Just In
Don't Miss
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- News
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
- Movies
ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಜೆಟ್ ಬೆಲೆಯಲ್ಲಿ 'ಎಲ್‌ಜಿ Q60' ಸ್ಮಾರ್ಟ್‌ಫೋನ್ ಬಿಡುಗಡೆ!.ಫೀಚರ್ಸ್?..ಬೆಲೆ?
ಎಲ್‌ಜಿ ಕಂಪನಿಯು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿಂದ ಈಗಾಗಲೇ ಗ್ರಾಹಕರನ್ನು ಸೆಲೆದಿದ್ದು, ಅದರಲ್ಲಿಯೂ ಇತ್ತೀಚಿಗೆ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಲಾಂಚ್ ಮಾಡುವಂತ ಹೆಚ್ಚು ಒಲವನ್ನು ತೋರುತ್ತಿದೆ. ಅದೇ ನಿಟ್ಟಿನಲ್ಲಿ ಈಗ ಭಾರತದಲ್ಲಿ ಹೊಸದಾಗಿ 'ಎಲ್‌ಜಿ Q60' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಶಿಯೋಮಿಗೆ ಮಾರುಕಟ್ಟೆಯಲ್ಲಿ ಟಫ್ ಫೈಟ್ ನೀಡುವ ಫೀಚರ್ಸ್‌ಗಳನ್ನು ಹೊಂದಿದೆ.

ಹೌದು, ಎಲ್‌ಜಿ ಕಂಪನಿಯ ಹೊಸ 'ಎಲ್‌ಜಿ Q60' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಫೀಚರ್ ಹೊಂದಿದ್ದು, ಜೊತೆಗೆ ಮೀಡಿಯಾ ಟೆಕ್ ಹಿಲಿಯೊ P22 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ ಇದೆ ಅಕ್ಟೋಬರ್ 1 ರಿಂದ ಸೇಲ್ ಆರಂಭಿಸಲಿದ್ದು, ಬೆಲೆಯು 13,490ರೂ.ಗಳಾಗಿದೆ. ಹಾಗಾದರೇ ಎಲ್‌ಜಿ Q60 ಸ್ಮಾರ್ಟ್‌ಫೋನ್ ಒಳಗೊಂಡಿರುವ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
ಎಲ್‌ಜಿ Q60 ಸ್ಮಾರ್ಟ್‌ಫೋನ್ 1520 × 720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.26 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ವಾಟರ್ ಡ್ರಾಪ್ ನಾಚ್ ಮಾದರಿಯಲ್ಲಿದೆ. ಈ ಡಿಸ್‌ಪ್ಲೇಯು 161.3 x 77 x 8.7mm ಸುತ್ತಳತೆಯನ್ನು ಹೊಂದಿರುವ ಜೊತೆಗೆ ಫುಲ್‌ವಿಶನ್ ಡಿಸ್‌ಪ್ಲೇ ರಚನೆಯನ್ನು ಪಡೆದಿದ್ದು, ವಿಡಿಯೊ ವೀಕ್ಷಣೆ ಮತ್ತು ಗೇಮ್ಸ್‌ಗೆ ಅತ್ಯುತ್ತಮ ಎನಿಸಲಿದೆ.

ಪ್ರೊಸೆಸರ್ ಸಾಮರ್ಥ್ಯ
ಎಲ್‌ಜಿ Q60 ಸ್ಮಾರ್ಟ್‌ಫೋನ್ 2.0GHz, ವೇಗದ ಮೀಡಿಯಾ ಟೆಕ್ ಹಿಲಿಯೊ P22 (IMG PowerVR GE8320 GPU) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ಬೆಂಬಲವಿದೆ. 3GB RAM ಮತ್ತು 64GB ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಒಂದೇ ವೇರಿಯಂಟ್ ಆಯ್ಕೆಯನ್ನು ಹೊಂದಿದ್ದು, ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 2TB ವರೆಗೂ ವಿಸ್ತರಿಸುವ ಆಯ್ಕೆಯನ್ನು ನೀಡಲಾಗಿದೆ.

ಕ್ಯಾಮೆರಾ ಸ್ಪೆಷಲ್
ಎಲ್‌ಜಿ Q60 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ರಚನೆಯನ್ನು ಹೊಂದಿದ್ದು, ಅದರಲ್ಲಿ ಮುಖ್ಯ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 120 ಡಿಗ್ರಿ ಫಿಲ್ಡ್ ವ್ಯೂವ್ ಬೆಂಬಲದೊಂದಿಗೆ 5ಎಂಪಿ ಸೆನ್ಸಾರ್ ಪಡೆದಿದ್ದು, ತೃತೀಯ ಕ್ಯಾಮೆರಾವು f/2.4 ಅಪರ್ಚರ್ನೊಂದಿಗೆ 2ಎಂಪಿ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 13ಎಂಪಿ ಸೆನ್ಸಾರ್ ಒಳಗೊಂಡಿದ್ದು, ಅತ್ಯುತ್ತಮ ವಿಡಿಯೊ ಸಪೋರ್ಟ್ ಪಡೆದಿದೆ.

ಬ್ಯಾಟರಿ ಬಲ
ಎಲ್‌ಜಿ Q60 ಸ್ಮಾರ್ಟ್‌ಫೋನ್ 3,500mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದ್ದು, ಜೊತೆಗೆ ಅತ್ಯುತ್ತಮ ಚಾರ್ಜಿಂಗ್ ಬೆಂಬಲ ಹೊಂದಿದೆ. ಹಾಗೆಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯ, ಡೆಡಿಕೇಟೆಡ್ ಗೂಗಲ್ ಅಸಿಸ್ಟಂಟ್ ಬಟನ್ ಆಯ್ಕೆಯನ್ನು ಹೊಂದಿದೆ. ಇದರೊಂದಿಗೆ DTS: X ಮತ್ತು MIL-STD-810G ಸೌಲಭ್ಯಗಳು ಸೇರಿದಂತೆ ವೈಫೈ, ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ
ಎಲ್‌ಜಿ Q60 ಸ್ಮಾರ್ಟ್‌ಫೋನ್ ಭಾರದತಲ್ಲಿ ಲಾಂಚ್ ಆಗಿದ್ದು, ಬಜೆಟ್ ಬೆಲೆಯ ರೇಂಜ್‌ನಲ್ಲಿ ಗುರುತಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಬೆಲೆಯು 13,490ರೂ.ಗಳು. ಇದೇ ಅಕ್ಟೋಬರ್ 1ರಿಂದ ಖರೀದಿಗೆ ಲಭ್ಯವಾಗಲಿದ್ದು, ಗ್ರಾಹಕರು ಪ್ರಮುಖ ಇ ಕಾಮರ್ಸ್ ತಾಣಗಳಲ್ಲಿ ಮತ್ತು ಅಧಿಕೃತ ಆಫ್‌ಲೈನ್ ಸ್ಟೋರ್‌ಗಳಲ್ಲಿ ಸಿಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470