LG Q6 ಸ್ಮಾರ್ಟ್ ಫೋನ್ ಲಾಂಚ್: ಬೆಲೆ, ವಿಶೇಷತೆಗಳು..!

Written By: Lekhaka

ನಿರೀಕ್ಷೆಯಂತೆ LG Q6 ಸ್ಮಾರ್ಟ್ ಫೋನ್ ಲಾಂಚ್ ಆಗಿದ್ದು, ಭಾರತದಲ್ಲಿ ಈ ಸ್ಮಾರ್ಟ್ ಫೋನ್ ನ ಬೆಲೆ ರೂ. 14,990. ಮೂರು ಬಣ್ಣದಲ್ಲಿ ಲಭ್ಯವಿದ್ದು, ಬ್ಲಾಕ್, ಪ್ಲಾಟಿನಮ್ ಮತ್ತು ಗೋಲ್ಡ್ ಬಣ್ಣದಲ್ಲಿ ಈ ಸ್ಮಾರ್ಟ್ ಫೋನ್ ದೊರೆಯಲಿದೆ. ಅಮೆಜಾನ್ ನಲ್ಲಿ ಮಾತ್ರವೇ ಆಗಸ್ಟ್ 10ರಿಂದ ಈ ಫೋನ್ ದೊರೆಯಲಿದೆ.

LG Q6 ಸ್ಮಾರ್ಟ್ ಫೋನ್ ಲಾಂಚ್: ಬೆಲೆ, ವಿಶೇಷತೆಗಳು..!

LG Q6 ಸ್ಮಾರ್ಟ್ ಫೋನ್ 5.5 ಇಂಚಿನ FHD ಹಾಗೂ ಫುಲ್ ವರ್ಷನ್ ಡಿಸ್ ಪ್ಲೇಯನ್ನು ಹೊಂದಿದೆ. ಅಲ್ಲದೇ ಇದರಲ್ಲಿ ಫೆಸ್ ರೆಕಗ್ನೇಷನ್ ಆಯ್ಕೆಯೂ ಇದೆ. ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 435 ಪ್ರೋಸೆಸರ್ ಕಾಣಬಹುದಾಗಿದೆ.

ಇದರೊಂದಿಗೆ 505 GPU ಈ ಫೋನಿನಲ್ಲಿದ್ದು, 3GB RAM ಮತ್ತು 32 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 2TB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.

ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, ಜೊತೆಗೆ LG UX 6.0 ವನ್ನು ಇದರಲ್ಲಿ ಕಾಣಬಹುದು. ಅಲ್ಲದೇ 3000mAh ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ.

ಜಿಯೋದಿಂದ ಮತ್ತೊಂದು ದಾಖಲೆ: ಮೈಲಿಗಲ್ಲು ನಿರ್ಮಿಸಿದ 'ಮೈಜಿಯೋ ಆಪ್'

ಹಿಂಭಾಗದಲ್ಲಿ 13 MP ಕ್ಯಾಮೆರಾ ಇದ್ದು, ಜೊತೆಗೆ LED ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ 5 MP ಕ್ಯಾಮೆರಾ ಇದೆ. ಅಲ್ಲದೇ 4G VoLTE ಗೆ ಸಪೋರ್ಟ್ ಮಾಡಲಿದೆ.Read more about:
English summary
On the software front, the LG Q6 runs on Android 7.1.1 Nougat OS layered with LG's UX 6.0.
Please Wait while comments are loading...
Opinion Poll

Social Counting