ವ್ಯಾಲೆಂಟೈನ್ಸ್ ಡೇ: ಮಾರುಟಕ್ಟೆಗೆ ಬರಲಿದೆ ಹಾನರ್ 7X ರೆಡ್

By Tejaswini P G

  ಹುವಾವೆ ಸಂಸ್ಥೆಯ ಇ-ಬ್ರ್ಯಾಂಡ್ ಹಾನರ್ ತನ್ನ ಸ್ಮಾರ್ಟ್ಫೋನ್ ಆದ ಹಾನರ್ 7X ನ ಸೀಮಿತ ಆವೃತ್ತಿಯೊಂದನ್ನು ಲಾಂಚ್ ಮಾಡುವುದಾಗಿ ತಿಳಿಸಿದ್ದು,ಈ ಹೊಸ ಸೀಮಿತ ಆವೃತ್ತಿ ಕೆಂಪು ಬಣ್ಣದ್ದಾಗಿದೆ.

  ವ್ಯಾಲೆಂಟೈನ್ಸ್ ಡೇ: ಮಾರುಟಕ್ಟೆಗೆ ಬರಲಿದೆ ಹಾನರ್ 7X ರೆಡ್

  ಹಾನರ್ 7X ರೆಡ್ ಸೀಮಿತ ಆವೃತ್ತಿಯಾಗಿರುವ ಕಾರಣ ಕೇವಲ 20,000 ಯುನಿಟ್ ಗಳು ಖರೀದಿಗೆ ಲಭ್ಯವಿದ್ದು ಯುಎಸ್, ರಶ್ಯಾ, ಭಾರತ, ಯುಕೆ, ಫ್ರಾನ್ಸ್, ಜರ್ಮನಿ, ಇಟೆಲಿ, ಮತ್ತು ಸ್ಪೇಯ್ನ್ ಮೊದಲಾದ ದೇಶಗಳಲ್ಲಿ ಮಾರಾಟವಾಗಲಿದೆ. ಈ ಮೊಬೈಲ್ಗಳು ಫೆಬ್ರವರಿ 14 ಅಂದರೆ ವ್ಯಾಲೆಂಟೈನ್ಸ್ ಡೇ ಕ್ಕಿಂತ ಸ್ವಲ್ಪ ಮುಂಚಿತವಾಗಿ ಮಾರಾಟಕ್ಕೆ ಲಭ್ಯವಾಗಲಿದೆ. ಆದರೆ ಇದನ್ನು ಖರೀದಿಸಲು ಬಯಸುವ ಗ್ರಾಹಕರು ಸಧ್ಯದಲ್ಲೇ ಇದನ್ನು ಹುವಾವೆ ಸಂಸ್ಥೆಯ ಆನ್ಲೈನ್ ಮಳಿಗೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಇದರ ಬೆಲೆಯ ಬಗ್ಗೆ ಹೇಳುವುದಾದರೆ ಈ ಸೀಮಿತ ರೆಡ್ ಆವೃತ್ತಿ ಹಾನರ್ 7X ನ ಮೂಲ ಆವೃತ್ತಿಗಿಂತ ಸ್ವಲ್ಪ ದುಬಾರಿಯಾಗಿದೆ.

  ಮತ್ತೊಂದು ವಿಶೇಷತೆಯೆಂದರೆ ಈ ಮೊದಲು ಹೇಳಿರುವ ಪ್ರತಿಯೊಂದು ದೇಶದಲ್ಲಿ ಸೀಮಿತ ಆವೃತ್ತಿ ಹಾನರ್ 7X ರೆಡ್ ಅನ್ನು ಖರೀದಿಸುವ ಮೊದಲ 100 ಗ್ರಾಹಕರಿಗೆ ಕೆಂಪು ಬಣ್ಣದ ಹಾನರ್-ಮಾನ್ಸ್ಟರ್ ಕೋ-ಬ್ರ್ಯಾಂಡ್ ನ AM15 ಹೆಡ್ಫೋನ್ಗಳನ್ನು ವಿಶೇಷ ಉಡುಗೊರೆಯಾಗಿ ಸಿಗಲಿದೆ.

  ಹಾನರ್ 7X ನ ಸ್ಪೆಸಿಫಿಕೇಶನ್ಗಳ ಕುರಿತು ಹೇಳುವುದಾದರೆ ಇದರಲ್ಲಿದೆ 5.93-ಇಂಚ್ ಫುಲ್-HD+ ಡಿಸ್ಪ್ಲೇ , 18:9 ಆಸ್ಪೆಕ್ಟ್ ಅನುಪಾತ ಮತ್ತು 1080X1260 ಸ್ಕ್ರೀನ್ ರೆಸೊಲ್ಯೂಶನ್ ನೊಂದಿಗೆ. ಇಷ್ಟೇ ಅಲ್ಲದೆ ಇದರ ಡಿಸ್ಪ್ಲೇಯ ಹೆಚ್ಚಿನ ಸುರಕ್ಷತೆಗಾಗಿ 2.5D ಗ್ಲಾಸ್ ನ ಮೇಲ್ಕವಚವೂ ಈ ಸ್ಮಾರ್ಟ್ಫೋನ್ ನಲ್ಲಿದೆ.

  ಹಾನರ್ 7X ಹಿಂಬದಿಯಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಹೊಂದಿದ್ದು 16MP ಮತ್ತು 2MP ನ ಎರಡು ಸೆನ್ಸರ್ ಗಳನ್ನು ಹೊಂದಿದೆ. ಹಾಗೆಯೇ 8MP ನ ಫ್ರಂಟ್ ಕ್ಯಾಮೆರಾವನ್ನು ಕೂಡ ಈ ಸ್ಮಾರ್ಟ್ಫೋನ್ ಹೊಂದಿದೆ.

  ಜಿಯೋವಿನಿಂದ ಮತ್ತೆ ಹೊಸ ರೀಚಾರ್ಜ್ ಆಫರ್‌ಗಳು ಬಿಡುಗಡೆ!!..ಗ್ರಾಹಕರು ಫುಲ್ ಖುಷ್!!

  3340 mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಹಾನರ್ 7X ಆಂಡ್ರಾಯ್ಡ್ 7.0 ನುಗಾಟ್ ಆಪರೇಟಿಂಗ್ ಸಿಸ್ಟಮ್ ಮತ್ತು EMUI5.0 ನ ಮೇಲ್ಪದರವನ್ನೂ ಹೊಂದಿದೆ. 156.50X75.30X7.60mm ಸುತ್ತಳತೆ ಹೊಂದಿರುವ ಹಾನರ್ 7X 165.00 ಗ್ರಾಂ ತೂಕವಿದೆ.

  ಹುವಾವೆ ಹಾನರ್ 7X ಡ್ಯುಯಲ್ ಸಿಮ್(GSM ಮತ್ತು GSM) ಫೋನ್ ಆಗಿದ್ದು ಎರಡು ನ್ಯಾನೋ ಸಿಮ್ ಗಳನ್ನು ಬಳಸಬಹುದಾಗಿದೆ.ವೈಫೈ, ಜಿಪಿಎಸ್, ಬ್ಲೂಟೂತ್, USB OTG, 3G ಮತ್ತು 4G ಮೊದಲಾದ ಕನೆಕ್ಟಿವಿಟಿ ಆಯ್ಕೆಗಳು ಇಲ್ಲಿದೆ. ಅಲ್ಲದೆ ಕಂಪಾಸ್ ಮ್ಯಾಗ್ನೆಟೋಮೀಟರ್, ಪ್ರಾಕ್ಸಿಮಿಟಿ ಸೆನ್ಸರ್, ಆಕ್ಸೆಲರೋಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಗೈರೊಸ್ಕೋಪ್ ಮೊದಲಾದ ಸೆನ್ಸರ್ಗಳು ಇದರಲ್ಲಿದೆ.

  How to create two accounts in one Telegram app (KANNADA)
  ಹಾನರ್ 7X ಈಗಾಗಲೇ ಬ್ಲೂ, ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣದ ಆವೃತ್ತಿಗಳಲ್ಲಿ ಲಭ್ಯವಿದೆ. ಹಾನರ್ 7X ಈಗಾಗಲೇ ಭಾರತದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು ಇದರ ಹೊಸ ಸೀಮಿತ ರೆಡ್ ಆವೃತ್ತಿ ಕೂಡ ಜನರಿಗೆ ಇಷ್ಟವಾಗಲಿದೆ ಎನ್ನುವ ಅನಿಸಿಕೆ ನಮ್ಮದು.

  English summary
  The first 100 customers who purchase the limited edition Honor 7X Red, will receive a Red co-branded Honor-Monster AM15 headphones as a special gift.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more