೆಲೆ 1,50,990ರೂ.ಗಳಿಂದ ಆರಂಭವಾಗಲಿದೆ.

ಲೆನೊವೊ ಯೋಗ 7i

ಲೆನೊವೊ ಯೋಗ 7i

ಲೆನೊವೊ ಯೋಗ 7i ಲ್ಯಾಪ್‌ಟಾಪ್‌ 14-ಇಂಚಿನ 2.8K OLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು 12 ನೇ ತಲೆಮಾರಿನ ಇಂಟೆಲ್‌ ಕೋರ್‌ i7-1260P ಪ್ರೊಸೆಸರ್‌ ಅನ್ನು ಹೊಂದಿದ್ದು, ಅದು 4.7GHz ವರೆಗೆ ಟರ್ಬೊ ಮಾಡಬಹುದು. ಈ ಲ್ಯಾಪ್‌ಟಾಪ್‌ ಇಂಟೆಲ್ ಐರಿಸ್ Xe ಗ್ರಾಫಿಕ್ಸ್ ಅನ್ನು ಸಂಯೋಜಿಸುತ್ತದೆ. ಇದು 16GB LPDDR5 ಮೆಮೊರಿ ಮತ್ತು 1TB ವರೆಗೆ M.2 SSD ಸ್ಟೋರೇಜ್‌ ಹೊಂದಿದೆ. ಈ ಲ್ಯಾಪ್‌ಟಾಪ್‌ನ ಬೆಲೆ 1,14,990ರೂ.ಗಳಿಂದಪ್ರಾರಂಭವಾಗಲಿದೆ.

ಲೆನೊವೊ ಯೋಗ ಸ್ಲಿಮ್ 7i ಪ್ರೊ

ಲೆನೊವೊ ಯೋಗ ಸ್ಲಿಮ್ 7i ಪ್ರೊ

ಲೆನೊವೊ ಯೋಗ ಸ್ಲಿಮ್ 7i ಪ್ರೊ 14 ಇಂಚಿನ 2.8K IPS ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 2880×1800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಇಂಟೆಲ್ ಕೋರ್ i7-1260P ಪ್ರೊಸೆಸರ್‌ ಅನ್ನು ಹೊಂದಿದ್ದು, 4.7 Ghz ವರೆಗೆ ಟರ್ಬೊ ಮಾಡಬಹುದು. ಈ ಲ್ಯಾಪ್‌ಟಾಪ್‌ ಇಂಟೆಲ್ ಐರಿಸ್ Xe ಗ್ರಾಫಿಕ್ಸ್ ಅನ್ನು ಸಂಯೋಜಿಸುತ್ತದೆ. ಹಾಗೆಯೇ 16GB LPDDR5 RAM ಮತ್ತು 512GB M.2 ಸ್ಟೋರೇಜ್‌ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ನ ಬೆಲೆ 1,06,990 ರೂ.ಆಗಿದೆ.

ಲೆನೊವೊ ಯೋಗ 9i

ಲೆನೊವೊ ಯೋಗ 9i

ಲೆನೊವೊ ಯೋಗ 9i ಲ್ಯಾಪ್‌ಟಾಪ್‌ 14-ಇಂಚಿನ WQUXGA OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 3840×2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಇಂಟೆಲ್ ಕೋರ್ i7-1280P ಪ್ರೊಸೆಸರ್ ಅನ್ನು ಹೊಂದಿದ್ದು, 4.8GHz ವರೆಗೆ ಟರ್ಬೋ ಮಾಡಬಲ್ಲದು. ಈ ಲ್ಯಾಪ್‌ಟಾಪ್‌ ಕೂಡ ಇಂಟೆಲ್ ಐರಿಸ್ Xe ಗ್ರಾಫಿಕ್ಸ್ ಅನ್ನು ಸಂಯೋಜಿಸುತ್ತದೆ. ಇದು 16GB LPDDR5 ಮೆಮೊರಿ ಮತ್ತು M.2 SSD 1TB ಸ್ಟೋರೇಜ್‌ ಹೊಂದಿದೆ. ಈ ಲ್ಯಾಪ್‌ಟಾಪ್‌ನ ಆರಂಭಿಕ ಬೆಲೆ 1,69,990ರೂ.ಆಗಿದೆ.

ಲೆನೊವೊ ಐಡಿಯಾಪ್ಯಾಡ್‌ ಗೇಮಿಂಗ್ 3

ಲೆನೊವೊ ಐಡಿಯಾಪ್ಯಾಡ್‌ ಗೇಮಿಂಗ್ 3

ಲೆನೊವೊ ಐಡಿಯಾಪ್ಯಾಡ್‌ ಗೇಮಿಂಗ್ 3 ಲ್ಯಾಪ್‌ಟಾಪ್‌ 15.6-ಇಂಚಿನ ಫುಲ್‌ ಹೆಚ್‌ಡಿ IPS ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1920×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಇಂಟೆಲ್‌ ಕೋರ್‌ i7-12650H ಪ್ರೊಸೆಸರ್‌ ಬಲವನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಎನ್‌ವಿಡಿಯಾ ಜಿಪೋರ್ಸ್‌ RTXTM 3050 ಗ್ರಾಫಿಕ್ಸ್ ಅನ್ನು ಹೊಂದಿದೆ. ಹಾಗೆಯೇ 16GB DDR4-3200 RAM ಮತ್ತು 512GB M.2 SSD ಸ್ಟೋರೇಜ್‌ ಹೊಂದಿದೆ. ಇದರ ಬೆಲೆ 84,990 ರೂ.ಆಗಿದೆ.

Best Mobiles in India

English summary
Lenovo has Launched a new range of Yoga, Legion and IdeaPad laptops in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X