ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್‌ಗಳು ಬೆಸ್ಟ್‌!

|

ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್‌, ಜಿಯೋ, ವಿ ಗೆ ಪೈಪೋಟಿ ನೀಡುತ್ತಾ ಬರುತ್ತಿರುವ ಬಿಎಸ್‌ಎನ್‌ಎಲ್‌ ಹಲವಾರು ರೀತಿಯ ಅಗ್ಗದ ಹಾಗೂ ಹಲವು ಸೌಲಭ್ಯ ಇರುವ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರು ಸಾಕಷ್ಟು ಪ್ರಯೋಜನ ಪಡೆಯಬಹುದಾಗಿದ್ದು, ಈ ಪ್ಲ್ಯಾನ್‌ಗಳಲ್ಲಿ ದೈನಂದಿನ ಪ್ಲ್ಯಾನ್‌ಗಳಿಂದ ಹಿಡಿದು ವಾರ್ಷಿಕ ಮಾನ್ಯತೆಯ ಡೇಟಾ ಪ್ಲ್ಯಾನ್‌ಗಳು ವಿಶೇಷ ಎನಿಸಿವೆ.

ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್‌ಗಳು ಬೆಸ್ಟ್‌!

ಹೌದು, ಬಿಎಸ್‌ಎನ್‌ಎಲ್‌ (BSNL) ಪೂರ್ಣ ಪ್ರಮಾಣದ 4G ನೆಟ್‌ವರ್ಕ್ ಅಥವಾ 5G ಸೇವೆಯನ್ನು ಇನ್ನೂ ನೀಡಿಲ್ಲ ಎನ್ನುವುದು ಒಂದು ವಿಷಯವಾದರೆ ಇದರ ಹೊರತಾಗಿ ಈ ರೀತಿಯ ರೀಚಾರ್ಜ್‌ ಪ್ಲ್ಯಾನ್‌ಗಳು ಹಲವಾರು ಬಳಕೆದಾರರಿಗೆ ಸಾಕಷ್ಟು ಪ್ರಯೋಜನ ನೀಡುತ್ತವೆ. ಅದರಲ್ಲೂ ಹೆಚ್ಚಿನ ಡೇಟಾ ಬಳಕೆ ಮಾಡುವವರಿಗೆ ಈ ಪ್ಲ್ಯಾನ್‌ಗಳು ಅನುಕೂಲ. ಹಾಗಿದ್ರೆ, ಯಾವೆಲ್ಲಾ ರೀಚಾರ್ಜ್‌ ಪ್ಲ್ಯಾನ್‌ಗಳು ಏನೆಲ್ಲಾ ಆಫರ್‌ ಹೊಂದಿವೆ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಬಿಎಸ್‌ಎನ್‌ಎಲ್‌ 16 ರೂ. ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌

ಸಾಮಾನ್ಯವಾಗಿ ಈ ರೀಚಾರ್ಜ್‌ ಪ್ಲ್ಯಾನ್‌ಅನ್ನು ಸಾಕಷ್ಟು ಜನ ಅಗತ್ಯಕ್ಕೆ ತಕ್ಕಂತೆ ಮಾಡಿಸಿಕೊಳ್ಳುತ್ತಿದ್ದಾರೆ. ದೈನಂದಿನ ಡೇಟಾ ಖಾಲಿಯಾದರೆ ಈ 16 ಪ್ರಿಪೇಯ್ಡ್ ಡೇಟಾ ಪ್ಯಾಕ್ ಸಹಕಾರಿಯಾಗಲಿದ್ದು, ಈ ಮೂಲಕ ಬಳಕೆದಾರರು 2 GB ಡೇಟಾವನ್ನು ಒಂದು ದಿನದ ಮಾನ್ಯತೆಯೊಂದಿಗೆ ಪಡೆಯಬಹುದಾಗಿದೆ.

ಬಿಎಸ್‌ಎನ್‌ಎಲ್‌ 151 ರೂ. ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ನ 151 ರೂ. ಗಳ ಮತ್ತೊಂದು ಡೇಟಾ ಪ್ಲ್ಯಾನ್‌ ಸಾಕಷ್ಟು ಜನಪ್ರಿಯವಾಗಿದೆ. ಯಾಕೆಂದರೆ ಈ ಪ್ಲ್ಯಾನ್‌ನಲ್ಲಿ ಬಳಕೆದಾರರು 40 GBಯ ಬೃಹತ್ ಡೇಟಾ ಪ್ರಯೋಜನ ಪಡೆಯಬಹುದಾಗಿದ್ದು,ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಬಿಎಸ್‌ಎನ್‌ಎಲ್‌ ಇದನ್ನು ವರ್ಕ್ ಫ್ರಮ್ ಹೋಮ್ ಪ್ಯಾಕ್ ಘೋಷಣೆ ಮಾಡಲಾಗಿದ್ದು, ಮನೆಯಲ್ಲೇ ಕೆಲಸ ಮಾಡುವ ಅದೆಷ್ಟೋ ಉದ್ಯೋಗಿಗಳಿಗೆ ಇದು ಸಹಕಾರಿ.

ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್‌ಗಳು ಬೆಸ್ಟ್‌!

ಬಿಎಸ್‌ಎನ್‌ಎಲ್‌ 198 ರೂ. ಗಳ ಪ್ರಿಪೇಯ್ಡ್ ಡೇಟಾ ಪ್ಯಾಕ್

ಬಿಎಸ್‌ಎನ್‌ಎಲ್‌ನ ಮಗದೊಂದು ಡೇಟಾ ಪ್ಯಾಕ್‌ ಅಂದರೆ 198 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌. ಇದರಲ್ಲಿ ನೀವು ದಿನವೂ 2 GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, 40 ದಿನಗಳ ಮಾನ್ಯತೆ ಹೊಂದಿದೆ. ಹಾಗೆಯೇ ಈ ಡೇಟಾವನ್ನು 40 Kbps ವೇಗದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಹಲವಾರು ಗೇಮಿಂಗ್‌ ಪ್ರಯೋಜನಗಳನ್ನು ನೀಡಲಿದೆ.

ಬಿಎಸ್‌ಎನ್‌ಎಲ್‌ 251 ರೂ. ಗಳ ಪ್ರಿಪೇಯ್ಡ್ ಡೇಟಾ ಪ್ಯಾಕ್

ಬಿಎಸ್‌ಎನ್‌ಎಲ್‌ನ 251 ರೂ. ಗಳ ಪ್ರಿಪೇಯ್ಡ್ ಡೇಟಾ ಪ್ಯಾಕ್ ನಲ್ಲಿ ಗ್ರಾಹಕರು 70 GB ಬೃಹತ್ ಡೇಟಾವನ್ನು ಪಡೆಯಬಹುದಾಗಿದ್ದು, ಇದು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಹಾಗೆಯೇ ಜಿಂಗ್‌ ಸೌಲಭ್ಯ ಸಹ ಲಭ್ಯ. ಅದರಲ್ಲೂ ನಿಮ್ಮ ಪ್ರದೇಶದಲ್ಲಿ ಏನಾದರೂ 4G ನೆಟ್‌ವರ್ಕ್ ಹೊಂದಿದ್ದರೆ ಅಥವಾ 3G ನೆಟ್‌ವರ್ಕ್‌ ಹೊಂದಿದ್ದರೆ ಈ ಪ್ಯಾಕ್‌ ಬಹಳಷ್ಟು ಪ್ರಯೋಜನಕಾರಿ.

ಬಿಎಸ್‌ಎನ್‌ಎಲ್‌ 398 ರೂ. ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ 398 ರೂ. ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌ನಲ್ಲಿ ಬಳಕೆದಾರರು ಅನಿಯಮಿತ ಡೇಟಾವನ್ನು ಬಳಕೆ ಮಾಡಬಹುದಾಗಿದೆ. ಈ ಪ್ಲ್ಯಾನ್ 30 ದಿನಗಳ ಮಾನ್ಯತೆ ಹೊಂದಿದ್ದು, ಈ ಡೇಟಾ ಪ್ರಯೋಜನದ ಜೊತೆಗೆ ದಿನವೂ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯ್ಸ್‌ ಕಾಲ್‌ ಸೇವೆ ಪಡೆಯಬಹುದಾಗಿದೆ. ಇದರೊಂದಿಗೆ ಎಮ್‌ಟಿಎನ್‌ಎಲ್‌ ನೆಟ್‌ವರ್ಕ್‌ನಲ್ಲಿ ರೋಮಿಂಗ್‌ನಲ್ಲಿ ಸೌಲಭ್ಯ ಸಹ ಲಭ್ಯವಾಗಲಿದೆ.

ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್‌ಗಳು ಬೆಸ್ಟ್‌!

ಬಿಎಸ್‌ಎನ್‌ಎಲ್‌ 1,515 ರೂ. ಗಳ ಪ್ರಿಪೇಯ್ಡ್ ಡೇಟಾ ಯೋಜನೆ

ಬಿಎಸ್‌ಎನ್‌ಎಲ್‌ನ 1,515 ರೂ. ಗಳ ಪ್ರಿಪೇಯ್ಡ್ ಡೇಟಾ ಯೋಜನೆಯಲ್ಲಿ ಬಳಕೆದಾರರು 40 Kbps ವೇಗದೊಂದಿಗೆ 2 GB ದೈನಂದಿನ ಡೇಟಾ ಪಡೆದುಕೊಳ್ಳಬಹುದಾಗಿದೆ. ಈ ಪ್ಲ್ಯಾನ್‌ ಬರೋಬ್ಬರಿ 365 ದಿನಗಳು ಅಂದರೆ ಒಂದು ವರ್ಷದ ಮಾನ್ಯತೆ ಹೊಂದಿರಲಿದೆ.

ಈ ಎಲ್ಲಾ ವಿಶೇಷ ಪ್ಲ್ಯಾನ್‌ಗಳ ಜೊತೆಗೆ ಹೊಸ ಹೊಸ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಘೋಷಣೆ ಮಾಡುತ್ತಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಮತ್ತು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL) ಲೆಗಸಿ ನೆಟ್‌ವರ್ಕ್‌ಗಳನ್ನು 4G ಮತ್ತು 5G ಗೆ ನವೀಕರಿಸುವ ಉದ್ದೇಶದಿಂದ ಭಾರತ ಸರ್ಕಾರದಿಂದ 53,000 ಕೋಟಿ ರೂಪಾಯಿಗಳನ್ನು ಪಡೆಯಲಿದೆ.

Best Mobiles in India

English summary
BSNL is giving competition to major telecom companies like Airtel, Jio, V. As a part of this, these data plans of BSNL are quite special and many benefits will be available.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X