ವಾಲ್‌ಮಾರ್ಟ್ ಸ್ವಾಧೀನದ ನಂತರ ಫ್ಲಿಪ್‌ಕಾರ್ಟ್ ವ್ಯವಹಾರ ಹೇಗಿರಲಿದೆ ಗೊತ್ತಾ?

  ಭಾರತದ ಪ್ರಮುಖ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಅಮೆರಿಕಾದ ವಾಲ್‌ಮಾರ್ಟ್‌ನ ಸ್ವಾಧೀನಕ್ಕೆ ಒಳಪಟ್ಟನಂತರ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬ ಕುತೋಹಲಕ್ಕೆ ತೆರೆಬಿದ್ದಿದೆ. 'ವಾಲ್‌ಮಾರ್ಟ್‌ನ ಸ್ವಾಧೀನಕ್ಕೆ ಒಳಪಡುವುದರಿಂದ ಫ್ಲಿಪ್‌ಕಾರ್ಟ್‌ನ ಕಾರ್ಯನಿರ್ವಹಣಾ ಸ್ವರೂಪದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ' ಎಂದು ಸಂಸ್ಥೆಯ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಅವರು ಸರಕುಗಳ ಮಾರಾಟಗಾರರಿಗೆ ಭರವಸೆ ನೀಡಿದ್ದಾರೆ.

  ವಾಲ್‌ಮಾರ್ಟ್ ಜೊತೆಗೆ ಫ್ಲಿಪ್‌ಕಾರ್ಟ್ ಒಪ್ಪಂದ ಜಾರಿಗೆ ಬಂದ ನಂತರವೂ ಎರಡೂ ಸಂಸ್ಥೆಗಳು ತಮ್ಮ ತಮ್ಮ ಬ್ರ್ಯಾಂಡ್ ಅಸ್ತಿತ್ವವನ್ನು ಪ್ರತ್ಯೇಕವಾಗಿ ಉಳಿಸಿಕೊಳ್ಳಲಿವೆ. ದೇಶದಾದ್ಯಂತ ಇರುವ ಗ್ರಾಹಕರನ್ನು ತಲುಪುವ ಮೂಲಕ ಅಚ್ಚುಮೆಚ್ಚಿನ ಆನ್‌ಲೈನ್‌ ಮಾರಾಟ ತಾಣವಾಗಿ ಫ್ಲಿಪ್‌ಕಾರ್ಟ್ ಮುಂದುವರೆಯಲಿದೆ. ಸರಕುಗಳ ಮಾರಾಟಗಾರರ ಜೊತೆಗೆ ಫ್ಲಿಪ್‌ಕಾರ್ಟ್ ಉತ್ತಮ ಸಂಭಂಧ ಮುಂದುವರೆಯಲಿದೆ ಎಂದು ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

  ವಾಲ್‌ಮಾರ್ಟ್ ಸ್ವಾಧೀನದ ನಂತರ ಫ್ಲಿಪ್‌ಕಾರ್ಟ್ ವ್ಯವಹಾರ ಹೇಗಿರಲಿದೆ ಗೊತ್ತಾ?

  ಫ್ಲಿಪ್‌ಕಾರ್ಟ್‌ನಲ್ಲಿನ ಸರಕುಗಳ ಮಾರಾಟಗಾರರಿಗೆ ಹೆಚ್ಚು ಲಾಭದಾಯಕವಾಗುವ ರೀತಿಯಲ್ಲಿ ಇರುವುದಕ್ಕೆ ಸಂಸ್ಥೆಯು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ. ವಾಲ್‌ಮಾರ್ಟ್ ಜತೆಯಾಗುವುದರಿಂದ ಈ ಕಾರ್ಯಕ್ಕೆ ಈಗ ಇನ್ನಷ್ಟು ತೀವ್ರತೆ ಬರಲಿದೆ. ತನ್ನ ಮಾರಾಟಗಾರರು ಹೆಚ್ಚು ಲಾಭ ಗಳಿಸಬೇಕು ಎಂಬುದೇ ಸಂಸ್ಥೆಯ ಆಶಯವಾಗಿದೆ. ಅವರಿಗೆ ಬೇಕಾದ ಎಲ್ಲ ಬಗೆಯ ಬೆಂಬಲವನ್ನು ಮುಂದುವರೆಸಲಾಗುವುದು ಎಂದು ಅವರು ಹೇಳಿದ್ದಾರೆ.

  ವಾಲ್‌ಮಾರ್ಟ್ ಸ್ವಾಧೀನದ ನಂತರ ಫ್ಲಿಪ್‌ಕಾರ್ಟ್ ವ್ಯವಹಾರ ಹೇಗಿರಲಿದೆ ಗೊತ್ತಾ?

  ತಂತ್ರಜ್ಞಾನ, ಪೂರೈಕೆ ಮತ್ತು ವಹಿವಾಟು ಹೆಚ್ಚಳ ಉದ್ದೇಶದಿಂದ ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಾಗುವುದು. ಆನ್‌ಲೈನ್‌ ಖರೀದಿ ಮಾರುಕಟ್ಟೆಗೆ ಇನ್ನಷ್ಟು ಗ್ರಾಹಕರನ್ನು ಸೆಳೆಯಲು ಮತ್ತು ಸರಕುಗಳ ಖರೀದಿಯಲ್ಲಿ ಅವರ ಸರಾಸರಿ ವೆಚ್ಚ ಹೆಚ್ಚಿಸಲು ಗಮನ ನೀಡಲಾಗುವುದು ಎಂದು ಕೃಷ್ಣಮೂರ್ತಿ ಅವರು ಮಾರಾಟಗಾರರಿಗೆ ಕಳಿಸಿದ ಇಮೇಲ್‌ನಲ್ಲಿ ತಿಳಿಸಿದ್ದಾರೆ. ಹಾಗಾಗಿ, ಇಲ್ಲಿಯವರೆಗೂ ಭಾರೀ ಕುತೋಹಲ ಹುಟ್ಟಿಸಿದ್ದ ಫ್ಲಿಪ್‌ಕಾರ್ಟ್ ನಡೆ ಈಗ ಬಹಿರಂಗವಾಗಿದೆ.

  ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ

  ಓದಿರಿ: ಫೇಸ್‌ಬುಕ್‌ನಲ್ಲಿ ಈಗ ಈ ತಪ್ಪು ಮಾಡಿದರೆ ಜೈಲು ಸೇರುವುದು ಖಚಿತ!!

  English summary
  the Indian ecommerce giant’s chief executive is back to keeping his eye on the ball and making sure his teams are focused on taking on primary rival Amazon India. . to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more