ಭಾರತದಲ್ಲಿ ಲೆನೊವೊ ಟ್ಯಾಬ್‌ M10 ಪ್ಲಸ್‌ (3rd Gen) ಬಿಡುಗಡೆ! ಅತ್ಯಾಕರ್ಷಕ ಫೀಚರ್ಸ್‌?

|

ಭಾರತದ ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಟ್ಯಾಬ್ಲೆಟ್‌ಗಳಿಗೆ ಉತ್ತಮ ಬೇಡಿಕೆಯಿದೆ. ಇದೇ ಕಾರಣಕ್ಕೆ ಹಲವು ಪ್ರತಿಷ್ಠಿತ ಬ್ರ್ಯಾಂಡ್‌ಗಳು ಆಕರ್ಷಕ ಟ್ಯಾಬ್‌ಗಳನ್ನು ಪರಿಚಯಿಸಿವೆ. ಸದ್ಯ ಇದೀಗ ಲೆನೊವೊ ಕಂಪೆನಿ ಹೊಸ ಲೆನೊವೊ ಟ್ಯಾಬ್‌ M10 ಪ್ಲಸ್‌ (3 ನೇ ತಲೆಮಾರಿನ) ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಟ್ಯಾಬ್ಲೆಟ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಡ್ಯುಯಲ್‌ ಟೋನ್‌ ಥೀಮ್‌ ಅನ್ನು ಹೊಂದಿದೆ.

ಲೆನೊವೊ

ಹೌದು, ಲೆನೊವೊ ಕಂಪೆನಿ ಭಾರತದಲ್ಲಿ ಹೊಸ ಲೆನೊವೊ ಟ್ಯಾಬ್‌ M10 ಪ್ಲಸ್‌ (3 ನೇ ತಲೆಮಾರಿನ) ಪರಿಚಯಿಸಿದೆ. ಈ ಟ್ಯಾಬ್‌ ಡಿಸ್‌ಪ್ಲೇ TÜV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಪ್ರಮಾಣೀಕರಣವನ್ನು ಪಡೆಯುತ್ತದೆ. ಇದು ಹಾನಿಕಾರಕ ನೀಲಿ ಬೆಳಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸ್ಟಾರ್ಮ್‌ ಗ್ರೇ ಮತ್ತು ಫ್ರಾಸ್ಟ್‌ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಬರಲಿದೆ. ಹಾಗಾದ್ರೆ ಲೊವೊವೊ ಟ್ಯಾಬ್‌ M10 ಪ್ಲಸ್‌ (3 ನೇ ತಲೆಮಾರಿನ) ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೆನೊವೊ ಟ್ಯಾಬ್‌ M10 ಪ್ಲಸ್‌

ಲೆನೊವೊ ಟ್ಯಾಬ್‌ M10 ಪ್ಲಸ್‌ (3 ನೇ ತಲೆಮಾರಿನ) 10.61 ಇಂಚಿನ 2K IPS LCD ಡಿಸ್‌ಪ್ಲೇ ಹೊಂದಿದೆ. ಇದು 2000×1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 15:9 ರಚನೆಯ ಅನುಪಾತ ಮತ್ತು 10-ಪಾಯಿಂಟ್ ಮಲ್ಟಿ-ಟಚ್ ಅನ್ನು ಪಡೆದಿದೆ. ಜೊತೆಗೆ 400 ನಿಟ್ಸ್‌ ಬ್ರೈಟ್‌ನೆಸ್‌ ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ TÜV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಪ್ರಮಾಣೀಕರಣವನ್ನು ಪಡೆಯಲಿದೆ. ಇದು ಹಾನಿಕಾರಕ ಬ್ಲೂ ಲೈಟ್‌ ಕಡಿಮೆ ಮಾಡಲು ಸಹಾಯ ಮಾಡಲಿದೆ.

ಲೆನೊವೊ ಟ್ಯಾಬ್‌

ಲೆನೊವೊ ಟ್ಯಾಬ್‌ ಡ್ಯುಯಲ್-ಟೋನ್ ಥೀಮ್ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 ಚಿಪ್‌ಸೆಟ್‌ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಲಾಂಗರ್‌ ಕಂಟೆಂಟ್‌ ಟೈಪ್ ಮಾಡಲು ಕೀಬೋರ್ಡ್‌ಗೆ ಲಗತ್ತಿಸಿದಾಗ ಬಳಕೆದಾರರು PC ತರಹದ UI ಅನ್ನು ಸಹ ಒದಗಿಸಬಹುದು. ಇದು ಸ್ಟಾರ್ಮ್ ಗ್ರೇ ಮತ್ತು ಫ್ರಾಸ್ಟ್ ಬ್ಲೂ ಬಣ್ಣಗಳಲ್ಲಿ ಬರುತ್ತದೆ.

ಲೆನೊವೊ ಟ್ಯಾಬ್

ಲೆನೊವೊ ಟ್ಯಾಬ್ ಆಪ್ಟಿಮೈಸ್ಡ್ ರೀಡಿಂಗ್ ಮೋಡ್ ಸೆಟ್ಟಿಂಗ್‌ಗಳು ಮತ್ತು ಐಚ್ಛಿಕ ಫೋಲಿಯೊ ಕೇಸ್ ಅನ್ನು ಪಡೆಯುತ್ತದೆ. ಇದು ಗೂಗಲ್ ಕಿಡ್ಸ್ ಸ್ಪೇಸ್ ಅನ್ನು ಬೆಂಬಲಿಸುವ ಭಾರತದ ಮೊದಲ ಟ್ಯಾಬ್‌ ಆಗಿದೆ. ಇನ್ನು ಗೂಗಲ್‌ ಕಿಡ್ಸ್‌ ಸ್ಪೇಸ್‌ ಎಂಬುದು ಮಕ್ಕಳಿಗಾಗಿ ಮೀಸಲಾದ ಮೋಡ್‌ ಆಗಿದ್ದು, ಇದು ಮಕ್ಕಳನ್ನು ಅನ್ವೇಷಿಸಲು, ರಚಿಸಲು ಮತ್ತು ಬೆಳೆಯಲು ಸಹಾಯ ಮಾಡುವ ಕಂಟೆಂಟ್‌ ಅನ್ನು ಒದಗಿಸಲಿದೆ. ಅಂದರೆ ನಿಮ್ಮ ಮಗು ಕಿಡ್ಸ್ ಸ್ಪೇಸ್ ಅನ್ನು ತೆರೆದಾಗ, ಪುಸ್ತಕಗಳು, ಅಪ್ಲಿಕೇಶನ್‌ಗಳು ಮತ್ತು ವೀಡಿಯೊಗಳ ರೂಪದಲ್ಲಿ ಆಯ್ಕೆಮಾಡಿದ ಕಂಟೆಂಟ್‌ ಲೈಬ್ರರಿಯನ್ನು ಪ್ರಸ್ತುತ ಪಡಿಸಲಿದೆ.

ಟ್ಯಾಬ್

ಇನ್ನು ಈ ಟ್ಯಾಬ್ M10 ಪ್ಲಸ್ (3 ನೇ ಜನ್) ಲೆನೊವೊ Precision Pen 2 ಅನ್ನು ಬೆಂಬಲಿಸುತ್ತದೆ. ಇದು ಡಾಲ್ಬಿ ಅಟ್ಮಾಸ್ ಟೆಕ್ನಾಲಜಿಯೊಂದಿಗೆ ಹೊಂದುವಂತೆ ಅದರ 4 ಸ್ಟಿರಿಯೊ ಸ್ಪೀಕರ್‌ಗಳಿಂದ ಸುತ್ತುವರಿದ ಆಡಿಯೊವನ್ನು ಉತ್ಪಾದಿಸುತ್ತದೆ. ಇನ್ನು ಈ ಟ್ಯಾಬ್‌ M10 ಪ್ಲಸ್ ವೈಫೈ ಓನ್ಲಿ ಮಾಡೆಲ್‌ಗೆ ಭಾರತದಲ್ಲಿ ಬೆಲೆ 19,999ರೂ. ಹೊಂದಿದೆ. ಈ ಟ್ಯಾಬ್‌ M10 ಪ್ಲಸ್ LTE ರೂಪಾಂತರದ ಆಯ್ಕೆಯ ಬೆಲೆ 21,999ರೂ. ಆಗಿದೆ. ಇದನ್ನು ಲೆನೊವೊ.ಕಾಮ್‌ ಮತ್ತು ಅಮೆಜಾನ್‌.ಇನ್‌ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Lenovo has launched an Android tablet Tab M10 Plus (3rd Gen) in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X