ಭಾರತದಲ್ಲಿ ಎಲ್‌ಜಿ OLED 48CX 4K TV ಬಿಡುಗಡೆ! ಬೆಲೆ ಎಷ್ಟು?

|

ಎಲೆಕ್ಟ್ರಾನಿಕ್ಸ್‌ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪೆನಿ ಸ್ಮಾರ್ಟ್‌ಟಿವಿ ವಲಯದಲ್ಲಿಯೂ ಜನಪ್ರಿಯತೆಯನ್ನು ಪಡದುಕೊಂಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿ ಗ್ರಾಹಕರ ಮನಗೆದ್ದಿದೆ. ಸದ್ಯ ಇದೀಗ ಎಲ್‌ಜಿ ಕಂಪೆನಿ ಹೊಸ OLED 48CX TV ಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಗೇಮರುಗಳಿಗಾಗಿ ಮತ್ತು ಮೂವಿ ಬಫ್‌ಗಳನ್ನು ಗುರಿಯಾಗಿರಿಸಿಕೊಂಡಿದೆ. ಇನ್ನು 48 ಇಂಚಿನ 4ಕೆ ವೆಬ್‌ಓಎಸ್ ಆಧಾರಿತ ಈ ಸ್ಮಾರ್ಟ್ ಟಿವಿ 1,99,990 ರೂ. ಬೆಲೆಯನ್ನು ಪಡೆದುಕೊಂಡಿದೆ.

LG OLED 48CX TV

ಹೌದು, ಎಲ್‌ಜಿ ಕಂಪೆನಿ ಹೊಸ LG OLED 48CX TVಯನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿ ಗೇಮಿಂಗ್‌ಗೆ ಅನುಕೂಲವಾಗಿರುವಂತೆ ವಿನ್ಯಾಸಗೊಂಡಿದೆ. ಇದು ಎನ್ವಿಡಿಯಾ ಜಿ-ಸಿಂಕ್ ಮತ್ತು ಗೇಮಿಂಗ್‌ಗೆ ಮೀಸಲಾಗಿರುವ ಇತರ ಫೀಚರ್ಸ್‌ಗಳಿಂದ ನಿಯಂತ್ರಿಸಲ್ಪಡುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿ ಅಲ್ಫಾ 9 ಜನ್‌ 3 ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಲ್‌ಜಿ OLED 48CX TV

ಎಲ್‌ಜಿ OLED 48CX TV 48 ಇಂಚಿನ ಗಾತ್ರದಲ್ಲಿ ಬರುವ ಮೊದಲ ಗೇಮಿಂಗ್ ಮಾನಿಟರ್ ಆಗಿದೆ. ಈ ದೊಡ್ಡ ಗಾತ್ರವು ಹೊಸ ಮತ್ತು ಹಳೆಯ ಗೇಮರುಗಳಿಗಾಗಿ ಬಿಗ್‌ ಸ್ಕ್ರೀನ್‌ ಮತ್ತು ತಲ್ಲೀನಗೊಳಿಸುವ ಗೇಮಿಂಗ್ ಅನುಭವವನ್ನು ನೀಡುವ ಮೂಲಕ ಸಹಾಯ ಮಾಡುತ್ತದೆ. ಇನ್ನು ಗೇಮಿಂಗ್ ಮಾಡುವಾಗ ಸ್ಪಂದಿಸುವ ಡಿಸ್‌ಪ್ಲೇ ಔಟ್‌ಪುಟ್ ಅನ್ನು ಬೆಂಬಲಿಸಲು ಎನ್ವಿಡಿಯಾ ಜಿ-ಸಿಂಕ್ ಅನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಯಾವುದೇ ರೀತಿಯ ತೊದಲುವಿಕೆ ಇಲ್ಲದೆ ವಿಶ್ವಾಸಾರ್ಹ ಅನುಭವವನ್ನು ನೀಡುತ್ತದೆ ಎಂದು ಎಲ್‌ಜಿ ಸಂಸ್ಥೆ ಹೇಳಿಕೊಂಡಿದೆ.

ಎಲ್‌ಜಿ OLED 48CX TV

ಇನ್ನು ಎಲ್‌ಜಿ OLED 48CX TVಯು ಎಲ್‌ಜಿಯ ಆಲ್ಫಾ 9 ಜನ್ 3 ಪ್ರೊಸೆಸರ್ ಅನ್ನು ಸಹ ಹೊಂದಿದೆ. ಇದು ಎಐ ಅಕೌಸ್ಟಿಕ್ ಟ್ಯೂನಿಂಗ್ ಮೂಲಕ ಸಮತೋಲಿತ ಸೌಂಡ್‌ ಎಫೆಕ್ಟ್‌ ಅನ್ನು ನೀಡುತ್ತದೆ. ಅಲ್ಲದೆ ಹೆಚ್ಚಿನ ಫ್ರೇಮ್ ರೇಟ್‌, VRR (ವೇರಿಯಬಲ್ ರಿಫ್ರೆಶ್ ರೇಟ್), ALLM(ಆಟೋ ಲೋ ಲ್ಯಾಟೆನ್ಸಿ ಮೋಡ್ ) ಮತ್ತು eARC (ವರ್ಧಿತ ಆಡಿಯೊ ರಿಟರ್ನ್ ಚಾನೆಲ್) ಎಲ್ಲವೂ HDMI 2.1 ವಿಶೇಷಣಗಳನ್ನು ಪೂರೈಸುತ್ತವೆ. ಇದಲ್ಲದೆ ALLM ನೊಂದಿಗೆ, ಹೊಂದಾಣಿಕೆಯ ಕನ್ಸೋಲ್ ಸಂಪರ್ಕಗೊಂಡಾಗ ಟಿವಿಯ ಲೋ-ಲ್ಯಾಂಗಿಗ್‌ ಗೇಮಿಂಗ್ ಮೋಡ್ ಅನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡಲಾಗುತ್ತದೆ. ಜೊತೆಗೆ ವಿಆರ್ಆರ್ ಟಿವಿಯ ರಿಫ್ರೆಶ್ ರೇಟ್‌ಅನ್ನು ಕನ್ಸೋಲ್‌ನಿಂದ ಔಟ್‌ಪುಟ್ ಆಗುವ ಫ್ರೇಮ್ ರೇಟ್‌ಗೆ ಕ್ರಿಯಾತ್ಮಕವಾಗಿ ಹೊಂದಿಸುತ್ತದೆ.

ಸ್ಮಾರ್ಟ್‌ಟಿವಿ

ಇದಲ್ಲದೆ ಈ ಸ್ಮಾರ್ಟ್‌ಟಿವಿ ಸ್ಪೋರ್ಟ್ಸ್ ಅಲರ್ಟ್ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದು ಬಳಕೆದಾರರಿಗೆ ತಮ್ಮ ನೆಚ್ಚಿನ ಕ್ರೀಡಾ ಸುದ್ದಿ ಮತ್ತು ಆಟದ ಅಪ್ಡೇಟ್‌ಗಳಲ್ಲಿ ರಿಯಲ್‌-ಟೈಂ ಆಲರ್ಟ್‌ಗಳನ್ನು ನೀಡುವ ಮೂಲಕ ತಡೆರಹಿತ ಕ್ರೀಡಾ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್ ಐಕ್ಯೂ ಮತ್ತು ಅಟ್ಮೋಸ್ ಅನ್ನು ಸಹ ಹೊಂದಿದೆ. ಇದು ರೂಮ್‌ನ ಬ್ರೈಟ್‌ನೆಸ್‌ಗೆ ಅನುಗುಣವಾಗಿ ಬಳಕೆದಾರರ ಟಿವಿಯಲ್ಲಿ ಡಾಲ್ಬಿ ವಿಷನ್ ವಿಷಯವನ್ನು ಉತ್ತಮಗೊಳಿಸುತ್ತದೆ. ಗೂಗಲ್‌ ಅಸಿಸ್ಟೆಂಟ್‌, ಅಲೆಕ್ಸಾ, ಆಪಲ್‌ ಏರ್‌ಪ್ಲೇ 2, ಮತ್ತು ಹೋಮ್‌ಕಿಟ್‌ಗಳಿಗೆ ಸಹ ಬೆಂಬಲವಿದೆ.

ಎಲ್‌ಜಿ OLED 48CX TV

ಸದ್ಯ ಭಾರತದಲ್ಲಿ ಎಲ್‌ಜಿ OLED 48CX TVಯ ಬೆಲೆ 1,99,990 ರೂ.ಆಗಿದೆ. ಇದನ್ನು ಆಸಕ್ತ ಬಳಕೆದಾರರು ಎಲ್‌ಜಿ ಇಂಡಿಯಾ ವೆಬ್‌ಸೈಟ್‌ಗೆ ಹೋಗಿ ಖರೀದಿಸಬಹುದಾಗಿದೆ. ಅಲ್ಲದೆ ರಿಟೇಲ್‌ ಸ್ಟೋರ್‌ಗಳಲ್ಲೂ ಸಹ ಈ ಸ್ಮಾರ್ಟ್‌ಟಿವಿ ಲಭ್ಯವಾಗಲಿದೆ.

Best Mobiles in India

English summary
LG OLED 48CX 4K TV With Dolby Vision And Dolby Atmos Launched In India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X