ನೀವು ಎಲ್‌ಐಸಿ ಪಾಲಿಸಿದಾರರೇ.. ಮತ್ಯಾಕೆ ತಡ ಈ ಸೇವೆಯನ್ನೂ ಬಳಸಿ!

|

ಜೀವನ ಭದ್ರತೆಗಾಗಿ ಭಾರತೀಯ ಜೀವ ವಿಮಾ ನಿಗಮ ಪಾಲಿಸಿ ಮಾಡಿಸಿಕೊಂಡಿರುವವರು ಎಲ್‌ಐಸಿ ಏಜೆಂಟ್‌ಗಳೋ ಅಥವಾ ವೆಬ್‌ಸೈಟ್‌ ಮೂಲಕವೋ ತಮ್ಮ ಪಾಲಿಸಿ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಪಡೆಯಬೇಕಿತ್ತು. ಆದರೆ, ಇನ್ಮುಂದೆ ಈ ನಿಯಮ ಬದಲಾಗಿದ್ದು, ಎಲ್‌ಐಸಿ ಹೊಸ ಸೌಲಭ್ಯವೊಂದನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಈ ಮೂಲಕ ಬೆರಳ ತುದಿಯಲ್ಲೇ ಎಲ್‌ಐಸಿ ಪಾಲಿಸಿ ಬಗ್ಗೆ ಮಾಹಿತಿ ತಿಳಿದುಬರಲಿದೆ .

ಸ್ಮಾರ್ಟ್‌ಫೋನ್‌

ಹೌದು, ಇಂದಿನಿಂದ ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕವೇ ಎಲ್‌ಐಸಿ ಸಂಬಂಧಿತ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಸೇವೆ ಪಡೆಯಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಇದ್ದರೆ ಸಾಕು. ಈ ವಾಟ್ಸಾಪ್‌ ಸೇವೆಯ ಮೂಲಕ ನಿಮ್ಮ ಪಾಲಿಸಿ ಯಾವ ಸ್ಥಿತಿಯಲ್ಲಿದೆ ಅಥವಾ ಯಾವ ಸಮಯಕ್ಕೆ ಹಣ ಪಾವತಿ ಮಾಡಬೇಕು ಎಂಬಿತ್ಯಾದಿ ಮಾಹಿತಿಯನ್ನು ವಾಟ್ಸಾಪ್‌ನಲ್ಲೇ ಪಡೆಯಬಹುದಾಗಿದೆ. ಹಾಗಿದ್ರೆ ಮತ್ಯಾಕೆ ತಡ, ಎಲ್‌ಐಸಿಯ ಈ ವಾಟ್ಸಾಪ್ ಸೇವೆಯನ್ನು ಪಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ.

ಎಲ್‌ಐಸಿ ವಾಟ್ಸಾಪ್ ಸೇವೆ ಎಂದರೇನು?

ಎಲ್‌ಐಸಿ ವಾಟ್ಸಾಪ್ ಸೇವೆ ಎಂದರೇನು?

ಈಗಾಗಲೇ ಹಲವಾರು ಬ್ಯಾಂಕ್‌ಗಳು ಈ ರೀತಿಯ ಸೇವೆ ನೀಡುತ್ತಿರುವುದು ನಿಮಗೆ ಗೊತ್ತಿರಬಹುದು. ಇದೇ ಮಾದರಿಯಲ್ಲಿ ನಿಮಗೆ ಈ ಸೌಲಭ್ಯ ಲಭ್ಯವಾಗಲಿದೆ. ಎಲ್‌ಐಸಿಯವರು ನೀಡಿರುವ ನಂಬರ್‌ ಬಳಕೆ ಮಾಡಿಕೊಂಡು ಎಲ್‌ಐಸಿಯ 11 ಸೇವೆಗಳನ್ನು ಪಡೆಯಲು ವಾಟ್ಸಾಪ್‌ನಲ್ಲಿ 'hi' ಎಂದು ಟೈಪ್‌ ಮಾಡಿದರೆ ಸಾಕು.

ವಾಟ್ಸಾಪ್ ಸಂಖ್ಯೆ ಯಾವುದು?

ವಾಟ್ಸಾಪ್ ಸಂಖ್ಯೆ ಯಾವುದು?

ನಿಗಮದ ವಾಟ್ಸಾಪ್‌ ಸೇವೆಯನ್ನು ಪಡೆದುಕೊಳ್ಳಲು ನೀವು 8976862090 ನಂಬರ್‌ ಅನ್ನು ಸೇವ್‌ ಮಾಡಿಕೊಳ್ಳಬೇಕಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ ಎಲ್‌ಐಸಿ ಪೋರ್ಟಲ್‌ನಲ್ಲಿ ಪಾಲಿಸಿಯನ್ನು ನೋಂದಾಯಿಸಿದ ಪಾಲಿಸಿದಾರರು ಮಾತ್ರ ಈ ವಾಟ್ಸಾಪ್ ಸೇವೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ. ನೀವೇನಾದ್ರೂ ಈವರೆಗೂ ನೋಂದಾಯಿಸಿಲ್ಲ ಎಂದರೆ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ನೋಂದಣಿ ಪ್ರಕ್ರಿಯೆ ಮುಗಿಸಿ.

 ವಾಟ್ಸಾಪ್‌ನಲ್ಲಿ ಲಭ್ಯವಾಗುವ ಸೇವೆಗಳಾವುವು?

ವಾಟ್ಸಾಪ್‌ನಲ್ಲಿ ಲಭ್ಯವಾಗುವ ಸೇವೆಗಳಾವುವು?

ವಾಟ್ಸಾಪ್‌ ಮೂಲಕ ನೀವು ಪ್ರೀಮಿಯಂ ಬಾಕಿ, ಬೋನಸ್ ಮಾಹಿತಿ, ಪಾಲಿಸಿ ಸ್ಟೇಟಸ್‌, ಲೋನ್‌ ಎಲಿಜಬಿಲಿಟಿ ಕೊಟೇಷನ್‌, ಸಾಲ ಮರುಪಾವತಿಯ ಕೊಟೇಷನ್‌, ಸಾಲದ ಬಡ್ಡಿ ಬಾಕಿ, ಪ್ರೀಮಿಯಂ ಪಾವತಿಸಿದ ಪ್ರಮಾಣಪತ್ರ, ULIP ಸ್ಟೇಟ್ಮೆಂಟ್ ಆಫ್‌ ಯುನಿಟ್ಸ್‌, LIC ಸೇವಾ ಲಿಂಕ್‌ಗಳನ್ನು ಇದರಲ್ಲಿ ಪಡೆಯಬಹುದಾಗಿದೆ.

ವೆಬ್‌ಸೈಟ್‌ನಲ್ಲಿ ಪಾಲಿಸಿ ನೋಂದಾಯಿಸಿಕೊಳ್ಳುವುದು ಹೇಗೆ ?

ವೆಬ್‌ಸೈಟ್‌ನಲ್ಲಿ ಪಾಲಿಸಿ ನೋಂದಾಯಿಸಿಕೊಳ್ಳುವುದು ಹೇಗೆ ?

ಹಂತ 1
ಮೊದಲು ನೀವು ನಿಮ್ಮ ಪಿಸಿಯಲ್ಲಿ www.licindia.in ಗೆ ಭೇಟಿ ನೀಡಿ ಅಲ್ಲಿ 'ಕಸ್ಟಮರ್‌ ಪೋರ್ಟಲ್' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. ನಂತರ 'ನ್ಯೂ ಯೂಸರ್‌' ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

ಹಂತ 2
'ನ್ಯೂ ಯೂಸರ್‌' ಕ್ಲಿಕ್ ಮಾಡಿದ ನಂತರ ಅದರಲ್ಲಿ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಜೊತೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಅಲ್ಲಿ ಭರ್ತಿ ಮಾಡಿ. ಇದಾದ ಬಳಿಕ 'ಇ-ಸರ್ವಿಸ್' ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಅದರಲ್ಲಿ ಹೊಸದಾಗಿ ರಚಿಸಿದ ಬಳಕೆದಾರ ಐಡಿಯನ್ನು ಬಳಸಿಕೊಂಡು ಲಾಗ್ ಇನ್ ಮಾಡಿ ಮತ್ತು ಅಲ್ಲಿ ಕೇಳಲಾಗುವ ಫಾರ್ಮ್ ಅನ್ನು ಭರ್ತಿ ಮಾಡಿ.

ಹಂತ 3

ಹಂತ 3
ಮಾಹಿತಿಯನ್ನು ಭರ್ತಿ ಮಾಡಿದ ನಂತರ ಅದನ್ನು ಪ್ರಿಂಟ್ ತೆಗೆದುಕೊಂಡು ನಂತರ ಅದರಲ್ಲಿ ಸಹಿ ಮಾಡಿ ಬಳಿಕ ಸ್ಕ್ಯಾನ್ ಮಾಡಿ ಮತ್ತೆ ಅದನ್ನು ಕೇಳಲಾದ ವಿಭಾಗದಲ್ಲಿ ಅಪ್‌ಲೋಡ್ ಮಾಡಿ. ಈ ವೇಳೆ ನೀವು ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್‌ ಅನ್ನು ಸಹ ಅಪ್‌ಲೋಡ್‌ ಮಾಡಬೇಕಿರುತ್ತದೆ.

ಹಂತ 4
ನಂತರ ನಿಮ್ಮ ಅರ್ಜಿಯನ್ನು ಪರಿಶೀಲನೆ ನಡೆಸಿ ನಿಮಗೆ ಸ್ವೀಕೃತಿ ಸಂಬಂಧ ಇಮೇಲ್‌ ಹಾಗೂ ಎಸ್‌ಎಮ್‌ಎಸ್‌ ಕಳುಹಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ 'ಸಬ್‌ಮಿಟ್‌' ಬಟನ್‌ ಮೇಲೆ ಕ್ಲಿಕ್‌ ಮಾಡಿ ಹಾಗೂ ಅದರಲ್ಲಿ ಕೇಳಲಾಗುವ ಪಾಸ್‌ವರ್ಡ್‌ ಹಾಗೂ ಯೂಸರ್‌ ಐಡಿಯನ್ನು ನಮೂದು ಮಾಡುವ ಮೂಲಕ ಲಾಗ್‌ಇನ್‌ ಆಗಬಹುದು. ಇದಾದ ನಂತರ 'ಬೇಸಿಕ್‌ ಸರ್ವಿಸ್‌' ವಿಭಾಗದಲ್ಲಿ 'ಆಡ್‌ ಪಾಲಿಸಿ' ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮ್ಮ ಪಾಲಿಸಿಗಳನ್ನು ನೋಂದಾಯಿಸಿದರೆ ಆಯ್ತು.

Best Mobiles in India

English summary
LIC launches WhatsApp services for customers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X