Home
ಸುದ್ದಿಜಾಲ

ಭಾರತದಲ್ಲಿ ಬಜೆಟ್‌ ಬೆಲೆಯಲ್ಲಿ LGಯಿಂದ ಮೂರು ಸ್ಮಾರ್ಟ್‌ಫೋನ್‌ಗಳ ಲಾಂಚ್!

ಎಲ್‌ಜಿ ಮೊಬೈಲ್‌ ತಯಾರಿಕಾ ಸಂಸ್ಥೆಯು ಬಜೆಟ್‌ ದರದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿ ಸೈ ಅನಿಸಿಕೊಂಡಿದೆ. ಅದರ ಬೆನ್ನಲೇ ಎಲ್‌ಜಿ ಕಂಪನಿಯು W ಸರಣಿಯಲ್ಲಿ ಈಗ ಮತ್ತೆ ಮೂರು ನೂತನ ಸ್ಮಾರ್ಟ್‌ಫೋನ್‌ಗಳನ್ನು ದೇಶಿಯ ಮಾರುಕಟ್ಟೆಗೆ ಅನಾವರಣ ಮಾಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್‌ ಜೊತೆ ಬಜೆಟ್ ಪ್ರೈಸ್‌ ಅನ್ನು ಹೊಂದಿವೆ.

ಎಲ್‌ಜಿ

ಹೌದು, ಜನಪ್ರಿಯ ಎಲ್‌ಜಿ ಕಂಪನಿಯು W ಸರಣಿಯಲ್ಲಿ ಹೊಸಾದಗಿ ಎಲ್‌ಜಿ W41, ಎಲ್‌ಜಿ W41+ ಹಾಗೂ ಎಲ್‌ಜಿ W41 ಪ್ರೊ ಹೆಸರಿನ ಮೂರು ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಅನಾವರಣ ಮಾಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 10 ಓಎಸ್‌ ಅನ್ನು ಹೊಂದಿರುವ ಜೊತೆಗೆ ಮೂರು ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿವೆ. ಹಾಗಾದರೇ ಎಲ್‌ಜಿ ಕಂಪನಿಯು ಅನಾವರಣ ಮಾಡಿರುವ ಈ ಮೂರು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳು ಹೇಗಿವೆ ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಎಲ್‌ಜಿ W41 ಸ್ಮಾರ್ಟ್‌ಫೋನ್

ಎಲ್‌ಜಿ W41 ಸ್ಮಾರ್ಟ್‌ಫೋನ್

ಎಲ್‌ಜಿ W41 ಸ್ಮಾರ್ಟ್‌ಫೋನ್ 6.55-ಇಂಚಿನ ಹೆಚ್‌ಡಿ ಡಿಸ್ಪ್ಲೇಯನ್ನು ಹೊಂದಿದ್ದು, 720x1,600 ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಡಿಸ್‌ಪ್ಲೇಯು 20:9 ಅನುಪಾತ ಹೊಂದಿದೆ. ಹಾಗೆಯೇ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್‌ ಒಳಗೊಂಡಿದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹಣೆಯ ಆಯ್ಕೆ ಪಡೆದಿದೆ. ಕ್ವಾಡ್‌ ಕ್ಯಾಮೆರಾ ರಚನೆ ಇದ್ದು, ಅವುಗಳು ಕ್ರಮವಾಗಿ 48ಎಂಪಿ+ 8ಎಂಪಿ+ 2ಎಂಪಿ+ 5ಎಂಪಿ ಸೆನ್ಸಾರ್‌ನಲ್ಲಿವೆ. ಇನ್ನು ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ ಪಡೆದಿದೆ. ಜೊತೆಗೆ 5,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ.

ಎಲ್‌ಜಿ W41+ ಸ್ಮಾರ್ಟ್‌ಫೋನ್

ಎಲ್‌ಜಿ W41+ ಸ್ಮಾರ್ಟ್‌ಫೋನ್

ಎಲ್‌ಜಿ W41+ ಸ್ಮಾರ್ಟ್‌ಫೋನ್ ಸಹ ಬಹುತೇಕ ಎಲ್‌ಜಿ W41 ಫೋನಿನ ಫೀಚರ್ಸ್‌ ಹೋಲಿಕೆ ಪಡೆದಿದೆ. ಈ ಫೋನ್ 6.55-ಇಂಚಿನ ಹೆಚ್‌ಡಿ ಡಿಸ್ಪ್ಲೇಯನ್ನು ಹೊಂದಿದ್ದು, 720x1,600 ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಡಿಸ್‌ಪ್ಲೇಯು 20:9 ಅನುಪಾತ ಹೊಂದಿದೆ. ಹಾಗೆಯೇ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್‌ ಒಳಗೊಂಡಿದೆ. ಇದರೊಂದಿಗೆ 4GB RAM ಮತ್ತು 128GB ಆಂತರಿಕ ಸಂಗ್ರಹಣೆಯ ಆಯ್ಕೆ ಪಡೆದಿದೆ. ಕ್ವಾಡ್‌ ಕ್ಯಾಮೆರಾ ರಚನೆ ಇದ್ದು, ಅವುಗಳು ಕ್ರಮವಾಗಿ 48ಎಂಪಿ+ 8ಎಂಪಿ+ 2ಎಂಪಿ+ 5ಎಂಪಿ ಸೆನ್ಸಾರ್‌ನಲ್ಲಿವೆ. ಇನ್ನು ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ ಪಡೆದಿದೆ. ಜೊತೆಗೆ 5,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ.

ಎಲ್‌ಜಿ W41 ಪ್ರೊ ಸ್ಮಾರ್ಟ್‌ಫೋನ್

ಎಲ್‌ಜಿ W41 ಪ್ರೊ ಸ್ಮಾರ್ಟ್‌ಫೋನ್

ಎಲ್‌ಜಿ W41 ಪ್ರೊ ಸ್ಮಾರ್ಟ್‌ಫೋನ್ ಸಹ ಬಹುತೇಕ ಎಲ್‌ಜಿ W41 ಫೋನಿನ ಫೀಚರ್ಸ್‌ ಹೋಲಿಕೆ ಪಡೆದಿದೆ. ಈ ಫೋನ್ 6.55-ಇಂಚಿನ ಹೆಚ್‌ಡಿ ಡಿಸ್ಪ್ಲೇಯನ್ನು ಹೊಂದಿದ್ದು, 720x1,600 ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಡಿಸ್‌ಪ್ಲೇಯು 20:9 ಅನುಪಾತ ಹೊಂದಿದೆ. ಹಾಗೆಯೇ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್‌ ಒಳಗೊಂಡಿದೆ. ಇದರೊಂದಿಗೆ 6GB RAM ಮತ್ತು 128GB ಆಂತರಿಕ ಸಂಗ್ರಹಣೆಯ ಆಯ್ಕೆ ಪಡೆದಿದೆ. ಕ್ವಾಡ್‌ ಕ್ಯಾಮೆರಾ ರಚನೆ ಇದ್ದು, ಅವುಗಳು ಕ್ರಮವಾಗಿ 48ಎಂಪಿ+ 8ಎಂಪಿ+ 2ಎಂಪಿ+ 5ಎಂಪಿ ಸೆನ್ಸಾರ್‌ನಲ್ಲಿವೆ. ಇನ್ನು ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ ಪಡೆದಿದೆ. ಜೊತೆಗೆ 5,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತದಲ್ಲಿ ಎಲ್‌ಜಿ W41 ಫೋನಿನ ಆರಂಭಿಕ ವೇರಿಯಂಟ್ ಬೆಲೆಯ 13,490 ರೂ. ಆಗಿದೆ. ಬರುತ್ತದೆ. ಎಲ್‌ W41+ ಸ್ಮಾರ್ಟ್‌ಫೋನ್ ಬೇಸ್‌ ವೇರಿಯಂಟ್‌ ದರವು 14,490 ರೂ.ಗಳು ಆಗಿದೆ. ಹಾಗೂ ಎಲ್‌ W41 ಪ್ರೊ ಫೋನ್ ಬೆಲೆಯು 15,490 ರೂ.ಗಳು ಆಗಿದೆ. ಈ ಫೋನ್‌ಗಳ ಲೇಜರ್ ಬ್ಲೂ ಹಾಗೂ ಮ್ಯಾಜಿಕ್ ಬ್ಲೂ ಬಣ್ಣಗಳ ಆಯ್ಕೆ ಪಡೆದಿದ್ದು, ಪ್ರಮುಖ ಮೊಬೈಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
LG W41, LG W41+, and LG W41 Pro have been launched in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+