ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡ ದೇಶದ ಬ್ರಾಡ್‌ಬ್ಯಾಂಡ್‌ ವೇಗ..!

By Gizbot Bureau
|

ಸ್ಮಾರ್ಟ್‌ಫೋನ್‌ ಜಗತ್ತು, ಇಂಟರ್‌ನೆಟ್‌ ಪೂರೈಕೆದಾರರ ಸಾಮರ್ಥ್ಯ ವೃದ್ಧಿಸಿದಂತೆ ಭಾರತದಲ್ಲಿ ಸರಾಸರಿ ಬ್ರಾಡ್‌ಬ್ಯಾಂಡ್ ಡೌನ್‌ಲೋಡ್ ವೇಗವು ಶೇ.16.5ರಷ್ಟು ಅಂದರೆ, 34.07Mpbs ಗೆ ಏರಿಕೆಯಾಗಿದೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ. "ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿನ ಇತ್ತೀಚಿನ ಪ್ರವೃತ್ತಿಗಳ ಎಕ್ಸ್‌ಪ್ಲೋರಿಂಗ್: ಕ್ಯೂ 2-ಕ್ಯೂ 3 2019" ವರದಿಯನ್ನು ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ನೆಟ್‌ವರ್ಕ್ ಇಂಟೆಲಿಜೆನ್ಸ್ ಸಂಸ್ಥೆ ಓಕ್ಲಾ ಪ್ರಕಟಿಸಿದ್ದು, ಬ್ರಾಡ್‌ಬ್ಯಾಂಡ್‌ ವೇಗ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ನಗರಗಳ ನಡುವೆ ವೇಗದ ಅಂತರ

ನಗರಗಳ ನಡುವೆ ವೇಗದ ಅಂತರ

2019ರ ಎರಡನೇ ಮತ್ತು ಮೂರನೇ ತ್ರೈಮಾಸಿಕ ಅವಧಿಯಲ್ಲಿ ಬ್ರಾಡ್‌ಬ್ಯಾಂಡ್ ವೇಗದ ಹೆಚ್ಚಳವನ್ನು ನೋಡುವುದಾದರೆ ಭಾರತೀಯ ನಗರಗಳ ನಡುವೆ ಅಸಮಾನತೆ ಇರುವುದು ಕಂಡುಬರುತ್ತದೆ. ಚೆನ್ನೈ 51.07Mpbs ಸರಾಸರಿ ಡೌನ್‌ಲೋಡ್ ವೇಗ ಹೊಂದಿದ್ದರೆ, ಬೆಂಗಳೂರು 42.50 Mbps, ಹೈದರಾಬಾದ್ 41.68 Mbps, ಮತ್ತು ರಾಷ್ಟ್ರ ರಾಜಧಾನಿ ದೆಹಲಿ 32.39 Mbps ವೇಗ ಹೊಂದಿದ್ದರೆ, 8.94Mbps ವೇಗ ಹೊಂದಿರುವ ಲಕ್ನೋ ನಿಧಾನಗತಿಯ ಡೌನ್‌ಲೋಡ್ ನಗರವಾಗಿದೆ.

ACT ಫೈಬರ್‌ನೆಟ್‌ ಅಗ್ರ

ACT ಫೈಬರ್‌ನೆಟ್‌ ಅಗ್ರ

ಅಧ್ಯಯನದ ಪ್ರಕಾರ, 2019ರ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಬ್ರಾಡ್‌ಬ್ಯಾಂಡ್ ಡೌನ್‌ಲೋಡ್ ವೇಗದಲ್ಲಿ ACT ಫೈಬರ್‌ನೆಟ್‌ ಅಗ್ರಸ್ಥಾನದಲ್ಲಿದೆ. ಕಂಪನಿಯು ಡೌನ್‌ಲೋಡ್ ವೇಗವನ್ನು 45.31 ರಿಂದ 47.74 ಎಂಬಿಪಿಎಸ್ ವರೆಗೆ ನೀಡಿದ್ದು, ನಂತರ ಹ್ಯಾಥ್‌ವೇ ಮತ್ತು ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ಗಳು ಸ್ಥಾನ ಪಡೆದಿವೆ.

ಜಿಯೋ, ಏರ್‌ಟೆಲ್‌ ಬೆಸ್ಟ್‌

ಜಿಯೋ, ಏರ್‌ಟೆಲ್‌ ಬೆಸ್ಟ್‌

2019ರ ದ್ವಿತೀಯ ಹಾಗೂ ತೃತೀಯ ತ್ರೈಮಾಸಿಕದಲ್ಲಿ ಭಾರತದ ಐದು ದೊಡ್ಡ ನಗರಗಳಲ್ಲಿ ಸ್ಥಿರ ಬ್ರಾಡ್‌ಬ್ಯಾಂಡ್‌ನಲ್ಲಿ ರಿಲಾಯನ್ಸ್ ಜಿಯೋ ವೇಗದ ಸೇವೆ ಸಲ್ಲಿಸಿದೆ. ಏರ್‌ಟೆಲ್ ಅತ್ಯಂತ ವೇಗದ ಮೊಬೈಲ್ ನೆಟ್‌ವರ್ಕ್ ಆಗಿದ್ದು, ನಾಗ್ಪುರದಲ್ಲಿ ಅತಿ ಹೆಚ್ಚಿನ ವೇಗದ ರೇಟಿಂಗ್‌ ಹೊಂದಿದೆ. ಮತ್ತೊಂದೆಡೆ, ರಿಲಾಯನ್ಸ್ ಜಿಯೋದ ವೇಗ ಆಗಸ್ಟ್‌ನಲ್ಲಿ 17.52 ಎಮ್‌ಬಿಪಿಎಸ್‌ಗೆ ಇಳಿದಿದ್ದರೆ, ಸೆಪ್ಟೆಂಬರ್‌ನಲ್ಲಿ 41.99 ಎಮ್‌ಬಿಪಿಎಸ್ ವೇಗಕ್ಕೆ ಹೆಚ್ಚಿಸಿಕೊಂಡಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಜಿಯೋ ಗಿಗಾಫೈಬರ್ ಸೇವೆ ಪ್ರಾರಂಭವಾಗಿರುವುದನ್ನು ಗಮನಿಸಬೇಕು.

ನೆರೆಯ ದೇಶಗಳಿಗಿಂತ ಉತ್ತಮ

ನೆರೆಯ ದೇಶಗಳಿಗಿಂತ ಉತ್ತಮ

ಬ್ರಾಡ್‌ಬ್ಯಾಂಡ್ ಡೌನ್‌ಲೋಡ್ ವೇಗದಲ್ಲಿ ಭಾರತ ತನ್ನ ನೆರೆಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಗಿಂತ ಉತ್ತಮ ಪ್ರದರ್ಶನ ನೀಡಿದೆ. 2019ರ ದ್ವಿತೀಯ ಹಾಗೂ ತೃತೀಯ ತ್ರೈಮಾಸಿಕದಲ್ಲಿ ಸರಾಸರಿ ಇಂಟರ್‌ನೆಟ್ ವೇಗ ಬಾಂಗ್ಲಾದೇಶದಲ್ಲಿ 10.43Mbps ಮತ್ತು ಪಾಕಿಸ್ತಾನದಲ್ಲಿ 15.55Mbps ಆಗಿದ್ದರೆ, ಭಾರತ ಇದೇ ತ್ರೈಮಾಸಿಕದಲ್ಲಿ 10.63 ರಿಂದ 11.18 Mpbs ನಡುವಿನ ವೇಗವನ್ನು ಕಂಡಿದೆ.

ವೇಗ ಹೆಚ್ಚಳದ ನಿರೀಕ್ಷೆ..!

ವೇಗ ಹೆಚ್ಚಳದ ನಿರೀಕ್ಷೆ..!

ದೇಶದಲ್ಲಿ 4ಜಿ ಲಭ್ಯತೆಯ ಬಗ್ಗೆ ಗಮನಿಸಿದರೆ, 2019ರ ದ್ವಿತೀಯ ಹಾಗೂ ತೃತೀಯ ತ್ರೈಮಾಸಿಕದಲ್ಲಿ ಭಾರತದ 4ಜಿ ನೆಟ್‌ವರ್ಕ್‌ ಪೂರೈಕೆ ಶೇ.87.9ರಷ್ಟಿದೆ. ಇದು ಪಾಕಿಸ್ತಾನದಲ್ಲಿ 58.9% ಮತ್ತು ಬಾಂಗ್ಲಾದೇಶದಲ್ಲಿ 58.7% ರಷ್ಟಿತ್ತು. ಭಾರತದಲ್ಲಿ ಇಂಟರ್‌ನೆಟ್ ವೇಗ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

Best Mobiles in India

Read more about:
English summary
Looking For Fast Broadband Speeds These Indian Cities Offer The Same

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X