ಭಾರತದಲ್ಲಿ ಇಂದಿನಿಂದ 'ಎಲ್‌ಜಿ Q60' ಸ್ಮಾರ್ಟ್‌ಫೋನ್ ಸೇಲ್ ಶುರು!

|

ಎಲ್‌ಜಿ ಕಂಪನಿಯು ಭಾರತದಲ್ಲಿ ಹೊಸದಾಗಿ ಲಾಂಚ್ ಮಾಡಿರುವ 'ಎಲ್‌ಜಿ Q60' ಸ್ಮಾರ್ಟ್‌ಫೋನ್ ಇಂದಿನಿಂದ (ಅಕ್ಟೋಬರ್ 1) ಖರೀದಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಮೂರು ಕ್ಯಾಮೆರಾಗಳನ್ನು ಹೊಂದಿದ್ದು ಜೊತೆಗೆ 'ಮೀಡಿಯಾ ಟೆಕ್ ಹಿಲಿಯೊ P22' ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಮೊರೊಕನ್ ಬಣ್ಣದಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್‌ ಬೆಲೆಯು 13,490ರೂ.ಗಳಾಗಿದ್ದು, ಗ್ರಾಹಕರನ್ನು ಆಕರ್ಷಿಸಿದೆ.

ಎಲ್‌ಜಿ Q60

ಹೌದು, ಎಲ್‌ಜಿ ಕಂಪನಿಯ ಹೊಸ 'ಎಲ್‌ಜಿ Q60' ಇಂದಿನಿಂದ (ಅ.1) ದೇಶಿಯ ಮಾರುಕಟ್ಟೆಯಲ್ಲಿ ಸೇಲ್ ಆರಂಭಿಸಲಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಗ್ರಾಹಕರು ಆನ್‌ಲೈನ್‌ ಇ ಕಾಮರ್ಸ್ ತಾಣಗಳಲ್ಲಿ ಮತ್ತು ಆಫ್‌ಲೈನ್‌ ಸ್ಟೋರ್‌ಗಳಲ್ಲಿಯೂ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್ 3GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯ ಇರಲಿದೆ. ಹಾಗಾದರೇ ಎಲ್‌ಜಿ Q60 ಸ್ಮಾರ್ಟ್‌ಫೋನ್ ಒಳಗೊಂಡಿರುವ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಎಲ್‌ಜಿ Q60 ಸ್ಮಾರ್ಟ್‌ಫೋನ್ 1520 × 720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.26 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ವಾಟರ್‌ ಡ್ರಾಪ್ ನಾಚ್ ಮಾದರಿಯಲ್ಲಿದೆ. ಈ ಡಿಸ್‌ಪ್ಲೇಯು 161.3 x 77 x 8.7mm ಸುತ್ತಳತೆಯನ್ನು ಹೊಂದಿರುವ ಜೊತೆಗೆ ಫುಲ್‌ವಿಶನ್ ಡಿಸ್‌ಪ್ಲೇ ರಚನೆಯನ್ನು ಪಡೆದಿದ್ದು, ವಿಡಿಯೊ ವೀಕ್ಷಣೆ ಮತ್ತು ಗೇಮ್ಸ್‌ಗೆ ಅತ್ಯುತ್ತಮ ಎನಿಸಲಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ಎಲ್‌ಜಿ Q60 ಸ್ಮಾರ್ಟ್‌ಫೋನ್ 2.0GHz, ವೇಗದ ಮೀಡಿಯಾ ಟೆಕ್ ಹಿಲಿಯೊ P22 (IMG PowerVR GE8320 GPU) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ಬೆಂಬಲವಿದೆ. 3GB RAM ಮತ್ತು 64GB ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಒಂದೇ ವೇರಿಯಂಟ್‌ ಆಯ್ಕೆಯನ್ನು ಹೊಂದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿಯನ್ನು 2TB ವರೆಗೂ ವಿಸ್ತರಿಸುವ ಆಯ್ಕೆಯನ್ನು ನೀಡಲಾಗಿದೆ.

ಕ್ಯಾಮೆರಾ ಸ್ಪೆಷಲ್

ಕ್ಯಾಮೆರಾ ಸ್ಪೆಷಲ್

ಎಲ್‌ಜಿ Q60 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ರಚನೆಯನ್ನು ಹೊಂದಿದ್ದು, ಅದರಲ್ಲಿ ಮುಖ್ಯ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 120 ಡಿಗ್ರಿ ಫಿಲ್ಡ್‌ ವ್ಯೂವ್ ಬೆಂಬಲದೊಂದಿಗೆ 5ಎಂಪಿ ಸೆನ್ಸಾರ್ ಪಡೆದಿದ್ದು, ತೃತೀಯ ಕ್ಯಾಮೆರಾವು f/2.4 ಅಪರ್ಚರ್ನೊಂದಿಗೆ 2ಎಂಪಿ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 13ಎಂಪಿ ಸೆನ್ಸಾರ್ ಒಳಗೊಂಡಿದ್ದು, ಅತ್ಯುತ್ತಮ ವಿಡಿಯೊ ಸಪೋರ್ಟ್‌ ಪಡೆದಿದೆ.

ಓದಿರಿ : ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಎರಡರಲ್ಲೂ ಆಫರ್‌ ಇದೆ, ಆದ್ರೆ ಯಾವುದು ಬೆಸ್ಟ್‌!ಓದಿರಿ : ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಎರಡರಲ್ಲೂ ಆಫರ್‌ ಇದೆ, ಆದ್ರೆ ಯಾವುದು ಬೆಸ್ಟ್‌!

ಬ್ಯಾಟರಿ ಬಲ

ಬ್ಯಾಟರಿ ಬಲ

ಎಲ್‌ಜಿ Q60 ಸ್ಮಾರ್ಟ್‌ಫೋನ್ 3,500mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದ್ದು, ಜೊತೆಗೆ ಅತ್ಯುತ್ತಮ ಚಾರ್ಜಿಂಗ್ ಬೆಂಬಲ ಹೊಂದಿದೆ. ಹಾಗೆಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯ, ಡೆಡಿಕೇಟೆಡ್‌ ಗೂಗಲ್ ಅಸಿಸ್ಟಂಟ್ ಬಟನ್ ಆಯ್ಕೆಯನ್ನು ಹೊಂದಿದೆ. ಇದರೊಂದಿಗೆ DTS: X ಮತ್ತು MIL-STD-810G ಸೌಲಭ್ಯಗಳು ಸೇರಿದಂತೆ ವೈಫೈ, ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಬಜೆಟ್‌ ಬೆಲೆಯ ರೇಂಜ್‌ನಲ್ಲಿ ಭಾರದತಲ್ಲಿ ಲಾಂಚ್ ಆಗಿರುವ ಎಲ್‌ಜಿ Q60 ಸ್ಮಾರ್ಟ್‌ಫೋನ್ ಇಂದು (ಅಕ್ಟೋಬರ್ 1ರಿಂದ ) ಮೊದಲ ಬಾರಿಗೆ ಸೇಲ್ ಶುರು ಮಾಡಲಿದೆ. ಈ ಸ್ಮಾರ್ಟ್‌ಫೋನ್ ಬೆಲೆಯು 13,490ರೂ.ಗಳಳಾಗಿದ್ದು, ಗ್ರಾಹಕರು ಪ್ರಮುಖ ಇ ಕಾಮರ್ಸ್ ತಾಣಗಳಲ್ಲಿ ಮತ್ತು ಅಧಿಕೃತ ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ.

ಓದಿರಿ : ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್‌ ಡೇಸ್‌: ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌!ಓದಿರಿ : ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್‌ ಡೇಸ್‌: ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌!

Best Mobiles in India

English summary
LG Q60 smartphone offers triple-rear camera setup and waterdrop notch display. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X