ಶೀಘ್ರದಲ್ಲೇ ಬರಲಿದೆ LG ಸಂಸ್ಥೆಯ ಡ್ಯುಯಲ್ ಸ್ಕ್ರೀನ್ ‘ವಿಂಗ್’ ಸ್ಮಾರ್ಟ್‌ಫೋನ್!

|

ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪೆನಿ ತನ್ನ ಬಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಹೈ ಎಂಡ್‌ ಮತ್ತು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರಿಂದ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಸ್ವಿವೆಲ್ ಸ್ಕ್ರೀನ್ ಫೋನ್ - ಎಲ್ಜಿ ವಿಂಗ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆ ಆಗಿರುವ ಈ ಸ್ಮಾರ್ಟ್‌ಫೋನ್‌ ಇದೇ ಅಕ್ಟೋಬರ್ 28 ರಂದು ಭಾರತಕ್ಕೆ ಎಂಟ್ರಿ ನೀಡಲಿದೆ.

ಎಲ್‌ಜಿ

ಹೌದು, ಎಲ್‌ಜಿ ಕಂಪೆನಿ ತನ್ನ ಎಲ್ಜಿ ವಿಂಗ್ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ವೇದಿಕೆ ಸಿದ್ದ ಪಡಿಸಿಕೊಂಡಿದೆ. ಸದ್ಯ #ExploretheNew ಶೀರ್ಷಿಕೆಯಲ್ಲಿ ಆಹ್ವಾನ ಪತ್ರಿಕೆ ನೀಡಿರುವ ಎಲ್‌ಜಿ ಕಂಪೆನಿ ತನ್ನ ಆಹ್ವಾನ ಪತ್ರಿಕೆಯಲ್ಲಿ ಫೋನ್‌ ಹೆಸರನ್ನು ಇನ್ನು ಉಲ್ಲೇಖ ಮಾಡಿಲ್ಲ. ಆದರೆ ಸ್ಮಾರ್ಟ್‌ಫೋನ್‌ ವಿನ್ಯಾಸವನ್ನು ಬಿಟ್ಟುಕೊಟ್ಟಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.8 ಇಂಚಿನ ಬಾಗಿದ P-OLED ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಎಲ್‌ಜಿ ವಿಂಗ್

ಎಲ್‌ಜಿ ವಿಂಗ್ ಸ್ಮಾರ್ಟ್‌ಫೋನ್ ಎಲ್‌ಜಿ ಸಂಸ್ಥೆಯ ಮಹತ್ವಾಕಾಂಕ್ಷೆಯ ‘ಎಕ್ಸ್‌ಪ್ಲೋರರ್ ಪ್ರಾಜೆಕ್ಟ್' ನಿಂದ ಹೊರಬಂದಿದೆ. ಇದು ಸಂಪೂರ್ಣವಾಗಿ ಹೊಸ ಮತ್ತು ವಿಶಿಷ್ಟ ವಿನ್ಯಾಸವನ್ನು ತರುತ್ತದೆ. ಸ್ವಿವೆಲ್ ಸ್ಕ್ರೀನ್ ಫೋನ್ ಡ್ಯುಯಲ್ ಸ್ಕ್ರೀನ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಒಂದನ್ನು 90 ಡಿಗ್ರಿಗಳಿಗೆ ಬದಲಾಯಿಸಬಹುದು. ಅಲ್ಲದೆ ಎಲ್ಜಿ ವಿಂಗ್ ಅನ್ನು ಸಾಮಾನ್ಯ, ಒಂದು-ಪರದೆಯ ಫೋನ್‌ನಂತೆ ಬಳಸಬಹುದು. ಆದರೆ ಎರಡು ಪರದೆಗಳನ್ನು ಹೊಂದಿರುವುದು ಈ ಸ್ಮಾರ್ಟ್‌ಫೋನ್‌ ಸ್ವಲ್ಪ ದಪ್ಪ ಮತ್ತು ಭಾರವಾಗಿರುತ್ತದೆ ಎನ್ನಲಾಗಿದೆ.

ಎಲ್ಜಿ ವಿಂಗ್ ಸ್ಮಾರ್ಟ್‌ಫೋನ್

ಇನ್ನು ಎಲ್ಜಿ ವಿಂಗ್ ಸ್ಮಾರ್ಟ್‌ಫೋನ್‌ ಪ್ರೈಮರಿ ಡಿಸ್‌ಪ್ಲೇ 6.8-ಇಂಚಿನ ಬಾಗಿದ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಇದು ಫುಲ್‌ ಹೆಚ್‌ಡಿ + ರೆಸಲ್ಯೂಶನ್ ಮತ್ತು 20.5: 9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದಲ್ಲದೆ ಜಿ-ಒಎಲ್ಇಡಿ ಫಲಕವನ್ನು ಬಳಸುವ ಮೂಲಕ ಎರಡನೇ ಪರದೆಯು 3.9 ಇಂಚುಗಳಷ್ಟು ಚಿಕ್ಕದಾಗಿದೆ. ಇದು ಫುಲ್‌ ಹೆಚ್‌ಡಿ + ರೆಸಲ್ಯೂಶನ್ ಮತ್ತು 1.15: 1 ರ ಅನುಪಾತವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಸ್ವಿವೆಲ್ ವಿನ್ಯಾಸವು ಡ್ಯುಯಲ್-ಸ್ಪ್ರಿಂಗ್ ಮತ್ತು ಡ್ಯುಯಲ್-ಲಾಕ್ ಕಾರ್ಯವಿಧಾನದೊಂದಿಗೆ ಹಿಂಜ್ ಹೊಂದಿದ್ದು, ಇದು ಮುಖ್ಯ ಪರದೆಯನ್ನು ತಿರುಗಿಸಲು ಅನುವು ಮಾಡಿಕೊಡುತ್ತದೆ. ಕಾರ್ಯನಿರ್ವಹಿಸುವಾಗ ಆಘಾತಗಳನ್ನು ಕಡಿಮೆ ಮಾಡಲು ಹೈಡ್ರಾಲಿಕ್ ಡ್ಯಾಂಪರ್ ಸಹ ಇದೆ.

ಎಲ್‌ಜಿ ವಿಂಗ್

ಇದಲ್ಲದೆ ಎಲ್‌ಜಿ ವಿಂಗ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್‌ 765G SoC ಪ್ರೊಸೆಸರ್‌ ಅನ್ನು ಹೊಂದಿದೆ. ಜೊತೆಗೆ 8GB RAM ಮತ್ತು 128GB ಅಥವಾ 256GB ನಡುವಿನ ಆಂತರಿಕ ಶೇಖರಣಾ ಆಯ್ಕೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಅಲ್ಲದೆ ಇದು ಯಾಂತ್ರಿಕೃತ ಪಾಪ್-ಅಪ್ ಮಾಡ್ಯೂಲ್ ಅನ್ನು ಒಳಗೊಂಡಿರುವ ಎಲ್ಜಿಯ ಮೊದಲ ಸ್ಮಾರ್ಟ್‌ಫೋನ್‌ ಇದಾಗಿದೆ.

Best Mobiles in India

Read more about:
English summary
LG Wing was first unveiled last month globally, and now LG is bringing the device to India on October 28.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X