ನಕಲಿ ಆನ್‌ಲೈನ್‌ ಜಾಹೀರಾತು ನೋಡಿ ಕಿಡ್ನಿ ಮಾರಲು ಬಂದ ವ್ಯಕ್ತಿ..! ಒಂದು ಕಿಡ್ನಿಗೆ ರೂ.1.6 ಕೋಟಿಯಂತೆ..!

|

ನಮ್ಮ ಜೀವನದಲ್ಲಿ ಒಂದಲ್ಲಾ ಒಂದು ಸಲ ಅಥವಾ ಕಾಲೇಜಿನಲ್ಲಿ ಏನಾದ್ರೂ ಭಾರೀ ದರದ ವಸ್ತುವನ್ನು ತೆಗೆದುಕೊಳ್ಳಬೇಕು ಎಂದಾಗ ಕಿಡ್ನಿ ಮಾರಿದ್ರೇ ಆಯ್ತಪ್ಪಾ ಎಂದು ಹೇಳಿಯೇ ಹೇಳಿರ್ತಿವಿ. ಅಂತಹದ್ದೇ ಒಂದು ಘಟನೆ ಈಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಅದಕ್ಕೂ ಟೆಕ್‌ಗೆ ಏನು ಸಂಬಂಧ ಎಂದುಕೊಂಡಿರಾ..? ಸಂಬಂಧ ಇದೆ.

ನಕಲಿ ಆನ್‌ಲೈನ್‌ ಜಾಹೀರಾತು ನೋಡಿ ಕಿಡ್ನಿ ಮಾರಲು ಬಂದ ವ್ಯಕ್ತಿ..!

ಆ ವ್ಯಕ್ತಿ ಆನ್‌ಲೈನ್‌ ಮತ್ತು ವಾಟ್ಸ್‌ಆಪ್‌ನಲ್ಲಿ ಬಂದ ಜಾಹೀರಾತು ನೋಡಿ ಕಿಡ್ನಿ ಮಾರಾಟಕ್ಕೆ ಪ್ರಯತ್ನ ಮಾಡಿದ್ದಾನೆ. ಈ ಪ್ರಕರಣದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹೆಸರು ತಳುಕು ಹಾಕಿಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ಆ ವ್ಯಕ್ತಿ ಯಾರು..? ಆ ಪ್ರತಿಷ್ಠಿತ ಆಸ್ಪತ್ರೆ ಯಾವುದು..? ಏನಾಯ್ತು..? ಎಂಬುದನ್ನು ಮುಂದೆ ನೋಡಿ.

ಸ್ಟೇನೋಗ್ರಾಫರ್‌ನಿಂದ 1.6 ಕೋಟಿಗೆ ಕಿಡ್ನಿ ಮಾರಾಟಕ್ಕೆ ಯತ್ನ

ಸ್ಟೇನೋಗ್ರಾಫರ್‌ನಿಂದ 1.6 ಕೋಟಿಗೆ ಕಿಡ್ನಿ ಮಾರಾಟಕ್ಕೆ ಯತ್ನ

ಜಾಹೀರಾತು ನೋಡಿ ತನ್ನ ಕಿಡ್ನಿ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನು ಎಂ.ಬಿ.ಸೋಮಶೇಖರ್‌ ಎಂದು ಗುರುತಿಸಲಾಗಿದೆ. ಈತ ಉದ್ಯೋಗದಲ್ಲಿ ಸ್ಟೇನೋಗ್ರಾಫರ್‌ ಆಗಿದ್ದಾನೆ. ಹಣದ ಅವಶ್ಯಕತೆಯಿಂದ ಕಿಡ್ನಿಯನ್ನು ಮಾರಾಟ ಮಾಡಲು ಮುಂದಾಗಿದ್ದು, ಬರೋಬ್ಬರಿ ರೂ. 1.6 ಕೋಟಿಗೆ ತನ್ನ ಕಿಡ್ನಿಯನ್ನು ತೆಗೆದುಕೊಳ್ಳುವಂತೆ ವೈದ್ಯರಿಗೆ ದುಂಬಾಲು ಬಿದ್ದಿದ್ದಾನೆ.

ಕೋಲಂಬಿಯಾ ಆಸ್ಪತ್ರೆಯ ವೈದ್ಯನ ಹೆಸರು ತಳುಕು

ಕೋಲಂಬಿಯಾ ಆಸ್ಪತ್ರೆಯ ವೈದ್ಯನ ಹೆಸರು ತಳುಕು

ಸೋಮಶೇಖರ್ ಹೇಳುವಂತೆ ಯಾವುದೋ ವೆಬ್‌ಸೈಟ್‌ನಲ್ಲಿ ಕೋಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯ ಡಾ.ಅರುಣ್‌ ವೆಸ್ಲಿ ಡೇವಿಡ್‌ ಎಂಬುವವರಿಂದ ಜಾಹೀರಾತು ಬಂದಿತ್ತು. ಆ ನಂತರ ಅವರ ಜತೆ ಮಾತನಾಡಿದ್ದು, ರೂ.1.6 ಕೋಟಿಗೆ ಕಿಡ್ನಿ ಖರೀದಿಸುವುದಾಗಿ ಅವರು ಹೇಳಿದ್ದಾರೆ ಎಂದು ಸೋಮಶೇಖರ್‌ ಹೇಳುತ್ತಾನೆ.

ವಾಟ್ಸ್‌ಆಪ್‌ ಚಾಟ್‌

ವಾಟ್ಸ್‌ಆಪ್‌ ಚಾಟ್‌

ಸೋಮಶೇಖರ್‌ ನಂತರ ಆಸ್ಪತ್ರೆಯ ಅಂಗಾಂಗ ಕಸಿ ಸಂಯೋಜಕ ಅಪರಾಜಿತ್‌ ಧಳ್ ಅವರನ್ನು ಸಂಪರ್ಕಿಸಿದ್ದು, ಡಾ. ಅರುಣ್ ವೆಸ್ಲೆ ಡೇವಿಡ್ ಅವರ ಜಾಹೀರಾತನ್ನು ನೋಡಿ ಇಲ್ಲಿಗೆ ಬಂದಿದ್ದೇನೆ. ವಾಟ್ಸ್‌ಆಪ್‌ನಲ್ಲಿ ಚಾಟ್‌ ಕೂಡ ಮಾಡಿದ್ದೇವೆ ಎಂದು ಆಕೆಗೆ ತೋರಿಸಿದ್ದಾನೆ.

ವೆಬ್‌ಸೈಟ್‌ ನೆನಪಿಲ್ಲವಂತೆ

ವೆಬ್‌ಸೈಟ್‌ ನೆನಪಿಲ್ಲವಂತೆ

ಸೋಮಶೇಖರ್ ಅವರು ವಾಟ್ಸ್‌ಆಪ್‌ ಮೆಸೇಜ್‌ಗಳನ್ನು ತೋರಿಸುತ್ತಿದ್ದಾರೆ. ಮತ್ತು ಕಿಡ್ನಿ ಮಾರಾಟದ ಬಗ್ಗೆ ವೈದ್ಯರ ಜತೆ ಸಂಪರ್ಕದಲ್ಲಿದ್ದೇ ಎಂದಿದ್ದಾರೆ. ಆದರೆ, ವೆಬ್‌ಸೈಟ್‌ ಅಥವಾ URL ನೆನಪಿಲ್ಲ ಎನ್ನುತ್ತಿದ್ದಾರೆ ಎಂದು ಈ ಪ್ರಕರಣದ ತನಿಖೆ ಮಾಡುತ್ತಿರುವ ಅಧಿಕಾರಿ ಹೇಳಿದ್ದಾರೆ.

ಆಧಾರ್‌ ಕಾರ್ಡ್‌ ತೆಗೆದುಕೊಂಡು ಹೋಗಲು ಹೇಳಿದ್ದ ವಂಚಕ

ಆಧಾರ್‌ ಕಾರ್ಡ್‌ ತೆಗೆದುಕೊಂಡು ಹೋಗಲು ಹೇಳಿದ್ದ ವಂಚಕ

ಕಿಡ್ನಿ ಮಾರಾಟದ ನಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೆರವಾಗಲು ಆಧಾರ್‌ ಕಾರ್ಡ್‌ ಮತ್ತಿತರ ಗುರುತಿನ ಚೀಟಿಗಳನ್ನು ತೆಗೆದುಕೊಂಡು ಆಸ್ಪತ್ರೆಗೆ ಹೋಗುವಂತೆ ವಂಚಕ ಸೋಮಶೇಖರ್‌ಗೆ ಹೇಳಿದ್ದನಂತೆ. ಸೋಮಶೇಖರ್‌ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಆಸ್ಪತ್ರೆಗೆ ಬಂದಿದ್ದರು.

ಆಸ್ಪತ್ರೆಗೆ ಶಾಕ್‌..!

ಆಸ್ಪತ್ರೆಗೆ ಶಾಕ್‌..!

ಈ ಸುದ್ದಿಯನ್ನು ಕೇಳಿದ ಆಸ್ಪತ್ರೆಗೆ ಶಾಕ್‌ ಆಗಿದ್ದು, ಡಾ.ಡೇವಿಡ್‌ ಹೇಳುವಂತೆ ವಾಟ್ಸ್‌ಆಪ್‌ ಸಂಭಾಷಣೆಯಲ್ಲಿರುವ ಸಂಖ್ಯೆ ನನ್ನದಲ್ಲ ಎಂದಿದ್ದಾರೆ. ಯಾರೋ ವೈದ್ಯರ ಹೆಸರನ್ನು ಬಳಸಿಕೊಂಡು ಜನರನ್ನು ಯಾಮಾರಿಸುತ್ತಿದ್ದಾರೆಂದು ಹೇಳಿ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿದ್ದಾರೆ.

ಪ್ರಕರಣ ದಾಖಲು

ಪ್ರಕರಣ ದಾಖಲು

ಸೈಬರ್‌ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯಿದೆ 2000ದ ಸೆಕ್ಷನ್‌ 66(C) ಮತ್ತು 66(D) ಹಾಗೂ IPC ಸೆಕ್ಷನ್‌ 120B (ಕ್ರಿಮಿನಲ್‌ ಪಿತೂರಿ), 468 (ವಂಚನೆಗಾಗಿ ನಕಲು), 420 (ವಂಚನೆ), 471 (ನಕಲಿ ಡಾಕ್ಯುಮೆಂಟ್‌ ಬಳಸಿರುವುದು) ಮತ್ತಿತರ ಸೆಕ್ಷನ್‌ಗಳಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Most Read Articles
Best Mobiles in India

English summary
Man falls for WhatsApp ad and tries to sell kidney for Rs 1.6 crore. This is what happened next. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X