ಲಾಯ್ಡ್‌ ಕಂಪೆನಿಯ ಹೊಸ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ! ಬೆಲೆ ಎಷ್ಟು?.ಫೀಚರ್ಸ್‌ ಹೇಗಿದೆ?

|

ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಗಳ ಟಿವಿಗಳು ಲಭ್ಯವಿದೆ. ವೈವಿಧ್ಯಮಯ ಸ್ಮಾರ್ಟ್‌ಟಿವಿಗಳನ್ನು ಹಲವು ಕಂಪೆನಿಗಳು ಪರಿಚಯಿಸುತ್ತಾ ಬಂದಿದೆ. ಇದೀಗ ಸ್ಮಾರ್ಟ್‌ಟಿವಿ ತಯಾರಕ ಕಂಪೆನಿಗಳಲ್ಲಿ ಒಂದಾದ Lloyd ಕಂಪೆನಿ ಹೊಸ ಲಾಯ್ಡ್‌ QLED ಗೂಗಲ್‌ ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ ನಾಲ್ಕು ಡಿಸ್ಪ್ಲೇ ಗಾತ್ರಗಳನ್ನು ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸರಣಿ ಫಾರ್‌ ಫಿಲ್ಡ್‌ ಟೆಕ್ನಾಲಜಿಯನ್ನು ಹೊಂದಿರುವುದು ಪ್ರಮುಖ ಹೈಲೈಟ್‌ ಆಗಿದೆ.

ಲಾಯ್ಡ್

ಹೌದು, ಲಾಯ್ಡ್ ಕಂಪೆನಿ ಭಾರತದಲ್ಲಿ ತನ್ನ ಸ್ಮಾರ್ಟ್‌ಟಿವಿ ಸರಣಿಗೆ ಹೊಸ ಲಾಯ್ಡ್‌ QLED ಗೂಗಲ್ ಟಿವಿ ಸರಣಿಯನ್ನು ಸೇರ್ಪಡೆ ಮಾಡಿದೆ. ಈ ಸರಣಿಯಲ್ಲಿ ಬರುವ ಸ್ಮಾರ್ಟ್‌ಟಿವಿಗಳು ಕ್ಯೂಎಲ್‌ಇಡಿ ಪ್ಯಾನೆಲ್‌ ಅನ್ನು ಹೊಂದಿರಲಿವೆ. ಇದು ಗೂಗಲ್‌ ಟಿವಿ ಆಗಿರುವುದರಿಂದ ಗೂಗಲ್‌ ಅಸಿಸ್ಟೆಂಟ್‌ ಮತ್ತು ಇಂಟರ್‌ಬಿಲ್ಟ್‌ ಕ್ರೋಮಾಕಾಸ್ಟ್‌ಗೆ ಪ್ರವೇಶವನ್ನು ಸಹ ನೀಡಲಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಟಿವಿ ಸರಣಿಯ ವಿಶೇಷತೆ ಏನಿದೆ? ಇದರ ಬೆಲೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲಾಯ್ಡ್‌

ಲಾಯ್ಡ್‌ ಕಂಪೆನಿಯ ಲಾಯ್ಡ್‌ QLED ಗೂಗಲ್‌ ಟಿವಿ ನಾಲ್ಕು ವಿಭಿನ್ನ ಡಿಸ್‌ಪ್ಲೇ ಗಾತ್ರಗಳಲ್ಲಿ ಬರಲಿದೆ. ಇವುಗಳನ್ನು ಲಾಯ್ಡ್‌ QLED ಗೂಗಲ್‌ TV 43-ಇಂಚಿನ (43US900B), 55-ಇಂಚು (55US900B), 65-ಇಂಚು(65QX900D) ಮತ್ತು 75-ಇಂಚು (75QX900D) ಎಂದು ಹೆಸರಿಸಲಾಗಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಟಿವಿಗಳ ಸ್ಕ್ರೀನ್‌ 3,840 x 2,160 ಪಿಕ್ಸೆಲ್‌ 4K UHD ರೆಸಲ್ಯೂಶನ್ ಅನ್ನು ಹೊಂದಿದೆ. ಅಲ್ಲದೆ 5000:1 ರಚನೆಯ ಅನುಪಾತ ಮತ್ತು 350 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಪಡೆದುಕೊಂಡಿವೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ 64-ಬಿಟ್‌ ಕಾರ್ಟೆಕ್ಸ್-A55 ಕ್ವಾಡ್-ಕೋರ್ ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 9.0 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದರಲ್ಲಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವೀಡಿಯೊ, ಯೂಟ್ಯೂಬ್‌ ಸೇರಿದಂತೆ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಸಿಗಲಿದೆ. ಲಾಯ್ಡ್‌ QLED ಗೂಗಲ್‌ ಟಿವಿ 12W ವರೆಗಿನ ಸ್ಪೀಕರ್‌ಗಳನ್ನು ಹೊಂದಿದ್ದು, ಡಾಲ್ಬಿ ಡಿಕೋಡರ್‌ ಮೂಲಕ 5.1 ಸರೌಂಡ್ ಆಡಿಯೊ ಎಕ್‌ಪಿರಿಯನ್ಸ್‌ ನೀಡಲಿದೆ.

ಗೂಗಲ್‌

ಲಾಯ್ಡ್‌ QLED ಗೂಗಲ್‌ ಟಿವಿ ಇಂಟರ್‌ಬಿಲ್ಟ್‌ ಗೂಗಲ್‌ ಕ್ರೋಮಾಕಾಸ್ಟ್‌ ಅನ್ನು ಹೊಂದಿದೆ. ರಿಮೋಟ್‌ ಇಲ್ಲದೆ ಸ್ಮಾರ್ಟ್‌ಟಿವಿಯನ್ನು ನಿಯಂತ್ರಿಸಲು ಗೂಗಲ್‌ ಅಸಿಸ್ಟೆಂಟ್‌ ಬೆಂಬಲವನ್ನು ಕೂಡ ಪಡೆದಿದೆ. ಇದು ಫಾರ್‌-ಫೀಲ್ಡ್‌ ಟೆಕ್ನಾಲಜಿಯೊಂದಿಗೆ ಬರಲಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಮೈಕ್ರೋ-ಡಿಮ್ಮಿಂಗ್, ಡಾಲ್ಬಿ ವಿಷನ್ ಮತ್ತು HDR, ಹಾಗೆಯೇ 88% NTSC ಕಲರ್‌ ಗ್ಯಾಮಟ್‌ ಅನ್ನು ಕೂಡ ಬೆಂಬಲಿಸಲಿದೆ. ಇದಲ್ಲದೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, 3 x HDMI, 2 x USB, 1 x AV, 1 x RF ಮತ್ತು 1 x ಡಿಜಿಟಲ್ ಔಟ್ ಪೋರ್ಟ್‌ಗಳ ಬೆಂಬಲವನ್ನು ಕೂಡ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಲಾಯ್ಡ್‌ QLED ಗೂಗಲ್‌ ಟಿವಿ ಭಾರತದಲ್ಲಿ ನಾಲ್ಕು ಡಿಸ್‌ಪ್ಲೇ ಗಾತ್ರದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ 43 ಇಂಚಿನ ಸ್ಮಾರ್ಟ್‌ಟಿವಿಯ ಬೆಲೆ 33,990ರೂ. ಆಗಿದೆ. ಲಾಯ್ಡ್‌ QLED ಗೂಗಲ್‌ ಟಿವಿ 55 ಇಂಚಿನ ಮಾದರಿಯ ಆಯ್ಕೆಗೆ 52,990ರೂ. ಬೆಲೆ ಪಡೆದಿದೆ. ಇನ್ನು ಲಾಯ್ಡ್‌ QLED ಗೂಗಲ್‌ ಟಿವಿ 65 ಇಂಚಿನ ಆಯ್ಕೆಗೆ 76,990ರೂ. ಬೆಲೆ ಹೊಂದಿದೆ. ಇನ್ನು ಲಾಯ್ಡ್‌ QLED ಗೂಗಲ್‌ ಟಿವಿ 75 ಇಂಚಿನ ಮಾದರಿಯ ಆಯ್ಕೆಯು 1,24,990ರೂ. ಬೆಲೆಯಲ್ಲಿ ಬರಲಿದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿ ಲಾಯ್ಡ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಇದು ಇತರ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಔಟ್‌ಲೆಟ್‌ಗಳ ಮೂಲಕವೂ ಲಭ್ಯವಿರುತ್ತದೆ.

Best Mobiles in India

Read more about:
English summary
Lloyd QLED Google TV launched in India: specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X