ಎಲ್‌ಜಿ ಸಂಸ್ಥೆಯಿಂದ ಮತ್ತೆ ಮೂರು ಬಜೆಟ್‌ ಬೆಲೆಯ ಫೋನ್‌ಗಳ ಘೋಷಣೆ!

|

ಎಲ್‌ಜಿ ಮೊಬೈಲ್‌ ತಯಾರಿಕಾ ಸಂಸ್ಥೆಯು ಬಜೆಟ್‌ ದರದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿ ಸೈ ಅನಿಸಿಕೊಂಡಿದೆ. ಅದರ ಬೆನ್ನಲೇ ಎಲ್‌ಜಿ ಕಂಪನಿಯು W ಸರಣಿಯಲ್ಲಿ ಈಗ ಮತ್ತೆ ಮೂರು ನೂತನ ಸ್ಮಾರ್ಟ್‌ಫೋನ್‌ಗಳನ್ನು ದೇಶಿಯ ಮಾರುಕಟ್ಟೆಗೆ ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್‌ ಜೊತೆ ಬಜೆಟ್ ಪ್ರೈಸ್‌ ಅನ್ನು ಹೊಂದಿವೆ.

ಎಲ್‌ಜಿ

ಹೌದು, ಎಲ್‌ಜಿ ಕಂಪನಿಯು W ಸರಣಿಯಲ್ಲಿ ಎಲ್‌ W11, ಎಲ್‌ಜಿ W31 ಹಾಗೂ ಎಲ್‌ಜಿ W31+ ಹೆಸರಿನ ಮೂರು ಸ್ಮಾರ್ಟ್‌ಫೋನ್‌ಗಳನ್ನು ಘೋಷಣೆ ಮಾಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 10 ಓಎಸ್‌ ಅನ್ನು ಹೊಂದಿದ್ದು, ಗೂಗಲ್ ಅಸಿಸ್ಟಂಟ್ ಬಟನ್‌ ಅನ್ನು ಪಡೆದಿವೆ. ಹಾಗೆಯೇ ಈ ಮೂರು ಸ್ಮಾರ್ಟ್‌ಫೋನ್‌ಗಳು 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿವೆ. ಹಾಗಾದರೇ ಈ ಎಲ್‌ಜಿ ಈ ಮೂರು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಎಲ್‌ W11 ಸ್ಮಾರ್ಟ್‌ಫೋನ್

ಎಲ್‌ W11 ಸ್ಮಾರ್ಟ್‌ಫೋನ್

ಎಲ್‌ W11 ಸ್ಮಾರ್ಟ್‌ಫೋನ್ 6.52-ಇಂಚಿನ ಹೆಚ್‌ಡಿ + ಫುಲ್‌ ವಿಷನ್ ಡಿಸ್ಪ್ಲೇಯನ್ನು ಹೊಂದಿದೆ. 2.0GHz ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಣೆಗೆ ಅವಕಾಶ ನೀಡಿದೆ. ಇದರೊಂದಿಗೆ 3GB RAM ಮತ್ತು 32GB ಆಂತರಿಕ ಸಂಗ್ರಹಣೆಯ ಆಯ್ಕೆ ಪಡೆದಿದೆ. ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ ಪಡೆದಿದೆ. ಜೊತೆಗೆ 4,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ.

ಎಲ್‌ W31 ಸ್ಮಾರ್ಟ್‌ಫೋನ್

ಎಲ್‌ W31 ಸ್ಮಾರ್ಟ್‌ಫೋನ್

ಎಲ್‌ W31 ಸ್ಮಾರ್ಟ್‌ಫೋನ್ 6.52-ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. 2.0GHz ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಣೆಗೆ ಅವಕಾಶ ನೀಡಿದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹಣೆಯ ಆಯ್ಕೆ ಪಡೆದಿದೆ. ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಇದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 5ಎಂಪಿ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾವು 2ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ ಪಡೆದಿದೆ. ಜೊತೆಗೆ 4,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ.

ಎಲ್‌ W31+ ಸ್ಮಾರ್ಟ್‌ಫೋನ್

ಎಲ್‌ W31+ ಸ್ಮಾರ್ಟ್‌ಫೋನ್

ಎಲ್‌ W31+ ಸ್ಮಾರ್ಟ್‌ಫೋನ್ ಸಹ 6.52-ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. 2.0GHz ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಣೆಗೆ ಅವಕಾಶ ನೀಡಿದೆ. ಇದರೊಂದಿಗೆ 4GB RAM ಮತ್ತು 128GB ಆಂತರಿಕ ಸಂಗ್ರಹಣೆಯ ಆಯ್ಕೆ ಪಡೆದಿದೆ. ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಇದ್ದು, ಮುಖ್ಯ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 5ಎಂಪಿ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾವು 2ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ ಪಡೆದಿದೆ. ಜೊತೆಗೆ 4,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತದಲ್ಲಿ ಎಲ್‌ಜಿ W11 ಫೋನಿನ ಆರಂಭಿಕ ವೇರಿಯಂಟ್ ಬೆಲೆಯ 9,490ರೂ. ಆಗಿದೆ. ಬರುತ್ತದೆ. ಎಲ್‌ W31 ಸ್ಮಾರ್ಟ್‌ಫೋನ್ ಬೇಸ್‌ ವೇರಿಯಂಟ್‌ ದರವು 10,990ರೂ.ಗಳು ಆಗಿದೆ. ಹಾಗೂ ಎಲ್‌ W31+ ಫೋನ್ ಆರಂಭಿಕ ಬೆಲೆಯು 11,990ರೂ.ಗಳು ಆಗಿದೆ. ಕಂಪನಿಯು ಈ ಫೋನ್‌ಗಳ ಅಧಿಕೃತ ಬಿಡುಗಡೆ ದಿನಾಂಕ ಬಹಿರಂಗ ಮಾಡಿಲ್ಲ.

Best Mobiles in India

English summary
LG W11, W31, and W31+ prices in India and specifications have been revealed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X