2020ರಲ್ಲಿ ಗಮನ ಸೆಳೆದ ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ!

|

ಸದ್ಯ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರಿಗೂ ಅತೀ ಅಗತ್ಯ ಡಿವೈಸ್‌ ಆಗಿದೆ. ಸ್ಮಾರ್ಟ್‌ಫೋನ್ ಆಪರೇಟಿಂಗ್‌ನಲ್ಲಿ ಈಗಾಗಲೇ ಹಲವು ನೂತನ ಫೀಚರ್ಸ್‌ಗಳು ಸೇರ್ಪಡೆಗೊಂಡಿದ್ದು, ಹೆಚ್ಚು ಅನುಕೂಲಕರವಾಗಿದೆ. ಆಂಡ್ರಾಯ್ಡ್‌ ಹಾಗೂ ಐಓಎಸ್‌ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಹೊಸ ಫೀಚರ್ಸ್‌ಗಳು ಲಗ್ಗೆ ಇಟ್ಟಿವೆ. ನೂತನ ಫೀಚರ್ಸ್‌ಗಳು ಬಳಕೆದಾರರಿಗೆ ಉಪಯುಕ್ತ ಅನಿಸಿವೆ. ಈ ವರ್ಷದಲ್ಲಿಯೂ (2020) ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳಲ್ಲಿ ಕೆಲವು ಮಹತ್ತರ ಅಪ್‌ಡೇಟ್‌ಗಳು ಆಗಿವೆ.

ಸ್ಮಾರ್ಟ್‌ಫೋನ್‌ಗಳು

ಹೌದು, ಪ್ರಸಕ್ತ ವರ್ಷ ಸ್ಮಾರ್ಟ್‌ಫೋನ್‌ಗಳ ಕೆಲವು ನೂತನ ಫೀಚರ್ಸ್‌ಗಳು ಸೇರ್ಪಡೆ ಆಗಿವೆ. ಫೋನ್ ತಯಾರಿಕಾ ಸಂಸ್ಥೆಗಳು ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್‌ನಂತಹ ಫೀಚರ್ಸ್‌ಗಳಲ್ಲಿ ಅಪ್‌ಡೇಟ್ ಮಾಡಿವೆ. ಹಾಗೆಯೇ ಇತ್ತೀಚಿನ ಫೋನ್ ಮಾಡೆಲ್‌ಗಳಲ್ಲಿ ಈಗ ಆಂಡ್ರಾಯ್ಡ್‌/ಐಓಎಸ್‌ ಓಎಸ್‌ಗಳ ನೂತನ ಆವೃತ್ತಿ ಅಪ್‌ಡೇಟ್ ಆಗಿದೆ. ನೂತನ ಫೀಚರ್ಸ್‌ಗಳು ಒಟ್ಟಾರೇ ಬಳಕೆದಾರರಿಗೆ ಅನುಕೂಲಕರ ಅನಿಸಿದೆ. ಹಾಗಾದರೇ 2020ರಲ್ಲಿನ ನೂತನ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಆಪರೇಟಿಂಗ್ ಸಿಸ್ಟಂನಲ್ಲಿ ಅಪ್‌ಡೇಟ್

ಆಪರೇಟಿಂಗ್ ಸಿಸ್ಟಂನಲ್ಲಿ ಅಪ್‌ಡೇಟ್

ಹಲವು ಆಂಡ್ರಾಯ್ಡ್‌ ಓಎಸ್‌ ಆವೃತ್ತಿಗಳನ್ನು ಪರಿಚಯಿಸಿರುವ ಗೂಗಲ್ ಕಂಪನಿಯು ಈ ವರ್ಷದಲ್ಲಿ ಬಹುನಿರೀಕ್ಷಿತ ಆಂಡ್ರಾಯ್ಡ್‌ ಓಎಸ್‌ 11 ಅನ್ನು ಅನಾವರಣ ಮಾಡಿದೆ. ಆಂಡ್ರಾಯ್ಡ್‌ 10 ಓಎಸ್‌ನಲ್ಲಿ ಹಲವು ಉತ್ತಮ ಫೀಚರ್ಸ್‌ಗಳು ಬಳಕೆದಾರರನ್ನು ಸೆಳೆದಿದ್ದವು. ಹಾಗೆಯೇ ನೂತನ ಆಂಡ್ರಾಯ್ಡ್‌ 11 ಓಎಸ್‌ನಲ್ಲಿನ ಕೆಲವು ಫೀಚರ್ಸ್‌ಗಳು ಬಳಕೆದಾರರಿಗೆ ಮತ್ತಷ್ಟು ಅನುಕೂಲಕರ ಅನಿಸಿವೆ. ಆಂಡ್ರಾಯ್ಡ್‌ ನಂತೆಯೇ ಆಪಲ್‌ ಸಹ ತನ್ನ ಹೊಸ ಐಓಎಸ್‌ 12 ಓಎಸ್‌ ಅನ್ನು ಈ ವರ್ಷದಲ್ಲಿ ಅನಾವರಣ ಮಾಡಿದೆ.

ಕ್ವಾಡ್‌ ಕ್ಯಾಮೆರಾ ಪೈಪೋಟಿ

ಕ್ವಾಡ್‌ ಕ್ಯಾಮೆರಾ ಪೈಪೋಟಿ

ಮೊಬೈಲ್‌ ಕಂಪನಿಗಳು ನೂತನ ಸ್ಮಾರ್ಟ್‌ಫೋನ್‌ಗಳಲ್ಲಿ ನಾಲ್ಕು ರಿಯರ್‌ ಕ್ಯಾಮೆರಾಗಳನ್ನು ನೀಡುತ್ತಿರುವುದು ಟ್ರೆಂಡಿಂಗ್ ಆಗಿದೆ. ರೆಡ್ಮಿ, ಸ್ಯಾಮ್‌ಸಂಗ್, ವಿವೋ, ಒಪ್ಪೋ, ಮೊಟೊ, ಅಲ್ಲದೇ ಇನ್‌ಫಿನಿಕ್ಸ್‌ ಮೊಬೈಲ್ ಕಂಪನಿಯು ಕ್ವಾಡ್ ಕ್ಯಾಮೆರಾ ರಚನೆ ನೀಡುತ್ತಿವೆ.

64ಎಂಪಿ ಸೆನ್ಸಾರ್‌

64ಎಂಪಿ ಸೆನ್ಸಾರ್‌

ಈ ವರ್ಷದಲ್ಲಿ ಲಾಂಚ್ ಆಗಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳು ಕ್ವಾಡ್‌ ಕ್ಯಾಮರಾ ರಚನೆಯನ್ನು ಹೊಂದಿವೆ. ಕ್ವಾಡ್‌ ಕ್ಯಾಮೆರಾ ಸೌಲಭ್ಯದ ಬಹುತೇಕ ಫೋನ್‌ಗಳಲ್ಲಿನ ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಅಥವಾ 48ಎಂಪಿ ಸೆನ್ಸಾರ್ ಆಗಿದೆ.

ಬಿಗ್ ಬ್ಯಾಟರಿ ಫೀಚರ್

ಬಿಗ್ ಬ್ಯಾಟರಿ ಫೀಚರ್

ಇದೀಗ ಫೋನ್‌ಗಳ ಬ್ಯಾಟರಿ ಫೀಚರ್‌ನಲ್ಲಿಯೂ ಅಪ್‌ಡೇಟ್ ಕಾಣಬಹುದಾಗಿದೆ. ಪ್ರಸಕ್ತ ವರ್ಷದಲ್ಲಿನ ಕೆಲವು ಸ್ಮಾರ್ಟ್‌ಫೋನ್‌ಗಳು ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ನಿಂದ ಗಮನ ಸೆಳೆದಿವೆ. ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ M51 ಫೋನ್ 7000mAh ಬ್ಯಾಟರಿ ಬಾಳಿಕೆ ಪಡೆದಿದ್ದು, ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಇತರೆ ಸಂಸ್ಥೆಗಳ ಕೆಲವು ಫೋನ್‌ಗಳು 6000mAh ಸಾಮರ್ಥ್ಯದ ಬ್ಯಾಟರಿ ಪವರ್ ಹೊಂದಿವೆ.

Most Read Articles
Best Mobiles in India

English summary
Many smartphone launched in 2020. Features like Quad camers, Big battery are common in newly launched phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X