ಗಿನ್ನಿಸ್‌ ದಾಖಲೆ ಪುಟ ಸೇರಿದ 'ಎಲ್‌ಜಿ' ಹೊಸ ಗ್ರಾಮ್ ಲ್ಯಾಪ್‌ಟಾಪ್‌ ಸರಣಿ!

|

ಪ್ರತಿಷ್ಠಿತ ಟೆಕ್‌ ಕಂಪನಿಗಳಲ್ಲಿ ಒಂದಾಗಿರುವ ಎಲ್‌ಜಿ, ಈಗಾಗಲೇ ವಿವಿಧ ಗೃಹ ಉತ್ಪನ್ನಗಳು ಮತ್ತು ಗ್ಯಾಜೆಟ್ಸ್‌ ಉತ್ಪನ್ನಗಳ ಮೂಲಕ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕಂಪೆನಿಯು ಇದೀಗ ತನ್ನ ಗ್ಯಾಜೆಟ್‌ ಕೆಟಗರಿಗೆ ಈಗ ಹೊಸದಾಗಿ ಮೂರು ಲ್ಯಾಪ್‌ಟಾಪ್‌ಗಳನ್ನು ಸೇರಿಸಿದ್ದು, ಈ ಲ್ಯಾಪ್‌ಟಾಪ್‌ಗಳು ಹಲವು ವಿಶೇಷ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿವೆ.

ಗಿನ್ನಿಸ್‌ ದಾಖಲೆ ಪುಟ ಸೇರಿದ 'ಎಲ್‌ಜಿ' ಹೊಸ ಗ್ರಾಮ್ ಲ್ಯಾಪ್‌ಟಾಪ್‌ ಸರಣಿ!

ಹೌದು, ಎಲ್‌ಜಿ ಸಂಸ್ಥೆಯು ಇದೆ ಅಗಷ್ಟ್ 23ರಂದು ದೇಶಿಯ ಮಾರುಕಟ್ಟೆಗೆ ಗ್ರಾಮ್ ಸರಣಿಯಲ್ಲಿ ಮೂರು ಹೊಸ ಲ್ಯಾಪ್‌ಟಾಪ್‌ಗಳನ್ನು ಲಾಂಚ್ ಮಾಡಿದ್ದು, ಅವು ಗ್ರಾಮ್ 17, ಗ್ರಾಮ್ 15 ಮತ್ತು ಗ್ರಾಮ್ 14 ಹೆಸರನ್ನು ಹೊಂದಿವೆ. ಮುಂದಿನ ವಾರ ಈ ಮೂರು ಲ್ಯಾಪ್‌ಟಾಪ್‌ಗಳ ಸೇಲ್‌ ಆರಂಭವಾಗಲಿದ್ದು, ಗ್ರಾಹಕರು ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಜಾಲತಾಣದಲ್ಲಿ ಖರೀದಿಸಬಹುದಾಗಿದೆ.

ಗಿನ್ನಿಸ್‌ ದಾಖಲೆ ಪುಟ ಸೇರಿದ 'ಎಲ್‌ಜಿ' ಹೊಸ ಗ್ರಾಮ್ ಲ್ಯಾಪ್‌ಟಾಪ್‌ ಸರಣಿ!

ಎಲ್‌ಜಿ ಗ್ರಾಮ್ 17 ಲ್ಯಾಪ್‌ಟಾಪ್‌ ತುಂಬಾ ಹರುರಾಗಿದ್ದು, ಕೇವಲ 1 ಕೆಜಿ ತೂಕವನ್ನು ಪಡೆದಿದೆ. ಈ ಮೂಲಕ ಅತೀ ಹಗುರ ಲ್ಯಾಪ್‌ಟಾಪ್‌ಗಳ ಕೆಟಗರಿಯಲ್ಲಿ ಗಿನ್ನಿಸ್‌ ದಾಖಲೆ ಪುಟ ಸೇರಿದೆ. ಹಾಗೆಯೇ ಇನ್ನುಳಿದ ಎರಡು ಲ್ಯಾಪ್‌ಟಾಪ್‌ಗಳು ಸಹ ಕಡಿಮೆ ತೂಕವನ್ನು ಹೊಂದಿವೆ. ಹಾಗಾದರೇ ಎಲ್‌ ಸಂಸ್ಥೆಯ ಗ್ರಾಮ್‌ ಸರಣಿಯ ಹೊಸ ಲ್ಯಾಪ್‌ಟಾಪ್‌ಗಳ ಇತರೆ ಫೀಚರ್ಸ್‌ಗಳ ಕುರಿತು ಮುಂದೆ ನೋಡೋಣ ಬನ್ನಿರಿ.

<strong>ಓದಿರಿ : ಹೊಸ 'ಆಂಡ್ರಾಯ್ಡ್‌ 10 ಓಎಸ್'ನಲ್ಲಿ ಲಭ್ಯವಾಗುವ ಫೀಚರ್ಸ್‌ ಯಾವುವು ಗೊತ್ತಾ?</strong>ಓದಿರಿ : ಹೊಸ 'ಆಂಡ್ರಾಯ್ಡ್‌ 10 ಓಎಸ್'ನಲ್ಲಿ ಲಭ್ಯವಾಗುವ ಫೀಚರ್ಸ್‌ ಯಾವುವು ಗೊತ್ತಾ?

ಗ್ರಾಮ್‌ 17 ಲ್ಯಾಪ್‌ಟಾಪ್

ಗ್ರಾಮ್‌ 17 ಲ್ಯಾಪ್‌ಟಾಪ್

17 ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿರುವ ಈ ಲ್ಯಾಪ್‌ಟಾಪ್ ಡಿಸ್‌ಪ್ಲೇಯು 2560 x 1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದ್ದು, ಡಿಸ್‌ಪ್ಲೇಯ ಅನುಪಾತವು 16:10 ಆಗಿದೆ. 8ನೇ ತಲೆಮಾರಿನ ಇಂಟೆಲ್ ಕೋರ್ i7 ಪ್ರೊಸೆಸರ್‌ ಶಕ್ತಿಯನ್ನು ಪಡೆದಿದ್ದು, 8GB DDR4 RAM ಮತ್ತು 512 GB ಎಸ್‌ಎಸ್‌ಡಿ ಸ್ಟೋರೇಜ್ ಆಯ್ಕೆ ಇದೆ. ಬ್ಯಾಟರಿ ಸಾಮರ್ಥ್ಯವು 72 WHr ಆಗಿದ್ದು, ಸುಮಾರು 19.5 ಗಂಟೆ ಬ್ಯಾಕ್‌ಅಪ್ ಒದಗಿಸಲಿದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಇದೆ.

ಗ್ರಾಮ್‌ 15 ಲ್ಯಾಪ್‌ಟಾಪ್

ಗ್ರಾಮ್‌ 15 ಲ್ಯಾಪ್‌ಟಾಪ್

15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಈ ಲ್ಯಾಪ್‌ಟಾಪ್ 1099 ಗ್ರಾಮ್‌ ತೂಕವನ್ನು ಪಡೆದಿದೆ. 8ನೇ ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸೆಸರ್‌ ಶಕ್ತಿಯನ್ನು ಪಡೆದಿದ್ದು, 8GB DDR4 ಮೆಮೊರಿ 256 GB ಎಸ್‌ಎಸ್‌ಡಿ ಸ್ಟೋರೇಜ್ ಆಯ್ಕೆ ಇದೆ. ಹಾಗೆಯೇ ಥಂಡರ್‌ಬೋಲ್ಟ್‌ 3 ತಂತ್ರಜ್ಞಾನವನ್ನು ಹೊಂದಿದ್ದು, ಟ್ರಾನ್ಸ್‌ಫರ್‌ ಸ್ಪೀಡ್‌ 40GBs ಆಗಿದೆ. 21.5 ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದೆ.

<strong>ಓದಿರಿ : ಕೇಬಲ್ ಮತ್ತು ಡಿ2ಎಚ್‌ ಬ್ಯುಸಿನೆಸ್‌ಗೆ ಕಂಟಕವಾದ 'ನೆಟ್‌ಫ್ಲಿಕ್ಸ್‌'!</strong>ಓದಿರಿ : ಕೇಬಲ್ ಮತ್ತು ಡಿ2ಎಚ್‌ ಬ್ಯುಸಿನೆಸ್‌ಗೆ ಕಂಟಕವಾದ 'ನೆಟ್‌ಫ್ಲಿಕ್ಸ್‌'!

ಗ್ರಾಮ್‌ 14 ಲ್ಯಾಪ್‌ಟಾಪ್

ಗ್ರಾಮ್‌ 14 ಲ್ಯಾಪ್‌ಟಾಪ್

ಎಲ್‌ಜಿ ಗ್ರಾಮ್‌ 14 ಲ್ಯಾಪ್‌ಟಾಪ್ 14 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಈ ಲ್ಯಾಪ್‌ಟಾಪ್ 999 ಗ್ರಾಮ್‌ ತೂಕವನ್ನು ಪಡೆದಿದೆ. 8ನೇ ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸೆಸರ್‌ ಶಕ್ತಿಯನ್ನು ಪಡೆದಿದ್ದು, 8GB DDR4 ಮೆಮೊರಿ 256 GB ಎಸ್‌ಎಸ್‌ಡಿ ಸ್ಟೋರೇಜ್ ಆಯ್ಕೆ ಇದೆ. ಹಾಗೆಯೇ ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯವಿದ್ದು, 21.5 ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಜನಪ್ರಿಯ ಎಲ್‌ಜಿ ಗ್ರಾಮ್ ಲ್ಯಾಪ್‌ಟಾಪ್‌ ಸರಣಿಯ, ಗ್ರಾಮ್‌ 17 ಲ್ಯಾಪ್‌ಟಾಪ್ ಬೆಲೆಯು 1,26,000ರೂ.ಗಳು ಆಗಿದ್ದು, ಗ್ರಾಮ್‌ 15 ಲ್ಯಾಪ್‌ಟಾಪ್ ಬೆಲೆಯು 98,000ರೂ.ಗಳು ಆಗಿದೆ. ಇನ್ನು ಗ್ರಾಮ್‌ 14 ಲ್ಯಾಪ್‌ಟಾಪ್ 95,000ರೂ.ಗಳಿಗೆ ದೊರೆಯಲಿದೆ. ಮುಂದಿನ ವಾರ ಮೊದಲ ಸೇಲ್ ಆರಂಭವಾಗಲಿದ್ದು, ಅಮೆಜಾನ್ ಇ ಕಾಮರ್ಸ್‌ ಜಾಲತಾಣದಲ್ಲಿ ಖರೀದಿಗೆ ಲಭ್ಯವಾಗಲಿದೆ.

<strong>ಓದಿರಿ : ಅಗ್ಗದ ಬೆಲೆಯಲ್ಲಿ 'ಮೊಟೊರೊಲಾ ಒನ್ ಆಕ್ಷನ್' ಸ್ಮಾರ್ಟ್‌ಫೋನ್ ಬಿಡುಗಡೆ!</strong>ಓದಿರಿ : ಅಗ್ಗದ ಬೆಲೆಯಲ್ಲಿ 'ಮೊಟೊರೊಲಾ ಒನ್ ಆಕ್ಷನ್' ಸ್ಮಾರ್ಟ್‌ಫೋನ್ ಬಿಡುಗಡೆ!

Best Mobiles in India

English summary
LG launched three premium-grade laptops On the 23rd of August. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X