ಭಾರತದಲ್ಲಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ ಫೇಸ್‌ಬುಕ್ ಮಾಲಿಕ!!

|

2018ರ ಪ್ರಾರಂಭದಿಂದಲೂ ಪ್ರಖ್ಯಾತ ಸಾಮಾಜಿಕ ಜಾಲಾತಾಣ ಫೇಸ್‌ಬುಕ್‌ಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು, ಇದೀಗ ಫೇಸ್‌ಬುಕ್‌ ವ್ಯವಸ್ಥಾಪಕ ನಿರ್ದೇಶಕ ಮಾರ್ಕ್‌ ಜುಕರ್‌ಬರ್ಗ್ ಅವರಿಗೆ ಮಧ್ಯಪ್ರದೇಶದ ಭೋಪಾಲ್‌ ಕೋರ್ಟ್‌ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗಾಗಿ ಬಹುಬೇಗ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.

ಹೌದು, ಫೇಸ್‌ಬುಕ್‌ ಕಂಪೆನಿಯು ತಮ್ಮ ವ್ಯವಹಾರಕ್ಕೆ ಅಡ್ಡಿಪಡಿಸುತ್ತಿದೆ ಮತ್ತು ಮಧ್ಯಪ್ರವೇಶಿಸುತ್ತಿದೆ ಎಂದು ಆರೋಪಿಸಿ ವೆಬ್‌ ಪೋರ್ಟಲ್ ಒಂದರ ಮಾಲೀಕ 'ಸ್ವಪ್ನಿಲ್ ರೈ' ಎಂಬುವವರು ನೀಡಿರುವ ದೂರಿನ ಆಧಾರದ ಮೇಲೆ ಕೋರ್ಟ್‌ಗೆ ಹಾಜರಾಗುವಂತೆ ಮಾರ್ಕ್‌ ಜುಕರ್ ಬರ್ಗ್ ಅವರಿಗೆ ಇ-ಮೇಲೆ ಮಧ್ಯಪ್ರದೇಶದ ಭೋಪಾಲ್‌ ಕೋರ್ಟ್‌ ನ್ಯಾಯಾಧೀಶರು ಸೂಚಿಸಿದ್ದಾರೆ.

ಭಾರತದಲ್ಲಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ ಫೇಸ್‌ಬುಕ್ ಮಾಲಿಕ!!

'ಸ್ವಪ್ನಿಲ್ ರೈ' ಎಂಬುವವರು ನೀಡಿರುವ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿರುವ ನ್ಯಾ.ಪಾರ್ಥ್ ಶಂಕರ್‌ ಮಿಶ್ರಾ ಅವರು, ಜೂನ್‌ 20ರಂದು ಕೋರ್ಟ್‌ಗೆ ಹಾಜರಾಗುವಂತೆ ಮಾರ್ಕ್‌ ಜುಕರ್‌ಬರ್ಗ್ ಅವರಿಗೆ ಇ-ಮೇಲ್‌ ಮೂಲಕ ಅವರಿಗೆ ಸಮನ್ಸ್ ನೀಡಿರುವುದು ಇದೀಗ ವೈರೆಲ್ ಆಗಿದ್ದು, ಪ್ರಕರಣದ ಬಗ್ಗೆ ಎಲ್ಲರಿಗೂ ಕುತೋಹಲ ಮೂಡಿಸಿದೆ.

How to view all photos, pages, comments and posts you liked on Facebook (KANNADA)

ತಮ್ಮ ವೆಬ್‌ ಪೋರ್ಟ್‌ಲ್‌ ಪ್ರಚಾರಕ್ಕಾಗಿ ಫೇಸ್‌ಬುಕ್‌ನಲ್ಲಿ ಹಣ ಪಾವತಿ ಮಾಡಿ ನೀಡಿದ ಜಾಹೀರಾತನ್ನು ನಿಗದಿತ ಅವಧಿಗೆ ಸಂಸ್ಥೆ ಪ್ರಸಾರ ಮಾಡದೇ ಮಧ್ಯದಲ್ಲೇ ನಿಲ್ಲಿಸಿದೆ ಎಂದು ವೆಬ್‌ ಪೋರ್ಟಲ್ ಮಾಲೀಕ 'ಸ್ವಪ್ನಿಲ್ ರೈ' ವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ ಮತ್ತು ಇದಕ್ಕೆ ಜುಕರ್‌ಬರ್ಗ್ ಅವರೇ ಉತ್ತರಿಸುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಭಾರತದಲ್ಲಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ ಫೇಸ್‌ಬುಕ್ ಮಾಲಿಕ!!

ಏಪ್ರಿಲ್‌ 14 2018 ಏಪ್ರಿಲ್‌ 21,2018 ರವರೆಗೆ ನಮ್ಮ ವೆಬ್‌ಪೋರ್ಟಲ್ ಜಾಹಿರಾತು ಪ್ರಸಾರಿಸಲು ಫೇಸ್‌ಬುಕ್‌ಗೆ ಹಣ ಪಾವತಿಸಲಾಗಿತ್ತು. ಆದರೆ ಫೇಸ್‌ಬುಕ್‌ ಸಂಸ್ಥೆಯು ಏಪ್ರಿಲ್‌ 16ರಂದೇ ತಮ್ಮ ಜಾಹಿರಾತನ್ನು ತಡೆಹಿಡಿದಿದೆ. ಹಣ ಪಾವತಿಯಾಗಿದ್ದರೂ, ಯಾವುದೇ ಕಾರಣ ನೀಡದೆ ಜಾಹಿರಾತು ನಿಲ್ಲಿಸಿರುವುದೇಕೆ ಎಂದು ನಿಲ್ಲಸಿದೆ ಎಂದು ಸ್ವಪ್ನಿಲ್ ರೈ ದೂರು ನೀಡಿದ್ದಾರೆ.

ಓದಿರಿ: ಜಿಯೋ ಭರ್ಜರಿ ಆಫರ್‌ನಲ್ಲಿ 'ಗ್ಯಾಲಾಕ್ಸಿ ಜೆ2' ಪರಿಷ್ಕೃತ ಆವೃತ್ತಿ ಸ್ಮಾರ್ಟ್‌ಪೋನ್ ಬಿಡುಗಡೆ!!

Best Mobiles in India

English summary
An additional session’s judge (ADJ) of Bhopal district court in Madhya Pradesh has summoned Facebook founder .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X