ಭಾರತದಲ್ಲಿ ಆಪಲ್‌ ಮ್ಯಾಕ್‌ಬುಕ್‌ ಪ್ರೊ (2021) ಮಾಡೆಲ್‌ ಬಿಡುಗಡೆ! ವಿಶೇಷತೆ ಏನು?

|

ಕೆಲ ದಿನಗಳ ಹಿಂದೆಯಷ್ಟೇ ಐಫೋನ್‌ 13 ಸರಣಿಯನ್ನು ಪರಿಚಯಿಸಿದ್ದ ಆಪಲ್‌ ಸಂಸ್ಥೆ ಇದೀಗ ಹೊಸದಾಗಿ ಮ್ಯಾಕ್‌ಬುಕ್‌ ಪ್ರೊ (2021) ಮಾಡೆಲ್‌ ಅನ್ನು ಲಾಂಚ್‌ ಮಾಡಿದೆ. ಆಪಲ್‌ ಕಂಪೆನಿ ನೆನ್ನೆ ನಡೆದ 'ಅನ್‌ಲೀಶ್ಡ್' ಈವೆಂಟ್‌ನಲ್ಲಿ ಹೊಸ ಮ್ಯಾಕ್‌ಬುಕ್ ಪ್ರೊ ಮಾಡೆಲ್‌ಗಳನ್ನು ಪರಿಚಯಿಸಿದೆ. ಈ ಮ್ಯಾಕ್‌ಬುಕ್‌ ಮಾಡೆಲ್‌ಗಳು ಹೊಸ ಸಿಲಿಕಾನ್ ಆಧಾರಿತ ಹೊಸ ಎಂ 1 ಪ್ರೊ ಮತ್ತು ಎಂ 1 ಮ್ಯಾಕ್ಸ್ ಪ್ರೊಸೆಸರ್‌ ಹೊಂದಿವೆ. ಇನ್ನು ಬಹುನಿರೀಕ್ಷಿತ ಮ್ಯಾಕ್‌ಬುಕ್ ಪ್ರೊ ಸರಣಿಯಲ್ಲಿ 14- ಮತ್ತು 16-ಇಂಚಿನ ಡಿಸ್ಪ್ಲೇ ಆಯ್ಕೆಗಳನ್ನು ನೀಡಲಾಗಿದೆ.

ಮ್ಯಾಕ್‌ಬುಕ್ ಪ್ರೊ (2021)

ಹೌದು, ಜನಪ್ರಿಯ ಆಪಲ್‌ ಕಂಪೆನಿ ಭಾರತದಲ್ಲಿ ಹೊಸ ಮ್ಯಾಕ್‌ಬುಕ್‌ ಪ್ರೊ ಮಾಡೆಲ್‌ ಬಿಡುಗಡೆ ಮಾಡಿದೆ. ಮ್ಯಾಕ್‌ಬುಕ್ ಪ್ರೊ (2021) ಪ್ರಸ್ತುತ 13 ಇಂಚಿನ ಮ್ಯಾಕ್‌ಬುಕ್ ಪ್ರೊನಲ್ಲಿ ಲಭ್ಯವಿರುವ ಇಂಟೆಲ್‌ನ ಕೋರ್ i7 ಗಿಂತ 3.7 ಪಟ್ಟು ವೇಗದ ಕಾರ್ಯಕ್ಷಮತೆ ಈ ಸರಣಿಯಲ್ಲಿ ಲಭ್ಯವಿದೆ ಎನ್ನಲಾಗಿದೆ. ಇದಲ್ಲದೆ ಹೊಸ ಮ್ಯಾಕ್‌ಬುಕ್ ಪ್ರೊ ಮಾದರಿಗಳಲ್ಲಿ ಡಿಸ್‌ಪ್ಲೇ ಪಿ 3 ವೈಡ್ ಕಲರ್ ಗ್ಯಾಮಟ್, ಎಚ್‌ಡಿಆರ್ ಸಪೋರ್ಟ್ ಮತ್ತು ಎಕ್ಸ್‌ಡಿಆರ್ ಔಟ್ಪುಟ್ ಹೊಂದಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಆಪಲ್‌ ಸಂಸ್ಥೆಯ ಹೊಸ ಮ್ಯಾಕ್‌ಬುಕ್‌ ಪ್ರೊ ಮಾಡೆಲ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಮ್ಯಾಕ್ ಬುಕ್ ಪ್ರೊ (2021)

ಆಪಲ್ ಮ್ಯಾಕ್ ಬುಕ್ ಪ್ರೊ (2021)

ಆಪಲ್ ಮ್ಯಾಕ್‌ಬುಕ್ ಪ್ರೊ (2021) ಮಾಡೆಲ್‌ಗಳು 14 ಇಂಚು ಮತ್ತು 16 ಇಂಚಿನ ಗಾತ್ರದಲ್ಲಿ ಲಭ್ಯವಾಗಲಿದೆ. ಈ ಮ್ಯಾಕ್‌ಬುಕ್‌ ಮಾಡೆಲ್‌ ಡಿಸ್‌ಪ್ಲೇ ವಿನ್ಯಾಸವನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ಟಚ್ ಬಾರ್ ಅನ್ನು ತೆಗೆದುಹಾಕಿದೆ. ಇದರಲ್ಲಿ ಮತ್ತೆ SDXC ಕಾರ್ಡ್ ಸ್ಲಾಟ್ ಹಾಗೂ HDMI ಪೋರ್ಟ್‌ ಅನ್ನು ಸೇರಿಸಲಾಗಿದೆ. ಇದರಿಂದ ಬೆಜೆಲ್‌ಗಳನ್ನು ಕಡಿಮೆ ಮಾಡಬಹುದಾಗಿದೆ. ಹಾಗೆಯೇ ಬಳಕೆದಾರರಿಗೆ ಹೆಚ್ಚಿನ ಸ್ಕ್ರೀನ್ ರಿಯಲ್ ಎಸ್ಟೇಟ್ ಅನ್ನು ಒದಗಿಸಲು ಸಹಾಯವಾಗಲಿದೆ. ಇನ್ನು ಈ ಮಾಡೆಲ್‌ನಲ್ಲಿ 1080p ಸಾಮರ್ಥ್ಯದ ಫೇಸ್‌ಟೈಮ್ ವೆಬ್‌ಕ್ಯಾಮ್ ಅನ್ನು ನೀಡಲಾಗಿದೆ. ಆದರೆ ಈ ಮ್ಯಾಕ್‌ಬುಕ್‌ ಪ್ರೊ ನಲ್ಲಿ ಫೇಸ್ ಐಡಿಯನ್ನು ಒದಗಿಸಿಲ್ಲ ಅನ್ನೊದನ್ನ ಗಮನಿಸಬೇಕಿದೆ.

ಮ್ಯಾಕ್‌ಬುಕ್ ಪ್ರೊ

ಇನ್ನು 14 ಇಂಚಿನ ಮ್ಯಾಕ್‌ಬುಕ್ ಪ್ರೊ ಮಾಡೆಲ್‌ 14.2 ಇಂಚಿನ ಆಕ್ಟಿವ್‌ ಏರಿಯಾ ಹೊಂದಿದ್ದು, ಒಟ್ಟು 5.9 ಮಿಲಿಯನ್ ಪಿಕ್ಸೆಲ್‌ ಸಾಮರ್ಥ್ಯ ಹೊಂದಿದೆ. ಆದರೆ 16 ಇಂಚಿನ ಮಾಡೆಲ್‌ 7.7 ಮಿಲಿಯನ್ ಪಿಕ್ಸೆಲ್‌ ಸಾಮರ್ಥ್ಯದ 16.2 ಇಂಚಿನ ಏರಿಯಾವನ್ನು ಹೊಂದಿದೆ ಎಂದು ಆಪಲ್ ಹೇಳಿಕೊಂಡಿದೆ. ಇನ್ನು ಈ ಡಿಸ್‌ಪ್ಲೇ ಮಿನಿ-ಎಲ್ಇಡಿ ಟೆಕ್ನಾಲಜಿ ಜೊತೆಗೆ ಲಿಕ್ವಿಡ್ ರೆಟಿನಾ ಎಕ್ಸ್‌ಡಿಆರ್ ಯನ್ನು ಒಳಗೊಂಡಿದೆ. ಇನ್ನು ಈ ಹೊಸ ಡಿಸ್‌ಪ್ಲೇ ಟೆಕ್ನಾಲಜಿ 1,000 ನಿಟ್ಸ್‌ ಫುಲ್‌-ಸ್ಕ್ರೀನ್‌ ಬ್ರೈಟ್‌ನೆಸ್‌, 1,600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮತ್ತು 1,000,000:1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ.

ಮ್ಯಾಕ್‌ಬುಕ್‌

ಇನ್ನು ಈ ಮ್ಯಾಕ್‌ಬುಕ್‌ ಪ್ರೊ ಮಾಡೆಲ್‌ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಲಾಗಿದ್ದು, ಅಪ್‌ಗ್ರೇಡ್ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಹೊಂದಿದೆ. ಇನ್ನು ಮ್ಯಾಕ್‌ಬುಕ್ ಪ್ರೊ (2021) ಸರಣಿಯು ಅಪ್‌ಗ್ರೇಡ್ ಸಿಲಿಕಾನ್‌ ಪ್ರೊಸೆಸರ್‌ ಅನ್ನು ಹೊಂದಿದ್ದು, ಇದು M1 Pro ಮತ್ತು M1 Max ಆವೃತ್ತಿಗಳಲ್ಲಿ ಬರಲಿದೆ. M1 Pro ಮತ್ತು M1 ಮ್ಯಾಕ್ಸ್‌ ಎರಡನ್ನೂ 16-ಕೋರ್ ನ್ಯೂರಲ್ ಇಂಜಿನ್‌ನೊಂದಿಗೆ ಜೋಡಿಸಲಾಗಿದೆ. ಇದು ಹೊಸ ಮ್ಯಾಕ್‌ಬುಕ್ ಪ್ರೊ ಮಾದರಿಗಳಲ್ಲಿ ಯಂತ್ರ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮ್ಯಾಕ್‌ಬುಕ್ ಪ್ರೊ (2021)

ಮ್ಯಾಕ್‌ಬುಕ್ ಪ್ರೊ (2021) ಮಾಡೆಲ್‌ಗಳು ಮ್ಯಾಜಿಕ್ ಕೀಬೋರ್ಡ್‌ ಹೊಂದಿವೆ. ಹಿಂದೆ ಲಭ್ಯವಿದ್ದ ಟಚ್ ಬಾರ್ ಅನ್ನು ಬದಲಾಯಿಸಿದ್ದು, ವಿಶಾಲವಾದ ಎಸ್ಕೇಪ್ ಕೀಯೊಂದಿಗೆ ಬದಲಾಯಿಸುತ್ತದೆ. ನೀವು ಫೋರ್ಸ್ ಟಚ್ ಟ್ರ್ಯಾಕ್‌ಪ್ಯಾಡ್ ಅನ್ನು ಸಹ ನೀಡಲಾಗಿದೆ. ಇದಲ್ಲದೆ ಈ ಹೊಸ ಮ್ಯಾಕ್‌ಬುಕ್ ಪ್ರೊ ಮಾಡೆಲ್‌ಗಳಲ್ಲಿ ಆಪಲ್ ತನ್ನ ಮ್ಯಾಕೋಸ್ ಮಾಂಟೆರಿ ಔಟ್-ಆಫ್-ದಿ-ಬಾಕ್ಸ್ ಅನ್ನು ಸಹ ನೀಡಿದೆ. ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು M1 Pro ಮತ್ತು M1 Max ಚಿಪ್‌ಗಳಿಗೆ ಹೊಂದುವಂತೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಇದಲ್ಲದೆ ಈ ಹೊಸ ಮ್ಯಾಕೋಸ್ ಆವೃತ್ತಿಯು ಹಳೆಯ ಮೆಷಿನ್‌ಗಳಿಗೆ ಅಕ್ಟೋಬರ್ 25ರ ಸೋಮವಾರದಿಂದ ಉಚಿತ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಲಭ್ಯವಾಗಲಿದೆ.

ಮ್ಯಾಕ್‌ಬುಕ್

ಇನ್ನು ಈ ಹೊಸ ಮ್ಯಾಕ್‌ಬುಕ್ ಪ್ರೊ ಮಾಡೆಲ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v5.0 ಮತ್ತು ವೈ-ಫೈಯನ್ನು ಬೆಂಬಲಿಸಲಿದೆ. ಬಳಕೆದಾರರು M1 ಮ್ಯಾಕ್ಸ್ ಆಧಾರಿತ ಮ್ಯಾಕ್‌ಬುಕ್ ಪ್ರೊನಲ್ಲಿ ಏಕಕಾಲದಲ್ಲಿ ಮೂರು ಪ್ರೊ ಡಿಸ್‌ಪ್ಲೇ ಎಕ್ಸ್‌ಡಿಆರ್‌ಗಳು ಮತ್ತು 4 ಕೆ ಟಿವಿಯನ್ನು ಸಂಪರ್ಕಿಸಬಹುದು. ಮತ್ತೊಂದೆಡೆ, M1 ಪ್ರೊ ಚಿಪ್ ಏಕಕಾಲದಲ್ಲಿ ಎರಡು ಪ್ರೊ ಡಿಸ್‌ಪ್ಲೇ XDR ಗಳನ್ನು ಬೆಂಬಲಿಸುತ್ತದೆ. ಹೊಸ ಮ್ಯಾಕ್‌ಬುಕ್ ಪ್ರೊ ಮಾದರಿಗಳು ಆರು ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿವೆ. ಸರೌಂಡ್ ಸೌಂಡ್ ಅನುಭವಕ್ಕಾಗಿ ಡಾಲ್ಬಿ ಅಟ್ಮಾಸ್ ಮತ್ತು ಪ್ರಾದೇಶಿಕ ಆಡಿಯೋ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮ್ಯಾಕ್‌ಬುಕ್‌ ಪ್ರೊ (2021) ಮಾಡೆಲ್‌ 14 ಇಂಚಿನ ಆಯ್ಕೆಯ ಬೆಲೆ 1,94,900.ರೂ ಆಗಿದೆ. ಇದು ಶೈಕ್ಷಣಿಕ ಬಳಕೆಗೆ 1,75,410.ರೂ ಗಳಿಗೆ ಲಭ್ಯವಾಗಲಿದೆ. ಇನ್ನು 16 ಇಂಚಿನ ಆಪಲ್ ಮ್ಯಾಕ್ ಬುಕ್ ಪ್ರೊ (2021) ಮಾಡೆಲ್‌ ಸಾಮಾನ್ಯ ಗ್ರಾಹಕರಿಗೆ 2,39,900ರೂ. ಮತ್ತು ಶಿಕ್ಷಣಕ್ಕಾಗಿ 2,15,910.ರೂ. ಬೆಲೆಗೆ ಲಭ್ಯವಾಗಲಿದೆ. ಹೊಸ ಮ್ಯಾಕ್‌ಬುಕ್ ಪ್ರೊ ಮಾಡೆಲ್‌ಗಳು ಆಪಲ್ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಅಕ್ಟೋಬರ್ 26 ರಿಂದ ಮಾರಾಟಕ್ಕೆ ಲಭ್ಯವಿರುತ್ತವೆ.

Best Mobiles in India

English summary
Apple at its ‘Unleashed' event on Monday launched the new MacBook Pro models that are based on the company's new silicon called the all-new M1 Pro and M1 Max.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X