ಟ್ರಿಪಲ್ ಸ್ಕ್ರೀನ್ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಲಿದ್ಯಾ ಎಲ್ ಜಿ?

By Gizbot Bureau
|

IFA 2019 ಗೆ ಇನ್ನೇನು ಒಂದು ತಿಂಗಳು ಬಾಕಿ ಇದೆ ಅಷ್ಟೇ.ಯುರೋಪಿನ ಅತ್ಯಂತ ದೊಡ್ಡ ಟೆಕ್ನಾಲಜಿ ಇವೆಂಟ್ ಸೆಪ್ಟೆಂಬರ್ 6 ಮತ್ತು ಸೆಪ್ಟೆಂಬರ್ 11 ರ ನಡುವೆ ನಡೆಯಲಿದೆ.ಎಲ್ ಜಿ ಎಲೆಕ್ಟ್ರಾನಿಕ್ಸ್ ಇದೀಗ ಹೊಸದಾಗಿ ಟೀಸರ್ ವೀಡಿಯೋವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಮೂರು ಸ್ಕ್ರೀನ್ ಗಳುಳ್ಳ ಸ್ಮಾರ್ಟ್ ಫೋನ್ ನ್ನು ಜಗತ್ತಿಗೆ ಪರಿಚಯಿಸುವ ಸೂಚನೆ ನೀಡಿದೆ.

ವೀಡಿಯೋದಲ್ಲಿ ಏನಿದೆ?

ವೀಡಿಯೋದಲ್ಲಿ ಏನಿದೆ?

ಕಂಪೆನಿ ಯುಟ್ಯೂಬ್ ನಲ್ಲಿ ತನ್ನ ಎಲ್ ಜಿ ಮೊಬೈಲಿನ ಗ್ಲೋಬಲ್ ಅಕೌಂಟಿನಲ್ಲಿ ಹಂಚಿಕೊಂಡಿರುವ ಈ 20 ಸೆಕೆಂಡ್ ಗಳಿರುವ ವೀಡಿಯೋದಲ್ಲಿ ಸಣ್ಣ ಸ್ಮಾರ್ಟ್ ಫೋನ್ ಆಧಾರಿತ ವೀಡಿಯೋ ಗೇಮ್ ಕ್ಯಾರೆಕ್ಟರ್ ಎರಡನೇ ಸ್ಕ್ರೀನ್ ತೆರೆಯುವ ಮುನ್ನ ಪ್ರಮುಖ ಸ್ಕ್ರೀನಿನಲ್ಲಿ ಚಲಿಸುತ್ತದೆ ಮತ್ತು ಅದು ಅಂತಿಮ ಸ್ಥಾನವನ್ನು ತಲುಪಲು ಎರಡು ಮತ್ತು ಮೂರನೇ ಸ್ಕ್ರೀನ್ ನ್ನು ಬಳಸಿದಂತೆ ವಿಭಿನ್ನ ವೀಡಿಯೋವನ್ನುಹಂಚಿಕೊಳ್ಳಲಾಗಿದೆ. ನಂತರ ಸ್ಕ್ರೀನ್ ಮುಚ್ಚಿಕೊಳ್ಳುತ್ತದೆ. ಫೋಲ್ಡೇಬಲ್ ಡಿಸ್ಪ್ಲೇ ಫೋನಿನಂತೆ ಕಾಣುತ್ತದೆ. ಸಣ್ಣ ಸ್ಕ್ರೀನ್ ವೊಂದು ನೋಡುಗರ ಫೋನಿನ ಮುಂದೆ ದಿನಾಂಕ ಮತ್ತು ಸಮಯವನ್ನು ಡಿಸ್ಪ್ಲೇ ಮಾಡುತ್ತದೆ.

ಮೂರು ಸ್ಕ್ರೀನಿನ ಸ್ಮಾರ್ಟ್ ಫೋನ್:

ಮೂರು ಸ್ಕ್ರೀನಿನ ಸ್ಮಾರ್ಟ್ ಫೋನ್:

ಎಲ್ ಜಿ ಸಂಸ್ಥೆಯ ಹೊಸ ವೀಡಿಯೋ ಟೀಸರ್ ಹಲವು ರೂಮರ್ ಗಳಿಗೆ ಕಾರಣವಾಗಿದೆ. ಕೊರಿಯನ್ ಎಲೆಕ್ಟ್ರಾನಿಕ್ ಸಂಸ್ಥೆ ಮುಂದಿನ ವಿ-ಸರಣಿಯ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಎಲ್ ಜಿ ವಿ60 ThinQ ನ್ನು ತೋರಿಸುತ್ತಿದೆ. ಇದು ಎಲ್ ಜಿ ವಿ50 ThinQ ಯಶಸ್ಸಿನ ಸರಣಿಯಾಗಿರಲಿದೆ. ಎಲ್ ಜಿ ವಿ50 ThinQ ನ್ನು ಕಳೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2019 ನಲ್ಲಿ ಎಲ್ ಜಿ ಸಂಸ್ಥೆ ಬಿಡುಗಡೆಗೊಳಿಸಿತ್ತು.ಇದು ಸ್ಯಾಮ್ ಸಂಗ್ ಮತ್ತು ಹುವಾಯಿ ಸಂಸ್ಥೆಯ ಫೋಲ್ಡೇಬಲ್ ಡಿಸ್ಪ್ಲೇ ಸ್ಮಾರ್ಟ್ ಫೋನ್ ಗಳಿಗೆ ಪ್ರತಿಕ್ರಿಯೆಯಾಗಿದೆ ಎಂದು ಹೇಳಲಾಗುತ್ತಿದೆ.

ಹೆಚ್ಚಿನ ಮಾಹಿತಿ ಅಲಭ್ಯ:

ಹೆಚ್ಚಿನ ಮಾಹಿತಿ ಅಲಭ್ಯ:

ಆಂಡ್ರಾಯ್ಡ್ ಪೋಲೀಸ್ ಮತ್ತು ZDNet ವರದಿಯ ಪ್ರಕಾರ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಗೆ ಎಲ್ ಜಿ ವಿ60 ಪ್ರತಿಸ್ಪರ್ಧಿಯಾಗುವ ನಿರೀಕ್ಷೆ ಇದೆ. ಡುಯಲ್ ಸ್ಕ್ರೀನ್ ಅಟ್ಯಾಚ್ ಮೆಂಟ್ ಇರುವ ಮತ್ತು 5ಜಿ ಕನೆಕ್ಟಿವಿಟಿಗೆ ಬೆಂಬಲ ನೀಡುವ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10 ಸದ್ಯ ಬಿಡುಗಡೆಗೊಂಡಿದೆ. ಆದರೆ ಎಲ್ ಜಿ ಮುಂದಿನ ಜನರೇಷನ್ನಿನ ಪ್ರೀಮಿಯಂ ಬಜೆಟ್ ಸ್ಮಾರ್ಟ್ ಫೋನ್ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿಯೂ ಕೂಡ ಲಭ್ಯವಿಲ್ಲ.

ಆಯ್ದ ಮಾರುಕಟ್ಟೆಯಲ್ಲಿ ಲಭ್ಯ:

ಆಯ್ದ ಮಾರುಕಟ್ಟೆಯಲ್ಲಿ ಲಭ್ಯ:

ಆದರೆ ಮತ್ತೊಂದು ವರದಿಯು ಹೇಳುವ ಪ್ರಕಾರ ಎಲ್ ಜಿ ಸಂಸ್ಥೆ ಎರಡನೇ ಸ್ಕ್ರೀನ್ ಆಕ್ಸಸರೀಯನ್ನು ಎಲ್ ಜಿ ವಿ50 ThinQ ಸ್ಮಾರ್ಟ್ ಫೋನಿಗೆ ಪರಿಚಯಿಸುವ ಸಾಧ್ಯತೆ ಇದೆ.ಕಂಪೆನಿಯು ಎಂಡಬ್ಲ್ಯೂಸಿ 2019 ನಲ್ಲಿ ವಿ50 ThinQ ಸ್ಮಾರ್ಟ್ ಫೋನಿನಲ್ಲಿ ಕನೆಕ್ಟ್ ಆಗುವ ಸೆಕೆಂಡ್ ಆಕ್ಸಸರೀ ಬಗ್ಗೆ ತಿಳಿಸಿತ್ತು ಮತ್ತು ಪೋಗೋ ಪಿನ್ ಗಳ ಸೆಟ್ ಗಳಿಂದ ಬಳಕೆದಾರರಿಗೆ ಹೇಗೆ ಡುಯಲ್ ಸ್ಕ್ರೀನ್ ಎಫೆಕ್ಟ್ ಲಭ್ಯವಾಗುತ್ತದೆ ಎಂಬುದನ್ನು ತಿಳಿಸಲಾಗಿತ್ತು. ಆದರೆ ಇದನ್ನು ಕೆಲವು ಆಯ್ದ ಮಾರುಕಟ್ಟೆಗಳಲ್ಲಿ ಮಾತ್ರವೇ ಸಂಸ್ಥೆ ಪರಿಚಯಿಸಿತ್ತು. ಯುಎಸ್ ನಲ್ಲಿ ಕೂಡ ಸದ್ಯ ಇದು ಲಭ್ಯವಿಲ್ಲ.

ಸೆಪ್ಟೆಂಬರ್ 6 ರಂದು ಪ್ರಕಟಿಸುವ ಸಾಧ್ಯತೆ:

ಸೆಪ್ಟೆಂಬರ್ 6 ರಂದು ಪ್ರಕಟಿಸುವ ಸಾಧ್ಯತೆ:

ಸೆಕೆಂಡ್ ಸ್ಕ್ರೀನ್ ಸಕ್ಸಸರ್ ನಂತೆ ಕಾಣಿಸುವ ಹೊಸ ವೀಡಿಯೋವೊಂದನ್ನು ಇದೀಗ ಕಂಪೆನಿ ಬಿಡುಗಡೆಗೊಳಿಸಿದ್ದು ಎಲ್ ಜಿ ವಿ 50 ThinQ ನ ಯಶಸ್ವಿ ಅವತರಣಿಗೆ ಇದಾಗಿರಲಿದೆ ಎಂದು ಮಾತನಾಡಿಕೊಳ್ಳಲಾಗುತ್ತಿದೆ.ಸೆಪ್ಟೆಂಬರ್ 6,2019 ರಂದು ಬರ್ಲಿನ್ ನಲ್ಲಿ ಬೆಳಿಗ್ಗೆ 10 ಘಂಟೆಗೆ(ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ) ನಡೆಯುವ ಕಾರ್ಯಕ್ರಮದಲ್ಲಿ ಮುಂದಿನ ತನ್ನ ದೊಡ್ಡ ಪ್ರಕಟಣೆಯನ್ನು ಎಲ್ ಜಿ ಸಂಸ್ಥೆ ಮಾಡುವ ನಿರೀಕ್ಷೆ ಇದೆ.

Best Mobiles in India

Read more about:
English summary
Lg to launch a triple camera phone at IFA 2019

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X