ಲೆನೊವೊ ಕಂಪೆನಿಯ K ಸರಣಿ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಬಹಿರಂಗ; ಆಕರ್ಷಕ ಫೀಚರ್ಸ್‌?

|

ಲೆನೊವೊ ವಿಶ್ವದ ಪ್ರಮುಖ ಗ್ಯಾಜೆಟ್‌ ತಯಾರಿಕಾ ಕಂಪೆನಿಗಳಲ್ಲಿ ಪ್ರಮುಖವಾಗಿದೆ. ಅದರಲ್ಲೂ ವಿಶ್ವದ ಅತಿದೊಡ್ಡ ಪಿಸಿ ಮಾರಾಟಗಾರರಲ್ಲಿ ಮೇಲುಗೈ ಸಾಧಿಸಿದೆ. ಇದರ ನಡುವೆ ಸ್ಮಾರ್ಟ್‌ಫೋನ್‌ ವಿಭಾಗದಲ್ಲೂ ಸಹ ಜನಪ್ರಿಯತೆ ಗಳಿಸಿಕೊಂಡಿರುವುದು ಗಮನಾರ್ಹ. ಈ ಎಲ್ಲಾ ಬೆಳವಣಿಗೆ ನಡುವೆ ಲೆನೊವೊ ಬಜೆಟ್‌ ಬೆಲೆಯಲ್ಲಿ K ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹಾಗೆಯೇ ಈ ಫೋನ್‌ಗಳನ್ನು ಗೂಗಲ್ ಪ್ಲೇ ಕನ್ಸೋಲ್‌ನಲ್ಲಿ ಪಟ್ಟಿ ಮಾಡಲಾಗಿದೆ.

ಲೆನೊವೊ

ಹೌದು, ಲೆನೊವೊ K ಸರಣಿಯ ಸ್ಮಾರ್ಟ್‌ಫೋನ್‌ಗಳಾದ ಲೆನೊವೊ K14 (Lenovo K14) ಹಾಗೂ ಲೆನೊವೊ K14 ನೋಟ್ (Lenovo K14 Note ) ಸ್ಮಾರ್ಟ್‌ಫೋನ್ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಫೋನ್‌ಗಳು ಮರುಬ್ಯಾಡ್ಜ್ ಮಾಡಲಾದ ಮೊಟೊರೊಲಾ ಫೋನ್‌ಗಳಾಗಿರಬಹುದು ಎಂದು ಊಹಿಸಲಾಗಿದೆ. ಅದಾಗ್ಯೂ ಲೀಕ್‌ ಆದ ಮಾಹಿತಿ ಪ್ರಕಾರ ಈ ಫೋನ್‌ಗಳ ಪ್ರಮುಖ ಫೀಚರ್ಸ್‌ ಏನು?, ಪ್ರೊಸೆಸರ್‌ ಯಾವುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಲೆನೊವೊ K14 ನೋಟ್‌ ಸ್ಮಾರ್ಟ್‌ಫೋನ್‌ ಫುಲ್‌ HD+ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 2400×1080 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ ಮತ್ತು ಈ ಫೋನ್ 420dpi ಅನ್ನು ಬೆಂಬಲಿಸುತ್ತದೆ. ಹಾಗೆಯೇ ಲೆನೋವೊ K14 ಸ್ಮಾರ್ಟ್‌ಫೋನ್‌ HD+ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 1200×720 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಇನ್ನು ಈ ಫೋನ್‌ ವಾಟರ್‌ಡ್ರಾಪ್ ನಾಚ್ ಶೈಲಿಯಲ್ಲಿ ಡಿಸ್‌ಪ್ಲೇ ರಚನೆ ಆಯ್ಕೆ ಪಡೆದಿದ್ದು 280dpi ಅನ್ನು ಬೆಂಬಲಿಸುತ್ತದೆ ಎನ್ನಲಾಗಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಲೆನೊವೊ K14 ನೋಟ್‌ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ ಹಿಲಿಯೋ G70 ಚಿಪ್‌ಸೆಟ್ ನಿಂದ ಕಾರ್ಯನಿರ್ವಹಿಸಬಹುದು ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್‌ 11 ನಲ್ಲಿ ರನ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇನ್ನು ಈ ಫೋನ್‌ 4GB RAM ಹಾಗೂ 128 GB ಇಂಟರ್ನಲ್‌ ಸ್ಟೋರೇಜ್ ಆಯ್ಕೆ ಪಡೆದುಕೊಂಡಿರಲಿದೆ.

ಲೆನೊವೊ K14

ಲೆನೊವೊ K14 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಯುನಿಸೊಕ್ T606 SoC ನಲ್ಲಿ (2x ARM ಕಾರ್ಟೆಕ್ಸ್-A75 + 6x ARM ಕಾರ್ಟೆಕ್ಸ್-A55) ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದ್ದು, ARM ಮಾಲಿ G57 GPU ಬಲ ಪಡೆದುಕೊಂಡಿರಲಿದೆ ಎನ್ನಲಾಗಿದೆ. ಹಾಗೆಯೇ 2GB RAM ಹಾಗೂ 32 GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆಯಲಿದ್ದು, ಇತರೆ ವೇರಿಯಂಟ್‌ನಲ್ಲೂ ಈ ಫೋನ್‌ ಲಭ್ಯವಾಗಲಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಲೆನೊವೊ K14 ನೋಟ್‌ ಸ್ಮಾರ್ಟ್‌ಫೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ರಚನೆ ಪಡೆಯಲಿ ಎನ್ನಲಾಗುತ್ತಿದ್ದು, ಇದರಲ್ಲಿ 48 ಮೆಗಾಪಿಕ್ಸೆಲ್‌ ಪ್ರಮುಖ ಕ್ಯಾಮೆರಾ ಹಾಗೂ 13 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾದ ಆಯ್ಕೆ ಇರಲಿದೆ ಎಂದು ಹೇಳಲಾಗುತ್ತಿದೆ. ಲೆನೊವೊ K14 ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್‌ + 2 ಮೆಗಾಪಿಕ್ಸೆಲ್‌ + 2 ಮೆಗಾಪಿಕ್ಸೆಲ್‌ ರಚನೆಯ ಟ್ರಿಪಲ್‌ ಕ್ಯಾಮೆರಾ ರಚನೆ ಜೊತೆಗೆ 8 ಮೆಗಾಪಿಕ್ಸೆಲ್‌ ಸೆಲ್ಪಿ ಕ್ಯಾಮೆರಾ ಆಯ್ಕೆ ಪಡೆಯಲಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಲೆನೊವೊ K14 ನೋಟ್‌ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 18W ಫಾಸ್ಟ್‌ ಚಾರ್ಜಿಂಗ್‌ ಬೆಂಬಲ ಪಡೆದಿದೆ ಎನ್ನಲಾಗಿದೆ. ಹಾಗೆಯೇ ಲೆನೊವೊ K14 ಫೋನ್ ಸಹ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿರಲಿದೆ.

ಬೆಲೆ ಎಷ್ಟಿರಬಹುದು?

ಬೆಲೆ ಎಷ್ಟಿರಬಹುದು?

ಈ ಸ್ಮಾರ್ಟ್‌ಫೋನ್‌ಗಳ ಅನಾವರಣವಾಗಲಿ ಅಥವಾ ಇನ್ಯಾವುದೇ ಮಾಹಿತಿಯನ್ನು ಲೆನೊವೋ ಬಹಿರಂಗಪಡಿಸಿಲ್ಲ. ಆದರೂ ಲೀಕ್‌ ಮಾಹಿತಿ ಪ್ರಕಾರ ಲೆನೊವೊ K14 ನೋಟ್‌ ಸ್ಮಾರ್ಟ್‌ಫೋನ್‌ 11,000 ರೂ. ಗಳ ಆಸುಪಾಸಿನಲ್ಲಿ ಲಭ್ಯವಾಗಲಿದ್ದು, ಲೆನೊವೊ K14 ಸ್ಮಾರ್ಟ್‌ಫೋನ್ 9,000ರೂ. ಗಳ ಅಂದಾಜು ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಲೆನೊವೊ K14 ಪ್ಲಸ್‌

ಲೆನೊವೊ K14 ಪ್ಲಸ್‌

ಈಗ ಘೋಷಣೆ ಮಾಡಲಾದ ಸ್ಮಾರ್ಟ್‌ಫೋನ್‌ ಗಳು ಸಹ ಮರುಬ್ರಾಂಡೆಡ್ ಆವೃತ್ತಿಯಾಗಿ ಎಂದು ಮಾಹಿತಿ ಹರಿದಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಈ ಹಿಂದೆ ಅಂದರೆ ಈ ವರ್ಷದ ಫೆಬ್ರವರಿಯಲ್ಲಿ ಮೊಟೊ E40 ನ ಮರುಬ್ರಾಂಡೆಡ್ ಆವೃತ್ತಿಯಾಗಿ ಲೆನೊವೊ K14 ಪ್ಲಸ್‌ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲಾಗಿತ್ತು. ಈ ಫೋನ್ 6.5 ಇಂಚಿನ ಹೆಚ್‌ಡಿ+ ಐಪಿಎಸ್‌ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದ್ದು, ಹಾಗೆಯೇ ಆಕ್ಟಾ ಕೋರ್ ಯುನಿಸೊಕ್ T700 SoC ಪ್ರೊಸೆಸರ್‌ನ ಬಲ ಪಡೆದುಕೊಂಡಿತ್ತು.

Best Mobiles in India

Read more about:
English summary
Lenovo K14, K14 Note Spotted On Google Play Console.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X