ಫೇಸ್‌ಬುಕ್ ಸ್ಥಗಿತದಿಂದ 'ಮಾರ್ಕ್ ಜುಕರ್‌ಬರ್ಗ್'ಗೆ ಆಗಿರುವ ನಷ್ಟ ಎಷ್ಟು ಗೊತ್ತಾ?

|

ಜಗತ್ತೀನ ಅತೀ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಾಪ್‌ ಮತ್ತು ಇನ್‌ಸ್ಟಾಗ್ರಾಂ ತಾಣಗಳು ನೆನ್ನೆ ಕೆಲ ಗಂಟೆಗಳ ಕಾಲ ಸ್ಥಗಿತ ಆಗಿದ್ದವು. ಅನೇಕ ಬಳಕೆದಾರರು ಈ ಆಪ್‌ಗಳಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ಟ್ವಿಟ್ಟರ್ ತಾಣದಲ್ಲಿ ಫೋಸ್ಟ್‌ ಮಾಡಿದ್ದಾರೆ. ಹಾಗೆಯೇ ಕೆಲವರು ಮೆಮ್ಸ್‌ಗಳನ್ನು ಮಾಡಿದ್ದಾರೆ. ಆದರೆ ಈ ವ್ಯತ್ಯಯದಿಂದಾಗಿ ಕೆಲವೇ ಗಂಟೆಗಳಲ್ಲಿ ಫೇಸ್‌ಬುಕ್‌ ಮಾಲೀಕ ಮಾರ್ಕ್ ಜುಕರ್‌ಬರ್ಗ್ ವೈಯಕ್ತಿಕ ಸಂಪತ್ತು 6 ಬಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ.

ಫೇಸ್‌ಬುಕ್ ಸ್ಥಗಿತದಿಂದ 'ಮಾರ್ಕ್ ಜುಕರ್‌ಬರ್ಗ್'ಗೆ ಆಗಿರುವ ನಷ್ಟ ಎಷ್ಟು ಗೊತ್ತಾ?

ಹೌದು, ಎಲ್ಲೆಡೆ ಫೇಸ್‌ಬುಕ್‌, ವಾಟ್ಸಾಪ್‌ ಮತ್ತು ಇನ್‌ಸ್ಟಾಗ್ರಾಂ ಸ್ಥಗಿತದ್ದೇ ಸುದ್ದಿ. ಈ ಸೋಶಿಯಲ್ ಮೀಡಿಯಾಗಳ ವ್ಯತ್ಯಯ ಷೇರು ಮಾರುಕಟ್ಟೆಗೆ ಬಿಸಿ ತಟ್ಟಿದೆ. ಈ ದೈತ್ಯ ಪ್ಲಾಟ್‌ಫಾರ್ಮ್ ಗಳ ಷೇರುಗಳು ಸೋಮವಾರ 4.9% ನಷ್ಟು ಕುಸಿತ ಕಂಡಿವೆ. ಹಾಗೆಯೇ ಮಾರ್ಕ್ ಜುಕರ್‌ಬರ್ಗ್ ವೈಯಕ್ತಿಕ ಸಂಪತ್ತು 6 ಬಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ ಎಂದು ವರದಿಯೊಂದರಿಂದ ತಿಳಿದು ಬಂದಿದೆ.

ಇದರಿಂದ ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಅವರನ್ನು ಕೆಳಕ್ಕೆ ತಳ್ಳಿತು. ಫೇಸ್‌ಬುಕ್ ಇಂಕ್‌ನ ಪ್ರಮುಖ ಉತ್ಪನ್ನಗಳು ಆಫ್‌ಲೈನ್‌ಗೆ ಹೋದ ಕಾರಣ ಮಾರ್ಕ್ ಜುಕರ್‌ಬರ್ಗ್‌ ಆಸ್ತಿ ಕರಗಿದೆ. ಷೇರುಗಳ ಮಾರಾಟದ ಪರಿಣಾಮ ಸಾಮಾಜಿಕ ಮಾಧ್ಯಮ ದೈತ್ಯ ಮಾರ್ಕ್ ಜುಕರ್‌ಬರ್ಗ್‌ ಷೇರುಗಳು ಸೋಮವಾರ ಶೇ. 5ರಷ್ಟು ಕುಸಿದಿದೆ. ಅಲ್ಲದೆ, ಸೆಪ್ಟೆಂಬರ್ ಮಧ್ಯಭಾಗದಿಂದ ಒಟ್ಟಾರೆ ಸುಮಾರು ಶೇ. 15 ರಷ್ಟು ಷೇರುಗಳ ಮೌಲ್ಯ ಕುಸಿದಿದೆ.

ಫೇಸ್‌ಬುಕ್ ಸ್ಥಗಿತದಿಂದ 'ಮಾರ್ಕ್ ಜುಕರ್‌ಬರ್ಗ್'ಗೆ ಆಗಿರುವ ನಷ್ಟ ಎಷ್ಟು ಗೊತ್ತಾ?

ವರದಿ ಪ್ರಕಾರ ಸೋಮವಾರದ ಷೇರುಗಳ ಕುಸಿತದ ಕಾರಣದಿಂದ ಜುಕರ್‌ಬರ್ಗ್‌ನ ಆಸ್ತಿ ಮೌಲ್ಯ 120.9 ಬಿಲಿಯನ್ ಡಾಲರ್‌ಗೆ ಕುಸಿದಿದ್ದು, ಬ್ಲೂಮ್‌ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಅಗ್ರ ಶ್ರೀಮಂತರ ಪೈಕಿ 5ನೇ ಸ್ಥಾನಕ್ಕಿಳಿದಿದ್ದಾರೆ. ಬಿಲ್‌ ಗೇಟ್ಸ್‌ ನಂತರದ ಸ್ಥಾನಕ್ಕೆ ಕುಸಿದಿದ್ದಾರೆ ಜುಕರ್‌ಬರ್ಗ್‌. ಸೆಪ್ಟೆಂಬರ್ 13ರಂದು ಸುಮಾರು 140 ಶತಕೋಟಿ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದ ಜುಕರ್‌ಬರ್ಗ್‌ನ ಆಸ್ತಿ ಬರೋಬ್ಬರಿ ಸುಮಾರು 19 ಬಿಲಿಯನ್ ಡಾಲರ್‌ ಸಂಪತ್ತನ್ನು ಕಳೆದುಕೊಂಡಿದ್ದಾರೆ.

ಸೆಪ್ಟೆಂಬರ್ 13 ರಂದು, ವಾಲ್ ಸ್ಟ್ರೀಟ್ ಜರ್ನಲ್ ಆಂತರಿಕ ದಾಖಲೆಗಳ ಸಂಗ್ರಹವನ್ನು ಆಧರಿಸಿ ಕಥೆಗಳ ಸರಣಿಯನ್ನು ಪ್ರಕಟಿಸಲು ಪ್ರಾರಂಭಿಸಿತು. ಇದರಲ್ಲಿ, ಫೇಸ್‌ಬುಕ್ ತನ್ನ ಉತ್ಪನ್ನಗಳಿಂದ ಆಗುತ್ತಿರುವ ವ್ಯಾಪಕ ಸಮಸ್ಯೆಗಳ ಬಗ್ಗೆ ತಿಳಿದಿದ್ದರೂ, ಸಮಸ್ಯೆಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಿಲ್ಲ ಎಂದು ಬಹಿರಂಗಪಡಿಸಿತು. ಹಾಗೆಯೇ ಇನ್‌ಸ್ಟಾಗ್ರಾಂ ನಲ್ಲಿ ಹದಿಹರೆಯದ ಹುಡುಗಿಯರ ಮಾನಸಿಕ ಆರೋಗ್ಯಕ್ಕೆ ಹಾನಿ ಹಾಗೂ ಜನವರಿ 6ರ ಅಮೆರಿಕದ ಕ್ಯಾಪಿಟಲ್‌ ಗಲಭೆಗಳ ಬಗ್ಗೆ ತಪ್ಪು ಮಾಹಿತಿ ಹರಡುವಿಕೆ ಮುಂತಾದ ಸಮಸ್ಯೆ ಗಳು ಬಹಿರಂಗಗೊಂಡ ಬಳಿಕ ಮಾರ್ಕ್‌ ಜುಕರ್‌ಬರ್ಗ್‌ ಸಂಪತ್ತು ಇಳಿಕೆ ಆಗುತ್ತಲೇ ಇದೆ.

ಫೇಸ್‌ಬುಕ್ ಸ್ಥಗಿತದಿಂದ 'ಮಾರ್ಕ್ ಜುಕರ್‌ಬರ್ಗ್'ಗೆ ಆಗಿರುವ ನಷ್ಟ ಎಷ್ಟು ಗೊತ್ತಾ?

ಈ ವರದಿಗಳು ಸರ್ಕಾರಿ ಅಧಿಕಾರಿಗಳ ಗಮನ ಸೆಳೆದಿವೆ ಮತ್ತು ಇವುಗಳನ್ನು ಬಹಿರಂಗಪಡಿಸಿದ ವಿಷಲ್‌ ಬ್ಲೋವರ್‌, ಸ್ವತ: ತಾನು ಯಾರು ಎಂಬುದನ್ನು ಸೋಮವಾರ ಬಹಿರಂಗಪಡಿಸಿಕೊಂಡಳು. ಈ ಘಟನೆ ಹಾಗೂ ಫೇಸ್‌ಬುಕ್‌ ಇಂಕ್‌ನ ಸೋಶಿಯಲ್‌ ಮೀಡಿಯಾ ಸೇವೆಗಳ ವ್ಯತ್ಯಯದಿಂದಾಗಿ ಮಾರ್ಕ್‌ ಜುಕರ್‌ಬರ್ಗ್‌ ಆಸ್ತಿಯ ಮೌಲ್ಯ ಕಡಿಮೆಯಾಗಿದೆ. ಆದರೆ, ವಿಷಲ್‌ ಬ್ಲೋವರ್‌ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಫೇಸ್‌ಬುಕ್, ರಾಜಕೀಯ ಧ್ರುವೀಕರಣ ಸೇರಿದಂತೆ ತನ್ನ ಉತ್ಪನ್ನಗಳು ಎದುರಿಸುತ್ತಿರುವ ಸಮಸ್ಯೆಗಳು ಸಂಕೀರ್ಣವಾಗಿವೆ ಮತ್ತು ತಂತ್ರಜ್ಞಾನದಿಂದ ಮಾತ್ರ ಇದು ಉಂಟಾಗಿಲ್ಲ ಎಂದು ಒತ್ತಿ ಹೇಳಿದೆ.

ಹಾಗೆಯೇ ಸೋಮವಾರ (ಅ.4) ಜನಪ್ರಿಯ ಸಾಮಾಜಿಕ ತಾಣಗಳಾದ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂ ಗಳ ಕಾರ್ಯ ವೂಖರಿಯಲ್ಲಿ ವ್ಯತ್ಯಯ ಉಂಟಾಗಿತ್ತು. ಇನ್ನು ಉಂಟಾಗಿರುವ ವ್ಯತ್ಯಯ ಬಗ್ಗೆ ಫೇಸ್‌ಬುಕ್ ತನ್ನ ಅಧಿಕೃತ ಟ್ವಿಟ್ಟರ್‌ ಅಕೌಂಟ್‌ನಲ್ಲಿ ಪ್ರತಿಕ್ರಿಯಿಸಿತ್ತು. 'ಕೆಲವು ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಬಳಕೆಯಲ್ಲಿ ತೊಂದರೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಆದಷ್ಟು ಬೇಗನೇ ಸರಿಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ. ಅಲ್ಲದೆ ಈ ಅಡಚಣೆಗಾಗಿ ನಾವು ಕ್ಷಮೆ ಕೋರುತ್ತೇವೆ' ಎಂದು ಟ್ವಿಟ್ಟರ್‌ ನಲ್ಲಿ ತಿಳಿಸಿದೆ. ಅದೇ ರೀತಿ ಫೇಸ್‌ಬುಕ್ ಒಡೆತನದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್‌ ತಾಣ ವಾಟ್ಸಾಪ್ ಸಹ ವ್ಯತ್ಯಯ ವನ್ನು ಸರಿಪಡಿಸಲಾಗುವುದು ಎಂದು ಟ್ವಿಟ್ ಮಾಡಿದೆ.

Most Read Articles
Best Mobiles in India

English summary
Mark Zuckerberg Loses $6 Billion in Hours As Facebook Down.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X