Subscribe to Gizbot

ದತ್ತಾಂಶ ಸೋರಿಕೆ ಪ್ರಕರಣ ಕುರಿತು ಬಹಿರಂಗ ಕ್ಷಮೆಯಾಚಿಸಿದ ಮಾರ್ಕ್​!!

Written By:

ಬಳಕೆದಾರರ ದತ್ತಾಂಶವನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪವನ್ನು ಎದುರಿಸುತ್ತಿರುವ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮಾರ್ಕ್​ ಝುಕರ್​ಬರ್ಗ್​ ಗುರುವಾರ ಬಳಕೆದಾರರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.!!

ವಿಶ್ವದಾಧ್ಯಂತ ಭಾರೀ ಸದ್ದು ಮಾಡುತ್ತಿರುವ ಕೇಂಬ್ರಿಜ್​ ಅನಾಲಿಟಿಕಾ ಪ್ರಕರಣ ಕುರಿತು ಇದೀಗ ಮೌನ ಮುರಿದಿರುವ ಮಾರ್ಕ್​ ಝುಕರ್​ಬರ್ಗ್ 'ಬಳಕೆದಾರರ ದತ್ತಾಂಶ ಕಾಪಾಡುವುದು ಫೇಸ್​ಬುಕ್​ನ ಕರ್ತವ್ಯ. ಇದರಲ್ಲಿ ನಾವು ಸೋತಿದ್ದರೆ ನಾವು ನಿಮಗೆ ಸೇವೆ ನೀಡಲು ಅನರ್ಹರು' ಎಂದು ತಮ್ಮ ಅಫಿಷಿಯಲ್ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.!!

ದತ್ತಾಂಶ ಸೋರಿಕೆ ಪ್ರಕರಣ ಕುರಿತು ಬಹಿರಂಗ ಕ್ಷಮೆಯಾಚಿಸಿದ ಮಾರ್ಕ್​!!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂಬ್ರಿಜ್​ ಅನಾಲಿಟಿಕಾದ ಮುಖ್ಯಸ್ಥ ಅಲೆಕ್ಸಾಂಡರ್​ ನಿಕ್ಸ್​ರನ್ನು ಬುಧವಾರ ಅಮಾನತುಗೊಳಿಸಲಾಗಿದೆ. ಈ ರೀತಿ ಪ್ರಕರಣಗಳು ಮತ್ತೆ ನಡೆಯದಂತೆ ಈಗಾಗಲೇ ಹಲವಾರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಎಂದು ಕೈಗೊಳ್ಳಲಿರುವ ಕ್ರಮಗಳ ಕುರಿತು ಝುಕರ್​ಬರ್ಗ್ ಮಾಹಿತಿ ನೀಡಿದ್ದಾರೆ.!!

ದತ್ತಾಂಶ ಸೋರಿಕೆ ಪ್ರಕರಣ ಕುರಿತು ಬಹಿರಂಗ ಕ್ಷಮೆಯಾಚಿಸಿದ ಮಾರ್ಕ್​!!

2016ರಲ್ಲಿ ನಡೆದ ಅಮೆರಿಕಾ ಚುನಾವಣೆಯಲ್ಲಿ ಫೇಸ್​ಬುಕ್ ಬಳಕೆದಾರರ ದತ್ತಾಂಶ ಬಳಸಿಕೊಂಡು ಟ್ರಂಪ್ ಪರ ಕೆಲಸ ಮಾಡಿದ ಆರೋಪವನ್ನು ಫೇಸ್​ಬುಕ್ ಕಾರ್ಯವ್ಯಾಪ್ತಿಯಲ್ಲಿ ಬರುವ ಕೇಂಬ್ರಿಜ್ ಅನಾಲಿಟಿಕಾ ಎಂಬ ಸಂಸ್ಥೆ ಎದುರಿಸುತ್ತಿದೆ. ಇದು ನೇರವಾಗಿ ಫೇಸ್‌ಬುಕ್ ಮೇಲೆಯೇ ಪರಿಣಾಮ ಬೀರಿ ಸಾಕಷ್ಟು ಸಮಸ್ಯೆಗಳನ್ನು ಮುಂದಿಟ್ಟಿದೆ.!!

How to view all photos, pages, comments and posts you liked on Facebook (KANNADA)

ಲಂಡನ್​ನ ದಿ ಅಬ್ಸರ್ವರ್ ಮತ್ತು ನ್ಯೂಯಾರ್ಕ್ ಟೈಮ್ಸ್​ನ ವರದಿಗಾರರು ಕುಟುಕು ಕಾರ್ಯಾಚರಣೆ ನಡೆಸಿ ಪ್ರಕಟಿಸಿದ ವರದಿ ಪ್ರಕಾರ, ಬಳಕೆದಾರರ ಅನುಮತಿ ಇಲ್ಲದೆ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ ಸುಮಾರು 5 ಕೋಟಿಗೂ ಹೆಚ್ಚು ಬಳಕೆದಾರರ ದತ್ತಾಂಶ ಸಂಗ್ರಹಿಸಿ ಡೊನಾಲ್ಡ್ ಟ್ರಂಪ್ ಪರ ಅಭಿಪ್ರಾಯ ಮೂಡಿಸಲು ಪ್ರಯತ್ನಿಸಿತ್ತು ಎಂದು ಆರೋಪಿಸಲಾಗಿತ್ತು.!!

ಓದಿರಿ: ಗೂಗಲ್‍ ಫೋಟೋಸ್‌ನಲ್ಲಿರುವ ಚೆಂದದ ವೈಶಿಷ್ಟ್ಯಗಳನ್ನು ಉಪಯೋಗಿಸಿ!!

English summary
"I'm really sorry that this happened," the Facebook (FB) CEO told CNN's Laurie Segall in an exclusive TV interview on Wednesday.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot