ಫೇಸ್‌ಬುಕ್‌ನಲ್ಲಿ ಲೈಕ್, ಕಾಮೆಂಟ್ ಮಾಡುವ ಮುನ್ನ ಎಚ್ಚರ!..ಬೆಂಗಳೂರಿನಲ್ಲಿ ಯುವಕ ಅರೆಸ್ಟ್!!

|

ಫೇಸ್‌ಬುಕ್‌ನಲ್ಲಿ ಗಣ್ಯ ವ್ಯಕ್ತಿಗಳ ಬಗ್ಗೆ ಅಶ್ಲೀಲ ಪದಗಳ ಬರಹ ಹಾಗೂ ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಹೇಮಂತ್‌ ಗೌಡ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ಹೊಂದಿರುವ 'ಉದಯ್‌ಗೌಡ' ಎಂಬುವವನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಶನಿವಾರ ಬಂಧಿರುವ ವಿಷಯ ಮಾಧ್ಯಮಗಳಿಗೆ ತಿಳಿದುಬಂದಿದೆ.

ಬಂಧಿತ 'ಉದಯ್‌ಗೌಡ' ಎಂಬ ಆರೋಪಿ, ಹೇಮಂತ್‌ ಗೌಡ ಹೆಸರಿನಲ್ಲಿ ಫೇಸ್‌ ಖಾತೆ ಹೊಂದಿದ್ದು, ಸಮಾಜದ ಗಣ್ಯವ್ಯಕ್ತಿಗಳ ಬಗ್ಗೆ ಅಶ್ಲೀಲ ಭಾಷೆಯಲ್ಲಿ ಕಮೆಂಟ್‌ಗಳನ್ನು ಮಾಡುತ್ತಿದ್ದ. ಜತೆಗೆ, ಎರಡು ಕೋಮಿನ ನಡುವೆ ಸಾಮರಸ್ಯ ಕದಡುವ ಪ್ರಚೋದನಕಾರಿ ಬರಹಗಳನ್ನು ಪ್ರಕಟಿಸುತ್ತಿದ್ದ. ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಲೈಕ್, ಕಾಮೆಂಟ್ ಮಾಡುವ ಮುನ್ನ ಎಚ್ಚರ!..ಯುವಕ ಅರೆಸ್ಟ್!!

ಅನ್ಯ ವ್ಯಕ್ತಿಗಳ ಹೆಸರಿನಲ್ಲಿ ದಾಖಲೆಗಳನ್ನು ಸಲ್ಲಿಸಿರುವ ಆರೋಪಿ ವಿವಿಧ ಕಂಪನಿಗಳ 100ಕ್ಕೂ ಹೆಚ್ಚು ಕಂಪನಿಗಳ ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಬಗ್ಗೆ ಕೂಡ ಪೊಲೀಸರು ಮಾಹಿತಿ ನೀಡಿರುವುದು ಸಹ ಪ್ರಕರಣದಲ್ಲಿ ಕುತೋಹಲ ಮೂಡಿಸಿದೆ. ಒಟ್ಟಿನಲ್ಲಿ ಏನೇ ಆದರೂ, ಫೇಸ್‌ಬುಕ್ ಬಳಸುವ ಮುನ್ನ ನೀವು ಈ ಎಚ್ಚರಿಕೆಗಳನ್ನು ಪಾಲಿಸುವುದನ್ನು ಖಂಡಿತಾ ಮರೆಯದಿರಿ.

ಸೂಕ್ಷ್ಮ ವಿಷಯದ ಚರ್ಚೆ!

ಸೂಕ್ಷ್ಮ ವಿಷಯದ ಚರ್ಚೆ!

ಸೂಕ್ಷ್ಮ ವಿಷಯದ ಮೇಲೆ ಸಾರ್ವಜನಿಕ ಚರ್ಚೆ ನಡೆಯುತ್ತಿದ್ದರೆ, ಪ್ರಚೋದನಾಕಾರಿ ಕಾಮೆಂಟ್‌ಗಳನ್ನು ಲೈಕ್ ಮಾಡದಿರಿ. ಯಾಕೆಂದರೆ, ಬೇರೆಯವರು ಮಾಡುತ್ತಿದ್ದರೆ ಅದನ್ನು ಬಿಟ್ಟುಬಿಡಿ. ಒಂದು ಕಾಮೆಂಟ್ ವ್ಯಕ್ತಿಯನ್ನು ಕಂಬಿ ಹಿಂದೆ ತಳ್ಳಬಹುದು ಎಂಬುದನ್ನು ಮರೆಯಬೇಡಿ. ಒಂದು ಲೈಕ್ ನಿಂದಾಗಿ ಪೊಲೀಸರು ನಿಮ್ಮ ಮನೆಗೆ ಸಹ ಬರಬಹುದು.

ಧರ್ಮ, ಜಾತಿಯ ವಿಷಯಗಳು!

ಧರ್ಮ, ಜಾತಿಯ ವಿಷಯಗಳು!

ಫೇಸ್‌ಬುಕ್ ಅಥವಾ ಬೇರೆ ಯಾವುದೇ ಜಾಲತಾಣಗಳಲ್ಲಿ ಯಾವುದೇ ಧರ್ಮ, ಜಾತಿಯ ವಿಷಯಗಳ ಬಗ್ಗೆ ತೆಗಳಿ, ಅವಮಾನಿಸುವ ಫೋಟೋ ಅಥವಾ ಕಮೆಂಟ್ ಹಾಕದಿರಿ. ಬಾರತದಂತಹ ವೈವಿಧ್ಯಮಯ ದೇಶದಲ್ಲಿ ಇಂತಹ ಸೂಕ್ಷ್ಮ ವಿಚಾರಗಳು ಪ್ರಭಾವ ಬೀರುತ್ತವೆ. ಇದರಿಂದ ನೀವು ಜೈಲು ಪಾಲಾಗುವುದು ಆಶ್ಚರ್ಯವೇನಿಲ್ಲ.

ಮಾನಸಿಕವಾಗಿ ಗಟ್ಟಿಯಾಗಿರಿ.!

ಮಾನಸಿಕವಾಗಿ ಗಟ್ಟಿಯಾಗಿರಿ.!

ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತ ವ್ಯಕ್ತಿ ನಿಮ್ಮ ಮನಸ್ಸನ್ನು ಹಾಳುಮಾಡುವಂತಹ ಬರವಣಿಗೆಗಳನ್ನು ಹಾಕಬಹುದು. ಅಂತಹುಗಳನ್ನು ನಿರ್ಲಕ್ಷಿಸಿ ಅವರನ್ನು ಬ್ಲಾಕ್ ಮಾಡಿಬಿಡಿ. ನಿಮ್ಮನ್ನು ಪ್ರಚೋದಿಸುವ ವಿಷಯಗಳಿಂದ ದೂರವಿದ್ದುಬಿಡಿ. ನೀವು ಪೋಸ್ಟ್ ಮಾಡುವಾಗ ಸ್ವಲ್ಪ ಆಲೋಚನೆ ಮಾಡಿ ಪೋಸ್ಟ್‌ ಮಾಡಿ.

ಫೇಸ್‌ಬುಕ್‌ನಲ್ಲಿ ವ್ಯಕ್ತಿತ್ವ!

ಫೇಸ್‌ಬುಕ್‌ನಲ್ಲಿ ವ್ಯಕ್ತಿತ್ವ!

ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿ ಬದಲಾಗುತ್ತಿರುವ ಈ ಫೇಸ್‌ಬುಕ್‌ನ್ನು ಎಷ್ಟು ಎಚ್ಚರದಿಂದ ಬಳಸುತ್ತೇವೋ ಅಷ್ಟು ಒಳ್ಳೆಯದು.ಫೇಸ್‌ಬುಕ್‌ ನಮ್ಮ ಜೀವನದಲ್ಲಿ ಭಾರೀ ಪ್ರಭಾವ ಬೀರುವ ಹೊಸ ಮಾಧ್ಯಮವಾಗಿ ರೂಪುಗೊಂಡಿದೆ. ಫೇಸ್‌ಬುಕ್‌ ಮೂಲಕ ಎಲ್ಲರಿಗೂ ನಿಮ್ಮ ವ್ಯಕ್ತಿತ್ವದ ದರ್ಶನವಾಗುತ್ತದೆ. ಹಾಗಾಗಿ, ಮಾನ ಕಳೆದುಕೊಳ್ಳುವ ಕೆಲಸ ಮಾಡಬೇಡಿ.

ಅನ್‌ಫ್ರೆಂಡ್‌ ಆಗಿಬಿಡಿ!

ಅನ್‌ಫ್ರೆಂಡ್‌ ಆಗಿಬಿಡಿ!

ಒಬ್ಬ ವ್ಯಕ್ತಿಯ ಮನಸ್ಥಿತಿ, ಗುಣ, ವರ್ತನೆ, ಜ್ಞಾನ ಎಂಥದ್ದು ಎಂದು ನೋಡಲು ಅವರ ಫೇಸ್‌ಬುಕ್ ಅಕೌಂಟ್ ನೋಡಿದರೆ ಸಾಕು. ಹಾಗಾಗಿ, ನಿಮ್ಮ ಫೇಸ್‌ಬುಕ್ ಗೆಳೆಯರಲ್ಲಿ ಯಾರಾದರೂ ನಿಮ್ಮನ್ನು ಪ್ರಚೋದಿಸುವಂತವರು ಇದ್ದರೆ ಅವರನ್ನು ಅನ್‌ಫ್ರೆಂಡ್ ಮಾಡಿಬಿಡಿ. ಆಗ ಅವರು ಮಾಡುತ್ತಿರುವ ಫೇಸ್‌ಬುಕ್ ಕಮೆಂಟ್‌ಗಳು ನಿಮಗೆ ಕಾಣಿಸುವುದಿಲ್ಲ.

ಫೇಸ್‌ಬುಕ್ ಅಂದರೆ ನೀವೇ!

ಫೇಸ್‌ಬುಕ್ ಅಂದರೆ ನೀವೇ!

ಇಂದಿನ ದಿನದಲ್ಲಿ ಹೊಸದಾಗಿ ಕೆಲಸ ಕೊಡುವವರು ಫೇಸ್‌ಬುಕ್‌ ಅಕೌಂಟ್‌ನ್ನು ನೋಡಿ ಕೆಲಸ ಕೊಡಬಹುದು. ಮದುವೆ ಸಂದರ್ಭದಲ್ಲಿ ಹುಡುಗ ಅಥವಾ ಹುಡುಗಿಯ ಮನೆಯವರು ಫೇಸ್‌ಬುಕ್‌ ನೋಡಿ ನಿರ್ಧಾರ ಕೈಗೊಳ್ಳಬಹುದು. ಇಂತಹ ಕಾಲದಲ್ಲಿ ನೀವು ಫೇಸ್‌ಬುಕ್‌ನ್ನು ಬಳಸುವಾಗ ಎಚ್ಚರದಿಂದ ಬಳಸುವುದು ಕೂಡ ಅತಿಮುಖ್ಯ.!

ಅಮೆರಿಕಾದ ಕೊಬ್ಬನ್ನು ಕರಗಿಸಿದ ನಮ್ಮ 'ದೇಸಿ' ಜಿಪಿಎಸ್!..ಕುತಂತ್ರಕ್ಕೆ ಭಾರತದ ದಿಟ್ಟ ಉತ್ತರ!

ಅಮೆರಿಕಾದ ಕೊಬ್ಬನ್ನು ಕರಗಿಸಿದ ನಮ್ಮ 'ದೇಸಿ' ಜಿಪಿಎಸ್!..ಕುತಂತ್ರಕ್ಕೆ ಭಾರತದ ದಿಟ್ಟ ಉತ್ತರ!

ಭಾರತದ ಕನಸಿನ ಯೋಜನೆಗಳಲ್ಲಿ ಒಂದಾಗಿದ್ದ "ದೇಸಿ" ಜಿಪಿಎಸ್ ಮಾಡ್ಯೂಲ್ ಬಿಡುಗಡೆಯಾಗುವ ಮೂಲಕ ಭಾರತೀಯರಿಗೆ ಸಿಹಿಸುದ್ದಿಸಿಕ್ಕಿದೆ. ಅಮೆರಿಕಾದ ವಿರುದ್ದ ಸೆಟೆದು ನಿಂತು, ST ಮೈಕ್ರೊಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಟೆಕ್ ಸ್ಥಳಗಳನ್ನು ಪತ್ತೆಹಚ್ಚಲು ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (IRNSS) ಆಧಾರಿತ GT ಘಟಕವನ್ನು ಭಾರತ ಅಭಿವೃದ್ದಿಪಡಿಸಿದೆ.

ಹೌದು, ಇದುವರೆಗೂ ಯುಎಸ್ ಸೆಟಲೈಟ್ ನೀಡುವ ಜಿಪಿಎಸ್ ಅಪ್ಲಿಕೇಷನ್ ಮಾಹಿತಿಯ ಅನುಸಾರವೇ ಕಾರ್ಯ ನಿರ್ವಹಿಸುತ್ತಿದ್ದ ಭಾರತವೀಗ ಜಿಪಿಎಸ್ ವ್ಯವಸ್ಥೆಗೆ ಪರ್ಯಾಯವಾಗಿ ಈಗ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಅನ್ನು ಪಡೆದುಕೊಂಡಿದೆ. ಈ ತಂತ್ರಜ್ಞಾನ ಜಿಪಿಎಸ್‌ಗಿಂತ ಹೆಚ್ಚು ನಿಖರ ಮತ್ತು ವಿಶ್ವಾಸಾರ್ಹ ಸ್ಥಳದ ಡಾಟಾವನ್ನು ಒದಗಿಸಲಿದೆ.

ಅರ್ಥ ಸಾಗರ ಸಂಚಾರ, ವೈಮಾನಿಕ ಸಂಚರಣೆ, ಪಾದಯಾತ್ರಿಕರು ಮತ್ತು ಪ್ರವಾಸಿಗರಿಗೆ ಭೂಮಿಯ ಸಂಚಾರ, ವಾಹನ ಟ್ರ್ಯಾಕಿಂಗ್, ಜಿಯೊಡೆಟಿಕ್ ದತ್ತಾಂಶ ಸೆರೆಹಿಡಿಯುವಿಕೆಗಳಲ್ಲಿ ಈಗ ಬಿಡುಗಡೆಯಾಗಿರುವ ಮಾಡ್ಯೂಲ್ಗಳನ್ನು ಬಳಕೆ ಮಾಡಲು ಅವಕಾಶವಿದೆ. ಈ ಮೂಲಕ ಕಾರ್ಗಿಲ್ ಯುದ್ದದಲ್ಲಿ ಅಮೆರಿಕಾ ನಡೆಸಿದ್ದ ಕುತಂತ್ರಕ್ಕೆ ಭಾರತ ದಿಟ್ಟ ಉತ್ತರವನ್ನು ನೀಡಿದೆ.

ಎರಡು ಮಾದರಿ ಬಿಡುಗಡೆ

ಎರಡು ಮಾದರಿ ಬಿಡುಗಡೆ

L110 GNSS ಕಾಂಪ್ಯಾಕ್ಟ್ NavIC ಮಾಡ್ಯೂಲ್ ಮತ್ತು ಸಣ್ಣ ಗಾತ್ರದ L100 GNSS POT (Patch on Top) IRNSS ಮಾಡ್ಯೂಲ್‌ಗಳು ಇದೀಗ ಬಿಡುಗಡೆಯಾಗಿವೆ. ಟ್ರ್ಯಾಕಿಂಗ್ ಸೌಲಭ್ಯವನ್ನು ಹೊರತುಪಡಿಸಿ ಇತರೆ ಹಲವು ಕೆಲಸಗಳಿಗೆ ಈ ಮಾಡ್ಯೂಲ್‌ಗಳನ್ನು ಬಳಕೆ ಮಾಡಬಹುದಾಗಿದೆ. ಆದೇಶ, ಸಮಯ ನಿಗದಿ, ನಿಯಂತ್ರಣ ಇತ್ಯಾದಿಗಳು ಇದರಲ್ಲಿ ಒಳಗೊಂಡಿದೆ.

ವಿದೇಶಿ ಉಪಗ್ರಹಗಳ ಅವಲಂಬನೆ ಇಲ್ಲ!

ವಿದೇಶಿ ಉಪಗ್ರಹಗಳ ಅವಲಂಬನೆ ಇಲ್ಲ!

IRNSS ಮೂಲದ UTraQ ಹೆಚ್ಚು ನಿಖರ ಮಾಹಿತಿಯನ್ನು ನೀಡುವುದರ ಜೊತೆಗೆ ವಿದೇಶಿ ಉಪಗ್ರಹಗಳ ಅವಲಂಬನೆಯನ್ನು ನಿಲ್ಲಿಸುತ್ತದೆ. UTraQ ಮಾಡ್ಯೂಲ್ L1 ಮತ್ತು L5 ಬ್ಯಾಂಡ್ಸ್, EPOTM ಕಕ್ಷೆ ಭವಿಷ್ಯ, EASYTM ಸ್ವಯಂ-ರಚಿತ ಕಕ್ಷೆಯ ಭವಿಷ್ಯ ಮತ್ತು ಕ್ರಮಗಳು 18x16x2.3mm ಗೆ ಬೆಂಬಲ ನೀಡುತ್ತದೆ. ಇಸ್ರೋ ಇದರ ನಿಯಂತ್ರಣವನ್ನು ಹೊಂದಿದೆ.

ಕಾರ್ಗಿಲ್ ವೇಳೆಯಲ್ಲಿ ಜಿಪಿಎಸ್!

ಕಾರ್ಗಿಲ್ ವೇಳೆಯಲ್ಲಿ ಜಿಪಿಎಸ್!

ಅದು 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಗಡಿ ದಾಟಿ ದೇಶದೊಳಗೆ ಅಡಗಿದ್ದ ಪಾಕಿಸ್ತಾನ ಸೇನೆಯನ್ನು ಸದೆಬಡಿಯಲು ಜಿಪಿಎಸ್(ಗ್ಲೋಬಲ್‌ ಪೊಸಿಷನಿಂಗ್ ಸಿಸ್ಟಮ್‌) ಮೂಲಕ ಮಾಹಿತಿ ಪಡೆಯುವುದು ಅತ್ಯಗತ್ಯವಾಗಿತ್ತು. ಇಂಥ ಕಠಿಣ ಸಮಯದಲ್ಲಿ ಜಿಪಿಎಸ್ ಮಾಹಿತಿ ಒದಗಿಸಲು ಅಮೆರಿಕಾ ಖಡಾಖಂಡಿತವಾಗಿ ಭಾರತಕ್ಕೆ ನಿರಾಕರಿಸಿತು.

ಸ್ವದೇಶಿ ಪಥದರ್ಶಕ ವ್ಯವಸ್ಥೆ!

ಸ್ವದೇಶಿ ಪಥದರ್ಶಕ ವ್ಯವಸ್ಥೆ!

ಯುದ್ದದಂತಹ ಕಠಿಣ ಸಂದರ್ಭದಲ್ಲಿ ಜಿಪಿಎಸ್ ಮಾಹಿತಿ ಒದಗಿಸಲು ಅಮೆರಿಕಾ ನಿರಾಕರಿಸಿದ ನಂತರ ಅಂದೇ ರಾಷ್ಟ್ರಕ್ಕೆ ಸ್ವದೇಶಿ ಪಥದರ್ಶಕ ವ್ಯವಸ್ಥೆಯ ಅಗತ್ಯ ಎಷ್ಟಿದೆ ಎಂಬುದರ ಅರಿವಾಯಿತು. ನಂತರ ಇಂಥ ವ್ಯವಸ್ಥೆಯನ್ನು ದೇಶೀಯವಾಗಿ ರೂಪಿಸಲು ಇಸ್ರೊ ಸಿದ್ಧಪಡಿಸಿದ ಯೋಜನೆಗೆ ಕೇಂದ್ರ ಸರ್ಕಾರ 2006ರ ಮೇನಲ್ಲಿ ಅನುಮೋದನೆ ನೀಡಿತ್ತು.

ಸಿದ್ದವಾಗಿದೆ ಸ್ವದೇಶಿ ಪಥದರ್ಶಕ

ಸಿದ್ದವಾಗಿದೆ ಸ್ವದೇಶಿ ಪಥದರ್ಶಕ

2006ರ ಮೇನಲ್ಲಿ ಅನುಮೋದನೆ ಪಡೆದ ಸ್ವದೇಶಿ ಪಥದರ್ಶಕ ಯೋಜನೆ 12 ವರ್ಷಗಳಲ್ಲಿ ಪೂರ್ಣಗೊಂಡು ಬಳಕೆಗೆ ತೆರೆದುಕೊಳ್ಳುತ್ತಿದೆ. ಭಾರತೀಯ ಉಪಗ್ರಹಗಳ ಮೂಲಕ ಅಮೆರಿಕದ ಜಿಪಿಎಸ್‌ಗಿಂತ ಹೆಚ್ಚು ನಿಖರವಾಗಿ ಪಥದರ್ಶಕ ಇನ್ನು ಭಾರತೀಯರಿಗೆ ಸಿಗಲಿದೆ. ಈ ಮೂಲಕ ಜಿಪಿಎಸ್ ವ್ಯವಸ್ಥೆ ಹೊಂದಿರುವ ಅಮೆರಿಕಾಕ್ಕೆ ಭಾರತದ ಪಥದರ್ಶಕ ಟಾಂಗ್ ನೀಡಿದೆ.

ಜಿಪಿಎಸ್‌ಗಿಂತಲೂ ಬೆಸ್ಟ್ !!

ಜಿಪಿಎಸ್‌ಗಿಂತಲೂ ಬೆಸ್ಟ್ !!

ಪ್ರಸ್ತುತ ಜಿಪಿಎಸ್ ಮೂಲಕ ದೇಶದಲ್ಲಿ ಸಂಚಾರಕ್ಕೆ ದೊರೆಯುತ್ತಿರುವ ಸೇವೆಗಿಂತ ಭಾರತದ ನಾವಿಕ್ ಸೇವೆ ನಿಖರವಾಗಿರಲಿದೆ. ನಾವಿಕ್ ಮ್ಯಾಪ್ ಹಾಕಿಕೊಂಡು ಹುಡುಕುವ ಸ್ಥಳಕ್ಕೆ ಬಹುಬೇಗ ಸೇರುತ್ತೇವೆ. ಯಾವುದೇ ಗೊಂದಲಗಳಲ್ಲಿದೆ ಕ್ಯಾಬ್, ಆಟೋ ನಮ್ಮದೇ ಮನೆ ಬಾಗಿಲಲ್ಲಿ ಬಂದು ನಿಲ್ಲಲಿವೆ. ಆದರೆ, ಈ ಸೇವೆ ದೊಡೆಯಲು ಸ್ವಲ್ಪ ತಡವಾಗಬಹುದು.!

1420 ಕೋಟಿ ರೂಪಾಯಿ ವೆಚ್ಚ

1420 ಕೋಟಿ ರೂಪಾಯಿ ವೆಚ್ಚ

ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಾವಿಕ್ ಯೋಜನೆಗೆ ಇಲ್ಲಿಯವರೆಗೂ 1420 ಕೋಟಿ ರೂಪಾಯಿ ವೆಚ್ಚವಾಗಿದೆ. ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯಲ್ಲಿ ಎಂಟು ಸರಣಿ ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. ಸದ್ಯ ಅಮೆರಿಕ (ಜಿಪಿಎಸ್‌), ರಷ್ಯಾ (ಗ್ಲೋನಾಸ್‌), ಐರೋಪ್ಯ ಒಕ್ಕೂಟ (ಗೆಲಿಲಿಯೋ) ಮಾತ್ರ ಸ್ವದೇಶಿ ಜಿಪಿಎಸ್ ವ್ಯವಸ್ಥೆ ಹೊಂದಿವೆ.

Most Read Articles
Best Mobiles in India

English summary
The city police today arrested a man for posting a vulgar and abusive comment on a Facebook page. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more